ಪಿಎಂಇಂಡಿಯಾ
ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟ 2026ರಲ್ಲಿ ರಜತ ಪದಕ ಜಯಿಸಿರುವ ಮೊಹಮ್ಮದ್ ಬಾಸಿಲ್ ಮೋರ್ಸಿಂಗನಕತ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಮೊಹಮ್ಮದ್ ಬಾಸಿಲ್ ಅವರ ವೇಗ ಮತ್ತು ದೃಢನಿಶ್ಚಯವನ್ನು ಶ್ಲಾಘಿಸಿರುವ ಪ್ರಧಾನಮಂತ್ರಿಗಳು, ಈ ಪ್ರದರ್ಶನವು ಅವರ ಈ ಋತುವಿನ ಅತ್ಯುತ್ತಮ ಪ್ರದರ್ಶನ ಎಂದು ಬಣ್ಣಿಸಿದ್ದಾರೆ.
ಈ ಯಶಸ್ಸು ಮೊಹಮ್ಮದ್ ಬಾಸಿಲ್ ಮೋರ್ಸಿಂಗನಕತ್ ಅವರ ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯ ಪ್ರತಿಬಿಂಬವಾಗಿದೆ. ಭವಿಷ್ಯದಲ್ಲಿ ಅವರು ಇನ್ನೂ ಅನೇಕ ಸಾಧನೆಗಳನ್ನು ಮಾಡಲಿ ಎಂದು ಶ್ರೀ ಮೋದಿ ಅವರು ಹಾರೈಸಿದ್ದಾರೆ.
ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ಮೊಹಮ್ಮದ್ ಬಾಸಿಲ್ ಮೊರ್ಸಿಂಗನಕತ್ ಅವರಿಗೆ ಅಮೋಘ ಬೆಳ್ಳಿ ಪದಕ! ಎಂತಹ ಓಟ ಮತ್ತು ದೃಢನಿಶ್ಚಯದ ಪ್ರದರ್ಶನ! ಅವರ ಈ ಯಶಸ್ಸಿಗೆ ಮತ್ತು ಋತುವಿನ ಅತ್ಯುತ್ತಮ ಸಾಧನೆಗೆ ಅವರಿಗೆ ಅಭಿನಂದನೆಗಳು. ಈ ಯಶಸ್ಸು ಅವರ ಕಠಿಣ ಪರಿಶ್ರಮ ಮತ್ತು ಗಮನಕೇಂದ್ರೀಕರಣದ ಪ್ರತಿಬಿಂಬವಾಗಿದೆ. ಮುಂಬರುವ ದಿನಗಳಲ್ಲಿ ಅವರು ಇನ್ನಷ್ಟು ಹೊಸ ಎತ್ತರಕ್ಕೇರಲಿ.”
#CWG2026”
*****
A superb Silver for Mohammed Basil Morssinganakath! What a sprint and display of determination! Congratulations to him for the success and also achieving his Season Best. His success reflects his hard work and focus. May he continue to scale new heights in the times to come.…
— Narendra Modi (@narendramodi) July 30, 2026