ಪಿಎಂಇಂಡಿಯಾ
ನನ್ನ ಪ್ರೀತಿಯ ಸ್ನೇಹಿತರೆ ನೀವು ಬೆಳಗ್ಗೆಯಿಂದಲೂ ಕುಳಿತುಕೊಂಡಿದ್ದೀರಿ. ಆಯಾಸವಾಗಿರಬಹುದು. ಇನ್ನೂ 36 ಗಂಟೆಗಳನ್ನು ಕಳೆಯಬೇಕಾಗಿದೆ ಎಂದರೆ ಮತ್ತೂ ಆಯಾಸಗೊಳ್ಳುತ್ತೀರೇನು? ಆದರೆ ನೀವುಗಳು ಪ್ರಧಾನಮಂತ್ರಿ ಎಲ್ಲಾದರೂ 10 ಗಂಟೆಗೆ ಬರ್ತಾರೆಯೇ ಎಂದು ಯೋಚಿಸಿರಬಹುದು, ನಂತರ ನಿಮಗೆ ಇಂದು ಏಪ್ರಿಲ್ ಒಂದು ಎಂದು ನೆನಪಾಗಿ ಬಹುಶ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮ್ಮನ್ನು ಏಪ್ರಿಲ್ ಮೂರ್ಖರನ್ನಾಗಿ ಮಾಡುತ್ತಿರಬಹುದು ಎಂದು ಅನಿಸಿರಬಹುದು. ಸ್ನೇಹಿತರೆ ಇಂದು ನಿಮ್ಮೆಲ್ಲರ ಜೊತೆ ಸೇರಿಕೊಂಡು ನನಗೆ ನಿಜವಾಗಲೂ ಬಹಳ ಸಂತೋಷ ಆಗುತ್ತಿದೆ.
‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’ ಭಾರತದಲ್ಲಿ ಒಂದು ರೀತಿಯಲ್ಲಿ ಪ್ರಯೋಗವಾಗಿದೆ. ಯಾವ ದೇಶದ ಜನಸಂಖ್ಯೆಯಲ್ಲಿ ಶೇಕಡ 65 ರಷ್ಟು ಜನ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೋ, ಯಾವ ದೇಶವು ಪ್ರಪಂಚದಲ್ಲಿ ತರುಣ ದೇಶವಾಗಿದೆಯೋ ಆ ದೇಶದ ಯುವ ಶಕ್ತಿ ದೇಶದ ಕೆಲವು ಮುಖ್ಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವುದಕ್ಕಾಗಿ ಇಂದು ಈ ಸಮಯದಲ್ಲಿ ಇಲ್ಲಿ ಸೇರಿದೆ. ತಮ್ಮ ಆವಿಷ್ಕಾರ ತೋರಿಸಲು, ತಮ್ಮ ಸ್ವಜನಶಕ್ತಿ ತೋರಿಸಲು ನೀವೆಲ್ಲಾ ಯುವಜನತೆ ಯಾವ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೀರೋ ಅದು ಪ್ರಶಂಸಾರ್ಹವಾಗಿದೆ. ಒಂದೇ ಸಮನೆ 15 ಗಂಟೆಗಳು ಕೆಲಸ ಮಾಡಿದ ನಂತರವೂ ನಿಮ್ಮ ಮುಖಗಳಲ್ಲಿ ನೆರಿಗೆಗಳಿಲ್ಲ. ನಿಮ್ಮ ಮುಖಗಳ ಮೇಲೆ ನಗುವನ್ನು ನಾನು ನೋಡುತ್ತಿದ್ದೇನೆ. ಇಂತಹ ಶಕ್ತಿ ಇಂತÀಹ ಶ್ರಮ ವಹಿಸಿ ಕೆಲಸ ಮಾಡಿದರೆ ಫಲ ಸಿಗುತ್ತದೆ.
ಸ್ನೇಹಿತರೇ, ಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶಕ್ಕೆ ತನ್ನದೇ ಆದ ಒಂದು ಗುರುತಿದೆ. ಇಂದಿನದಲ್ಲ ಸಾವಿರಾರು ವರ್ಷಗಳಿಂದ ಇದೆ. ಸೊನ್ನೆಯನ್ನು ಕಂಡು ಹಿಡಿದದ್ದು ಭಾರತದಲ್ಲೇ ಎಂದು ಹೇಳುತ್ತಾರೆ. ಇಂದು ಮಾಹಿತಿ ಜ್ಞಾನದ ಕ್ಷೇತ್ರದಲ್ಲಿ ಭಾರತವು ವಿಶ್ವದ ಮಾರ್ಗದರ್ಶನ ಮಾಡುತ್ತಿದೆ. ಸೊನ್ನೆಯಿಂದ ಹಿಡಿದು ಮಂಗಳಯಾತ್ರೆವರೆಗಿನ ಪ್ರಯಾಣ ನಮ್ಮನ್ನು ಗೌರವಾನ್ವಿತರಾಗಿ ಮಾಡುತ್ತದೆ. ಉಪನಿಷತ್‍ನಿಂದ ಉಪಗ್ರಹದವರೆಗೆ ನಮ್ಮ ಯಾತ್ರೆ ವಿಸ್ತುøತವಾಗಿದೆ. ಆದರೆ ಇಂದು ಭಾರತಕ್ಕೆ ತನ್ನ ಅಗತ್ಯಗಳು, ತನ್ನ ಸಮಸ್ಯೆಗಳನ್ನು ಬಿಡಿಸಿಕೊಳ್ಳಲು ಮಾಹಿತಿ ತಂತ್ರಜ್ಞಾನವನ್ನು ಇನ್ನೂ ಹೆಚ್ಚಾಗಿ ಬಳಸುವ ಅವಶ್ಯಕತೆ ಇದೆ. ಒಂದು ರೀತಿಯಲ್ಲಿ ಇಂದು ಸಮಾಜವು ತಂತ್ರಜ್ಞಾನದಿಂದ ಮುನ್ನಡೆಯುತ್ತಿದೆ. ಆವಿಷ್ಕಾರ, ತಂತ್ರಜ್ಞಾನಗಳು ಸಮಾಜ ಜೀವನಕ್ಕೆ ವೇಗವನ್ನೂ ಕೊಡುತ್ತಿದೆ, ಶಕ್ತಿಯನ್ನು ಕೊಡುತ್ತಿದೆ. ಆದ್ದರಿಂದ ಈ ಹ್ಯಾಕಥಾನ್‍ಗೆಂದು ಪರಿಹಾರಗಳನ್ನು ಹುಡುಕಲು, ಯುವ ಮನಗಳ ಮೂಲಕ ಹುಡುಕಲು, ಆಧುನಿಕ ತಂತ್ರಜ್ಞಾನದ ಮೂಲಕ ಹುಡುಕಲು ನನ್ನ ಸರ್ಕಾರದ ಸಹಾಯದಿಂದ 500 ಸಮಸ್ಯೆಗಳನ್ನು ಆರಿಸಲಾಗಿದೆ. ಈ ಸಮಸ್ಯೆಗಳ ಪರಿಹಾರಕ್ಕೆಂದು ಇವನ್ನು ನಿಮ್ಮ ಮುಂದೆ ಇಡಲಾಗಿದೆ. ನಿಮಗೆ ಸವಾಲೂ ಹೌದು. ಅವಕಾಶವೂ ಹೌದು. ನೀವು ನಿಮ್ಮ ಪರೀಕ್ಷೆಗಾಗಿ ಯಾವುದಾದರೂ ಬಿಡಿಗೆಲಸ ಮಾಡುತ್ತೀರಲ್ಲ ಅದರಿಂದ ನಿಮಗೆ ಯಾವ ಆನಂದ ಸಿಗುತ್ತದೋ ಅದಕ್ಕೂ ಮಿಗಿಲಾದ ಆನಂದ ನಿಮಗೆ ಈ ಕೆಲಸದಿಂದ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ. ಏಕೆಂದರೆ ಕೆಲಸ ಪೂರ್ಣವಾದಾಗ ನಿಮ್ಮ ಶ್ರಮವು ಯಾರೋ ಬಡವನಿಗೆ ಸಹಾಯವಾಗುತ್ತದೆ ಎಂದು ನಿಮಗೆ ಅನ್ನಿಸುತ್ತದೆ. ನೀವು ಯಾವ ಪರಿಹಾರವನ್ನು ಕಂಡು ಹಿಡಿಯುತ್ತೀರೋ ಬಹುಶ: ಅದು ಭಾರತ ಸರ್ಕಾರದ ನೀತಿ ರೀತಿಗಳ ಭಾಗವಾಗುತ್ತದೆ. ಹೀಗಾಗಿ ನಿಮ್ಮ ಜೀವನವು ಧನ್ಯತೆಯನ್ನು ಅನುಭವಿಸುತ್ತದೆ.
ಗಣತಂತ್ರದ ಯಶಸ್ಸು ಪಾಲುದಾರ ಜನರ ಪಾಲುದಾರಿಕೆಯಲ್ಲೇ ಇದೆ. ಗಣತಂತ್ರದ ಅರ್ಥ ಮತ ಹಾಕಿದ –ಯಾರಿಗೋ 5 ವರ್ಷ ಗುತ್ತಿಗೆ ಕೊಟ್ಟು ನಡಿಯಣ್ಣಾ ನನ್ನ ಸಮಸ್ಯೆ ದೂರ ಮಾಡು ಅಂತ ಅಲ್ಲ. 5 ವರ್ಷಗಳಲ್ಲಿ ಏನೂ ಮಾಡದಿದ್ದರೆ ಆಯ್ತು ಈಗ ಬೇರೊಬ್ಬ ಗುತ್ತಿಗೆದಾರನನ್ನು ಹಿಡಿಯೋಣ ಅಂತ ಹೇಳೋದು. ಲೋಕ ತಂತ್ರವೆಂದರೆ ಇದಲ್ಲ, ಲೋಕತಂತ್ರವು ಜನರ ಪಾಲುಗಾರಿಕೆಯದಾಗಿದೆ. 125 ಕೋಟಿ ಜನತೆ ಒಟ್ಟಾಗಿ ಸೇರಿ ದೇಶವನ್ನು ಮುನ್ನಡೆಸುವುದಾಗಿದೆ. ಎಲ್ಲವೂ ಸರ್ಕಾರಕ್ಕೆ ಗೊತ್ತಿದೆ, ಎಲ್ಲಾ ಸಮಸ್ಯೆಗಳ ಪರಿಹಾರವನ್ನು ಸರ್ಕಾರವೇ ಮಾಡಬಲ್ಲದು. ಅದರ ಬಳಿ ಎಲ್ಲಾ ಉಪಾಯಗಳಿವೆ ಎನ್ನುವುದು ಭ್ರಮೆ. ಸರ್ಕಾರದಲ್ಲೂ ನಿಮ್ಮ ಹಾಗೆಯೇ ಜನ ಬಂದು ಕುಳಿತಿದ್ದಾರೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನೂ ನಾವೆಲ್ಲರೂ ಸೇರಿ ಮಾಡಬಲ್ಲೆವು. ಜನರ ಬಳಿ ಸರ್ಕಾರದಲ್ಲಿಲ್ಲದ ಅನೇಕ ಒಳ್ಳೆಯ ಸಲಹೆಗಳಿರುತ್ತವೆ. ಬುದ್ಧಿ-ಪ್ರತಿಭೆ ಇರುತ್ತದೆ, ಕೆಲಸ ಮಾಡುವ ಮನ:ಸ್ಥಿತಿ ಇರುತ್ತದೆ. ಆದ್ದರಿಂದ ಜನತೆಯ ಪಾಲುಗಾರಿಕೆಯಿಂದ ಎಂತಹ ವಿಷಯಗಳನ್ನೂ ಹೇಗೆ ಮುಂದಕ್ಕೆ ನಡೆಸಬಹುದು ಎನ್ನುವುದು ಯಾವಾಗಲೂ ನನ್ನ ಪ್ರಯತ್ನವಾಗಿದೆ. ಇಂದಿನ ಈ ಸಂದರ್ಭದಲ್ಲಿ ದೇಶದ ಹತ್ತು ಸಾವಿರ ಇಂಜಿನೀಯರ್ ಉದ್ಯೋಗಿಗಳಿರಬಹುದು, ಮಾಹಿತಿ ತಂತ್ರಜ್ಞಾನ ಇರಬಹುದು ಎಲ್ಲಾ ಒಟ್ಟಾಗಿ ಸೇರಿ ನಮ್ಮ ದಿನನಿತ್ಯದ 500 ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದಾರೆ. ಆಹಾರ ಪಾನೀಯಗಳನ್ನು ಬಿಟ್ಟು ಬಿಟ್ಟು ಕೆಲಸದಲ್ಲಿ ತೊಡಗಿದ್ದಾರೆ. ಇದು ಒಂದು ಹೊಸ ಶಕ್ತಿಯನ್ನು ಪರಿಚಯಿಸುತ್ತದೆ. ಆದ್ದರಿಂದ ಪ್ರಪ್ರಥಮವಾಗಿ ಇದರಲ್ಲಿ ಭಾಗಿಯಾಗಿರುವವರೆಲ್ಲರಿಗೂ ನಾನು ಬಹಳ-ಬಹಳ ಅಭಿನಂದನೆಗಳನ್ನು ಹೇಳುತ್ತೇನೆ.
