ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸೈಬರ್ ಭದ್ರತೆ ಕ್ಷೇತ್ರದಲ್ಲಿ ಭಾರತ ಮತ್ತು ವಿಯಟ್ನಾಂ ನಡುವಿನ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ಒಪ್ಪಂದಕ್ಕೆ ಭಾರತದ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿಇಆರ್ಟಿ –ಇನ್), ಮತ್ತು ವಿಯಟ್ನಾಂನ ಸಾರ್ವಜನಿಕ ಸುರಕ್ಷತೆ ಸಚಿವಾಲಯದ ಸೈಬರ್ ಭದ್ರತೆ ಇಲಾಖೆ 2016ರ ಸೆಪ್ಟೆಂಬರ್ 3ರಂದು ಹನೋಯ್ ನಲ್ಲಿ ಅಂಕಿತ ಹಾಕಿದ್ದವು.
ಈ ತಿಳಿವಳಿಕೆ ಒಪ್ಪಂದವು ಭಾರತ ಮತ್ತು ವಿಯಟ್ನಾಂನಲ್ಲಿ ಸೈಬರ್ ಸುರಕ್ಷತೆಗೆ ಸಂಬಂಧಿಸಿದ ಪ್ರಕರಣಗಳ ತಡೆ, ಪತ್ತೆ ಹಾಗೂ ಪರಿಹಾರದ ಅನುಭವ ಮತ್ತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಆಪ್ತ ಸಹಕಾರವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.
ಈ ತಿಳಿವಳಿಕೆ ಒಪ್ಪಂದದ ಜಾರಿಯ ಪರಿಣಾಮದಿಂದ ಸೊಷಲಿಸ್ಟ್ ರಿಪಬ್ಲಿಕ್ ಆಫ್ ವಿಯಟ್ನಾಂನಲ್ಲಿ ಸಾಂಸ್ಥಿಕ ಮತ್ತು ಸಾಮರ್ಥ್ಯವರ್ಧನೆಯ ಮೂಲಕ ಸೈಬರ್ ಭದ್ರತೆ ವಲಯದಲ್ಲಿ ಪರಸ್ಪರರಿಗೆ ಗಣನೀಯ ಲಾಭವಾಗುತ್ತದೆ.
AKT/VBA/SH