Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹಂತಹಂತದ ಬದಲಾವಣೆಯ ಕಾಲ ಮುಗಿದು ಹೋಯಿತು: ಪ್ರಧಾನಿ

ಹಂತಹಂತದ ಬದಲಾವಣೆಯ ಕಾಲ ಮುಗಿದು ಹೋಯಿತು: ಪ್ರಧಾನಿ

ಹಂತಹಂತದ ಬದಲಾವಣೆಯ ಕಾಲ ಮುಗಿದು ಹೋಯಿತು: ಪ್ರಧಾನಿ


ಮುಂದಿನ 15 ವರ್ಷಗಳ ಅವಧಿಯಲ್ಲಿ ಭಾರತದ ಅಭಿವೃದ್ಧಿಗೆ ದಿಕ್ಸೂಚಿಯಾಗುವಂಥ ಮತ್ತು 21ನೇ ಶತಮಾನದ ಮುಂದಿನ ದಶಕಗಳಲ್ಲಿ ದೇಶದ ಪ್ರಗತಿಗೆ ಬುನಾದಿ ಹಾಕುವಂತಹ ಮುನ್ನೋಟದ ದಸ್ತಾವೇಜನ್ನು ರೂಪಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನೀತಿ ಆಯೋಗಕ್ಕೆ ಕರೆ ನೀಡಿದ್ದಾರೆ.

ನೀತಿ ಆಯೋಗದ ಸದಸ್ಯರೊಂದಿಗೆ ಸಂವಾದ ನಡೆಸಿದ ಪ್ರಧಾನ ಮಂತ್ರಿಯವರು, ವಿಶ್ವಾದ್ಯಂತ ಕೆಲ ಸಮಯದವರೆಗೆ ಒಂದು ನಿಯಮವಾಗಿದ್ದ ಹಂತ ಹಂತದ ಬದಲಾವಣೆಯ ಕಾಲ ಈಗ ಮುಗಿದಿದೆ ಎಂದರು. ಪ್ರಸಕ್ತ ಯುಗಮಾನವು ಪರಿವರ್ತನಾತ್ಮಕ ಬದಲಾವಣೆ ಬಯಸುತ್ತದೆ ಎಂದರು. ಕಳೆದ ಮೂರು ದಶಕಗಳಲ್ಲಿ ಬದಲಾವಣೆಯ ಚಾಲಕ ಶಕ್ತಿಯಾಗಿ ಹೊರಹೊಮ್ಮಿರುವ ತಂತ್ರಜ್ಞಾನ ಮಹತ್ವನ್ನು ಅವರು ಒತ್ತಿ ಹೇಳಿದರು, ಮತ್ತು ಈ ಗತಿಯ ಬದಲಾವಣೆಯನ್ನು ಮಂದಗತಿಗೊಳಿಸಲಾಗುವುದಿಲ್ಲ ಎಂದರು. ಜನರ ಜೀವನವನ್ನು ಉತ್ತಮಪಡಿಸಲು ಪರಿವರ್ತನಾತ್ಮಕ ಬದಲಾವಣೆ ತರುವ ಶಕ್ತಿ ಮತ್ತು ಧೈರ್ಯ ಕೇಂದ್ರ ಸರ್ಕಾರಕ್ಕಿದೆ ಎಂದು ಹೇಳಿದರು.

ಐತಿಹಾಸಿಕವಾಗಿ ಭಾರತೀಯ ನೀತಿ ನಿರೂಪಕರು ಅದರ ಶಕ್ತಿಗನುಸಾರವಾಗಿ ಕಾರ್ಯ ಮಾಡುವುದಕ್ಕಿಂತ ಹೆಚ್ಚಾಗಿ ಸಂದಿಗ್ಧತೆಗಳ ಪ್ರಲಾಪ ಮಾಡಿದ್ದರು ಎಂದು ಬೊಟ್ಟು ಮಾಡಿ ತೋರಿಸಿದರು. ಭಾರತದ ಅಭಿವೃದ್ಧಿ ಪಥದ ವಿಶಾಲ ಬಾಹ್ಯರೇಖೆಗಳನ್ನು ಹಾಕಿದ ಪ್ರಧಾನಿ, ವಿವೇಚನೆಯಿಂದ ಮತ್ತು ಬುದ್ಧಿವಂತಿಕೆಯಿಂದ ಭಾರತದ ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲವನ್ನು ಬಳಸಿಕೊಂಡಲ್ಲಿ ಅದು ಈ ಬದಲಾವಣೆಯ ಹೃದಯದಲ್ಲಿರುತ್ತದೆ ಎಂದು ಹೇಳಿದರು. ಈ ಧ್ಯೇಯದ ಬಗ್ಗೆ ಹಲವು ಉದಾಹರಣೆಗಳನ್ನು ನೀಡಿದ ಅವರು, ಲಭ್ಯವಿರುವ ಭೂಮಿಯ, ದೇಶದ ಖನಿಜ ಸಂಪತ್ತು ಮತ್ತು ಇನ್ನೂ ಬಳಸಿಕೊಳ್ಳದ ವಿಸ್ತಾರವಾದ ಸೌರ ಶಕ್ತಿಯ ಸಾಮರ್ಥ್ಯದ ಬಳಕೆಯ ಬಗ್ಗೆ ಪ್ರಸ್ತಾಪಿಸಿದರು. ಅದೇ ರೀತಿ, ತನ್ನ ವಿಶಾಲ ಕರಾವಳಿಯ ಸಾಮರ್ಥ್ಯವನ್ನೂ ಭಾರತ ಉಪ- ಸೂಕ್ತ ಪ್ರಮಾಣದಲ್ಲಿ ಬಳಸಿಕೊಂಡಿದೆ ಎಂದರು.

ಮಾನವ ಸಂಪನ್ಮೂಲ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಭವಿಷ್ಯದಲ್ಲಿ ಜಗತ್ತಿನ ಮಾನವ ಸಂಪನ್ಮೂಲದ ಅಗತ್ಯಗಳನ್ನು ಪೂರೈಸುವ ಶಕ್ತಿಯನ್ನು ಭಾರತದ ಹೊಂದಿರುವ ಹಿನ್ನೆಲೆಯಲ್ಲಿ ಕೌಶಲ ಅಭಿವೃದ್ಧಿ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಭಾರತದ ಪ್ರವಾಸೋದ್ಯಮದ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಯುವ ಅಗತ್ಯವನ್ನೂ ಪ್ರಧಾನಿ ಪ್ರತಿಪಾದಿಸಿದರು. ಅಭಿವೃದ್ಧಿ ಮತ್ತು ರಫ್ತು ಉತ್ತೇಜನಕ್ಕಾಗಿ ರಾಜ್ಯಗಳೊಂದಿಗಿನ ಪಾಲುದಾರಿಕೆ ಸಹಕಾರ ಒಕ್ಕೂಟ ವ್ಯವಸ್ಥೆಯ ಸಾಧನವಷ್ಟೇ ಅಲ್ಲ, ಆದರೆ ಅದು ಈ ಹೊತ್ತಿನ ಅಗತ್ಯವೂ ಆಗಿದೆ ಎಂದರು.
ಕೃಷಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ನಮ್ಮ ಗಮನ ಕೇವಲ ಕೃಷಿ ಉತ್ಪಾದನೆಯನ್ನು ಮಾತ್ರ ಹೆಚ್ಚಿಸುವುದಾಗಿರಬಾರದು, ಆದರೆ, ದೇಶದ ಸಮಗ್ರ ಗ್ರಾಮೀಣ ಆರ್ಥಿಕ ಅಭಿವೃದ್ಧಿಯತ್ತ ಇರಬೇಕು ಎಂದರು. ಆಹಾರ ಸಂಸ್ಕರಣೆ ವಲಯ, ಗೋದಾಮು ಅಭಿವೃದ್ಧಿ ಮತ್ತು ಈ ವಲಯದಲ್ಲಿನ ತಂತ್ರಜ್ಞಾನದ ಮಹತ್ವವನ್ನು ಅವರು ಪ್ರತಿಪಾದಿಸಿದರು.

ನೀತಿ ನಿರೂಪಕರಲ್ಲಿನ ನಿಯತ್ತು ನೀತಿಗಿಂತಲೂ ಹೆಚ್ಚು ಮಹತ್ವದ್ದಾಗಿರಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತಮ ಆಡಳಿತದ ಸಾಮರ್ಥ್ಯ ನಿರ್ಮಾಣದ ಅಗತ್ಯದ ಬಗ್ಗೆ ಒತ್ತಿ ಹೇಳಿದ ಅವರು, ತತ್ ಕ್ಷಣವೇ ದತ್ತಾಂಶದ ಲಭ್ಯತೆಯ ಮಹತ್ವದ ಬಗ್ಗೆಯೂ ಒತ್ತಿ ಹೇಳಿದರು.
ಗೀವ್ ಇಟ್ ಅಪ್ (ಎಲ್.ಪಿ.ಜಿ. ಸಬ್ಡಿಡಿ ಮರಳಿಸಿ) ಅಭಿಯಾನ ಹಾಗೂ ಸರ್ವತ್ರ ಜನರಿಂದ ಧನಾತ್ಮಕ ಸ್ಪಂದನೆ ಗಳಿಸಿರುವ ಸ್ವಚ್ಛ ಭಾರತ ಅಭಿಯಾನದಂಥ ಯಶಸ್ವೀ ಯೋಜನೆಗಳಿಂದ ಪ್ರೇರಣೆ ಪಡೆಯಿರಿ ಎಂದು ಪ್ರಧಾನಮಂತ್ರಿ ನೀತಿ ಆಯೋಗಕ್ಕೆ ಆಗ್ರಹಿಸಿದರು. ಜನರು ಕೇವಲ ತಮಗೆ ಲಾಭವಾಗುವುದರತ್ತ ಮಾತ್ರ ಆಸಕ್ತಿ ಹೊಂದಿರುತ್ತಾರೆ ಎಂಬ ತಜ್ಞರ ಸಾಮಾನ್ಯ ಅನಿಸಿಕೆಯನ್ನು ಈ ಅನುಭವ ಸುಳ್ಳಾಗಿಸಿದೆ; ಸಾರ್ವಜನಿಕರ ಒಳಿತಿಗೆ ಜನರು ಉತ್ತೇಜಿತರಾಗುತ್ತದೆ ಎಂಬುದನ್ನು ತೋರಿದೆ ಎಂದರು.

ಈ ಸಭೆಯಲ್ಲಿ ಯೋಜನಾ ಖಾತೆ ಸಹಾಯಕ ಸಚಿವ, ಶ್ರೀ ರಾವ್ ಇಂದರ್ ಜಿತ್ ಸಿಂಗ್, ನೀತಿ ಆಯೋಗದ ಉಪಾಧ್ಯಕ್ಷ ಶ್ರೀ ಅರವಿಂದ ಪನಗರಿಯಾ ಮತ್ತು ನೀತಿ ಆಯೋಗದ ಸದಸ್ಯರು, ಜೊತೆಗೆ ನೀತಿ ಆಯೋಗ, ಸಂಪುಟ ಸಚಿವಾಲಯ ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

***

AKT/AK