ಇಂದು ನೀವು ನಿಮ್ಮ ಶಕ್ತಿಯನ್ನು ಆಡಳಿತದ ಕಾರ್ಯಭಾರದಲ್ಲಿ ಜೋಡಿಸಿಕೊಂಡರೆ ನಿಶ್ಚಯವಾಗಿಯೂ ಬಹಳ ಸಕಾರಾತ್ಮಕ ಪರಿಣಾಮಗಳು ಸಿಗುತ್ತವೆ. ತಂತ್ರಜ್ಞಾನದ ಮಾಧ್ಯಮದಿಂದ ಮಾಹಿತಿ ತಂತ್ರಜ್ಞಾನದ ಮೂಲಕ ನಾವು ಇಂದಿನ ಸಮಾಜದಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ತರಬಹುದು ಎಂದು ನಾನು ಯಾವಾಗಲೂ ಒಪ್ಪುತ್ತಾ ಬಂದಿದ್ದೇನೆ. ಕೆಲವು ವರ್ಷಗಳ ಹಿಂದೆ ನಾವು ಯೋಚಿಸಲೂ ಸಾಧ್ಯವಿಲ್ಲದಂತಹ ಪರಿಹಾರಗಳನ್ನು ತಂತ್ರಜ್ಞಾನವು ಕೊಡುತ್ತಿದೆ. ಚಾಲಕ ರಹಿತ ಕಾರುಗಳು ಓಡಾಡುತ್ತವೆ ಎಂದು ಯಾರು ತಾನೆ ಯೋಚಿಸಿದ್ದರು? ಮುಂಬರುವ ದಿನಗಳಲ್ಲಿ ಕೃತಕ ಜ್ಞಾನದ ಹರವು ಮತ್ತಷ್ಟು ಹೆಚ್ಚಾಗುತ್ತದೆ.
3 ಡಿ ತಂತ್ರಜ್ಞಾನದ ನೆರವಿನಿಂದ 3 ಆಯಾಮದ ವಸ್ತುಗಳ ಮುದ್ರಣ ಮತ್ತು ಅದರ ಮೇಲೆ ಮುಂಬರುವ ಭವಿಷ್ಯದ ನಿರ್ಮಾಣ – 3 ಡಿ ತಂತ್ರಜ್ಞಾನ ಇದರ ಬಹಳ ದೊಡ್ಡ ಆಧಾರ ಸ್ತಂಭವಾಗಿದೆ. ನಿರ್ಮಾಣ ಕ್ಷೇತ್ರದಲ್ಲಿ ಮನೆಗಳ ವಿನ್ಯಾಸದಲ್ಲೂ ಇದರ ಉಪಯೋಗ ಹೆಚ್ಚಾಗಲಿದೆ. ಇಂದು ವಸ್ತುಗಳ ಮೂಲಕಅಂತರ್ಜಾಲಕ್ಕೆ ಮಾಹಿತಿಯ ನೇರ ಜೋಡಣೆ (ಐಓಟಿ) ನಡೆಯುತ್ತಿದೆ. ಸಾಕಷ್ಟು ವಿಷಯಗಳು ಐಓಟಿಯಿಂದಲೇ ನಿಶ್ಚಯವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂದು ಸ್ಮಾರ್ಟ್ ಸಿಟಿಗೆ ಬದಲಾಗುತ್ತಿರುವ ನಗರಗಳಲ್ಲಿ ಈ ತಂತ್ರಜ್ಞಾನವನ್ನು ಬಹಳ ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ. ಸ್ಮಾರ್ಟ್ ನಿಲುಗಡೆ ಇರಲಿ, ಸ್ಮಾರ್ಟ್ ಬೆಳಕಿನ ವ್ಯವಸ್ಥೆ ಇರಲಿ, ವಾಯು ಗುಣಮಟ್ಟದ ಮೇಲ್ವಿಚಾರಣೆ ಮಾಡುವುದರಲ್ಲಿ ಇಲ್ಲೆಲ್ಲಾ ಐಓಟಿ ಬಳಸಲಾಗುತ್ತಿದೆ.
ಸ್ನೇಹಿತರೆ, ತಂತ್ರಜ್ಞಾನವು ಇಂದು ಜೀವನದಲ್ಲಿ ಬಹಳ ದೊಡ್ಡ ಪರಿವರ್ತನೆಯನ್ನು ತರುತ್ತಿದೆ. ಕೆಲವು ಹೊಸ ವಸ್ತುಗಳು, ಹೊಸ ಪರಂಪರೆಗಳು ಹುಟ್ಟುತ್ತಲಿವೆ. ಕೆಲವು ಹಳೆಯ ವಿಷಯಗಳು, ಹಳೆಯ ಪರಿಸ್ಥಿತಿಗಳು ಕೊನೆಗೊಳ್ಳುತ್ತಿವೆ. ನೀವೇ ನೋಡಿ, ನಿಮ್ಮ ಮುಂದೆಯೇ ಫ್ಲಾಪಿ, ಧ್ವನಿ ಮುದ್ರಣ ಯಂತ್ರ, ವಾಕ್‍ಮನ್ ಇವೆಲ್ಲವೂ ಬಂದವು ಮತ್ತು ಹೋದವು, ಕೊನೆಯಾದವು. ದೀರ್ಘಕಾಲದವರೆಗೆ ಅವು ನಿಲ್ಲಲಿಲ್ಲ; ಹೊಸ ತಂತ್ರಜ್ಞಾನವು ಅದರ ಜಾಗವನ್ನು ಆಕ್ರಮಿಸಿತು. ಒಂದು ಕಾಲದಲ್ಲಿ ರೇಡಿಯೋ ಈಗಿನ ಮೈಕ್ರೋ ಓವನ್‍ನಷ್ಟು ದೊಡ್ಡದಾಗಿರುತ್ತಿತ್ತು. ಇಂದು ರೇಡಿಯೋವನ್ನು ಬೆಂಕಿ ಪೊಟ್ಟಣದಲ್ಲಿ ಕೂರಿಸಬಹುದು. ತಂತ್ರಜ್ಞಾನವು ಪ್ರಪಂಚವನ್ನು ಸಂಕುಚಿತಗೊಳಿಸುವುದರ ಜೊತೆಗೆ ಸೌಲಭ್ಯಗಳ ಹರವು ಹೆಚ್ಚಾಗುವುದಕ್ಕೂ ಸಹಾಯ ಮಾಡಿದೆ. ಕಳೆದ ಕೆಲವು ತಿಂಗಳುಗಳಿಂದ ನಮ್ಮ ದೇಶದಲ್ಲಿ ನಗದುರಹಿತ ವ್ಯವಹಾರದ ಪ್ರಸಾರವು ವೇಗವಾಗಿ ಬೆಳೆಯುತ್ತಿರುವುದನ್ನು ನೀವು ನೋಡಿರಬಹುದು. ಈ ಕ್ಷೇತ್ರದಲ್ಲೂ ನಿರಂತರವಾಗಿ ಹೊಸ ಹೊಸ ಪರಿಹಾರಗಳು ಮುಂದೆ ಬರುತ್ತಿವೆ.
