ಪಿಎಂಇಂಡಿಯಾ

17 ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭಕ್ಕೆ ಮೊದಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಎಲ್ಲಾ ಹೊಸ ಸಂಸದರಿಗೆ ಸ್ವಾಗತ ಕೋರಿದರು.
ಅಧಿವೇಶನಕ್ಕೆ ಮೊದಲು ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಯಲ್ಲಿ ಪ್ರಧಾನ ಮಂತ್ರಿ ಅವರು “ 2019 ರ ಲೋಕ ಸಭಾ ಚುನಾವಣೆಯ ಬಳಿಕ ಮೊದಲ ಅಧಿವೇಶನ ಇಂದು ಆರಂಭಗೊಳ್ಳುತ್ತಿದೆ. ನಾನು ಎಲ್ಲಾ ಹೊಸ ಸಂಸದರನ್ನು ಸ್ವಾಗತಿಸುತ್ತೇನೆ. ಅವರೊಂದಿಗೆ ಹೊಸ ಭರವಸೆ, ಹೊಸ ಆಶೋತ್ತರಗಳು ಮತ್ತು ಸೇವೆಯ ಹೊಸ ನಿರ್ಧಾರಗಳು ಬರುತ್ತವೆ ” ಎಂದಿದ್ದಾರೆ.
17 ನೇ ಲೋಕ ಸಭೆಯಲ್ಲಿ ಮಹಿಳಾ ಸಂಸದರ ಸಂಖ್ಯೆಯ ಹೆಚ್ಚಾದುದಕ್ಕೆ ಪ್ರಧಾನ ಮಂತ್ರಿ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಸಂಸತ್ತು ಸುಲಲಿತವಾಗಿ ಕಾರ್ಯನಿರ್ವಹಿಸಿದರೆ ಅದು ಜನತೆಯ ಆಶೋತ್ತರಗಳನ್ನು ಈಡೇರಿಸಲು ಸಮರ್ಥವಾಗುತ್ತದೆ ಎಂದವರು ಹೇಳಿದ್ದಾರೆ.
ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿಪಕ್ಷದ ಮಹತ್ವವನ್ನೂ ಅವರು ಪ್ರಸ್ತಾಪಿಸಿದ್ದು, ಸದನದ ಕಲಾಪಗಳಲ್ಲಿ ವಿಪಕ್ಷವು ಕ್ರಿಯಾಶೀಲವಾದ ಪಾತ್ರವನ್ನು ವಹಿಸುತ್ತದೆ ಎಂಬ ಬಗ್ಗೆ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಲೋಕ ಸಭೆಯಲ್ಲಿ ವಿಪಕ್ಷ ತನ್ನ ಸಂಖ್ಯಾಬಲದ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.
“ನಾವು ಸಂಸತ್ತಿಗೆ ಬಂದಾಗ , ಪಕ್ಷ ಮತ್ತು ವಿಪಕ್ಷ ಎಂಬುದನ್ನು ಮರೆತುಬಿಡಬೇಕು. ನಾವು “ನಿಷ್ಪಕ್ಷ ಸ್ಪೂರ್ತಿ” ಯೊಂದಿಗೆ ವಿಷಯಗಳ ಬಗ್ಗೆ ಯೋಚಿಸಬೇಕು ಮತ್ತು ರಾಷ್ಟ್ರದ ವ್ಯಾಪಕ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು” ಎಂದೂ ಪ್ರಧಾನ ಮಂತ್ರಿ ಹೇಳಿದ್ದಾರೆ.
Speaking at the start of the Parliament Monsoon Session. https://t.co/ThbYyTuYCi
— Narendra Modi (@narendramodi) June 17, 2019