ಪಿಎಂಇಂಡಿಯಾ
ಗ್ಲಾಸ್ಗೊ ಕಾಮನ್ ವೆಲ್ತ್ ಕ್ರೀಡಾಕೂಟ 2026 ರ ಮಹಿಳಾ ಡಿಸ್ಕಸ್ ಎಸೆತ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸೀಮಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಸೀಮಾ ಅವರು 58.65 ಮೀಟರ್ ಡಿಸ್ಕಸ್ ಎಸೆಯುವ ಮೂಲಕ ಪದಕ ತಂದುಕೊಟ್ಟಿದ್ದಾರೆ ಎಂದು ಪ್ರಧಾನಿ ಹೇಳಿದರು.
ಅವರ ಸಾಧನೆಯು ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆ ಮತ್ತು ರಾಷ್ಟ್ರದ ಯುವಕರಿಗೆ ಸ್ಫೂರ್ತಿ ನೀಡಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಹಾಗೆಯೇ ಅವರ ಮುಂದಿನ ಪ್ರಯತ್ನಗಳಿಗೆ ಅವರು ಶುಭ ಹಾರೈಸಿದ್ದಾರೆ.
ಶ್ರೀ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;
“ಮಹಿಳೆಯರ ಡಿಸ್ಕಸ್ ಎಸೆತ ಸ್ಪರ್ಧೆಯಲ್ಲಿ 58.65 ಮೀಟರ್ ಅತ್ಯುತ್ತಮ ಎಸೆತದೊಂದಿಗೆ ಕಂಚಿನ ಪದಕ ಗಳಿಸಿದ ಸೀಮಾ ಅವರಿಗೆ ಅಭಿನಂದನೆಗಳು. ಅವರ ಪ್ರಯತ್ನಗಳು ಭಾರತವನ್ನು ಹೆಮ್ಮೆಪಡುವಂತೆ ಮಾಡಿವೆ ಮತ್ತು ನಮ್ಮ ರಾಷ್ಟ್ರದ ಯುವಕರನ್ನು ಪ್ರೇರೇಪಿಸಿವೆ. ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ.
#CWG2026″
*****
Congratulations to Seema for securing a Bronze in the Women's Discus Throw event with a best throw of 58.65m. Her efforts have made India proud and motivated the youth of our nation. Wishing her the very best for the endeavours ahead. #CWG2026 pic.twitter.com/vDkf1OiNeX
— Narendra Modi (@narendramodi) July 31, 2026