Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಚ್ಛತೆಯೇ ಸೇವೆ ಆಂದೋಲನದ ಭಾಗವಾಗುವಂತೆ ಪ್ರತಿಯೊಬ್ಬರಿಗೂ ಕರೆಕೊಟ್ಟ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಸ್ವಚ್ಛತೆಯೇ ಸೇವೆ ಆಂದೋಲನ’ದ ಭಾಗವಾಗುವಂತೆ ಪ್ರತಿಯೊಬ್ಬರಿಗೂ ಕರೆ ನೀಡಿದ್ದಾರೆ.

‘ಅಕ್ಟೋಬರ್ 2ರಂದು ನಾವು ಗಾಂಧೀಜಿ ಅವರ 150ನೇ ಜನ್ಮ ದಿನೋತ್ಸವಾರಂಭಕ್ಕೆ ಸಾಕ್ಷಿಯಾಗಲಿದ್ದೇವೆ’ ಈ ದಿನ ಬಾಪೂ ಅವರ ಸ್ವಚ್ಛ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವ ಐತಿಹಾಸಿಕ ಜನಾಂದೋಲನವಾದ ಸ್ವಚ್ಛ ಭಾರತ ಅಭಿಯಾನ 4 ವರ್ಷವನ್ನೂ ಪೂರ್ಣಗೊಳ್ಳುವ ದಿನವೂ ಆಗಿದೆ.

ಸ್ವಚ್ಛ ಭಾರತಕ್ಕಾಗಿ ಶ್ರಮಿಸುತ್ತಿರುವ ಎಲ್ಲರಿಗೂ ನಾನು ನಮನ ಸಲ್ಲಿಸುತ್ತೇನೆ!

‘ಸ್ವಚ್ಛತೆಯೇ ಸೇವೆ ಆಂದೋಲನ’ ಸೆಪ್ಟೆಂಬರ್ 15ರಂದು ಆರಂಭಗೊಳ್ಳುತ್ತಿದೆ. ಇದು ಬಾಪೂ ಅವರಿಗೆ ಗೌರವನಮನ ಸಲ್ಲಿಸುವ ಮಹತ್ವದ ಮಾರ್ಗವಾಗಿದೆ.

ಬನ್ನಿ, ಈ ಆಂದೋಲನದ ಭಾಗವಾಗಿ ಮತ್ತು ಸ್ವಚ್ಛ ಭಾರತ ನಿರ್ಮಾಣದ ಪ್ರಯತ್ನಗಳನ್ನು ಬಲಪಡಿಸಿ!

15ರಂದು ಬೆಳಗ್ಗೆ 9.30ಕ್ಕೆ ನಾವೆಲ್ಲರೂ ಒಗ್ಗೂಡಿ ಸ್ವಚ್ಛತೆಯೇ ಸೇವೆ ಚಳವಳಿಯ ಆರಂಭಕ್ಕೆ ಸಾಕ್ಷಿಯಾಗೋಣ. ಸ್ವಚ್ಛ ಭಾರತ ಅಭಿಯಾನ ಬಲಪಡಿಸಲು ದೃಢವಾಗಿ ಶ್ರಮಿಸಿದವರೊಂದಿಗೆ ಸಂವಾದ ನಡೆಸಲು ನಾನು ಎದಿರು ನೋಡುತ್ತಿದ್ದೇನೆ, ನಂತರ ಸ್ವಚ್ಛತೆಯ ಚಟುವಟಿಕೆಗಳು ಆರಂಭಗೊಳ್ಳಲಿವೆ”.

**********

AKT/AP/KP