ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾರ್ವಜನಿಕ ಉದ್ದಿಮೆಗಳ ಇಲಾಖೆ (ಡಿಪಿಇ)ಯ ಮಾರ್ಗಸೂಚಿಯಂತೆ ಭಾರತೀಯ ಆಹಾರ ನಿಗಮ (ಎಫ್.ಸಿ.ಐ.)ದ ನೌಕರರಿಗೆ ನಿವೃತ್ತಿಯ ಸೌಲಭ್ಯಗಳ ಭಾಗವಾಗಿ ಪಿಂಚಣಿ ಮತ್ತು ನಿವೃತ್ತಿ ನಂತರದ ವೈದ್ಯಕೀಯ ಯೋಜನೆ ಅಳವಡಿಸಲು ತನ್ನ ಅನುಮೋದನೆ ನೀಡಿದೆ.
ಈ ಎರಡು ಯೋಜನೆಗಳಿಗೆ ಪ್ರಸಕ್ತ ಉದ್ಯೋಗಿಗಳ ವೇತನದ ಮಟ್ಟದಲ್ಲಿ ಒಟ್ಟಾರೆಯಾಗಿ ವಾರ್ಷಿಕ 134.4 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಬೀಳುತ್ತದೆ.
ಎಫ್.ಸಿ.ಐ.ನ ನೌಕರರ ಹೊಸ ಪಿಂಚಣಿ ಯೋಜನೆಯ ಮುಖ್ಯಾಂಶಗಳು
1. ವ್ಯಾಪ್ತಿ – 1.12.2008ರಲ್ಲಿ ವೇತನದಾರರಾಗಿರುವ ಅಥವಾ ಆ ನಂತರ ನೇಮಕಗೊಂಡಿರುವ ನಿಗಮದ ಎಲ್ಲ ನೌಕರರಿಗೂ ಹೊಸ ಯೋಜನೆ ಅನ್ವಯಿಸುತ್ತದೆ (I, II, III ಮತ್ತು IV ಪ್ರವರ್ಗ).
2. ಅರ್ಹತೆ – ಮರಣ ಪ್ರಕರಣಗಳನ್ನು ಹೊರತು ಪಡಿಸಿ, ನಿವೃತ್ತಿಗೆ ಮುನ್ನ ಕನಿಷ್ಠ 15 ವರ್ಷಗಳ ಸೇವೆ. .
3. ಜಾರಿಗೆ ಅನ್ವಯವಾಗುವ ದಿನಾಂಕ – 01.12.2008. (ವೇತನ ಪರಿಷ್ಕರಣೆ ಭತ್ಯೆಗಳು ಜಾರಿಗೆ ಬಂದ ದಿನದನ್ವಯ).
4. ಮಾಲೀಕರ ದೇಣಿಗೆ – 01.12.2008 ಹಾಲಿ ಇರುವ ಅಥವಾ ತದನಂತರ ನೇಮಕಗೊಂಡ ನೌಕರರ ಶೇ.10ರಷ್ಟು ಮೂಲ ವೇತನ ಮತ್ತು ಮಾಸಿಕ ಡಿ.ಎ.
5. ನೌಕರರ ಕಡ್ಡಾಯ ದೇಣಿಗೆ – ಶೇ.2 ಮೂಲ ವೇತನ + ಮಾಸಿಕ ಡಿ.ಎ. ನೌಕರರ ವೈಯಕ್ತಿಕ ದೇಣಿಗೆ- ಶೇ.25 ಮೂಲ ವೇತನ + ಮಾಸಿಕ ಡಿಎ ವರೆಗೆ.
6. ಸೌಲಭ್ಯಗಳು – ನಿವೃತ್ತಿಯ ಬಳಿಕ ಪಿಂಚಣಿ (ವರ್ಷಾಶನ) ಮತ್ತು ಮರಣ ಪರಿಹಾರ.
