ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 105 ಕಾಯಿದೆಗಳನ್ನು ರದ್ದು ಮಾಡಲು ರದ್ಧತಿ ಮತ್ತು ತಿದ್ದುಪಡಿ ವಿಧೇಯಕ 2017ನ್ನು ಮಂಡಿಸಲು ತನ್ನ ಅನುಮೋದನೆ ನೀಡಿದೆ.
ಹಿನ್ನೆಲೆ:
ಪ್ರಧಾನಮಂತ್ರಿಗಳ ಕಾರ್ಯಾಲಯ ರಚಿಸಿದ್ದ ಇಬ್ಬರು ಸದಸ್ಯರ ಸಮಿತಿ, ಭಾರತೀಯ ಕಾನೂನು ಆಯೋಗ ಮತ್ತು ಶಾಸನ ಇಲಾಖೆ 1824 ಹಳೆಯ ಮತ್ತು ಅಧಿಕವಾದ ಕೇಂದ್ರ ಶಾಸನಗಳನ್ನು ರದ್ದು ಮಾಡಲು ಗುರುತಿಸಿದೆ. ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಮತ್ತು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿದ ತರುವಾಯ (2014ರ ಮೇ ತಿಂಗಳಿನಿಂದ ಆಗಸ್ಟ್ 2016ರ ಅವಧಿಯಲ್ಲಿ) 1175 ಕೇಂದ್ರ ಶಾಸನಗಳನ್ನು ರದ್ದು ಮಾಡಲು ಸಂಸತ್ತಿನಲ್ಲಿ ನಾಲ್ಕು ಕಾಯಿದೆ ಮಾಡಲಾಗಿದೆ. ಅವುಗಳೆಂದರೆ –
i) 35 ಶಾಸನಗಳನ್ನು ರದ್ದು ಮಾಡಲು, ರದ್ಧತಿ ಮತ್ತು ತಿದ್ದುಪಡಿ ಕಾಯಿದೆ 2015 (17 ಆಫ್ 2015) ; 90 ಶಾಸನಗಳನ್ನು ರದ್ದು ಮಾಡಲು ರದ್ಧತಿ ಮತ್ತು ತಿದ್ದುಪಡಿ(ಎರಡು) ಕಾಯಿದೆ (19 ಆಫ್ 2015);
ii) 756 ಶಾಸನಗಳ ರದ್ದತಿಗಾಗಿ ವಿನಿಯೋಗ (ರದ್ದು) ಕಾಯಿದೆ 2016 (22 ಆಫ್ 2016) ;
iii) ವಿನಿಯೋಗ (ರೈಲ್ವೆ) ಕಾಯಿದೆ ಸೇರಿದಂತೆ ವಿನಿಯೋಗ ಕಾಯಿದೆಗಳು ;
iv) 294 ಶಾಸನಗಳನ್ನು ತೆಗೆದುಹಾಕಲು ರದ್ದತಿ ಮತ್ತು ತಿದ್ದುಪಡಿ ಕಾಯಿದೆ 2016 (23 ಆಫ್ 2016).
ಮೇಲೆ ಹೇಳಲಾದ 1824 ಕಾಯಿದೆಗಳ ಪೈಕಿ (ರಾಷ್ಟ್ರಪತಿ ಆಳ್ವಿಕೆಯ ಅಡಿಯಲ್ಲಿ ರಾಜ್ಯಗಳಿಗೆ ಸಂಸತ್ತು ರೂಪಿಸಿದ ವಿನಿಯೋಗ ಶಾಸನಗಳೂ ಸೇರಿದಂತೆ) 227 ಶಾಸನಗಳನ್ನು ರಾಜ್ಯ ಸರ್ಕಾರಗಳು ತೆಗೆದುಹಾಕಬೇಕೆಂದು ಗುರುತಿಸಲಾಗಿದ್ದು, ಇವುಗಳ ರದ್ದತಿಗೆಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಉಳಿದ 422 ಕೇಂದ್ರೀಯ ಶಾಸನಗಳ ಪಟ್ಟಿಯನ್ನು ತಮ್ಮ ತಮ್ಮ ಸಚಿವಾಲಯ/ಇಲಾಖೆಗೆ ಸಂಬಂಧಿಸಿದ ಕಾಯಿದೆಗಳ ರದ್ದತಿ ಕುರಿತಂತೆ ಅಭಿಪ್ರಾಯ ತಿಳಿಸಲು ಸಚಿವಾಲಯ/ಇಲಾಖೆಗಳ ನಡುವೆ ಪ್ರಸರಣ ಮಾಡಲಾಗಿದೆ. ಈ ದಿನಾಂಕದವರೆಗೆ ಶಾಸನ ಇಲಾಖೆ ಸೇರಿದಂತೆ 73 ಸಚಿವಾಲಯ/ಇಲಾಖೆಗಳು ತಮ್ಮ ಅಭಿಪ್ರಾಯ ನೀಡಿದ್ದು, 105 ಶಾಸನಗಳನ್ನು ರದ್ದು ಪಡಿಸಲು ಒಪ್ಪಿವೆ ಮತ್ತು 139 ಕಾಯಿದೆಗಳ ರದ್ದತಿಗೆ ತಮ್ಮ ಅಸಮ್ಮತಿ ಸೂಚಿಸಿವೆ. ಅವರುಗಳಿಂದ ಬಂದ ಅಭಿಪ್ರಾಯ/ಸಮ್ಮತಿ ಆಧಾರದ ಮೇಲೆ 105 ಶಾಸನಗಳನ್ನು ಈ ಇಲಾಖೆಯಿಂದ ತೆಗೆದುಹಾಕಲು ಗುರುತಿಸಲಾಗಿದೆ.
*****
AKT/VBA/SH