ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಫಿಜಿ ಹೈ ಕಮಿಷನರೇಟ್ಗೆ ಹೊಸ ದಿಲ್ಲಿಯ ಚಾಣಕ್ಯಪುರಿಯ ರಾಯಭಾರಿಗಳಿರುವ ಪ್ರದೇಶದಲ್ಲಿ ನೀಡಲಾದ 2,800 ಚದರ ಮೀಟರ್ ವಿಸ್ತೀರ್ಣದ ಪ್ಲಾಟ್ ಸಂಖ್ಯೆ 31-ಬಿಗೆ ವಾಣಿಜ್ಯಿಕ ದರ ವಿಧಿಸುವುದರಿಂದ ವಿನಾಯಿತಿ ನೀಡಲು ಹಾಗೂ ಫಿಜಿಯು ಸುವಾದಲ್ಲಿ ಭಾರತೀಯ ಹೈ ಕಮಿಷನ್ಗೆ ನೀಡಿರುವ ಭೂಮಿಗೆ ವಿಧಿಸಲಾದ ಶರತ್ತು ಹಾಗೂ ಗಡುವನ್ನು ಇಲ್ಲಿಯೂ ನೀಡಲು ಸಮ್ಮತಿಸಲಾಗಿದೆ.
ಹಿನ್ನೆಲೆ:
ಆಗಸ್ಟ್ 2015ರಲ್ಲಿ ಫಿಜಿ ಸರ್ಕಾರವು ಸುವಾದಲ್ಲಿ ಭಾರತೀಯ ಹೈ ಕಮಿಷನ್ನ ಕಟ್ಟಡವನ್ನು ನಿರ್ಮಿಸಲು 6,695 ಚದರ ಮೀಟರ್ ಭೂಮಿಯನ್ನು 99 ವರ್ಷಗಳ ಕಾಲ ವಾರ್ಷಿಕ ನೂರು ಎಫ್ಜೆ ಡಾಲರ್ನಂತೆ ಭೋಗ್ಯಕ್ಕೆ ನೀಡಲು ಮತ್ತು ಈ ಮೊತ್ತವನ್ನು ಐದು ವರ್ಷಕ್ಕೊಮ್ಮೆ ಮೌಲ್ಯಮಾಪನ ಮಾಡಲು ಹಾಗೂ ಪ್ರತಿಯಾಗಿ ಭೂಮಿ ಕೊಡುವಂತೆ ಪ್ರಸ್ತಾವಿಸಿತ್ತು. ಫಿಜಿಯೊಂದಿಗಿನ ದ್ವಿಪಕ್ಷೀಯ ಸಂಬಂಧದ ಹಿನ್ನೆಲೆಯಲ್ಲಿ ಫಿಜಿ ಹೈ ಕಮಿಷನ್ಗೆ ವಾಣಿಜ್ಯ ದರದಿಂದ ವಿನಾಯಿತಿ ನೀಡಿ, ಭೂಮಿಗೆ ಪ್ರತಿಯಾಗಿ ಭೂಮಿ ನೀಡಲು ನಿರ್ಧರಿಸಲಾಗಿದೆ.