Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2017-18 ಮತ್ತು 2018-19ರ ಅವಧಿಯಲ್ಲಿ ಮತಯಂತ್ರಗಳು ಮತ್ತು ನಿಯಂತ್ರಣ ಸಾಧನಗಳ ಸಂಗ್ರಹಣೆಯ ಚುನಾವಣಾ ಆಯೋಗದ ಪ್ರಸ್ತಾವನೆಗೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2017-18 ಅವಧಿಯಲ್ಲಿ 4,10,000ಮತಯಂತ್ರಗಳು ಮತ್ತು 3,14,000ನಿಯಂತ್ರಣ ಸಾಧನಗಳು ಮತ್ತು 2018-19ರ ಸಾಲಿನಲ್ಲಿ 4,35,306 ಮತಯಂತ್ರಗಳು ಮತ್ತು 71,716 ನಿಯಂತ್ರಣ ಸಾಧನಗಳನ್ನು ಅನುಕ್ರಮವಾಗಿ ಪ್ರತಿ ಯುನಿಟ್ ಗೆ ಅಂದಾಜು ರೂ.7,700/- ಮತ್ತುರೂ.9,300ರಂತೆ ಖರೀದಿಸುವಚುನಾವಣಾ ಆಯೋಗದ ಪ್ರಸ್ತಾವನೆಗೆ ತನ್ನ ಅನುಮೋದನೆ ನೀಡಿದೆ. ಒಟ್ಟು ಅಂದಾಜು ವೆಚ್ಚ 1,009.6 ಕೋಟಿ ರೂಪಾಯಿಗಳಾಗಿವೆ. ಈ ಎಲ್ಲ ಖರೀದಿಯನ್ನೂ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಮತ್ತು ಹೈದ್ರಾಬಾದ್ ನ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ನಿಂದ ಮಾಡಲಾಗುತ್ತದೆ.

ಮೆ. ಬಿ.ಇ.ಎಲ್ ಮತ್ತು ಮೆ. ಇ.ಸಿ.ಐ.ಎಲ್.ಗೆ ಅವರ ಉತ್ಪಾದನಾ ಸಾಮರ್ಥ್ಯ ಮತ್ತು ಯಂತ್ರಗಳ ಸರಬರಾಜಿನಲ್ಲಿ ಹಿಂದಿನ ಕಾರ್ಯವೈಖರಿಗೆ ಅನುಗುಣವಾಗಿ ಯಾರಿಗೆ ಎಷ್ಟು ಪ್ರಮಾಣದ ಬೇಡಿಕೆ ಸಲ್ಲಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಸಂಪುಟ ಚುನಾವಣಾ ಆಯೋಗಕ್ಕೇ ನೀಡಿದೆ.

ಇದು 2000-2005ರ ಅವಧಿಯಲ್ಲಿ ಪಡೆದುಕೊಂಡ ಹಳೆಯ ವಿದ್ಯುನ್ಮಾನ ಮತಯಂತ್ರಗಳನ್ನು ರದ್ದುಪಡಿಸಲು ಅವಕಾಶ ನೀಡುತ್ತದೆ. 2019ರಲ್ಲಿ ಜರುಗಲಿರುವ ಲೋಕಸಭಾ ಚುನಾವಣೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸಜ್ಜಾಗಲು ಚುನಾವಣಾ ಆಯೋಗಕ್ಕೆ ಇದು ಅವಕಾಶ ಕಲ್ಪಿಸುತ್ತದೆ. ಯಾರಿಗೆ ಎಷ್ಟು ಪ್ರಮಾಣದ ಯಂತ್ರಗಳ ಬೇಡಿಕೆ ಸಲ್ಲಿಸಬೇಕೆಂಬ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಿರುವುದು ಸಕಾಲದಲ್ಲಿ ಯಂತ್ರಗಳ ಪೂರೈಕೆ ಮತ್ತು ಸಂಗ್ರಹಣಾ ಪ್ರಕ್ರಿಯೆಯ ಉತ್ತಮ ನಿರ್ವಹಣೆಯ ಖಾತ್ರಿ ಒದಗಿಸುತ್ತದೆ.

***

AKT/VBA/SH