ಪಿಎಂಇಂಡಿಯಾ
ಘನತೆವೆತ್ತ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೇ,
ತಮಿಳುನಾಡಿನ ಮಾನ್ಯ ಮುಖ್ಯಮಂತ್ರಿಗಳಾದ ಗೌರವಾನ್ವಿತ ಜಯಲಲಿತಾ ಅವರೇ,
ಸಚಿವರಾದ ಸುಷ್ಮಾ ಸ್ವರಾಜ್ ಜೀ,
ಸಚಿವ ಪೊನ್ ರಾಧಾಕೃಷ್ಣನ್ ಅವರೇ,
ನನ್ನ ಆತ್ಮೀಯ ಸ್ನೇಹಿತರೇ,
ನಮಸ್ಕಾರ
ವಣಕ್ಕಂ
ಇಂದು ಒಂದು ವಿಶೇಷ ದಿನ.
ಇಂದು, ಘನತೆವೆತ್ತ ಪುಟಿನ್ ಮತ್ತು ನನಗೆ ಕೂಡಂಕುಲಂ ಪರಮಾಣು ಸ್ಥಾವರದ ಘಟಕ 1ನ್ನು ಸಮರ್ಪಿಸುವ ಗೌರವ ಸಿಕ್ಕಿದೆ.
ಈ ಸಂದರ್ಭದಲ್ಲಿ ಹಾಜರಿರುವ ಅಧ್ಯಕ್ಷ ಪುಟಿನ್ ಅವರಿಗೆ ವಿಶೇಷವಾಗಿ ನಾನು ಆಭಾರಿಯಾಗಿದ್ದೇನೆ.
ಈ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಜೀ ಅವರೂ ಇದ್ದಾರೆ ಎಂಬುದು ನನಗೆ ಸಂತಸ ತಂದಿದೆ.
ಸ್ನೇಹಿತರೆ,
ಕೂಡಂಕುಲಂ 1 ಸಮರ್ಪಣೆಯಲ್ಲಿ ನಾವು ಭಾರತ-ರಷ್ಯಾ ಬಾಂಧವ್ಯದಲ್ಲಿ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದ್ದೇವೆ. ಇದರ ಯಶಸ್ವೀ ಪೂರ್ಣಗೊಳ್ಳುವಿಕೆಯು ನಮ್ಮ ವಿಶೇಷ ಮತ್ತು ಗೌರವಯುತ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಶಕ್ತಿಗೆ ಮತ್ತೊಂದು ಉತ್ತಮ ಉದಾಹರಣೆ ಅಷ್ಟೇ ಅಲ್ಲ,
ಇದು ನಮ್ಮ ಶಾಶ್ವತ ಗೆಳೆತನದ ಆಚರಣೆಯೂ ಆಗಿದೆ.
ಮತ್ತು, ಇದು ಈ ಕ್ಷೇತ್ರದಲ್ಲಿ ನಮ್ಮ ಸಹಯೋಗದ ಆರಂಭ ಮಾತ್ರ ಆಗಿದೆ.
ಇದು ಬಹುಶಃ ಸಾಮಾನ್ಯವಾಗಿ ತಿಳಿದಿರುವಂತೆ ಕೂಡಂಕುಲಂ 1 1000 ಮೆಗಾ ವಾಟ್, ಭಾರತದಲ್ಲಿ ಏಕೈಕ ಅತಿ ದೊಡ್ಡ ಪರಮಾಣು ವಿದ್ಯುಚ್ಛಕ್ತಿ ಕೇಂದ್ರವಲ್ಲ.
ಮುಂಬರುವ ವರ್ಷಗಳಲ್ಲಿ ನಾವು ಪರಮಾಣು ವಿದ್ಯುತ್ ಉತ್ಪಾದನೆ ಮುಂದುವರಿಸಲು ಮಹತ್ವಾಕಾಂಕ್ಷೆಯ ನಿರ್ಧಾರ ಹೊಂದಿದ್ದೇವೆ.
ಕೂಡಂಕುಲಂನಲ್ಲಿಯೇ ತಲಾ 1000 ಮೆಗಾ ವ್ಯಾಟ್ ನ ಮತ್ತೈದು ಘಟಕಗಳ ಯೋಜನೆ ರೂಪಿಸಲಾಗಿದೆ.