ಎಫ್.ಸಿ.ಐ. ಸಿಬ್ಬಂದಿಗೆ ಹೊಸ ನಿವೃತ್ತಿ ನಂತರದ ವೈದ್ಯಕೀಯ ಯೋಜನೆಯ ಪ್ರಮುಖ ಅಂಶಗಳು
1. ಯುಕ್ತತೆ (ಅಪ್ಲಿಕಬಲಿಟಿ) – ವೈದ್ಯಕೀಯ ಆರೋಗ್ಯ ಯೋಜನೆಯಲ್ಲಿ ಹಣ ಹೂಡಿ ಸದಸ್ಯರಾಗಿರುವ ನಿವೃತ್ತ ನೌಕರರು ಸೇರಿದಂತೆ ನಿಗಮದ ಎಲ್ಲ ನೌಕರರ ಪ್ರವರ್ಗ I, II, III ಮತ್ತು IV.
2. ಅರ್ಹತೆ – ಸಾವಿನ ಪ್ರಕರಣ ಹೊರತು ಪಡಿಸಿ ನಿವೃತ್ತಿಗೆ ಮುನ್ನ ಕನಿಷ್ಠ 15 ವರ್ಷಗಳ ಸೇವೆ.
3. ಮಾಲೀಕರ ದೇಣಿಗೆ – 3.83% ಮೂಲ ವೇತನ + ಡಿ.ಎಂ. . 01.04.2016ರಿಂದ ಅನ್ವಯ.
4. ನೌಕರರ ದೇಣಿಗೆ – ಕೊನೆಯದಾಗಿ ಪಡೆದ ಸಂಬಳದ ಮೂಲ ವೇತನ ಮತ್ತು ನಿವೃತ್ತಿ/ಸೇವೆಯಲ್ಲಿದ್ದಾಗಲೇ ಮರಣಿಸಿದ ಸಂದರ್ಭದಲ್ಲಿ ಪಡೆಯುತ್ತಿದ್ದ ಡಿ.ಎ. (ಪತ್ನಿಗೆ), ಕನಿಷ್ಠ ರೂ.10,000.
5. ವ್ಯಾಪ್ತಿ – ಈ ಯೋಜನೆಯು ನಿವೃತ್ತರಾದ ಸದಸ್ಯರ, ಆಕೆ/ಆತನ ಮಡದಿ ಮತ್ತು ಅವಲಂಬಿತ ದಿವ್ಯಚೇತನ ಮಕ್ಕಳಿಗೆ ಒಟ್ಟಾರೆ ವಾರ್ಷಿಕ ಮಿತಿಯೊಳಗೆ ಭಾರತದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೆಚ್ಚ ಭರಿಸುತ್ತದೆ.
ಹಿನ್ನೆಲೆ:
ಆಹಾರ ನಿಗಮ ಕಾಯಿದೆ 1964ರ ಅನ್ವಯ, ಆಹಾರ ಧಾನ್ಯಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಮತ್ತು ವಿತರಿಸಲು, ಸಂಗ್ರಹಿಸಲು, ದಾಸ್ತಾನು ಮಾಡಲು ಎಫ್.ಸಿ.ಐ. ಅನ್ನು 1965ರಲ್ಲಿ ಸ್ಥಾಪಿಸಲಾಯಿತು. ಕೆಲವು ವರ್ಷಗಳಲ್ಲೇ ದೇಶದ ಆಹಾರ ಭದ್ರತೆಯ ಉದ್ದೇಶ ಈಡೇರಿಕೆಯಲ್ಲಿ ಇದು ಮಹತ್ವದ ಪಾತ್ರ ವಹಿಸಿತು. ಅದರ ಕಾರ್ಯತಂತ್ರಾತ್ಮಕ ಮಹತ್ವ, ಕಾರ್ಯಾಚರಣೆಯ ಗಾತ್ರ ಮತ್ತು ಇತರ ಮಾನದಂಡಗಳನ್ನು ಅರಿತು, ಎಫ್.ಸಿ.ಐ. ಅನ್ನು ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆ ಪರಿಶಿಷ್ಟ ‘ಎ’ ಎಂದು ಪುನಾರಚಿಸಲಾಯಿತು.
AD/VBA/SH