ಸ್ನೇಹಿತರೆ, ಆವಿಷ್ಕಾರಗಳು ಉತ್ತಮ ಭವಿಷ್ಯದ ಆಧಾರ. ನಡೆದು ಬರುತ್ತಿರುವ ಪರಂಪರೆಗಳಿಗೆ ಸವಾಲು ಹಾಕುವ, ಅವುಗಳಲ್ಲಿ ಬದಲಾವಣೆ ತರುವಂತಹ ವ್ಯಕ್ತಿಗಳ ಮೂಲಕ ಇತಿಹಾಸವು ಬರೆಯಲ್ಪಡುತ್ತದೆ. ಇದಕ್ಕಾಗಿ ಇನ್ನೊಂದು ಮಾತು ಬಹಳ ಅಗತ್ಯ. ಅದೆಂದರೆ ನಿರಂತರ ಪ್ರಯತ್ನ, ದೃಢತೆ, ನಿರಂತರ ಸೇರ್ಪಡೆ ಇರಬೇಕು. ಬಾಲ್ಯದಲ್ಲಿ ನಾವು ನೀವುಗಳು ಕೂಡ ಅನೇಕ ಕಥೆಗಳನ್ನು ಕೇಳಿರಬಹುದು. ಇರುವೆ ತನ್ನ ಆಹಾರವನ್ನು ತೆಗೆದುಕೊಂಡು ಹೋಗುತ್ತಿತ್ತು, ಸಕ್ಕರೆಯ ಕಣವನ್ನು ತೆಗೆದುಕೊಂಡು ಹೋಗುತ್ತಾ, ಹೋಗುತ್ತಾ ಎಷ್ಟೋ ಸಲ ಅದನ್ನು ಬೀಳಿಸುತ್ತಿತ್ತು. ತೆಗೆದುಕೊಂಡು ಹೋಗಲು ಆಗುತ್ತಿರಲಿಲ್ಲ, ಗೋಡೆಯನ್ನು ಹತ್ತಬೇಕಾಗಿತ್ತು, ಕಡೆಗೂ ಸಾಗಿಸಿಯೇ ಅದು ನಿಂತುಕೊಂಡಿತು ಎಂದು ಹೇಳುತ್ತಾರೆ. ಒಂದು ಇರುವೆಯು ನಿರಂತರ ಪ್ರಯತ್ನ ಪಡುವುದಕ್ಕೆ ಪ್ರೇರಣೆಯಾಗುತ್ತದೆ. ಆದ್ದರಿಂದ ನಾವು ಕೂಡ ಆವಿಷ್ಕಾರದ ಹಾದಿಯಲ್ಲಿ ಅನೇಕ ಸಲ ನಮಗೆ ಸೋಲುಂಟಾಗಬಹುದು ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆದರೆ ನೀವು ಸೋಲೊಪ್ಪಿಕೊಳ್ಳಬಾರದು. ಏಕೆಂದರೆ ಜಯ ಗಳಿಸುವ ಸಂಕಲ್ಪ ಮಾಡಿ ನಡೆಯುವವರಿಗೆ ಹೋರಾಡಲೂ ಗೊತ್ತು, ಹೋರಾಡಲು ಗೊತ್ತಿದ್ದವರು ಜಯ ಗಳಿಸುವವರೆಗೆ ನಿಲ್ಲುವುದಿಲ್ಲ. ನೀವು ಜಯಶಾಲಿಗಳಾದ ದಿನ ಇದೇ ಜನರು ನಿಮ್ಮ ಮಾರ್ಗ ಸರಿಯಾಗಿತ್ತು, ನಿಮ್ಮ ರೀತಿ ಸರಿಯಾಗಿತ್ತು ಎಂದು ಹೇಳುತ್ತಾರೆ. ಆದರೆ ಈ ವೇಳೆಯಲ್ಲಿ ಒಂದು ವಿಷಯದ ಬಗ್ಗೆ ಧ್ಯಾನ ನೀಡಿ. ಅದೆಂದರೆ ನಿಮ್ಮ ಸಂಶೋಧನೆಯ ಅಂತಿಮ ಫಲವು ಗುಣಮಟ್ಟದ್ದಾಗಿರಬೇಕು.