ನಮ್ಮ ಈ ಸಹಕಾರದ ಪಯಣದಲ್ಲಿ, ನಾವು ದೊಡ್ಡ ಪರಮಾಣು ವಿದ್ಯುತ್ ಘಟಕಗಳ ಸರಣಿಯನ್ನೇ ಸ್ಥಾಪಿಸಲು ಯೋಜಿಸಿದ್ದೇವೆ.
ಸ್ನೇಹಿತರೇ,
ಈ ದಿನದ ಕಾರ್ಯಕ್ರಮವು ಭಾರತ ಮತ್ತು ರಷ್ಯಾದ ಎಂಜಿನಿಯರುಗಳು, ವಿಜ್ಞಾನಿಗಳು ಮತ್ತು ತಂತ್ರಜ್ಞರುಗಳಿಗೆ ಸಂಭ್ರಮಿಸುವ ಸಂದರ್ಭವಾಗಿದೆ.
ನಾವು ಅವರ ಸಂಕಲ್ಪ ಮತ್ತು ಶ್ರಮಕ್ಕೆ ಗೌರವ ನಮನ ಸಲ್ಲಿಸುತ್ತೇವೆ ಮತ್ತು ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿರುವುದಕ್ಕೆ ಅವರನ್ನು ಅಭಿನಂದಿಸುತ್ತೇವೆ.
ಸ್ನೇಹಿತರೇ,
ಮಾನವನ ಅಭಿವೃದ್ಧಿಯ ಪ್ರಸಂಗ ಒಂದು ವಿಸ್ತೃತವಾದ ತಂತ್ರಜ್ಞಾನದ ಮುಂದುವರಿದ ಮತ್ತು ಬೆಳೆಯುತ್ತಿರುವ ಆರ್ಥಿಕ ಪ್ರಗತಿಯಾಗಿದೆ.
ಆದರೆ, ನಾವೆಲ್ಲರೂ ತಿಳಿದಿರುವಂತೆ, ಅದು ನಮ್ಮ ಪ್ರಕೃತಿಯ ಮೇಲೆ ಹೊರೆ ಹಾಕದೆ ಆಗಿರುವುದಲ್ಲ.
ನಾನು ಭಾರತಕ್ಕೆ ಒಂದು ದೃಷ್ಟಿ ಇಟ್ಟುಕೊಂಡಿದ್ದೇನೆ, ಅಲ್ಲಿ ನಮ್ಮ ಆರ್ಥಿಕ ಅಭಿವೃದ್ಧಿಯ ಸಾಧನೆಗಳು ನಮ್ಮ ಭೂ ತಾಯಿಗೆ ಗೌರವಯುತವಾಗಿರಬೇಕು.
ಮತ್ತು, ನಮ್ಮ ಕೈಗಾರಿಕಾ ಬೆಳವಣಿಗೆಯ ಎಂಜಿನ್ ಗಳು ಶುದ್ಧ ಇಂಧನದಿಂದ ಸಾಗುತ್ತಿರಬೇಕು.
ಕೂಡಂಕುಲಂ1 ಭಾರತದಲ್ಲಿ ಶುದ್ಧ ಇಂಧನ ಉತ್ಪಾದನೆಯನ್ನು ಹೆಚ್ಚಿಸುವ ಭಾರತದ ಮುಂದುವರಿದ ಪ್ರಯತ್ನದ ಮಹತ್ವದ ಭಾಗವಾಗಿದೆ.
ಇದು ಹಸಿರು ವೃದ್ಧಿಯ ಪಾಲುದಾರಿಕೆಯ ಹಾದಿಯಲ್ಲಿ ನಮ್ಮ ಜಂಟಿ ಬದ್ಧತೆಯ ಸಂಕೇತವೂ ಆಗಿದೆ.
ಘನತೆವೆತ್ತ ಅಧ್ಯಕ್ಷ ಪುಟಿನ್ ಅವರೇ,
ಪರಮಾಣು ವಿದ್ಯುತ್ ಉತ್ಪಾದನೆಯಲ್ಲಿ ನಮ್ಮ ಜಂಟಿ ಪ್ರಯತ್ನದ ಯಶಸ್ಸು ನಮ್ಮ ಸಹಕಾರದ ಹೆಮ್ಮೆಯ ಸಾಧನೆಯಾಗಿದೆ.
