ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ ಸಚಿವ ಸಂಪುಟ ಸಭೆ, ಹೊಸ ಇಂಧನ ಮತ್ತು ಕೈಗಾರಿಕಾ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ (ಎನ್.ಇ.ಡಿ.ಓ), ಜಪಾನ್ ಮತ್ತು ಹಣಕಾಸು (ಆರ್ಥಿಕ ವ್ಯವಹಾರಗಳ ಇಲಾಖೆ), ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯಗಳು ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎ.ಐ.ಐ.ಎಂ.ಎಸ್.) ನಡುವೆ ದೆಹಲಿಯ ಎ.ಐ.ಐ.ಎಂ.ಎಸ್.ನಲ್ಲಿ ಐ.ಸಿ.ಟಿ. ಆಧಾರಿತ ಪ್ರಾತ್ಯಕ್ಷಿಕೆ ಯೋಜನೆಯ ಹಸಿರು ಆಸ್ಪತ್ರೆಗಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ಸಮ್ಮತಿ ನೀಡಿದೆ.
ಯೋಜನೆಯು ಕೆಳಗಿನ ಕೆಲಸಗಳನ್ನು ಒಳಗೊಂಡಿರುತ್ತದೆ:
a. ಉಪಕರಣದ ಎಂಜಿನಿಯರಿಂಗ್ ಮತ್ತು ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಗೆ ಅಗತ್ಯವಾದ ಸಮೀಕ್ಷೆ.
b. ಉಪಕರಣದ ಮೂಲ ಯೋಜನೆ ಮತ್ತು ಎಂಜನಿಯರಿಂಗ ಮತ್ತು ವಿನ್ಯಾಸ.
c. ಉಪಕರಣದ ಉತ್ಪಾದನೆ ಮತ್ತು ಸಾಗಣೆ.
d. ಸಿವಿಲ್ ಕಾಮಗಾರಿ ಮತ್ತು ನಿರ್ಮಾಣ ಮತ್ತು ಸ್ಥಾಪನೆ.
e. ಉಪಕರಣದ ಸಜ್ಜುಗೊಳಿಸುವಿಕೆ
f. ಉಪಕರಣದ ಪ್ರಾತ್ಯಕ್ಷಿಕೆ, ಮತ್ತು
g. ಭಾರತದಲ್ಲಿ ತಂತ್ರಜ್ಞಾನದ ಪ್ರಸರಣ.
ಸಹಿ ಹಾಕಿದ ದಿನದಿಂದ ಈ ತಿಳಿವಳಿಕೆ ಒಪ್ಪಂದವು ಜಾರಿಗೆ ಬರುತ್ತದೆ ಮತ್ತು 2020ರ ಮಾರ್ಚ್ 31ರವರೆಗೆ ಅಸ್ತಿತ್ವದಲ್ಲಿರುತ್ತದೆ. ದೆಹಲಿಯ ಎ.ಐ.ಐ.ಎಂ.ಎಸ್.ನಲ್ಲಿ ಇಂದನ ದಕ್ಷತೆಯ ಮತ್ತು ಐ.ಟಿ. ಸಂಬಂಧಿತ ಉಪಕರಣಗಳನ್ನು ಸ್ಥಾಪಿಸಿ ಮತ್ತು ಇಂಧನ ನಿರ್ವಹಣೆ ವ್ಯವಸ್ಥೆ ಮತ್ತು ಐ.ಟಿ. ವ್ಯವಸ್ಥೆ ಪ್ರದರ್ಶಿಸುವ ಮೂಲಕ ಭಾರತದಲ್ಲಿ ಇಂಧನದ ಸಮರ್ಥ ಬಳಕೆ ಮತ್ತು ಪರಿಸರದ ಸಂರಕ್ಷಣೆ ಈ ಯೋಜನೆಯ ಉದ್ದೇಶವಾಗಿದೆ. ಉಪಕರಣದ ವ್ಯಾಪಕ ಪ್ರಾತ್ಯಕ್ಷಿಕೆಯ ಮೂಲಕ ಈ ತಂತ್ರಜ್ಞಾನವನ್ನು ಭಾರತದಲ್ಲಿ ಪ್ರಸರಣ ಮಾಡುವ ಪ್ರಯತ್ನವನ್ನೂ ಮಾಡಲಾಗುವುದು.
AKT/VB/SH