ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಮಹಾ ನಿರ್ದೇಶಕರಾದ ಶ್ರೀ ಆಶಿಶ್ ಖನ್ನಾ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.
ಸೌರಶಕ್ತಿಯು ಪರಿವರ್ತನಾತ್ಮಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂಬ ಅಂಶವನ್ನು ಲೇಖನದಲ್ಲಿ ಪ್ರಧಾನವಾಗಿ ಪ್ರಸ್ತಾಪಿಸಲಾಗಿದೆ. ಕೃಷಿಗಾಗಿ ಶುದ್ಧ ಇಂಧನವನ್ನು ಬಳಸಿಕೊಳ್ಳುವ ಭಾರತದ ಮಾದರಿಯು ಆಫ್ರಿಕಾಕ್ಕೆ ವಿಸ್ತರಣೆ ಮಾಡಬಹುದಾದ ಮಾದರಿಯನ್ನು ನೀಡುತ್ತದೆ, ಹಂಚಿಕೆಯ ಸಮೃದ್ಧಿಯನ್ನು ಬಲವರ್ಧನೆಗೊಳಿಸುತ್ತದೆ, ಸಮುದಾಯಗಳನ್ನು ಸಬಲೀಕರಣಗೊಳಿಸುತ್ತದೆ ಮತ್ತು ಆಹಾರ ಭದ್ರತೆಯನ್ನು ಉತ್ತೇಜಿಸುತ್ತದೆ ಎಂದು ಲೇಖನದಲ್ಲಿ ವಿವರಿಸಲಾಗಿದೆ. ಈ ಸಾಧನೆಯನ್ನು ಭಾರತದ ರೈತರು ಮತ್ತು ರಾಷ್ಟ್ರಕ್ಕೆ ಹೆಮ್ಮೆಯ ವಿಷಯವೆಂದು ಲೇಖನವು ವಿವರಿಸುತ್ತದೆ.
ಪ್ರಧಾನಮಂತ್ರಿ ಕಚೇರಿ ತನ್ನ X ಪೋಸ್ಟ್ ನಲ್ಲಿ ಹೀಗೆ ಹೇಳಿದೆ;
”ಸೌರಶಕ್ತಿ ಪರಿವರ್ತನಾತ್ಮಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಕೃಷಿಗಾಗಿ ಶುದ್ಧ ಇಂಧನವನ್ನು ಬಳಸಿಕೊಳ್ಳುವ ಭಾರತದ ಮಾದರಿಯು ಆಫ್ರಿಕಾಕ್ಕೆ ವಿಸ್ತರಣೆಯಾಗಬಲ್ಲ ಮಾದರಿಯನ್ನು ನೀಡುತ್ತದೆ, ಹಂಚಿಕೆಯ ಸಮೃದ್ಧಿಯನ್ನು ಬಲವರ್ಧನೆಗೊಳಿಸುತ್ತದೆ, ಸಮುದಾಯಗಳನ್ನು ಸಬಲೀಕರಣಗೊಳಿಸುತ್ತದೆ ಮತ್ತು ಆಹಾರ ಭದ್ರತೆಯನ್ನು ಭರವಸೆ ನೀಡುತ್ತದದೆ. ನಮ್ಮ ರೈತರು ಮತ್ತು ನಮಗೆಲ್ಲರಿಗೂ ನಿಜವಾಗಿಯೂ ಹೆಮ್ಮೆಯ ವಿಷಯ!
ಕೇಂದ್ರ ಸಚಿವರಾದ ಶ್ರೀ @JoshiPralhad ಮತ್ತು ಡಿಜಿ, @isolaralliance ಶ್ರೀ ಆಶಿಶ್ ಖನ್ನಾ ಅವರ ಈ ಒಳನೋಟವುಳ್ಳ ಲೇಖನವನ್ನು ಓದಿ’’.
*****
Solar power is emerging as a transformative force. India’s model of harnessing clean energy for agriculture offers a scalable model for Africa, strengthening shared prosperity, empowering communities and promising food security. Truly a matter of pride for our farmers and all of… https://t.co/EVL8U99zqF
— PMO India (@PMOIndia) June 17, 2026