Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಚ್ಛ ಭಾರತದ ಸಾಮಾಜಿಕ ಉದ್ದೇಶವನ್ನು ಸಮರ್ಥಿಸಿಕೊಂಡು ಥಳಿತಕ್ಕೆ ಒಳಗಾಗಿ ಸಾವನ್ನಪ್ಪಿದ ಇ-ರಿಕ್ಷಾ ಚಾಲಕನ ಹತ್ತಿರದ ಬಂಧುಗಳಿಗೆ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಪ್ರಧಾನಮಂತ್ರಿ


ವಿದೇಶ ಪ್ರಯಾಣದಲ್ಲಿರುವ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ನವದೆಹಲಿಯಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ವಿರೋಧಿಸಿದ ಕಾರಣಕ್ಕೆ ಥಳಿತಕ್ಕೆ ಒಳಗಾಗಿ ಸಾವನ್ನಪ್ಪಿದ ಇ-ರಿಕ್ಷಾ ಚಾಲಕ ರವೀಂದ್ರ ಕುಮಾರ್ ನ ಹತ್ತಿರದ ಬಂಧುಗಳಿಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 1 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಪ್ರಧಾನಿ, ಇಂಥ ಅಮಾನವೀಯ ಕೃತ್ಯವೆಸಗಿದವರ ವಿರುದ್ಧ ಪ್ರಕರಣ ದಾಖಲಿಸಿ, ತಕ್ಕಶಾಸ್ತಿ ಮಾಡುವಂತೆ ಪ್ರಾಧಿಕಾರಗಳಿಗೆ ಸೂಚಿಸಿದ್ದಾರೆ.

ಇದಕ್ಕೂ ಮುನ್ನ ಕೇಂದ್ರ ನಗರಾಭಿವೃದ್ಧಿ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ. ವೆಂಕಯ್ಯನಾಯ್ಡು ನವದೆಹಲಿಯ ಜಿಟಿಬಿ ನಗರದಲ್ಲಿರುವ ಇ-ರಿಕ್ಷಾ ಚಾಲಕನ ಕುಟುಂಬದವರನ್ನು ಭೇಟಿ ಮಾಡಿ, ತಮ್ಮ ಸಂಬಳದಿಂದ 50 ಸಾವಿರ ರೂಪಾಯಿಗಳ ಚೆಕ್ ನೀಡಿದರು. ಘಟನೆ ಖಂಡಿಸಿದ ಅವರು, ತಪ್ಪಿತಸ್ಥರಿಗೆ ದಂಡನೆ ಆಗಲೇಬೇಕು ಎಂದರು.

*****

AKT/YSK/NT