ಗುಣಮಟ್ಟದ ಜೊತೆ ಯಾವುದೇ ಹೊಂದಾಣಿಕೆಯಾಗಬಾರದು ಆಗುವುದೂ ಇಲ್ಲ. ಗುಣವನ್ನು ಜನ ನೆನಪಿಟ್ಟುಕೊಳ್ಳುತ್ತಾರೆ. ನಿಮ್ಮ ಸಂಶೋಧನೆಯಿಂದ ನಿಮ್ಮ ಉತ್ಪನ್ನದಿಂದ ಜನರ ಜೀವನದ ಗುಣಮಟ್ಟದಲ್ಲಿ ಬದಲಾವಣೆ ಉಂಟಾಗುತ್ತದಲ್ಲ ಅದು ಮಹತ್ವಪೂರ್ಣವಾದದ್ದು. ಸ್ನೇಹಿತರೆ, ನೀವು ಎಷ್ಟು ಸಂಶೋಧನಾತ್ಮಕರಾಗಿದ್ದೀರ, ಎಷ್ಟು ಉತ್ಸಾಹಿಗಳಾಗಿದ್ದೀರಿ ಮತ್ತು ಸಮಾಜದ ಸಮಸ್ಯೆಗಳನ್ನು ಬಗೆಹರಸಿಲು ನಿಮ್ಮ ಯಾವ ಮಾರ್ಗವಿದೆ ಅದು ನವಭಾರತವನ್ನು ಇನ್ನೂ ಬಲಶಾಲಿಯಾಗಿ ಮಾಡುವಂಥದ್ದು. ಹೇಗೆ ಪದ್ಧತಿಗಳು ಮೊದಲಿಗೆ ಹೋಲಿಸಿದರೆ ವೇಗವಾಗಿ ಅನೇಕ ಪಟ್ಟು ಬದಲಾಗುತ್ತಿದೆಯೋ ಹಾಗೆ ಇಂದಿನ ಪೀಳಿಗೆ ಮೊದಲಿನವರಿಗಿಂತ ಅನೇಕ ಪಟ್ಟು ವೇಗವಾಗಿ ವಿಚಾರ ಮಾಡುತ್ತಾರೆ, ಕೆಲಸ ಮಾಡುತ್ತಿದ್ದಾರೆ. ಕೆಲವರು ಹೇಳುತ್ತಾರೆ, ಈಗಿನ ನವಯುವಜನ ಬಹಳ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು. ಆದರೆ ಇದು ಕೆಟ್ಟದ್ದೇನಲ್ಲ, ಇದು ಒಳ್ಳೆಯ ವಿಷಯ. ಈ ಕಾಲದ ಯುವ ಜನತೆ ಗಂಟುಮೂಟೆ ಎತ್ತಿಕೊಂಡೇ ಹೊರಡುತ್ತಾರೆ. ಪ್ರತಿಯೊಂದನ್ನು ಆರಂಭದಿಂದಲೇ ಅರ್ಥ ಮಾಡಿಕೊಳ್ಳಲು ಇಚ್ಛಿಸುತ್ತಾರೆ, ತಮ್ಮ ದೃಷ್ಟಿಕೋನದಿಂದನೋಡಲು ಇಚ್ಛಿಸುತ್ತಾರೆ. ಕೆಲ ಜನ ಈಗಿನ ಯುವ ಜನತೆಯಲ್ಲಿ ಧೈರ್ಯವೇ ಇಲ್ಲ ಎಂದೂ ಹೇಳುತ್ತಾರೆ. ಇದೇ ವಿಷಯ ಇಂದಿನ ಯುವಜನತೆಯ ಮತ್ತು ಅವರೊಳಗಿರುವ ಅನ್ವೇಷಕ ಬುದ್ಧಿಯ ಪ್ರೇರಣೆಗೆ ಕಾರಣವಾಗುತ್ತದೆ ಎಂದು ನಾನು ಹೇಳುತ್ತೇನೆ. ಜೀವನದಲ್ಲಿ ಧೈರ್ಯವಿರಬೇಕು. ಅಧೀರ ಜೀವನ ನಡೆಯಲು ಆಗುವುದಿಲ್ಲ. ಆದರೆ ಹೊಸದನ್ನು ಯೋಚಿಸಲು ಪ್ರೇರಣೆ ನೀಡದಂತಹ ತಡೆಯನ್ನು ತರುವ ಧೈರ್ಯವೂ ಸಲ್ಲದು. ಇದೇ ಕಾರಣದಿಂದ ಅವರು ಹೆಚ್ಚು ವೇಗದಿಂದ ಕೆಲಸ ಮಾಡುತ್ತಿದ್ದಾರೆ. ಇಂತಹ ಯುವಜನರು ಫಲಿತಾಂಶವನ್ನು ತಂದೇ ತರುವುದನ್ನು ನಾನು ನೋಡಿದ್ದೇನೆ. ಈಗಿನ ಯುವಜನತೆ ಏಕರೀತಿಯ ಕೆಲಸವನ್ನೂ ಇಷ್ಟಪಡುವುದಿಲ್ಲ. ಅದು ಅವರಿಗೆ ಇಷ್ಟ ಆಗುವುದಿಲ್ಲ. ಅವರು ಬದಲಾವಣೆ ಇಷ್ಟ ಪಡುತ್ತಾರೆ ಎಂದು ಕೆಲ ಜನ ಹೇಳುತ್ತಾರೆ. ಅವರ ಈ ವಿಚಾರವೇ ಸ್ವಯಂಚಾಲನೆಯಲ್ಲಿ ಹೊಸ ಹೊಸ ಕಲ್ಪನೆಗಳನ್ನು ತರುತ್ತಿವೆ ಎಂದು ನಾನು ತಿಳಿಯುತ್ತೇನೆ. ಅವರು ಹಳೆಯ ಮಾರ್ಗದಲ್ಲೇ ಹೋಗಲು ಇಚ್ಛಿಸಿದರೆ ಹೊಸದು ಎಲ್ಲಿ ಸಿಗುತ್ತದೆ? ಹಳೆಯದನ್ನು ಒಡೆದು ಬರಬೇಕೆಂದು ಇಷ್ಟಪಟ್ಟವರೇ ಹೊಸದನ್ನು ಕೊಡುತ್ತಾರೆ. ಈಗಿನ ಯುವ ಜನ ಒಂದೇ ಸಮಯದಲ್ಲಿ ಅನೇಕ ಕೆಲಸಗಳನ್ನು ಒಟ್ಟಿಗೆ ಮಾಡಲು ಇಷ್ಟ ಪಡುತ್ತಾರೆ ಎಂದು ಕೆಲವರು