ಇದು ನಮ್ಮ ಬಾಂಧವ್ಯವನ್ನು ಸ್ಥಿರವಾಗಿ ಇಟ್ಟುಕೊಂಡು ನಮ್ಮ ಸಮಾನ ಪರಿಹಾರದ ಸಂಕಲ್ಪ ಪ್ರದರ್ಶಿಸುತ್ತದೆ.
ಮೇಲೆ ಹೇಳಿರುವುದಕ್ಕಿಂತ ಮಿಗಿಲಾಗಿ, ಇದು ನಿಮ್ಮ ವೈಯಕ್ತಿಕ ಬದ್ಧತೆ, ಸತತ ಬೆಂಬಲ ಮತ್ತು ನಮ್ಮ ಬಾಂಧವ್ಯದ ತಿರುಳು ಮತ್ತು ಲಕ್ಷಣಗಳನ್ನು ಪರಿವರ್ತಿಸುವಲ್ಲಿ ಬಲವಾದ ನಾಯಕತ್ವವನ್ನೂ ಪ್ರದರ್ಶಿಸುತ್ತದೆ.
ಮಾನ್ಯ ಅಧ್ಯಕ್ಷರೇ, ಇದಕ್ಕಾಗಿ ನಾನು, ನಿಮಗೆ ಋಣಿಯಾಗಿದ್ದೇನೆ
ಭಾರತದ ಜನತೆ ನಿಮ್ಮ ಶ್ರೇಷ್ಠ ದೇಶದ ಜನರೊಂದಿಗೆ ಸ್ವಾಭಾವಿಕವಾಗಿಯೇ ಬೆರೆತುಹೋಗಿದ್ದಾರೆ.
ಮತ್ತು, ವೈಯಕ್ತಿಕವಾಗಿ, ನಾನು ಯಾವಾಗಲೂ ನಮ್ಮ ಬಾಂಧವ್ಯವನ್ನು ಗೌರವಿಸುತ್ತೇನೆ.
ಹೀಗಾಗಿ, ಇದು ಇಂದು ನಾವು ಕೂಡಂಕುಲಂ ಪರಮಾಣು ವಿದ್ಯುತ್ ಸ್ಥಾವರದ ಘಟಕ 1ನ್ನು ಜಂಟಿಯಾಗಿ ಸಮರ್ಪಿಸಲು ಸೇರಿದ್ದೇವೆ ಅಂದಷ್ಟೇ ಅಲ್ಲ, ಇದು ನಮ್ಮ ಸ್ನೇಹ ಮತ್ತು ಸಹಕಾರದ ಚೈತನ್ಯಶಕ್ತಿ ಮತ್ತು ಬಲವಾಗಿದೆ.
ಭಾರತ-ರಷ್ಯಾ ಬಾಂಧವ್ಯ ದೀರ್ಘಕಾಲ ಬಾಳಲಿ!
ಈ ಸಮರ್ಪಣಾ ಸಮಾರಂಭದಲ್ಲಿ ನನ್ನೊಂದಿಗೆ ಸೇರಿದ್ದಕ್ಕಾಗಿ ನಾನು ಮತ್ತೊಮ್ಮೆ ತಮಗೆ ಧನ್ಯವಾದ ಅರ್ಪಿಸುತ್ತೇನೆ ಮಾನ್ಯ ಅಧ್ಯಕ್ಷರೇ,
ಜೊತೆಗೆ, ನಮ್ಮೊಂದಿಗೆ ಉಪಸ್ಥಿತರಿರುವ ಜಯಲಲಿತಾಜೀ ಅವರಿಗೂ ನನ್ನ ಧನ್ಯವಾದಗಳು.
ಧನ್ಯವಾದಗಳು.
AD/SH
Kundankulum 1 is an important addition to India's continuing efforts to scale up production of clean energy in India: PM Modi
— PMO India (@PMOIndia) August 10, 2016
Kudankulam 1 also signals our joint commitment to build pathways of partnership for green growth: PM @narendramodi
— PMO India (@PMOIndia) August 10, 2016
I have always deeply valued our friendship with Russia & it is fitting that we jointly dedicate Kudankulam Nuclear Power Plant Unit 1: PM
— PMO India (@PMOIndia) August 10, 2016