Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

103 ನ್ಯಾನೋ ಉಪಗ್ರಹಗಳೊಂದಿಗೆ ಪಿ.ಎಸ್.ಎಲ್.ವಿ.-ಸಿ37 ಮತ್ತು ಕಾರ್ಟೋಸ್ಯಾಟ್ ಯಶಸ್ವೀ ಉಡಾವಣೆಗಾಗಿ ಇಸ್ರೋಗೆ ಪ್ರಧಾನಿ ಅಭಿನಂದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 103 ನ್ಯಾನೋ ಉಪಗ್ರಹಗಳೊಂದಿಗೆ ಪಿ.ಎಸ್.ಎಲ್.ವಿ.-ಸಿ37 ಮತ್ತು ಕಾರ್ಟೋಸ್ಯಾಟ್ ಯಶಸ್ವೀ ಉಡಾವಣೆ ಮಾಡಿದ ಇಸ್ರೋವನ್ನು ಅಭಿನಂದಿಸಿದ್ದಾರೆ.

“ಪಿ.ಎಸ್.ಎಲ್.ವಿ. – ಸಿ. 37 ಮತ್ತು ಕಾರ್ಟೋಸ್ಯಾಟ್ ಉಪಗ್ರಹದೊಂದಿಗೆ 103 ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋಗೆ ಅಭಿನಂದನೆಗಳು.

ಇಸ್ರೋದ ಅವಿಸ್ಮರಣೀಯವಾದ ಮತ್ತೊಂದು ಹೆಜ್ಜೆ ನಮ್ಮ ಬಾಹ್ಯಾಕಾಶ ವಿಜ್ಞಾನದ ಸಮುದಾಯಕ್ಕೆ ಮತ್ತು ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ. ನಮ್ಮ ವಿಜ್ಞಾನಿಗಳಿಗೆ ಭಾರತ ಗೌರವದಿಂದ ವಂದಿಸುತ್ತದೆ.

ಇಂದಿನ ಅದ್ವಿತೀಯ ಸಾಧನೆಗಾಗಿ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯವರೊಂದಿಗೆ ಮಾತನಾಡಿ, ಅವರನ್ನು ಮತ್ತು ಇಡೀ ವಿಜ್ಞಾನಿಗಳ ತಂಡವನ್ನು ಅಭಿನಂದಿಸಿದೆ”, ಎಂದು ಪ್ರಧಾನಿ ತಿಳಿಸಿದ್ದಾರೆ.

***