ಹೇಳುತ್ತಾರೆ. ಇವರು ಹೀಗೆ ತಮ್ಮ ಸಮಯವನ್ನು ನಿರರ್ಥಕವಾಗಿ ಹಾಳು ಮಾಡುತ್ತಾರೆ ಎಂದು ಕೆಲವರಿಗೆ ಅನ್ನಿಸುತ್ತದೆ. ಒಟ್ಟಿಗೆ ಒಂದು, ಐದು, ಏಳು, ಹತ್ತು ಕೆಲಸಗಳನ್ನೂ ತಾವೊಬ್ಬರೇ ಮಾಡುವ ಶಕ್ತಿಯುಳ್ಳ ಯುವಕರನ್ನು ನಾನು ಆಗಾಗ ನೋಡಿದ್ದೇನೆ. ಇದನ್ನು ನಾನು ಕೆಟ್ಟದೆಂದು ತಿಳಿಯುವುದಿಲ್ಲ. ಈಗ ಅನೇಕ ಕೆಲಸಗಳಿಗಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಮಾಡುವವರನ್ನು ಪ್ರೋತ್ಸಾಹಿಸಬೇಕು. ಕೆಲವರಿಗೆ ಯುವ ಜನರ ಮಹತ್ವಾಕಾಂಕ್ಷೆಯ ಬಗ್ಗೆಯೂ ಸಮಸ್ಯೆ ಉಂಟಾಗುತ್ತದೆ. ಈಗ ಯುವಜನ ಬಹಳ ವೇಗವಾಗಿ ಮುನ್ನಡೆಯಲು ಇಚ್ಛಿಸುತ್ತಾರೆ ಎಂದು ಅವರು ಹೇಳುತ್ತಾರೆ. ಸ್ನೇಹಿತರೆ, ನಾನು ಮುನ್ನಡೆಯುವವರ ಪರವಾಗಿದ್ದೇನೆ. ಆದರೆ ಕೆಲವರು ಸ್ವಲ್ಪ ಸಮಯದಲ್ಲೇ ಹಣ ಕೂಡಿಡುವ ಸಲುವಾಗಿ ಮುಂದೆ ಓಡುತ್ತಾರೆ. ಅವರು ಜೀವನದಲ್ಲಿ ಬಹುಶ: ಜಯಶಾಲಿಗಳಾಗಬಹುದು. ಏನಾದರೂ ಮಾಡಿ ತೋರಿಸಲೆಂದು ಮುಂದೆ ಓಡುವ, ವೇಗವಾಗಿ ಓಡುವ, ಸಮಯಕ್ಕೆ ಮೊದಲೇ ಮಾಡುವವರು ತಮಗೂ ಏನನ್ನಾದರೂ ಮಾಡಿಕೊಂಡಿರುತ್ತಾರೆ, ಪ್ರಪಂಚಕ್ಕೂ ಏನಾದರೂ ಮಾಡಿ ಕೊಡುತ್ತಾರೆ. ನಾನು ನವಭಾರತದ ಮಾತನಾಡುವಾಗಲೆಲ್ಲಾ ಇದೇ ಉತ್ಸಾಹದ ಬಗ್ಗೆ ಹೇಳುತ್ತಿರುತ್ತೇನೆ.
ನನ್ನ ಭಾರತದ ಯುವಜನ ಸಮಸ್ಯೆಗಳಿಗೆ ಬೇಗನೆ ಪರಿಹಾರ ಹುಡುಕಲು ಇಚ್ಛಿಸುತ್ತಾರೆ, ಶೀಘ್ರವಾಗಿ ಪ್ರಗತಿಯನ್ನು ಬಯಸುತ್ತಾರೆ ಮತ್ತು ನಾನು ಇದನ್ನು ಒಳ್ಳೆಯದೆಂದು ತಿಳಿಯುತ್ತೇನೆ. ಇಂದಿನ ಯುವಜನ ತಾವು ನೌಕರಿ ಮಾಡುವುದಕ್ಕಿಂತ ಹೆಚ್ಚಾಗಿ ಬೇರೆಯವರಿಗೆ ಉದ್ಯೋಗ ಕೊಡಲು ಸಾಧ್ಯವಾಗುವಂತಹ ಸಾಮಥ್ಯ೯ ಗಳಿಸಲು ಇಚ್ಛಿಸುತ್ತಾರೆ. ಇದಕ್ಕೆ ಖಂಡಿತವಾಗಿಯೂ ಬಂಡವಾಳದ ಅಗತ್ಯವಿದೆ. ಆದರೆ ಅದಕ್ಕಿಂತಲೂ ಮಹತ್ವಪೂರ್ಣವಾದದ್ದು. ಜೀವನದ ಉದ್ದೇಶ, ಯೋಜನೆಯ ಅರಿವು. ನಮ್ಮ ಯುವಜನರಲ್ಲಿ ಇವುಗಳ ಕೊರತೆ ಇಲ್ಲ. ಅವರು ತಮ್ಮ ವಿಚಾರಗಳನ್ನು ನವ್ಯ ಪರಿಹಾರಗಳನ್ನು ಹೇಗೆ ಕಾರ್ಯರೂಪಕ್ಕೆ ತರಲು ಇಷ್ಟಪಡುತ್ತಾರೆಂದರೆ ಅದರಿಂದ ವಿಷಯಗಳು ಮತ್ತೂ ಸಮರ್ಥ ಹಾಗೂ ಮಿತವ್ಯಯದ್ದಾಗಿರಬೇಕು. ನಿಮ್ಮಂತಹ ಲಕ್ಷ-ಕೋಟಿ ಯುವಜನರ ಅದ್ಭುತ ಸಾಮಥ್ಯ೯ವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ‘ಸ್ಟಾರ್ಟ್ ಅಪ್” ಇಂಡಿಯಾ’ ಅಭಿಯಾನವನ್ನು ನಡೆಸುತ್ತಿದೆ. ಮುದ್ರಾ ಯೋಜನೆಯ ಅಡಿಯಲ್ಲಿ ನಿಮ್ಮಂತಹ ಕೋಟಿ ಕೋಟಿ ಯುವ ಜನರಿಗೆ ಬ್ಯಾಂಕ್ ಜಾಮೀನಿನ ಚಿಂತೆಯಿಂದ ಮುಕ್ತರಾಗಿಸಿ ಕೋಟ್ಯಂತರ ಹಣವನ್ನು ಸಾಲವಾಗಿ ಕೊಡಲಾಗುತ್ತಿದೆ.
ಸ್ನೇಹಿತರೆ, ಕನಸು ಕಾಣುವ ಸಾಮಥ್ಯ೯ ಪ್ರತಿಯೊಬ್ಬರಲೂ ಇರುತ್ತದೆ. ಇಲ್ಲಿ ಕುಳಿತಿರುವ ನೀವೆಲ್ಲರೂ ಪ್ರತಿದಿನ ಯಾವುದಾದರೂ ಹೊಸ ಕನಸು ಕಾಣುವ ಜನರಾಗಿರಬಹುದು. ಕನಸನ್ನು ಸಂಕಲ್ಪವಾಗಿ ಬದಲಿಸಿಕೊಳ್ಳುವ ಸಾಮಥ್ಯ೯ ಇರಬೇಕು. ಮತ್ತು ಸಂಕಲ್ಪ ಸಿದ್ಧಿಸಲು ಸಕಲ ಸಾಮಥ್ಯ೯ಗಳನ್ನು ಬಡಿದೆಬ್ಬಿಸಬೇಕು. ತಮ್ಮ ಕನಸುಗಳು, ಸಂಕಲ್ಪ ಮತ್ತು ಸಾಫಲ್ಯಗಳು ಅನೇಕ ಜನರ ಪ್ರೇರಣೆಗೆ ಕಾರಣವಾಗುವಂತಹ ಕೆಲವರು ಜನರಿರುತ್ತಾರೆ. ನಮ್ಮ ಐಟಿ ಪ್ರಪಂಚದಲ್ಲೇ ಅನೇಕ ದೊಡ್ಡ ದೊಡ್ಡ ಹೊಸ ಶೋಧನೆಗಳು ಯಾವುದೋ ಚಿಕ್ಕ ಕೋಣೆ, ಯಾವುದೋ ಗ್ಯಾರೇಜಿನಲ್ಲಿ ಬಹಳ ಚಿಕ್ಕಮಟ್ಟದಲ್ಲಿ ಆರಂಭವಾಗಿದ್ದನ್ನು ನೋಡಬಹುದು. ಜನರು ಆರಂಭದಲ್ಲಿ ಅವನ್ನು ತಿರಸ್ಕರಿಸಿದ್ದರು. ಆದರೆ ಈ ಜನ ತಮ್ಮ ಕನಸುಗಳನ್ನು, ತಮ್ಮ ಸಂಕಲ್ಪಗಳನ್ನು ಪೂರ್ಣ ಶಕ್ತಿಯನ್ನು ಹಾಕಿ ಯಶಸ್ವಿಯಾಗಲು ತತ್ಪರರಾಗಿದ್ದರು ಮತ್ತು ಸಫಲರೂ ಆದರು. ಒಂದು ಕಾಲದಲ್ಲಿ ಬಹಳಚಿಕ್ಕ ವಿಚಾರಗಳು ಎಂದು ತಿಳಿಯಲಾಗಿತ್ತೋ ಅವರಿಂದು ಬಿಲಿಯನ್ ಡಾಲರುಗಳ ಕಂಪನಿಯನ್ನು ನಡೆಸುತ್ತಿದ್ದಾರೆ. ಆದ್ದರಿಂದ ನಿಮ್ಮೆಲ್ಲರಿಗೂ ನಾನು ಹೇಳುವುದೇನೆಂದರೆ ನಿಮ್ಮ ಮುಂದೆ ದೀರ್ಘ ಸಮಯ ಇದೆ, ನಿಮಗೆ ಬಹಳಷ್ಟನ್ನು ಮಾಡಬೇಕಾಗಿದೆ. ನಿಮ್ಮ ಪಯಣದಲ್ಲಿ ಯಾವುದೇ ವಿಚಾರವನ್ನು ಹಾಗೆ ಕೊನೆಗೊಳ್ಳಲು ಬಿಡಬೇಡಿ. ನಿಮ್ಮ ಇಂತಹುದೇ ಯಾವುದಾದರೂ ವಿಚಾರ ನಾಳೆ ಬಿಲಿಯನ್ ಡಾಲರ್ ಕಂಪನಿಯಾಗಿ ಬದಲಾಗಬಹುದು ಮತ್ತು ಬಿಲಿಯನ್ ಜನರ ಜೀವನದಲ್ಲಿ ಬದಲಾವಣೆಗೆ ಕಾರಣವಾಗಬಹುದು.
ಸ್ನೇಹಿತರೆ, ನೀವು ವೇಗವಾಗಿ ಬದಲಾಗುತ್ತಿರುವ ಈ ಪ್ರಪಂಚದಲ್ಲಿ ಜ್ಞಾನ ಮತ್ತು ನೈಪುಣ್ಯತೆಯ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು. ಎರಡರಲ್ಲೂ ಬಹ ದೊಡ್ಡ ವ್ಯತ್ಯಾಸವಿದೆ, ಯಾವುದಾದರೂ ಪರಿ ಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು, ಮೂಲ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು,ಉದಾಹರಣೆಗೆ ವಿದ್ಯುತ್ ಪರಿಕ್ರಮಣ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳುವುದು, ಇದು ಜ್ಞಾನ ಆದರೆ ನೈಪುಣ್ಯವೆಂದರೆ ಈ ಪರಿಕಲ್ಪನೆಯನ್ನು ಹೇಗೆ ಉಪಯೋಗಿಸುವುದು ಎಂಬುದಾಗಿದೆ. ಎಲೆಕ್ಟ್ರಾನಿಕ್ಸ್ ಅಥವಾ ಎಲೆಕ್ಟ್ರಿಕಲ್ ಇಂಜಿನೀಯರಿಂಗ್ ಓದಿರುವ ಅನೇಕ ಜನರಿಗೆ ಮನೆಯಲ್ಲಿ ಫ್ಯೂಸ್ ಹೋದರೆ ಅದನ್ನು ಸರಿಪಡಿಸಲು ಹೊರಗಿನವರನ್ನು ಕರೆಯಬೇಕಾಗುತ್ತದೆ. ಜ್ಞಾನವನ್ನು ತೀಕ್ಷ್ಣಗೊಳಿಸಿ ಅದನ್ನು ಅಳವಡಿಸಿಕೊಳ್ಳುವುದೇ ನೈಪುಣ್ಯತೆ. ಆದ್ದರಿಂದ ಇಂದು ಎಷ್ಟು ವೇಗವಾಗಿ ಜ್ಞಾನವು ಬೆಳೆಯುತ್ತಿದೆಯೋ ಅದೇ ವೇಗದಲ್ಲಿ ನೈಪುಣ್ಯತೆಯೂ ಬೆಳೆಯುವ ಅಗತ್ಯವಿದೆ. ಆದ್ದರಿಂದ ನಾನು ನೈಪುಣ್ಯ ಮಗ್ನತೆಯನ್ನು ಉತ್ತಮಪಡಿಸುವಿಕೆಯು (ಎಸ್‍ಇಓ) ಅಂತರ್ಜಾಲ ಪ್ರಪಂಚದ ಶೋಧನಾ ಚಾಲಕ ತಂತ್ರಾಂಶದ ಕೇಲಿನ ಮೇಲೆ ಚಲಿಸುತ್ತದೆ, ಹಾಗಾಗಿ ಇದರಲ್ಲಿ ಶೋಧನಾ ಚಾಲಕ ತಂತ್ರಾಂಶ ಉತ್ತಮ ಪಡಿಸುವಿಕೆಯದು ಬಹಳ ದೊಡ್ಡ ಪಾತ್ರವಿದೆ ಎಂದು ಹೇಳುತ್ತೇನೆ. ನಿಮ್ಮ ನಮ್ಮ ಪ್ರಪಂಚ ಸಾರ್ವಜನಿಕ ಯೋಗಕ್ಷೇಮ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯ ಕೀಲಿನ ಮೇಲೆ ಸುತ್ತುತ್ತಿದೆ. ಆದ್ದರಿಂದ ಇದರಲ್ಲಿ ನೈಪುಣ್ಯ ಮಗ್ನತೆಯನ್ನು ಉತ್ತಮ ಪಡಿಸುವಿಕೆಯ ಬಹಳ ದೊಡ್ಡ ಭೂಮಿಕೆ ಇದೆ. ಜಗತ್ತು ತಮ್ಮ ಜ್ಞಾನವನ್ನು ಉಪಯೋಗಿಸುವುದನ್ನು ತಿಳಿದಂತಹ, ತಮ್ಮ ನೈಪುಣ್ಯತೆಯ ಮೂಲಕ ಜನರೊಂದಿಗೆ, ಗ್ರಾಹಕರೊಂದಿಗೆ ಸಂಪರ್ಕವಿರುವಂತಹ ಜನರನ್ನು ಇಷ್ಟಪಡುತ್ತದೆ. ಈಗ ನೀವು ನೈಪುಣ್ಯ ಮಗ್ನತೆಯನ್ನು ಉತ್ತಮ ಪಡಿಸುವಿಕೆಯ ಬಗ್ಗೆಗಮನವಿಡುತ್ತೀರಿ, ದೇಶದ ಉದ್ಯೋಗಸ್ಥ ಜನತೆಯ ಬಾಹುಳ್ಯದ ಲಾಭ ಕೂಡ ವಿಕಾಸದ ಲಾಭವಾಗಿ ಬದಲಾಗುತ್ತದೆ. ನವ ಭಾರತಕ್ಕೆ ಮಾರ್ಗ ಇನ್ನೂ ಭದ್ರವಾಗುತ್ತದೆ. ಸ್ನೇಹಿತರೆ, ನಿಮಗೆ ಕೊಟ್ಟಿರುವ ಕೆಲಸಕ್ಕೆ ನೀವು ಮುಂದಿನ ಕೆಲ ಗಂಟೆಗಳಲ್ಲಿ ಯಾವುದಾದರೂ ಪರಿಹಾರ ಹುಡುಕುತ್ತೀರಿ. ಆದರೆ ನಾವು ಇಷ್ಟಕ್ಕೇ ನಿಲ್ಲಬಾರದು. ಈ ಕಾರ್ಯಕ್ರಮದಲ್ಲಿ ಕೇಂದ್ರದ 29 ಸಚಿವರು ಭಾಗವಹಿಸುತ್ತಿದ್ದಾರೆ. ಈ ಹ್ಯಾಕಥಾನ್‍ನಿಂದ ಯಾವ ಪರಿಹಾರಗಳು ಹೊರ ಬರುತ್ತವೋ ಅವನ್ನೂಕಡೆಯ ಘಟ್ಟದವರೆಗೆ, ನ್ಯಾಯವಾದ ಅಂತ್ಯದವರೆಗೆ ತಲುಪಿಸುವುದು ಇವರೆಲ್ಲರ ಜವಾಬ್ದಾರಿಯಾಗಿದೆ. ಸುಧಾರಣೆಯ ಅವಕಾಶವಿದ್ದರೆ ಅದರಲ್ಲಿ ಸುಧಾರಣೆ ತಂದು ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕು. ಈ ಪ್ರಯತ್ನದಲ್ಲಿ ನೀವು ಜಯಶಾಲಿಗಳಾಗಿ, ಕೆಲವು ಹೊಸ ಪರಿಹಾರಗಳನ್ನು ಕೊಡಿ ಇದಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಬಹಳ ಬಹಳ ಶುಭಾಕಾಂಕ್ಷೆಗಳು.
