Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

01.07.2017 ರಿಂದ ಅನ್ವಯವಾಗುವಂತೆ ಹೆಚ್ಚುವರಿಯಾಗಿ ಶೇ.1ರಷ್ಟು ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಪಿಂಚಣಿದಾರರಿಗೆ ಬಿಡುಗಡೆ ಮಾಡಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಹೆಚ್ಚುವರಿಯಾಗಿ ಶೇ.1ರಷ್ಟು ತುಟ್ಟಿಭತ್ಯೆ(ಡಿಎ)ಯನ್ನು ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ತುಟ್ಟಿಭತ್ಯೆ ಪರಿಹಾರ(ಡಿಆರ್)ವನ್ನು ಪಿಂಚಣಿದಾರರಿಗೆ ಬಿಡುಗಡೆ ಮಾಡಲು ತನ್ನ ಅನುಮೋದನೆ ನೀಡಿದೆ. ಇದು 01.07.2017 ರಿಂದ ಅನ್ವಯವಾಗುತ್ತದೆ.

ಬೆಲೆ ಹೆಚ್ಚಳ ಸರಿದೂಗಿಸುವ ಸಲುವಾಗಿಹೆಚ್ಚುವರಿ ಡಿಎ ಕಂತಿನ ಬಿಡುಗಡೆ ಮಾಡಲಾಗುತ್ತಿದ್ದು, ಮೂಲ ವೇತನ / ಪಿಂಚಣಿಗೆ ಹಾಲಿ ಇರುವ ಶೇಕಡ 4ಕ್ಕಿಂತ ಶೇಕಡ 1ರಷ್ಟು ಹೆಚ್ಚಳವಾಗುತ್ತದೆ. ಈ ಹೆಚ್ಚಳವು ಅಂಗೀಕಾರಗೊಂಡಿರುವ ಸೂತ್ರಕ್ಕೆ ಅನುಗುಣವಾಗಿದೆ, ಇದು 7ನೇ ಕೇಂದ್ರೀಯ ವೇತನ ಆಯೋಗ ಮಾಡಿರುವ ಶಿಫಾರಸುಗಳ ಆಧಾರದ ಮೇಲಿದೆ.

ಡಿಎ ಮತ್ತು ಡಿಆರ್ ಎರಡನ್ನೂ ಹೆಚ್ಚಳ ಮಾಡಿರುವ ಪರಿಣಾಮ ಬೊಕ್ಕಸಕ್ಕೆ ವಾರ್ಷಿಕ ಒಟ್ಟಾರೆ 3068.26 ಕೋಟಿ ರೂಪಾಯಿ ಹೊರೆಯಾಗಲಿದೆ ಮತ್ತು 2017-18ನೇ (ಜುಲೈ 2017ರಿಂದ ಫೆಬ್ರವರಿ 2018ರವರೆಗಿನ 8 ತಿಂಗಳುಗಳಿಗೆ) 2045.50ಕೋಟಿ ರೂಪಾಯಿ ಹೊರೆ ಬೀಳಲಿದೆ. ಇದರಿಂದಾಗಿ 49.26 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು 61.17ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ.