Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

75ನೇ ಸಂಸ್ಥಾಪಕರ ದಿನದಂದು ಸಿ.ಎಸ್.ಐ.ಆರ್. ಪ್ಲಾಟಿನಂ ಮಹೋತ್ಸವದಲ್ಲಿ ಪ್ರಧಾನಮಂತ್ರಿಯವರ ಸಾರ್ವಜನಿಕ ಭಾಷಣ

75ನೇ ಸಂಸ್ಥಾಪಕರ ದಿನದಂದು ಸಿ.ಎಸ್.ಐ.ಆರ್. ಪ್ಲಾಟಿನಂ ಮಹೋತ್ಸವದಲ್ಲಿ ಪ್ರಧಾನಮಂತ್ರಿಯವರ ಸಾರ್ವಜನಿಕ ಭಾಷಣ


ಮೊದಲಿಗೆ ನಾನು ಅತ್ಯಂತ ಸವಾಲಿನ ಉಪಗ್ರಹಗಳ ಉಡ್ಡಯನಗಳಯಶಸ್ಸಿಗಾಗಿಭಾರತೀಯಬಾಹ್ಯಾಕಾಶಸಂಶೋಧನಾಸಂಸ್ಥೆಯನ್ನುಅಭಿನಂದಿಸಿಆರಂಭಿಸುತ್ತೇನೆ.
ಏಕ ಪಿ.ಎಸ್.ಎಲ್.ವಿ ಉಡ್ಡಯನದ ಮೂಲಕ ಎರಡು ಪ್ರತ್ಯೇಕ ಕಕ್ಷೆಗಳಲ್ಲಿ ನೆಲೆಗೊಳ್ಳುವಂತೆ ೮ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ನಾನು ಸಿ.ಎಸ್.ಐ.ಆರ್.ನ ಪ್ಲಾಟಿನಂಮಹೋತ್ಸವದ ಕಾರ್ಯಕ್ರಮವನ್ನು ಅದರ 75 ನೇ ಸ್ಥಾಪನಾ ದಿನದ ಸಂಧರ್ಭದಲ್ಲಿ ಉದ್ಘಾಟಿಸಲು ಹರ್ಷಿತನಾಗಿದ್ದೇನೆ.
ಈ ಪರಿಷತ್ತಿನ ಅಧ್ಯಕ್ಷನಾಗಿ ಈ ಅವಕಾಶವನ್ನು ಸಿ.ಎಸ್.ಐ.ಆರ್. ಪ್ಲಾಟಿನಂ ಮಹೋತ್ಸವದ ವರ್ಷ ಪೂರ್ತಿ ಕಾರ್ಯಕ್ರಮಗಳ ಆಚರಣೆಗೆ ನಿಮ್ಮನ್ನು ಸ್ವಾಗತಿಸಲು ಬಳಸುತ್ತೇನೆ.
ಕೇಂದ್ರೀಯ ವಿದ್ಯಾಲಯಗಳಿಂದ ಬಂದು ಇಲ್ಲಿ ಹಾಜರಿರುವ 150 ವಿಜ್ಞಾನ ವಿದ್ಯಾರ್ಥಿಗಳನ್ನು, ಐ.ಐ.ಟಿ.ಗಳು ಮತ್ತು ಐ.ಐ.ಎಸ್.ಇ.ಆರ್.ಗಳ ವಿದ್ಯಾರ್ಥಿಗಳನ್ನು ,ಸಂಶೋಧಕರನ್ನು, ಈಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ವೀಕ್ಷಿಸುತ್ತಿರುವವರನ್ನು ನಾನು ವಿಶೇಷವಾಗಿ ಸ್ವಾಗತಿಸುತ್ತೇನೆ.
ಸಿ.ಎಸ್.ಐ.ಆರ್. ಆಧುನಿಕ ಭಾರತದ ಅಭಿವೃದ್ಧಿಯಲ್ಲಿ ತೋರಿದ ಬದ್ಧತೆಯ ಕೊಡುಗೆಗಾಗಿ ಅದರ 75ನೇ ವರ್ಷಾಚರಣೆ ಪ್ರತೀ ಭಾರತೀಯನಿಗೂ ಹೆಮ್ಮೆಯ ವಿಷಯ. ಇದು ದೇಶಕ್ಕಾಗಿ ಮುಡಿಪಿಟ್ಟಯಾನ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಹಾಲ್ ಮಾರ್ಕ್/ಗುರುತು ಆಗಿರುವ ಅಳಿಸಲಾಗದ ಶಾಯಿಯಿಂದ ಹಿಡಿದು ಜೀವನದ ಎಲ್ಲ ಹಂತಗಳಲ್ಲಿ ಸಿ.ಎಸ್.ಐ.ಆರ್ ಅಳಿಸಲಾಗದ ಗುರುತುಗಳನ್ನುಮೂಡಿಸಿದೆ.
ಸಮಗ್ರ ಮತ್ತು ಎಲ್ಲ ಕೋನಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಧೋರಣೆಯಿಂದಾಗಿ ಸಿ.ಎಸ್.ಐ.ಆರ್. ಭಾರತದ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಕೃಷಿಯಿಂದ ಬಾಹ್ಯಾಕಾಶದವರೆಗೆ, ಜೈವಿಕ ಸೆನ್ಸಾರಿನಿಂದ ಹಿಡಿದು ಜೈವಿಕ ಔಷಧವಿಜ್ಞಾನದವರೆಗೆ , ರಾಸಾಯನಿಕಗಳಿಂದ ಹಿಡಿದು ಹವಾಮಾನ ಬದಲಾವಣೆವರೆಗೆ, ಭೂವಿಜ್ಞಾನದಿಂದ ಹಿಡಿದು ಇಂಧನದವರೆಗೆ, ಆಹಾರದಿಂದಹಿಡಿದು ಸುವಾಸನೆವರೆಗೆ, ಗಾಜಿನಿಂದ ಹಿಡಿದು ಜೀನ್ ತಂತ್ರಜ್ಞಾನದವರೆಗೆ, ವಸತಿಯಿಂದ ಹಿಡಿದು ಆರೋಗ್ಯ ರಕ್ಷಣೆ ವರೆಗೆ, ಯಾಂತ್ರೀಕರಣದಿಂದ ಹಿಡಿದು ಮಾಹಿತಿ ತಂತ್ರಜ್ಞಾನದವರೆಗೆ , ಚರ್ಮೋದ್ಯಮದಿಂದ ಹಿಡಿದು ಲಘು ಯುದ್ಧ ವಿಮಾನಗಳವರೆಗೆ, ಸೂಕ್ಷ್ಮಜೀವಿಗಳಿಂದ ಹಿಡಿದು ಖನಿಜೋತ್ಪನ್ನಗಳವರೆಗೆ, ಆಪ್ಟಿಕ್ ನಿಂದ ಹಿಡಿದು ಬೆಳಕಿನ ವೇಗದಲ್ಲಿ ಮಾಹಿತಿ ರವಾನೆ ಮಾಡುವಆಪ್ಟಿಕಲ್ ಫ಼ೈಬರ್ ಗಳವರೆಗೆ, ವರ್ಣದ್ರವ್ಯದಿಂದ ಹಿಡಿದು ವಿದ್ಯುತ್ ಇಲೆಕ್ಟ್ರಾನಿಕ್ಸ್, ರಸ್ತೆಗಳಿಂದ ಹಿಡಿದು ರೊಬಾಟಿಕ್ಸ್ ಗಳವರೆಗೆ , ಸೆನ್ಸಾರ್ ಗಳಿಂದ ಹಿಡಿದು ಸೌರ ವಿದ್ಯುತ್ ವರೆಗೆ, ಟ್ರಾಕ್ಟರ್ಗಳಿಂದ ಹಿಡಿದು ಸಾರಿಗೆವರೆಗೆ, ಯು.ಎ.ವಿ.ಗಳಿಂದ ಹಿಡಿದು ನೀರಿನಡಿ ಚಲಿಸುವ ವಾಹನಗಳವರೆಗೆ ಮತ್ತು ನೀರಿನಿಂದ ಹಿಡಿದು ಹವಾಮಾನ ಮುನ್ಸೂಚನೆವರೆಗೆ ಸಿ.ಎಸ್.ಐ.ಆರ್. ತನ್ನಹಾಜರಾತಿಯನ್ನು ನೊಂದಾಯಿಸಿದೆ.
ಸ್ವರಾಜ್, ದೇಶದ ಮೊದಲ ಟ್ರ್ಯಾಕ್ಟರ್, ಮಗುವಿನ ಹಾಲಿನ ಹುಡಿ, ದೇಶದ ಮೊದಲ ಸೂಪರ್ ಕಂಪ್ಯೂಟರ್, ಇವೆಲ್ಲ ಸಿ.ಎಸ್.ಐ. ಆರ್.ನ ಕೆಲವು ಸಾಧನೆಗಳು. ಈ ಸಭಾಂಗಣಕ್ಕೆ ಬರುವುದಕ್ಕೆಮೊದಲು, ನಾನು ಸಿ.ಎಸ್.ಐ.ಆರ್. ನ ಸಾಧನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನವನ್ನು ವೀಕ್ಷಿಸಿದೆ.
ಈ ಪ್ರದರ್ಶನವನ್ನು ದೇಶದ ಇತರ ಭಾಗಗಳಿಗೂ ಕೊಂಡೊಯ್ಯಬೇಕು, ಮತ್ತು ಜನರು ಇದನ್ನು ನೋಡಿ ತಿಳಿದುಕೊಳ್ಳಬೇಕು ಹಾಗು ಸಿ.ಎಸ್.ಐ.ಆರ್.ನ ಸಾಧನೆಗಳನ್ನು ಮೆಚ್ಚಬೇಕು ಎಂಬುದುನನ್ನ ಆಶಯ. ಸಿ.ಎಸ್.ಐ.ಆರ್.ನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಿದ್ಧಗೊಳಿಸಿ, ಎದುರಾಗುವ ಸವಾಲುಗಳಿಗೆ ಪ್ರತಿಸ್ಪಂದಿಸುವಂತೆ ಮಾಡಬೇಕು ಎಂಬುದು ನಮ್ಮ ಪ್ರಯತ್ನ.
ನನ್ನ ಅಭಿಪ್ರಾಯದ ಪ್ರಕಾರ ಸಿ.ಎಸ್.ಐ.ಆರ್. ತಂತ್ರಜ್ಞಾನ ವ್ಯವಹಾರ ಮಾಡಲು ಅನುಕೂಲಕರ ವಾತಾವರಣವನ್ನು ನಿರ್ಮಿಸಬೇಕು. ಸರಿಯಾದ ಫಲಾನುಭವಿಗಳಿಗೆ, ಉದ್ದೇಶಿತಫಲಾನುಭವಿಗಳಿಗೆ ತಂತ್ರಜ್ಞಾನ ತಲುಪುವಂತಾಗಬೇಕು.
ಇತ್ತೀಚೆಗೆ, ಸಿ.ಎಸ್.ಐ.ಆರ್. ಸಕ್ಕರೆ ರೋಗಿಗಳಿಗಾಗಿ ದೇಶದ ಮೊದಲ ಆಯುರ್ವೇದ ಔಷಧಿಯನ್ನು ಅಭಿವೃದ್ಧಿಪಡಿಸಿದೆ. ನಿಮಗೆಲ್ಲ ಈ ಔಷಧಿಯ ಸಾಮರ್ಥ್ಯ ತಿಳಿದಿದೆ. ಈಗ ನಮ್ಮ ಗುರಿ ಎಂದರೆ –ಈ ಔಷಧಿಯ ಲಾಭವನ್ನು ಜನರಿಗೆ ತಿಳಿಸಿ ಅದರ ಅತ್ಯುತ್ತಮ ಉಪಯೋಗವನ್ನು ಪಡೆಯುವಂತೆ ಮಾಡುವುದು.
ಸಿ.ಎಸ್.ಐ.ಆರ್ ನ 75ನೇ ಸ್ಥಾಪನಾ ದಿವಸದ ಸಂದರ್ಭದಲ್ಲಿ ಪ್ಲಾಟಿನಂ ಜೂಬಿಲಿ ಮಹೋತ್ಸವದಲ್ಲಿ ಪ್ರಧಾನಿಯವರು ಭಾಗವಹಿಸಿ ಮಾಡಿದ ಭಾಷಣ.
ಎಲ್ಲಿಯವರೆವಿಗೂ ಯಾವೊಂದು ರಾಷ್ಟ್ರ ವಿಜ್ಞಾನ ತಂತ್ರಜ್ಞಾನದ ಜೊತೆಗೆ ಸಾಗುವುದಿಲ್ಲವೋ ಅಲ್ಲಿಯ ವರೆವಿಗೂ ಅಂತಹ ರಾಷ್ಟ್ರ ಅಭಿವೃಧ್ಧಿಯನ್ನು ಹೊಂದುವುದಿಲ್ಲ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಈಗ ದೇಶ ಶೇಕಡ 7 ಕ್ಕೂ ಅಧಿಕ ಬೆಳವಣಿಗೆಯನ್ನು ಕಾಣುತ್ತಿದೆ ಮತ್ತು ವೈಜ್ಞಾನಿಕ ಮತ್ತು ಸಂಶೋಧನೆ ನಡೆಸುವ ಸಂಸ್ಥೆಗಳ ಸಹಕಾರದ ಅವಶ್ಯಕತೆಯಿದೆ. ಪ್ರಸ್ತುತ ಸವಾಲುಗಳನ್ನು ಎದುರಿಸುವುದರೊಂದಿಗೆ ಭವಿಷ್ಯಕ್ಕಾಗಿ ಒಂದು Road map ಸಿದ್ದಪಡಿಸಲಿಕ್ಕಾಗಿ ರಣನೀತಿಯನ್ನು ಕೈಗೊಳ್ಳ ಬೇಕಾಗಿದೆ. ಉದಾಹರಣೆಗೆ ಸಿ.ಎಸ್.ಐ.ಆರ್ ಈ ವರ್ಷ Solar Tree ಯನ್ನು ಸಿದ್ದಪಡಿಸಿದಂತೆ. ಈ Solar Tree ಕೇವಲ 4 ಚದರ ಅಡಿಗಳ ನೆಲವನ್ನು ತೆಗೆದು ಕೊಳ್ಳುತ್ತದೆ. ಈಗ ನೀವು ದೇಶದ ಮೂಲೆ ಮೂಲೆಗೂ ಈ Solar Treeಯನ್ನು ತೆಗೆದು ಕೊಂಡು ಹೋಗುವುದು ಹೇಗೆ ಮತ್ತು ಇದರ ಲಾಭ ಜನರಿಗೆ ತಲುಪಿಸುವುದು ಹೇಗೆ ಎಂದು ಯೋಚಿಸ ಬೇಕಾಗಿದೆ. ಸೌರ ಶಕ್ತಿ ದೇಶದಲ್ಲಿ ವಿದ್ಯುತ್ ಸಮಸ್ಯೆಯನ್ನು ಬಹಳಷ್ಟು ಪರಿಹರಿಸುತ್ತದೆ. ನೀವು ಈ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಬಹುದು. ಕಿ.ಶ.2022 ರ ಹೊತ್ತಿಗೆ ಸರ್ಕಾರದ ಗುರಿ ದೇಶದಲ್ಲಿ ನೂರು ಗೀಗಾ ವ್ಯಾಟ್ ಸೌರ ಶಕ್ತಿಯನ್ನು ಉತ್ಪಾದಿಸುವುದೇ ಆಗಿದೆ. ಸರ್ಕಾರ ಈ ಗುರಿ ಮುಟ್ಟಲು ವಿಜ್ಞಾನಿಗಳ ಸಹಕಾರ ಸಹಯೋಗ ಅತ್ಯಗತ್ಯ. ಕಡಿಮೆ ಖರ್ಚಿನಲ್ಲಿ Solar Cell ನ efficiency ಯನ್ನು ಹೇಗೆ ಹೆಚ್ಚಿಸುವುದು ಎಂದು ತಾವು ಆಲೋಚಿಸ ಬೇಕಾಗಿದೆ. ಯಾವುದೇ ಒಂದು ತಂತ್ರಜ್ಞಾನ ಯಶಸ್ವಿಯಾಗ ಬೇಕಾದರೆ ಅದು ಸಾಮಾನ್ಯ ಜನರಿಗೆ ಹೇಗೆ ತಲುಪ ಬಹುದು ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.
ಮೊದಲಿಗೆ ಕೃಷಿಕ ಬಂಧುಗಳ ಅಗತ್ಯತೆಗಳನ್ನು ಮನಗಾಣಬೇಕು. ಬಡ ತಾಯಂದಿರ, ಅಕ್ಕ-ತಂಗಿಯರ, ಯುವಕರ ದೈನಂದಿನ ಕಾರ್ಯದಲ್ಲಿ ಯಾವ ರೀತಿ ಅವರ ಸಮಸ್ಯೆಗಳಿಗೆ ನಾವು ಸ್ಪಂದಿಸಬಹುದು, ನಮ್ಮ ಸಂಶೋಧನೆಗಳು ಅವರಿಗೆ ಯಾವ ರೀತಿ ನೆರವಾಗಬಹುದು ಎಂಬುದನ್ನು ಕುರಿತು ಯೋಚಿಸ ಬೇಕಾಗುತ್ತದೆ. ಇದೊಂದು ನಿರಂತರವಾದ ಪ್ರಕ್ರಿಯೆ ಮತ್ತು ಅವರಿಗೆ ನಾವು ಮಾಡಿದ ಸಂಶೋಧನೆಯ ಪರಿಣಾಮಗಳನ್ನು ತೋರಿಸ ಬೇಕಾಗುತ್ತದೆ. ವೈಜ್ಞಾನಿಕ ಮತ್ತು ಔದ್ಯೋಗಿಕ ಪರಿಷತ್ತಿನ ಸ್ತಾಪನೆಯ ಉದ್ಯೇಶವು ಇದೇ ಆಗಿದೆ. ವೈಜ್ಞಾನಿಕ ಸಂಶೋಧನೆಯ ಅವಿಷ್ಕಾರ ಒಂದು ದಿನ ಅಥವಾ ಒಂದು ವರ್ಷದಲ್ಲಿ ಮುಗಿಯುವ ಕಾರ್ಯವಲ್ಲ. ಇದೊಂದು ಸತತವಾದ ಪ್ರಕ್ರಿಯೆ. ಇದೇ ಮುಂದೊಂದು ದಿನ game changer ರೂಪದಲ್ಲಿ game changing technology ಯಾಗಿ ಜನ್ಮ ತಾಳುತ್ತದೆ.
ಸಿ.ಎಸ್.ಐ.ಆರ್ ಹಿಂದಿನಿಂದಲೂ ಇಂತಹ ಕಾರ್ಯವನ್ನು ಮಾಡಿಕೊಂಡು ಬಂದಿದೆ. ಆದರೆ ಈಗ ನಾನು ಒಂದು ದೊಡ್ಡ ಬದಲಾವಣೆಯ ಅವಶ್ಯಕತೆಯನ್ನು ಕಾಣ ಬಯಸುತ್ತೇನೆ. ನಾವು ಸಂಶೋಧನೆಯನ್ನು ಮಾಡುತ್ತೇವೆ. ಇದು ನಿರ್ದಿಷ್ಟ ಅವಧಿಯಲ್ಲಿ ಮಾಡಿ ಮುಗಿಸುವ prime agenda ಆಗಲು ಸಾಧ್ಯವೆ ? ನನಗೆ ನಿಮ್ಮ ಮೇಲೆ ಸಾಕಾಷ್ಟು ಭರವಸೆಯಿದೆ. ಬಹುಶಃ ಹೆಚ್ಚು ನಿರೀಕ್ಷಿಸುತ್ತಿದ್ದೇನೆಂದು ಕೆಲವೊಮ್ಮೆ ಅನ್ನಿಸುವುದುಂಟು. ಇದಕ್ಕೆ ಕಾರಣ ನನಗೆ ನಿಮ್ಮ ಮೇಲೆ ಇರುವ ಹೆಚ್ಚಿನ ಭರವಸೆ. ಈ 75 ವರ್ಷಗಳಲ್ಲಿ ನೀವು ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾದ್ದದು. ಇದರಿಂದಾಗಿಯೆ ನಿಮ್ಮಿಂದ ಹೆಚ್ಚು ನಿರೀಕ್ಷಿಸುತ್ತಿರುವುದು. ನೀವು ಹೆಚ್ಚು ಕೊಡಬಲ್ಲಿರಿ. ಕೇಳುವವನು ಸಹ, ಕೊಡಬಲ್ಲ ಶಕ್ತಿಯಿರುವವನ ಬಳಿ ತಾನೇ ಕೇಳುವುದು.
75ನೇ ವರ್ಧಂತಿಯ ಸಮಯದಲ್ಲಿ One Line agenda ಆಗಿರುವ Time Bound Delivery ಯನ್ನು ಹೇಗೆ ಪರಿಣಾಮಕಾರಿಯಾಗಿಸುವುದು ಎಂಬ ಬಗ್ಗೆ ತಾವು ಯೋಚಿಸ ಬೇಕಾಗುತ್ತದೆ. ಸಂಶೋಧನೆಯ ಜೊತೆ ಜೊತೆಗೆ Value change ಅನ್ನು ಸಹ ಬಲವರ್ದಿಸುವುದರೊಂದಿಗೆ link ಕಲ್ಪಿಸುವ ಬಗ್ಗೆ ಗಮನಹರಿಸಬೇಕಾಗಿದೆ. ಸಂಶೋಧನಾ ಸಂಸ್ಥೆಗಳೊಂದಿಗೆ, ಸರ್ಕಾರ, ಉದ್ಯೋಗ ಜಗತ್ತು, ಸರಕಾರೇತರ ಸಂಸ್ಥೆಗಳು, ಸರ್ವೀಸ್ ಪ್ರೊವೈಡರ್, ಉಪಭೋಕ್ತರೊಂದಿಗೆ ತಾಳ-ಮೇಳವನ್ನು ಕಾಯ್ದು ಕೊಳ್ಳಬೇಕಾಗುತ್ತದೆ. ಕಾರಣ co ordinate effort ಇಲ್ಲದೆ ಯಾವುದು ಪ್ರಭಾವ ಬೀರುವುದಿಲ್ಲ. ಇದರ ಬಗ್ಗೆಯೂ ಗಮನ ಹರಿಸಬೇಕಾಗಿದೆ.
ಕೆಲವೊಮ್ಮೆ ಸಂಶೋಧನೆಗಳನ್ನು ಮಾಡುತ್ತೇವೆ. ಆದರೆ ಅದರ ಹೆಚ್ಚಿನ ಫಲ ಸಾಮಾನ್ಯ ಜನರಿಗೆ ಲಾಭ ಉಂಟು ಮಾಡುವುದಿಲ್ಲ. ಅಥವಾ ಸಾಮಾನ್ಯ ಜನರಿಗೆ ತಲುಪದೆ ಹೋಗುವ ಪ್ರಸಂಗಗಳುಂಟು, ಅಥವಾ ಸಾಮಾನ್ಯ ಜನರ ಅಗತ್ಯಕ್ಕೆ ತಕ್ಕ ಹಾಗೇ modification ಆಗದೆ ಇರಬಹುದು, ಸಿದ್ಧಾಂತಗಳ ಅಡಿಯಲ್ಲಿ ಒಳ್ಳೆಯ ವಿಷಯಗಳು ಅಡಕವಾಗಿರುತ್ತವೆ. ಸಂಪನ್ಮೂಲಗಳ ಲಬ್ಯತೆ ಮತ್ತು ಸಮಸ್ಯೆ ಇವುಗಳ ಮಧ್ಯೆ ಇರುವ ಕಂದಕಗಳನ್ನು ದೂರಮಾಡಿ ಸಾಮ್ಯತೆಯನ್ನು ತಂದಲ್ಲಿ ಮತ್ತು ಸರಳೀಕರಣಗೊಳಿಸಿದಲ್ಲಿ, ಅದು ಸಾಮಾನ್ಯರ ಅಗತ್ಯತೆಗಳಿಗೆ ಸಹಜವಾಗಿಯೇ ಹೊಂದಿಕೆಯಾಗಿ expand ಆಗಬಹುದು ಎಂದು ನನಗನಿಸುತ್ತದೆ. ವೈಜ್ಞಾನಿಕ ಸಂಶೋಧನೆಯ ಕೇಂದ್ರಗಳಿಗೆ stake holderನಿಂದ ಅವಿಷ್ಕಾರ ಮತ್ತು Development ನ Stage ನಲ್ಲಿ Feed Back ತೆಗೆದು ಕೊಳ್ಳುವ ಸಿಸ್ಟಮ್ ಮಾಡಬೇಕಾಗಿದೆ. ಒಂದುವೇಳೆ ನಮ್ಮ stake holdersಗಳ ಜೊತೆ interaction ಇಲ್ಲದೆ ಹೋದಲ್ಲಿ ಅದು ಮಹತ್ವ ಕಳೆದು ಕೊಳ್ಳುತ್ತದೆ. ಹೀಗಾಗಿ ಅದರ ಅವಶ್ಯಕತೆಯನ್ನು ನಾವು ಮನಗಾಣುವುದಿಲ್ಲ. ಬಹುಶಃ ನಮ್ಮ ಪ್ರಾಡೆಕ್ಟ್ ಗಳು competitionsನಲ್ಲಿ ಸ್ಪರ್ದಿಸಿ ಆವಾರ್ಡ್ ಗಳನ್ನು ತರಬಹುದು, ಇನಾಮುಗಳನ್ನು ತರಬಹುದು. ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ ಲೇಖನಗಳು ಮುದ್ರಿತವಾಗಲೂಬಹುದು, ಆದರೆ ಭಾರತದಂಥ ದೇಶದಲ್ಲಿ ಅದರ ಯಶಸ್ಸು ದೊರೆಯುವುದು ಜನಸಾಮಾನ್ಯನ ಸಮಸ್ಯೆ ಪರಿಹಾರವಾದಾಗ ಮಾತ್ರ. ಅದನ್ನು ಅವನು ಹೇಗೆ ಸ್ಪೀಕರಿಸುತ್ತಾನೆ ಎನ್ನುವುದೇ ನಮಗೆ ಮಾನದಂಡವಾಗುತ್ತದೆ. ಸಿ.ಎಸ್.ಐ.ಆರ್ ತನ್ನ ಪ್ರಯೋಗಶಾಲೆ ಮುಖಾಂತರ ದೇಶದ ಯುವಕರಿಗೆ ಮತ್ತಷ್ಟು ಅವಕಾಶಗಳ ಬಾಗಿಲುಗಳನ್ನು ತೆರೆಯುವ ಪ್ರಯತ್ನ ಮಾಡಬೇಕು. ನಮ್ಮ ಸಿ.ಎಸ್.ಐ.ಆರ್ ನ ಪ್ರಯೋಗಶಾಲೆಗಳಲ್ಲಿ ಸಂಶೋಧನೆಗೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸುವ ಪ್ರಯತ್ನಮಾಡ ಬೇಕು.
ಇತ್ತಿಚಿನ ದಿನಗಳಲ್ಲಿ ತಾವು ಟಿ.ವಿ. ಕಾರ್ಯಕ್ರಮಗಳನ್ನು ವೀಕ್ಷಿಸಿರಬಹುದು. ಅಲ್ಲೆಲ್ಲ talent search ಗಾಗಿ ದೊಡ್ಡ ದೊಡ್ಡ ಕಾರ್ಯಕ್ರಮ ಹಮ್ಮಿ ಕೊಂಡಿರುತ್ತಾರೆ. ಹಾಡು ಹೇಳುವವರು, ನೃತ್ಯ ಮಾಡುವವರು, ಇಷ್ಟೆಲ್ಲ talent ಇದೆಯೆಂದು ನಮಗೆ ಗೊತ್ತೆ ಇರಲ್ಲಿಲ್ಲ. ಸಣ್ಣ ಸಣ್ಣ ಮಕ್ಕಳಲ್ಲಿ ಇಂಥ talent ಇರುವುದನ್ನು ನಾವು ಕಾಣುತ್ತಿದ್ದೇವೆ. ಈ ಒಂದು ಕ್ಷೇತ್ರದಲ್ಲಿ ಮಾತ್ರ talent ಗುರುತಿಸಲಾಗಿಲ್ಲ. ಇದರ ಎಲ್ಲ ಕ್ಷೇತ್ರಗಳಲ್ಲಿಯೂ talent ನ ಅವಶ್ಯಕತೆಯಿದೆ. ಅವಕಾಶಕ್ಕಾಗಿ ಕಾಯ್ತಿದ್ದಾರೆ. ನಮ್ಮ ಪ್ರಯೋಗಶಾಲೆಗಳು ಆಕರ್ಷಣೆಯ ಕೇಂದ್ರಗಳಾಗಲಿಕ್ಕೆ ಸಾಧ್ಯವಿಲ್ಲವೇ? ಹುಡುಗರಿಗೆ ಮನಸ್ಸಿಗೆ ಬಂತೆಂದರೆ “ ಶನಿವಾರ..ಭಾನುವಾದ ಸ್ವಲ್ಪ ಕುಳಿತು ಬರೋಣಾ… ಮಾವನ ಮನೆಗೆ ಹೋಗುವುದೇನು ಬೇಡ. ಇವತ್ತು ಪ್ರಯೋಗಶಾಲೆಗೆ ಹೋಗಿ ಬರೋಣಾ“ ಎನ್ನುವುದಿಲ್ಲವೆ. ಸಾಹೇಬರೆ… ನಮಗೂ ಸ್ವಲ್ಪ ಹೇಳಿ ಕೊಡಿ..ನಾವು ಸ್ವಲ್ಪ ಕಲಿತೀವಿ ಎನ್ನುವುದಿಲ್ಲವೆ. ನಿಮ್ಮಲ್ಲಿ ದೊಡ್ಡ ದೊಡ್ಡ ವಿಜ್ಞಾನಿಗಳು ಇರುತ್ತೀರಿ. ನಿಮ್ಮಲ್ಲಿ ಆನೇಕರು ತಮ್ಮ ಬಾಲ್ಯವನ್ನು ನೆನಪಿಸಿ ಕೊಳ್ಳುವುದಿಲ್ಲವೇ. ನೀವು ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಿ. ನಿಮಗೂ ಏನ್ನನ್ನಾದರು ಸಾಧಿಸ ಬೇಕೆಂಬ ಹುಚ್ಚಿತ್ತು. ಈಗಲೂ ತಮ್ಮಲ್ಲಿ ಆನೇಕರಿಗೆ ಏನ್ನನ್ನಾದರು ಸಾಧಿಸಬೇಕೆಂಬ ಛಲವಿಲ್ಲವೆ. ಆ ಸಾಧನೆಗೆ ನಿಮಗೆ ಯಾರೋ ಕೈ ಹಿಡಿದು ನಡೆಸಿರಬೇಕು. ಇನ್ಯಾರೋ ನಿಮಗೆ ದಾರಿ ತೋರಿರಬೇಕು. ಮತ್ಯಾರೋ ಪ್ರಯೋಗಶಾಲೆಗೆ ಕರೆತಂದಿರಬೇಕು. ಇಂಥ ಮಕ್ಕಳನ್ನು ಪ್ರಯೋಗಶಾಲೆಯ ಕಡೆಗೆ ಕೈ ಹಿಡಿದು ಕರೆದೊಯ್ಯಬಾರದೇಕೆ. ಹಾಗಾದಲ್ಲಿ ದೇಶದ ಭಾಗ್ಯವೆ ಬದಲಾಗುತ್ತದೆ.
ಸಿ.ಎಸ್.ಐ.ಆರ್ ತನ್ನ ಸಂಪನ್ಮೂಲಗಳಿಂದ ದೇಶದಲ್ಲಿ ಒಂದು ಹೊಸ Entrepreneurs ಅನ್ನು ಸಿದ್ಧಗೊಳಿಸಲು ಮಹತ್ತರ ಪಾತ್ರ ನಿರ್ವಹಿಸ ಬಹುದು. ನಾವು Start-up India, Stand-up India, movement ಅನ್ನು ಪ್ರಾರಂಭಮಾಡಿರುತ್ತೇವೆ. ನಮ್ಮ ಯುವಕರು ಏನ್ನನಾದರು ಮಾಡಬೇಕೆಂದು ಕೊಂಡಲ್ಲಿ, ಶೋಧ ಕಾರ್ಯ ಮಾಡಿದಲ್ಲಿ ಅಂತಹವರ ಸಿದ್ಧಾಂತದಿಂದ ಅವರ ಪರಿಚಯ ಮಾಡಿಕೋಡುವ ಪ್ರಯತ್ನ ಮಾಡೋಣ. ಅದರಿಂದ product ಮಾಡುವ ಸಾಹಾಸಕ್ಕೆ ಕೈ ಹಾಕಬಹುದು.ನಮ್ಮ ಸಿ.ಎಸ್.ಐ.ಆರ್. ನಲ್ಲಿರುವ movement ಮತ್ತು ಭಾರತ ಸರ್ಕಾರದ stand-up India ನ movement ಜೊತೆಗೂಡಿ ಹೊಸತನ್ನು ಬಯಸುವ ಯುವಕರಿಗೆ ನಮ್ಮ ಸಂಶೋಧನೆ ಮತ್ತು ಅವರ ಸಮಸ್ಯೆ ಮತ್ತು ಅವರ product zeal ಈ ಮೂರನ್ನು ಒಂದು ಗೂಡಿಸಿ ವಿಶ್ವದ ಮುಂದೆ ಹೊಸದೊಂದು ವಸ್ತುವೊಂದನ್ನು, ವಿಚಾರವೊಂದನ್ನು ಕೊಡಲಿಕ್ಕೆ ಸಾಧ್ಯವಿಲ್ಲವೇ? ಇದರಿಂದ ಒಂದು ಹೊಸ ಕ್ಷೇತ್ರದ ಅವಿರ್ಭಾವ ಆಗುತ್ತದೆ. ಇದು ಸಾಧ್ಯ. ಇದನ್ನು ಸಾಕಾರಗೊಳಿಸುವುದು ಹೇಗೆ ಎಂಬುದನ್ನು ನಾವು ಆಲೋಚಿಸಿ ಕಾರ್ಯ ಪ್ರವೃತ್ತರಾದರೆ, ನಾವು ಬಹಳಷ್ಟನ್ನು ಸಾಧಿಸ ಬಹುದು ಎಂದು ನನಗನ್ನಿಸುತ್ತದೆ.
ವಿಭಿನ್ನ ಸಂಸ್ಥೆಗಳಿಂದ ದೊರೆಯುತ್ತಿರುವ Research Funding ಅನ್ನು ಚಾನಲ್ ಮಾಡುವ ಅವಶ್ಯಕತೆಯಿದೆ. Funding, Research ಮತ್ತು ಅದರ ಪರಿಣಾಮಗಳನ್ನು ಕುರಿತು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕ್ರೋಢೀಕರಿಸಿ Web portal ಒಂದನ್ನು ಮಾಡಬಾರದೇಕೆ? ನಾನು ಈ ಸಂದರ್ಭದಲ್ಲಿ ನಿಮ್ಮ Research ನ secret ಅನ್ನು open ಮಾಡಲಿಕ್ಕೆ ಹೇಳ್ತಿಲ್ಲ. ಅದು ನಿಮ್ಮ ಸ್ವತ್ತು, ಆದರೆ ವಸ್ತು ವಿಷಯವನ್ನು ಸೂಚ್ಯವಾಗಿ ಹೇಳಬಹುದಲ್ವೆ. ಇದರಿಂದ ಬೇರೆಯವರು ಸಹ ಈ ನಿಟ್ಟಿನಲ್ಲಿ ಅದೇ ಕೆಲಸದ ಪುನರಾವರ್ತನೆಯನ್ನು ಮಾಡುವುದನ್ನು ತಪ್ಪಿಸ ಬಹುದಲ್ವೆ. ಇದರಿಂದ ಸಂಶೋಧನೆಯ ವೃಥಾ ಖರ್ಚು ತಪ್ಪಿದಂತಾಗುತ್ತದೆ. ಇದರಿಂದ ನಿಮ್ಮ energy ಯೂ waste ಆಗುವುದು ತಪ್ಪುತ್ತದೆ. ನಮ್ಮ Funding waste ಆಗುವುದು ತಪ್ಪುತ್ತದೆ. ಒಂದೇ ಪ್ಲಾಟ್ ಫಾರಂ ಇದ್ದ ಪಕ್ಷದಲ್ಲಿ ಎಲ್ಲರೂ ನೋಡುವಂತಾಗುತ್ತದೆ. ಇದರಿಂದ ಮುಂದೆ ಬರುವ ಹೊಸಬರು ಹತ್ತು ವಿಷಯಗಳ ಬಗ್ಗೆ ಈಗಾಗಲೇ ಶೋಧ ಕಾರ್ಯ ನಡೆಯುತ್ತಿರುವಾಗ ಮತ್ತದನ್ನೇ ಮಾಡುವ ಆಗತ್ಯವಿಲ್ಲವೆಂದು ನಿರ್ಧರಿಸಿ ಹನ್ನೊಂದನೆಯ ವಿಷಯವನ್ನು ಆರಿಸಿ ಕೊಳ್ಳಬಹುದಲ್ವೆ. ನಾವು ಈ portal ಮುಖಾಂತರ Question ಮಾಡಬಹುದು, ಸಮಸ್ಯೆಯನ್ನು ಇಡಬಹುದು, ಪರಿಹಾರಗಳನ್ನು ಸೂಚಿಸಬಹುದು, ಹೊಸ ದಿಕ್ಕಿನಲ್ಲಿ ಮುಂದುವರೆಯುವಂತೆ ಪ್ರೇರೇಪಿಸಬಹುದು.
2022 ರಲ್ಲಿ ದೇಶ ತನ್ನ 75 ನೇಯ ವರ್ಧಂತಿಯನ್ನು ಆಚರಿಸಕೊಳ್ಳಲಿದೆ. 75ನೇಯ ವರ್ಧಂತಿ ಸಮಯದಲ್ಲಿ ಸಿ.ಎಸ್.ಐ,ಆರ್ ಹೊಸ ಹುರುಪಿನಿಂದ, ಹೊಸ ಉತ್ಸಾಹದಿಂದ ಏನ್ನನಾದರು ಸಾಧಿಸ ಬೇಕೆಂಬ ತವಕಗೊಂಡಂತೆ, ದೇಶವು ಸಹ ಹೊಸತೊಂದು ಸಾಧಿಸುವ, ಹುಮ್ಮಸಿನಲ್ಲಿ ಮುನ್ನಡೆಯುವಂತೆ ಮಾಡುವುದು ಭಾರತ ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಈಗ ನಮ್ಮ ಮುಂದೆ ಕೆಲವು ವರ್ಷಗಳ ಸಮಯವಿದೆ. ನಾವು 2022 ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಗುರಿಯಿಟ್ಟು ಕೊಂಡಿದ್ದೇವೆ. ಈ ಗುರಿಮುಟ್ಟಲು ತಮ್ಮ ಸಹಕಾರ ಆಗತ್ಯ. ಫಸಲಿನ ಹೊಸ ತಳಿಗಳನ್ನು ಸಿದ್ಧಗೊಳಿಸಬೇಕಾಗಿದೆ. ವಿಶೇಷವಾಗಿ ಬೇಳೆಕಾಳುಗಳ variety develop ಮಾಡ ಬೇಕಾಗಿದೆ. rain fed area ದಲ್ಲಿ ಬೆಳೆಯುವಂತೆ ಮಾಡಬೇಕಾಗಿದೆ. ಅವುಗಳ ಫಸಲು ಹೆಚ್ಚಾಗುವಂತೆ ನೋಡಿಕೊಳ್ಳ ಬೇಕಾಗಿದೆ. ಇದರ ಹೇರಳವಾದ ಲಭ್ಯತೆಯಿಂದ ಸಾಮಾನ್ಯರ ಶರೀರದಲ್ಲಿ ಕಂಡುಬರುವ ಪ್ರೋಟೀನ್ ಕೊರತೆಯನ್ನು ನೀಗಲು ಸಹಾಯವಾಗುತ್ತದೆ.
ಒಂದುವೇಳೆ ನಾವು 2022 ರ ವೇಳೆಗೆ agriculture sector ನಲ್ಲಿ income double ಮಾಡುವ ಕನಸೇನಿದೆ ಅದನ್ನು ಮತ್ತು ವಿಶೇಷವಾಗಿ ಸಾಮಾನ್ಯನಿಗೆ ಪ್ರೋಟೀನ್ requirement ಅಗತ್ಯವಿದೆ. ಈ ಪ್ರೋಟೀನ್ pulses ಮೂಲಕವೆ ದೊರಕುವಂತಾಹುದು. ಅದರಲ್ಲಿ ನಾವು ಹೇಗೆ Intervention ಮಾಡುವುದು ಮತ್ತು ಪ್ರತಿ ಹೆಕ್ಟೇರ್ ನಲ್ಲಿ yield ಹೇಗೆ ವೃದ್ಥಿಸುವುದು ಎಂದು ಯೋಚಿಸಬೇಕಾಗಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ, genetic science ನ ಯುಗದಲ್ಲಿ intervention ನ ಮೂಲಕ ನಮ್ಮ scientist ಇದನ್ನು ಮಾಡಬಹುದಾಗಿದೆ ಮತ್ತು ನಮ್ಮ ಕೃಷಿಕರು ಸಹ ದೇಶದ ಮೂಲೆ ಮೂಲೆಯಲ್ಲಿರುವ ರೈತ ಬಂಧುಗಳೊಂದಿಗೆ ಮಾತುಕತೆಯಾಡಿ ಬಂದಿರಬಹುದು. ಇಲ್ಲಿನ ಬೆಳವಣಿಗೆಯನ್ನು ಕಂಡು ತಾವು ಏನ್ನನಾದರು ಮಾಡಬೇಕೆಂಬ ಇಚ್ಛೆಯನ್ನು ಇಟ್ಚು ಕೊಂಡಿರಬಹುದು. ಅಂತಹವರಿಗೆ ನಮ್ಮ ವಿಜ್ಞಾನಿಗಳು ದಾರಿ ತೋರಬಹುದು. ಹೊಸ ದಿಕ್ಕನ್ನು ತೋರಬಹುದು. ನಿರ್ಧಾರಿತ ಸಮಯದಲ್ಲಿ ಪರಿಣಾಮ ಕೊಡಬಹುದು. ವಿಜ್ಞಾನಿಗಳು ಹೊಸ ತಳಿಯ ತರಕಾರಿ ಬೆಳೆಗಳನ್ನು ಅಭಿವೃಧ್ಧಿಗೊಳಿಸಬೇಕು. ನಮ್ಮ ಗುರಿ ಕೇವಲ ಉತ್ಪಾದನೆ ಮಾತ್ರವಲ್ಲ ಗುಣಮಟ್ಟದ ಅಂತರವನ್ನು ಕಾಯ್ದು ಕೊಳ್ಳುವುದು ಆಗಿದೆ ಇದರಿಂದ ಇತರೆ ಕ್ಷೇತ್ರಗಳಲ್ಲಿ ರಫ್ತು ಹೆಚ್ಚಿಸಲು ನೆರವಾಗಲಿದೆ. ರಫ್ತಿನ ವಿಚಾರ ಏಕೆ ಹೇಳಿದೆನೆಂದರೆ ಈ ಹಿಂದೆ gulf countries ಗೆ ಹೋಗಿ ಬಂದೆ. ಅಲ್ಲಿ ಅವರಿಗೆ ಅವರದೆ ಆದ ಒಂದು ಸಮಸ್ಯೆಯಿರುವುದನ್ನು ಮನಗಂಡೆ. ಅವರ ಮಾತಿನಲ್ಲಿಯೆ ಹೇಳುವುದಾದಲ್ಲಿ-“ ನಮ್ಮಲ್ಲಿ ಒಂದಿಂಚು ಮಳೆಯಾಗುವುದಿಲ್ಲ. ನಾವು ತಿನ್ನುವ ಎಲ್ಲ ಪದಾರ್ಥಗಳನ್ನನು ನಾವು ಹೊರಗಡೆಯಿಂದ ತಂದೆ ತಿನ್ನಬೇಕು. ಹೂವು ಹಣ್ಣು, ತರಕಾರಿ, ಆಹಾರ ಪದಾರ್ಥಗಳು ಎಲ್ಲವೂ ಹೊರಗಿನಿಂದ ಬರಬೇಕು. ನಮ್ಮ ದೇಶದ ಜನಸಂಖ್ಯೆಯು ಬೆಳೆಯುತ್ತಿದೆ. ನಮ್ಮಲ್ಲಿ ಪೆಟ್ರೋಲ್ ಇರಬಹುದು, ಡಾಲರ್ ಇರಬಹುದು, ಹಣವಿರಬಹುದು. ಸಂಪತ್ತು ಅಧಿಕವಿರಬಹುದು. ಆದರೆ ಎಲ್ಲವನ್ನು ಹೊರಗಿನಿಂದಲೇ ಆಮದು ಮಾಡಿಕೊಳ್ಳಬೇಕು.” ಈ ಮಾತನ್ನು ಹೇಳಿದಾಗ ನನ್ನಗನ್ನಿಸಿದ್ದು ನಾವು gulf countries ನ requirement ಗಮನದಲ್ಲಿಟ್ಟುಕೊಂಡು, ಅವರ requirement ಅನ್ನು ನಾವು export ಮಾಡಬಹುದಲ್ವೆ. ನಾವು agriculture area ದಲ್ಲಿ focuss ಮತ್ತು, target ಮಾಡೂ develop ಮಾಡುವ ದಿಕ್ಕಿನಲ್ಲಿ ಯೋಚಿಸ ಬಹುದಲ್ವೆ. qualiity ಮತ್ತು quantityಯನ್ನು ಖತರಿಮಾಡಿ ಕೊಂಡಲ್ಲಿ 50 ವರ್ಷಗಳವರೆವಿಗೂ assured market ಪಡೆಯ ಬಹುದಲ್ವೆ.ವಿಶ್ವದ ಮಾರುಕಟ್ಟೆಯಲ್ಲಿ ಇದು completion ಮತ್ತು affordable ಆದಲ್ಲಿ ಇದು ಸಾಧ್ಯವಿದೆ. ನಮ್ಮ ವಿಜ್ಞಾನಿಗಳು ಈ ಗುರಿಯನ್ನು ಮುಟ್ಟುತ್ತಾರೆ ಎನ್ನುವುದರಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ. ಇದರಿಂದ ಭಾರತದ ಕೃಷಿಕರ economy ಗೆ ಲಾಭವಿದೆ. ನಾವು Gulf countries ನ requirement ಪೂರೈಸುವಲ್ಲಿ nearest ಆಗಿ ಇರುತ್ತೇವೆ. ಅವರ ಬೇಕು ಬೇಡ ಗಳನ್ನು ತುಂಬಾ ಕಡಿಮೆ ವೆಚ್ಚದಲ್ಲಿ ಭಾರತ ಪೂರೈಸ ಬಹುದಾಗಿದೆ. ಇಂತಹ ಅವಕಾಶದಿಂದ ನಾವು ಏಕೆ ವಂಚಿತರಾಗಬೇಕು? agriculture sectorನ ಇನ್ನೂ ಹಲವು ಹತ್ತು ವಿಷಯಗಳನ್ನು ಕುರಿತು ಇದೇ ರೀತಿಯಲ್ಲಿ ಆಲೋಚಿಸ ಬಹುದಾಗಿದೆ.
ಆರೋಗ್ಯದ ಕ್ಷೇತ್ರದಲ್ಲಿ ಸಿ.ಎಸ್.ಐ.ಆರ್ ಒಳ್ಳೆಯ ಹೆಸರನ್ನು ಮಾಡಿದೆ. ಆದಗ್ಯೂ ನಮ್ಮ ದೇಶದ ಜನ ಇವತ್ತಿಗೂ ಸಹ ಟಿ.ಬಿ., ಮಲೇರಿಯಾ, ಚಿಕನ್ ಗುನ್ಯ, ಡೆಂಗೂ ಮುಂತಾದ ರೋಗಗಳಿಂದ ಬಳಲುತ್ತಿದ್ದಾರೆ. ಸಿ.ಎಸ್.ಐ.ಆರ್ ನಮ್ಮ ಜನರನ್ನು ಇಂತಹ ರೋಗಗಳಿಂದ ಹೇಗೆ ಕಾಪಾಡ ಬಹುದು. ಯಾವ ಪರಿಹಾರ ಒದಗಿಸಬಹುದು. ಇದರ ಬಗ್ಗೆ ನಿರ್ದಿಷ್ಟ ಕಾಲ ಮಿತಿಯೊಳಗೆ ಸಂಶೋಧನೆಗಳನ್ನು ಮಾಡಿ ಮುಗಿಸುವ ಅವಶ್ಯಕತೆಯಿದೆ. ರೋಗಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚುವ ಮತ್ತು cost effective ಆದ diagnostic kits develop ಮಾಡುವ ಅಗತ್ಯವಿದೆ. ಕಾರಣ ಇಂದು Health sector ಹೆಚ್ಚಾಗಿ technology driven ಆಗಿ ಬಿಟ್ಟಿದೆ. ಡಾಕ್ಟರು ಇಂದು ಹೆಚ್ಚಾಗಿ ಪರೀಕ್ಷೆಗಳನ್ನು ಮಾಡುವುದಿಲ್ಲ. ಅವರ ಮಷಿನ್ನುಗಳೆ ಹೆಚ್ಚಾಗಿ ಕೆಲಸ ಮಾಡುವುದು. ನಿಮ್ಮಲ್ಲಿ ಎನು ಕೊರತೆಯಿದೆ, ಎನು ತೊಂದರೆಯಿದೆ ಎನ್ನುವುದನ್ನು ಮಷಿನ್ನುಗಳು ಪತ್ತೆ ಮಾಡುತ್ತವೆ. ಎಂಥಹ ಸ್ಥಿತಿ ಬಂದಿದೆಯೆಂದರ ಡಾಕ್ಟರು ಸಾಪ್ಟ್ ವೇಯರ್ ತರಹ ಇದನ್ನು ಕೊಡಿ, ಅದನ್ನು ಕೊಡಿ,ಇದನ್ನು ಮೊದಲು ಕೊಡಿ, ಇದನ್ನು ಆಮೇಲೆ ಕೊಡಿ ಅಂತಾ ಹೇಳುತ್ತಾ ಹೋಗುತ್ತಾರೆ. ಇಂದು medical science ಸಂಪೂರ್ಣವಾಗಿ technology driven ಆಗಿಹೋಗಿದೆ. ನಿಮಗಿದೊಂದು ಒಳ್ಳೆ opportunity ಅಂತಾ ನನಗನ್ನಿಸಿದೆ. ಕೇವಲ ಔಷದವನ್ನು ನೀಡುವುದಷ್ಟೆ ಅಲ್ಲ. ನನ್ನ ಕಲ್ಪನೆಯಲ್ಲಿ ಇಂಥದೊಂದು kit ಅನ್ನು ASHA worker ಗಳಿಗೆ ಒದಗಿಸಿ ಕೊಟ್ಟಲ್ಲಿ ಅವರು ಸಹ ಗ್ರಾಮೀಣ ಪ್ರದೇಶಗಳಲ್ಲಿ ಜನರೊಂದಿಗೆ ಬೆರೆತು ಅವರ ರೋಗ ಪತ್ತೆ ಹಚ್ಚುವಿಕೆಯಲ್ಲಿ ನೆರವಾಗಬಹುದು ಮತ್ತು technologically well connected ಆಗಿ epidemic ಅನ್ನು ಸಹ ತಕ್ಷಣದಲ್ಲಿ ಪತ್ತೆ ಹಚ್ಚುವ ಮೂಲಕ ನೆರವಾಗಬಹುದು. ಈಗಿನ ಕಾಲದಲ್ಲಿ ಎಲ್ಲವೂ ಸಾಧ್ಯವಿದೆ. ನಾನು ನಿಮ್ಮಗಳಿಂದ mass-scaleನ ಮೇಲೆ ಇಂತಹ ಹಲವಾರು ಸಂಶೋಧನೆಗಳನ್ನು ಕೈಗೊಂಡು ಅವುಗಳನ್ನು address ಮಾಡುವ ಮೂಲಕ ಹೊಸ ಕ್ಷೇತ್ರಗಳತ್ತ ಗಮನ ಹರಿಸುತ್ತೀರಿ ಎಂದು ನಂಬಿರುತ್ತೇನೆ. ನೀವು ನಮ್ಮ ಯುವಕರಿಗೆ ಅವಕಾಶ ಕಲ್ಪಸಿ ಕೊಡಿ. ಅವರು ಸಹ ಈ ದಿಕ್ಕಿನಲ್ಲಿ ಎನ್ನನಾದರು ಮಾಡುವರೆಂಬ ವಿಶ್ವಾಸವಿದೆ.
ಬಡತನಕ್ಕೆ ಕೊಳಕೂ ಸಹ ಒಂದು ಕಾರಣ ಎಂಬುದು ನನಗೆ ತಿಳಿದಿದೆ. ನಾನು ನಿಮಗೆ ಈ ಕೊಳಕನ್ನು ತೆಗೆಯಿರಿ ಎಂದು ಹೇಳಲಾರೆ. ಆದರೆ ನಿಮ್ಮ ಬಳಿ ಇರುವ ತಾಂತ್ರಿಕತೆಯಿಂದ disposal ಸಂಬಂಧವಾಗಿ ಶೋಧ ಕಾರ್ಯ ಕೈಗೊಂಡು affordable technology develop ಮಾಡಬಹುದು. ಇದು ಅಂಥ ರಾಕೆಟ್ ಸೈನ್ಸ್ ಏನಲ್ಲ. ಹೊಸ ಹೊಸ start up ನ ವಹಿವಾಟು ಏನಿದೆಯೊ ಅದರಲ್ಲಿ Waste management, Waste to wealth creation ಮುಂತಾಗಿ technology intervention ನಲ್ಲಿ ಹೆಚ್ಚು ಕೊಟ್ಟಲ್ಲಿ ಅದರಿಂದ ಮುಂದೊಂದು ದಿನ ಕಸವು ಸಹ ರಸವಾಗಿ ವ್ಯಾಪಾರದ ವಸ್ತುವಾಗಬಹುದು. ಸ್ವಚ್ಛತೆಯೆನ್ನುವುದು ತನ್ನಷ್ಟಕ್ಕೆ ತಾನೇ ಮೈಗೂಡಿಕೊಂಡು ಬಂದಾಗ ರಾಷ್ಟ್ರದ ಆರೋಗ್ಯ ಕ್ಷೇತ್ರಕ್ಕೆ ಬಹು ದೊಡ್ಡ ರೀತಿಯಲ್ಲಿ ನೆರವಾಗಲಿದೆ. Even nutrition ನ issue ಸಹ address ಮಾಡಬಹುದಾಗಿದೆ. ಕೊಳಕಿನಿಂದ ಮುಕ್ತಿ ಸಿಕ್ಕಲ್ಲಿ ಅದು ನಮಗೆ ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಗಮನ ಹರಿಸಲು ನೆರವಾಗುತ್ತದೆ. ಕುಡಿಯುವ ನೀರಿನ ಶುದ್ಥತೆಯನ್ನು ಕಾಪಾಡಿ ಕೊಂಡಲ್ಲಿ ಹಲವು ಹತ್ತು ರೋಗಗಳಿಂದ ಮುಕ್ತಿ ದೊರಕಬಹುದು. ಈ ಎಲ್ಲ ವಿಷಯಗಳು ಕೇವಲ medical science ಗಷ್ಟೆ ಸೀಮಿತವಾಗಿಲ್ಲ. ವೈಜ್ಞಾನಿಕ ಯುಗದಲ್ಲಿ intervention ನ ಅಗತ್ಯವಿದೆ. ವಿಶ್ವದಲ್ಲಿ technology ಇಲ್ಲವೆ ಇಲ್ಲ ಅಂತಲ್ಲ. affordable technology ಗಾಗಿ intervention ಅಗತ್ಯವಿದೆ.
ನಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳಿಂದ technology develop ಮಾಡುವ ಅವಶ್ಯಕತೆಯಿದೆ. ಈ ಅವಶ್ಯಕತೆಗಳ ಪೂರೈಕೆವಿಕೆಗಾಗಿ ಕೆಲವೊಮ್ಮೆ ಯೋಚಿಸಿರುವುದುಂಟು ಎನ್ನನಾದರು ಕುರಿತು ಆಲೋಚಿಸು, ಅದು ಮುಂದೆ 50 ಅಥವಾ 100 ವರ್ಷಗಳ ನಂತರ ಬಹುಶಃ ಉಪಯೋಗಕ್ಕೆ ಬರಬಹುದು. ನಮ್ಮ ಮುಂದಿರುವ ಸವಾಲುಗಳನ್ನು ಗಮನದಲ್ಲಿಟ್ಟು ಕೊಂಡು ವಿಜ್ಞಾನವನ್ನು ಕೊಂಡೊಯ್ದಲ್ಲಿ ನನಗನ್ನಿಸುತ್ತದೆ ದೇಶಕ್ಕೆ ಇದರ ಪರಮ ಅವಶ್ಯಕತೆಯಿದೆಯೆಂದು. ಒಂದು ವೇಳೆ ಈ ಅವಶ್ಯಕತೆಗಳಲ್ಲಿ ಯಶಸ್ವಿಯಾದರೆ ಅದೇ ಮುಂದೆ global level ನ ಅವಶ್ಯಕತೆಯಾಗಿ ಪರಿಣಮಿಸಲ್ಪಟ್ಟು ಹೊಸ ಯುಗದ ಅವಶ್ಯಕತೆಯ research ಗೆ ಹೆಚ್ಚು ಮಹತ್ವ ಬರಬಹುದು.
ಸಿ.ಎಸ್.ಐ.ಆರ್ water security ಬಗ್ಗೆಯೂ ಸಾಕಷ್ಟು ಶೋಧಕಾರ್ಯ ಕೈಗೊಂಡಿದೆ. ಆದರೆ ತಾವು water resource ಅನ್ನು economically, efficiently ಮತ್ತು effective ಆಗಿ ಬಳಸುವ ಬಗ್ಗೆ ಅಧ್ಯಯನ ಮಾಡಬೇಕಾಗಿದೆ. ನೀರಿನ ಸಮಸ್ಯೆ ಮತ್ತು ಅದರ ಬಳಕೆ ಕುರಿತು ಸಾಕಷ್ಟು ಚರ್ಚೆಯಾಗಿದೆ ಎನ್ನುವುದು ತಿಳಿದಿದೆ. ವಿವಾದಗಳು ನೀರಿನ ಬಳಕೆಯಿಂದಾಗಿಯೆ ಶುರುವಾಗಿದೆ ಎನ್ನುವವರು ಸಾಕಾಷ್ಟು ಮಂದಿ ಇದ್ದಾರೆ. ಹೇಳುವವರು ಹೇಳಿ ಕೊಳ್ಳಲ್ಲಿ ಬಿಡಿ. ಆದರೆ ಪ್ರಯೋಗ ಶಾಲೆಗಳಲ್ಲಿ ಕುಳಿತವರು ಇದರ ಬಗ್ಗೆ ಪರಿಹಾರ ಹುಡುಕಬೇಕಷ್ಟೆ. ಕೃಷಿ ಕ್ಷೇತ್ರದಲ್ಲಿ per drop more crop ಎನ್ನುವುದು ನಮ್ಮ ದೈಯ ಮತ್ತು ಅದರ ಜೊತೆ ಜೊತೆಗೆ an inch of land and bunch of crop ಎನ್ನುವುದು ಸಹ ನಮ್ಮ ಗುರಿ. ಇದನ್ನು ಸಾಕಾರಗೊಳಿಸಲು ಯತ್ನಿಸುವುದಿಲ್ಲವೊ ಅಲ್ಲಿಯವರೆವಿಗೂ ನೀರಿನ ಬಳಕೆಯ ಮಹತ್ವವನ್ನು ಮನಗಾಣುವುದಿಲ್ಲ ಹಾಗೆಯೇ ಭೂಮಿಯ ಮಹತ್ವವನ್ನು ಸಹ ಅರಿಯಲಾರೆವು.