India is a youthful nation. The youth of India has come together with enthusiasm for this programme: PM @narendramodi #sih2017
— PMO India (@PMOIndia) April 1, 2017
The youth of India is blessed with phenomenal energy and this energy will bring very good results for the nation: PM @narendramodi
— PMO India (@PMOIndia) April 1, 2017
There is a need to use technology more and innovate more. We live in a technology driven era: PM @narendramodi #sih2017
— PMO India (@PMOIndia) April 1, 2017
A series of issues have been placed before our youth to work on. The issues are challenging but this is also an opportunity: PM at #sih2017
— PMO India (@PMOIndia) April 1, 2017
The true essence of democracy is 'Jan Bhagidari' : PM @narendramodi at the #sih2017
— PMO India (@PMOIndia) April 1, 2017
Together we will solve all the issues that are affecting the nation. This will be done through 'Jan Bhagidari' : PM @narendramodi #sih2017
— PMO India (@PMOIndia) April 1, 2017
I am confident the outcomes of what my young friends are doing will lead to very positive results: PM @narendramodi #sih2017
— PMO India (@PMOIndia) April 1, 2017
Artificial intelligence, 3D technology...see how the world is undergoing changes. This is an era of 'Internet of Things' : PM at #sih2017
— PMO India (@PMOIndia) April 1, 2017
Technology and innovation are powering so many changes. Things like floppies, tape recorders and walkmen are history: PM at #sih2017
— PMO India (@PMOIndia) April 1, 2017
Technology has made things so much simpler: PM @narendramodi at #sih2017
— PMO India (@PMOIndia) April 1, 2017
When you are innovating you may face setbacks but do not let those setbacks lower your morale or dampen your spirits: PM at #sih2017
— PMO India (@PMOIndia) April 1, 2017
When you are innovating remember that quality is key. Good quality products will bring changes in the lives of many people: PM at #sih2017
— PMO India (@PMOIndia) April 1, 2017
People say today's youngsters ask so many questions and I see that as a very good thing: PM @narendramodi at #sih2017
— PMO India (@PMOIndia) April 1, 2017
Youth of India wants to find solutions to the nation's problems. They want results that are quick and credible: PM @narendramodi #sih2017
— PMO India (@PMOIndia) April 1, 2017
Today, the youngsters of India want to be job creators: PM @narendramodi at #sih2017
— PMO India (@PMOIndia) April 1, 2017
Application and sharpening of knowledge translates into skills. Both skills and knowledge are important: PM @narendramodi #sih2017
— PMO India (@PMOIndia) April 1, 2017