ನದಿ ನೀರಿನ ಮಾಲಿನ್ಯ ಇಂದು ದೊಡ್ಡ ಸಮಸ್ಯೆಯಾಗಿ ಬೆಳದಿದೆ. ಗಂಗಾ ನದಿಯ ಸ್ವಚ್ಛತೆಯ ಕಾರ್ಯ ಹಲವಾರು ವರ್ಷಗಳಿಂದ ಸಾಗುತ್ತಿದೆ. ಹಲವಾರು ಸರ್ಕಾರಗಳು ಬಂದು ಹೋಗಿವೆ. ಈ ಸಮಸ್ಯೆಗೆ ವೈಜ್ಞಾನಿಕ ಪದ್ದತಿಯನ್ನು ಅಳವಡಿಸ ಕೊಳ್ಳಬೇಕಾಗಿದೆ. ಜನ ಸಾಮಾನ್ಯರಿಗೆ ಇದರ ಮಹತ್ವವನ್ನು ಕುರಿತು ಅರಿವು ಮೂಡಿಸಬೇಕಾಗಿದೆ. ವೈಜ್ಞಾನಿಕ ಪರಿಹಾರವೊಂದೇ ಈ ಸಮಸ್ಯೆಯನ್ನು ನೀಗಬಲ್ಲುದು. ಸಾಮಾನ್ಯ ನಾಗರೀಕನ ಮತ್ತೊಂದು ಅಗತ್ಯವೆಂದರೆ ಬ್ಯಾಟರಿ ರೀ-ಚಾರ್ಜು. ಇಂದಿನ ಯುಗದಲ್ಲಿ ಭಾರತದಲ್ಲಿ ಎಷ್ಟು ಜನ ಸಂಖ್ಯೆಯಿದ್ದಾರೊ ಅದಕ್ಕಿಂತ ಹೆಚ್ಚು ಮೊಬೈಲ್ ನಮ್ಮಲಿವೆ. ಆದರೆ ಬ್ಯಾಟರಿಯ ಅಯಸ್ಸು ಅಲ್ಪಾವಧಿಯಿಂದಾಗಿ ಜನರಿಗೆ tension ವಿಷಯವಾಗಿ ಪರಿಣಮಿಸಲ್ಪಟ್ಟಿದೆ. ಕೆಲವೊಮ್ಮೆ recharge ಗಾಗಿ ಹಳ್ಳಿಜನರು ತಮ್ಮ ಹಳ್ಳಿಯಲ್ಲಿ ದೊರಕದೆ ಬೇರೊಂದು ಹಳ್ಳಿಗೆ ಸೌಲಭ್ಯವನ್ನು ಅರಸಿ ಪರದಾಡಿರುವುದುಂಟು. ಅಲ್ಲಿ ಅವರು ಗಂಟೆಗಟ್ಟಲೆ ಕಾದಿರುವುದುಂಟು. ಬ್ಯಾಟರಿ recharge ಮಾಡಿ ಕೊಡಿ ಎಂದು ದುಂಬಾಲು ಬಿದ್ದಿರುವುದುಂಟು. Smart phone ಬ್ಯಾಟರಿಯಲ್ಲಿ ಇಂಥದೊಂದು ಸಮಸ್ಯೆ ಜನರಿಗಿದೆ. ಹೆಚ್ಚು ಬಳಸುವವರು ಬ್ಯಾಟರಿ ಬ್ಯಾಂಕ್ ಅನ್ನು ಜೊತೆಗಿಟ್ಟು ಕೊಂಡು ಬಳಸುವುದುಂಟು. ನಮ್ಮ ವಿಜ್ಞಾನಿಗಳು ಇದಕ್ಕೊಂದು ಪರಿಹಾರ ದೊರೆಕಿಸಲಾರರೆ. ಇದು ಎಷ್ಟು ದೊಡ್ಡ ಮಾರುವ ಕಟ್ಟೆ ಊಹಿಸಿಕೊಳ್ಳಿ. ನನಗೇನು ಇದು ಪರಿಹಾರ ಕಂಡು ಕೊಳ್ಳಲಾಗದ ಸಮಸ್ಯೆ ಅಂತಾ ಎನು ಅನ್ನಿಸಿಲ್ಲ. ವಿಜ್ಞಾನ ಸಣ್ಣ level ನಲ್ಲಿ apply ಮಾಡಬಹುದಾದಲ್ಲಿ ಅದು ತನ್ನ ವ್ಯಾಪ್ತಿಯನ್ನು enlarge ಮಾಡಲು ಬಹುದು. ನಾನೇನು scientist ಅಲ್ಲ, ಆದರೆ ಇಷ್ಟಂತೂ ಗೊತ್ತು ನೀವು ಇದನ್ನು ಮಾಡ ಬಲ್ಲಿರಿ ಎಂದು. ತಾವು ಒಂದು ವೇಳೆ ಇವುಗಳಿಗೆ priority ನೀಡಿದಲ್ಲಿ ಇದರ commercial value ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ. ಇದು ಇಂದಿನ requirement ಆಗಿದೆ.
ಈಗ ತಾವು sports ಅನ್ನೇ ಗಮನಿಸಿ. ಕ್ರೀಡಾ ಕ್ಷೇತ್ರ ಯಾವ ರೀತಿ ಬೆಳೆದಿದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ಕೇವಲ ಆಟದ ಮೈದಾನಕಷ್ಟೆ ಈ ಕ್ಷೇತ ಸೀಮಿತವಾಗಿಲ್ಲ. ಇದೀಗ ತಾನೇ ತಾವು ಏರ್ಪಡಿಸಿರುವ ಪ್ರದರ್ಶನದಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟಿರುವುದನ್ನು ಗಮನಿಸಿದೆ. leather ನಿಂದ ವಸ್ತು ಹೇಗೆ ಸಿದ್ದಪಡಿಸುವುದು ಎನ್ನುವುದನ್ನು ತಿಳಿಸಿಕೊಟ್ಟರು. ನಾನು ಆಗ ಅವರನ್ನು ಪ್ರಶ್ನಿಸಿದೆ ಯಾವ ಯಾವ sport ಗೆ ಯಾವ ಯಾವ ಷೂಗಳು ಬೇಕಾಗ ಬಹುದು ಯಾವ ಯಾವ costume ಬೇಕಾಗಬಹುದು ಎಂಬುದರ ಬಗ್ಗೆ ಎನಾದರು research ನಡೆದಿದೆಯೆ ಎಂದೆ. ಕಾರಣ ಪ್ರತಿಯೊಬ್ಬನ physical fitness ಗೆ plus ಆಗಿ ಪರಿಣಮಿಸುವ, comfort ಗೆ plus ಆಗಿ ಪರಿಣಮಿಸುವ ಬೆಳವಣಿಗೆಯಿದು. ಈಗ ನಮ್ಮಲ್ಲಿಯೆ ಸಾಕಷ್ಟು ಶೋಧ ಕಾರ್ಯ ನಡೆಯುತ್ತಿದೆ. ನಾವು ಈ ರೀತಿಯ ವಸ್ತುಗಳನ್ನು ದೊರೆಕಿಸಿ ಕೊಡುವುದರಲ್ಲಿಯೆ ಆಗಲಿ, ಸಂಪನ್ಮೂಲಗಳನ್ನು ಒದಗಿಸಿ ಕೊಡುವುದರಲ್ಲಿಯೆ ಆಗಲಿ, ಕ್ರೀಡಾ ಮೈದಾನಗಳನ್ನು ಸಿದ್ದಗೊಳಿಸುವುದರಲ್ಲಿಯೆ ಆಗಲಿ, ಓಳ್ಳೆಯ ಕೋಚುಗಳನ್ನು ಹುಡುಕಿ ಕೊಟ್ಟಲ್ಲಿ ಆಟದ ಜಗತ್ತಿನ ಸಾಧನೆಗಳು ನಮ್ಮ ಬಳಿಗೆ ಬರಲಾರವೆ? ಕ್ರೀಡಾ ಜಗತ್ತಿನ development ಗಾಗಿ scientific environment ನ requirement ಇದೆ. ಆಟದ ಪಟುವಿಗೆ psychology ಯಿಂದ ಹಿಡಿದು comfort ನ ತನಕ ಪ್ರತಿಯೊಂದು ವಸ್ತುವಿನ ಅವಶ್ಯಕತೆಗಳನ್ನು ಪೂರೈಸುವುದು ಇಂದಿನ ಆಗತ್ಯವಾಗಿದೆ.
ನಮ್ಮ ಭಾರತದ ವಿಜ್ಞಾನಿಗಳು ಕ್ರೀಡಾ ಕ್ಷೇತ್ರವನ್ನು ಒಂದು ದೊಡ್ಡ ವ್ಯವಹಾರಿಕ ಕ್ಷೇತ್ರವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲವೆ. ನಾವು ಅವರಿಗಾಗಿ ವೈಜ್ಞಾನಿಕ environment ನಲ್ಲಿ research ಉತ್ಪನ್ನಗಳನ್ನು ದೊರಕಿಸಿ ಕೊಡಲಾರವೆ? ಈಗ Space science ಅನ್ನು ತಾವು ನೋಡಬಹುದು, space ಗೆ ಕಳುಹಿಸುವ ಜನರ ಬಗ್ಗೆ ಕಾಳಜಿ ವಹಿಸುವಂತೆಯೆ ಅಷ್ಟೆ ಮುತುವರ್ಜಿ space ನ scientific environment ನಲ್ಲಿ ತರಬೇತಿ ನೀಡುವಾಗಲೂ ತೋರಿಸುತ್ತೇವೆ. ಕ್ರೀಡಾ ಕ್ಷೇತ್ರವು ಅಷ್ಟೆ sport ನಲ್ಲಿ environment ನ parameter ಗಳನ್ನು ನಿರ್ಧಾರಿಸಬಹುದು. ಅದಕ್ಕಾಗಿ ಅಂತಹುದೇ ವ್ಯವಸ್ಥೆಯನ್ನು ಅಭಿವೃದ್ಥಿಗೊಳಿಸಬೇಕಾಗಿದೆ. ನನ್ನ ಮಾತಿನ ಮರ್ಮ ವಿಜ್ಞಾನವನ್ನು ಸಾಮಾನ್ಯ ನಾಗರೀಕರೊಂದಿಗೆ ಜೋಡಿಸುವುದೆ ಆಗಿದೆ. ಏಕೆಂದರೆ ನಮ್ಮ 21ನೇಯ ಶತಮಾನ technology driven ಆಗಿದೆ. ಒಂದು ವೇಳೆ ಇಡೀ ಶತಮಾನವೇ technology driven ಆದ ಸಂದರ್ಭದಲ್ಲಿ ನಾವು ಈ ರೀತಿಯ ಹೊಸ ಅವಿಷ್ಕಾರಗಳನ್ನು 21 ನೇಯ ಶತಮಾನದ ಅಗತ್ಯಗಳಿಗೆ ಹೊಂದಿಸಿ, ಭಾರತದ ಅವಶ್ಯಕತೆಗಾನುಸಾರವಾಗಿ ಸಿದ್ಥಗೊಳಿಸ ಬಹುದಾಗಿದೆ.
ನಮ್ಮ ಪರಂಪರಾಗತವಾದ ತಿಳುವಳಿಕೆ ಮತ್ತು ಜ್ಞಾನವನ್ನು modern system ಗೆ ಜೋಡಿಸುವುದರಿಂದ ಹಲವಾರು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಕೊಳ್ಳಬಹುದು. ಯೋಗವಾಗಿರಬಹುದು, ಆಯುರ್ವೇದ ಆಗಿರಬಹುದು ಇಂತು ವಿಶ್ವದಾದ್ಯಂತ ಚರ್ಚೆಯ ವಿಷಯವಾಗಿವೆ. ಆದರೆ ಅದರ ವೈಜ್ಞಾನಿಕ ಸ್ವರೂಪ ನಮಗಿನ್ನು ದೊರೆತಿಲ್ಲ. ನಾವು ಆ ದಿಕ್ಕಿನಲ್ಲಿಯೂ ಸಹ ಕಾರ್ಯ ಪ್ರವೃತ್ತರಾಗಬೇಕಿದೆ.
ಇಂದು ನಮ್ಮ ವಿಜ್ಞಾನಿಗಳಿಗೆ ರಾಷ್ಟ್ರೀಯ ಪುರಸ್ಕಾರ ನೀಡಿ ಸನ್ಮಾನ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಸನ್ಮಾನಿತರನ್ನು ಅಭಿನಂದಿಸುತ್ತೇನೆ. ಇವುಗಳಲ್ಲಿ 2012-15 ರ ಶಾಂತಿ ಸ್ವರೂಪ ಭಟ್ನಾಗರ್ ಪುರಸ್ಕಾರ, 1012-14 ರ ಸಿ.ಎಸ್.ಐ.ಆರ್ diamond technology jubilee Award, ಗ್ರಾಮೀಣ ಅಭಿವೃದ್ಥಿಗಾಗಿ science and technology innovations ಗಾಗಿ CSIR Award ,2016 ರ CSIR technology Award, 2016ರ ಜಿ.ಎನ್.ರಾಮಚಂದ್ರನ್ gold medal, CSIR young scientist Award ಗಳನ್ನು ವಿತರಿಸಲಾಗಿದೆ. ಈ ಪುರಸ್ಕಾರ ಕೇವಲ ವಿಜ್ಞಾನಿಗಳಿಗೆ ಮಾತ್ರವಲ್ಲ. ಇದು ಅವರಿಗೆ ಕುಟುಂಬದ ಸದಸ್ಯರಿಗೂ, ಮಿತ್ರ ವೃಂದದವರಿಗೂ ಹಾಗೂ ಅವರಿಗೆ ವಿದ್ಯೆಯನ್ನು ನೀಡಿದ ಶಿಕ್ಷಕರಿಗೂ ಸಲ್ಲುತ್ತದೆ. ವಿಶೇಷವಾಗಿ ಬಾಲ್ಯದಲ್ಲಿ ಅವರಿಗೆ ವಿಜ್ಞಾನ ಮತ್ತು ಸಂಶೋಧನೆಯ ಚಟುವಟಿಕೆಗೆ ತೊಡಗಿಸಿ ಕೊಳ್ಳಲು ಪ್ರೇರಣೆ ನೀಡಿದ ಗುರುಗಳಿಗೂ ಸಲ್ಲುತ್ತದೆ.
ದೇಶ ನಿಮ್ಮ ಬಗ್ಗೆ ಅತ್ಯಂತ ಹೆಮ್ಮೆಯಿಂದಿದೆ. ನಿಮ್ಮಗಳ ಬಗ್ಗೆ ಜನ ಅಭಿಮಾನ ತೋರುತ್ತಾರೆ. ನೀವು ನಿಮ್ಮ ಈ ಒಂದು ಸಂಶೋಧನೆಯ ಹಾದಿಯಲ್ಲಿ ಹೊಸ ಹುರುಪಿನಿಂದ, ಹುಮ್ಮಸಿನಿಂದ ಯಶಸ್ವಿಯಾಗಿ ಸಾಗುವಿರಿ ಎಂಬ ವಿಶ್ವಾಸವಿದೆ. ಈ ಒಂದು ಪುರಸ್ಕಾರ ಬೇರೆಯವರನ್ನು ಸಹ ಸಂಶೋಧನೆ ಮತ್ತು ಅವಿಷ್ಕಾರಗಳೆಡಗೆ ಪ್ರೇರೆಪಿಸುತ್ತದೆ. ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ನಿಮ್ಮನ್ನು ತಮ್ಮ role model ಗಳನ್ನಾಗಿ ನೋಡುತ್ತಾರೆ. ಈ ಸಂದರ್ಭದಲ್ಲಿ ಯುವಕರಿಗೆ ಅಗತ್ಯವಾಗಿ ಬೇಕಾದ ಸಲಹೆ, ಮಾರ್ಗ ದರ್ಶನಗಳನ್ನುನೀಡಿ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಿ ಎಂದು ಕೇಳಿ ಕೊಳ್ಳುತ್ತೇನೆ. ಸಿ.ಎಸ್.ಐ.ಆರ್ ನೊಂದಿಗೆ ಸಂಪರ್ಕ ಹೊಂದಿರುವ ಇತರೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳನ್ನು ಯುವಕರಿಗೆ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳೊಂದಿಗೆ ಬೆರೆತು ಕೊಳ್ಳುವಂತೆ ಕೇಳಿ ಕೊಳ್ಳುತ್ತೇನೆ. ಪ್ರತಿಯೊಬ್ಬ ವಿಜ್ಞಾನಿಯು ತಿಂಗಳಲ್ಲಿ ಕನಿಷ್ಠ ಒಮ್ಮೆಯಾದರು ಅವರ ಕಾಲೇಜುಗಳಿಗೆ ತೆರಳಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಉಪನ್ಯಾಸಗಳನ್ನು ನೀಡುವಂತೆ, ಸಮಾಲೋಚಿಸುವಂತೆ ಆಗ್ರಹಿಸುತ್ತೇನೆ ಮತ್ತು ಉತ್ಸಾಹಿ ಯುವಕರೊಂದಿಗೆ ವಿಷಯಾಧರಿತ ಚರ್ಚೆಯನ್ನು ಕೈಗೊಳ್ಳುವಂತೆ ಕೇಳಿ ಕೊಳ್ಳುತ್ತೇನೆ. ಇಂದು ಪುರಸ್ಕೃತರಾದ ಎಲ್ಲ ವಿಜ್ಞಾನಿಗಳನ್ನು ಯಾವುದಾದರು ಒಂದು ಶಾಲೆಯನ್ನೋ ಅಥವಾ ಕಾಲೇಜನಲ್ಲಿ mentor ಆಗಿ ಅವುಗಳನ್ನು adopt ಮಾಡಿಕೊಳ್ಳಿ ಎಂಬುದಾಗಿ ಆಗ್ರಹಿಸುತ್ತೇನೆ. ಯಾವುದಾದರು ಒಂದು ಶಾಲೆಯಲ್ಲಿ ಅಥವಾ ಕಾಲೇಜಿನ ಕನಿಷ್ಠ 5-6 ಮಕ್ಕಳಗೆ mentor ಆಗಿ ಅವರೊಂದಿಗೆ ಸ್ವಲ್ಪ ಸಮಯ ಕಳೆಯುವಂತಾದಲ್ಲಿ ಆದೊಂದು ಸ್ತುತ್ಯ ಕಾರ್ಯ ಎಂಬುದಾಗಿ ಭಾವಿಸುತ್ತೇನೆ. ಇದರಿಂದ ದೇಶಕ್ಕೆ ಪ್ರತಿ ವರ್ಷ 300ರಷ್ಟು ಮಂದಿ ವಿದ್ಯಾರ್ಥಿಗಳನ್ನು ಹೊಸ ವಿಜ್ಞಾನಿಗಳನ್ನಾಗಿ ಮಾಡಿದ ಶ್ರೇಯಸ್ಸು ತಮಗೆ ಸಲ್ಲಲಿದೆ. ನೀವು ತಮ್ಮ ಸಂಶೋಧನೆಯಿಂದ ಮುಂದಿನ ಪೀಳಿಗೆಯವರಿಗೆ ಒಳ್ಳೆಯದನ್ನು ತರುವಂತೆಯೆ ಹೊಸ ವಿಜ್ಞಾನಿಗಳನ್ನು ಸಹ ದೇಶಕ್ಕೆ ಕೊಡುಗೆಯನ್ನಾಗಿ ನೀಡಿದಲ್ಲಿ ಅದು ಈ ಶತಮಾನದ ಬಹು ದೊಡ್ಡ ಕಾರ್ಯಮಾಡಿದಂತಾಗುತ್ತದೆ.
ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಶುಭ ಕೋರುತ್ತೇನೆ. 75 ನೇಯ ವರ್ಷೋತ್ಸವದ ಮಹತ್ವಪೂರ್ಣ ಸಂದರ್ಭದಲ್ಲಿ ದೃಢ ನಿಶ್ಚಲದಿಂದ ಮತ್ತು 2022ರಲ್ಲಿ ದೇಶದ 75 ನೇಯ ಸ್ವಾತಂತ್ರ್ಯೋತ್ಸವನ್ನು ಆಚರಿಸಕೊಳ್ಳವಷ್ಟರಲ್ಲಿ ದೇಶಕ್ಕಾಗಿ ನೀಡಬೇಕಾದ ವೈಜ್ಞಾನಿಕ ವಸ್ತುಗಳನ್ನು ದೊರೆಕುವಂತೆ ಮಾಡುವೆವು ಎಂಬ ಪ್ರತಿಜ್ಞೆಯನ್ನು ತಾವು ಕೈಗೊಳ್ಳುವಿರೆಂದು ಭಾವಿಸುತ್ತೇನೆ. ಈ ಒಂದು ಸಂಕಲ್ಪದೊಂದಿಗೆ ನಾವು 75ನೇಯ ವರ್ಷದ ಯಾತ್ರೆಯನ್ನು ಮತ್ತು ಮುಂಬರುವ 25 ವರ್ಷಗಳ ಕನಸನ್ನು ಸಾಕಾರಗೊಳಿಸುವಲ್ಲಿ ಶ್ರಮಿಸುತ್ತೀರಿ ಎಂಬ ವಿಶ್ವಾಸದೊಂದಿಗೆ ನಿಮ್ಮೆಲ್ಲರಿಗೂ ಶುಭವಾಗಲೆಂದು ಹಾರೈಸುತ್ತೇನೆ. ಧನ್ಯವಾದಗಳು.