ಪಿಎಂಇಂಡಿಯಾ
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಕಾರ್ಯಕ್ರಮದಲ್ಲಿ ಹಾಜರಿರುವ ಉತ್ತರ ಪ್ರದೇಶದ ಉತ್ಸಾಹಿ ಮತ್ತು ಕರ್ಮಯೋಗಿ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಜೀ, ಪ್ರಯಾಗರಾಜ್ ಕ್ಷೇತ್ರದ ಜನಪ್ರಿಯ ನಾಯಕ ಮತ್ತು ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯಾ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಸಾದ್ವಿ ನಿರಂಜನ ಜ್ಯೋತೀ ಜೀ, ಮತ್ತು ಶ್ರೀಮತಿ ಅನುಪ್ರಿಯಾ ಪಟೇಲ್ ಜೀ, ಉತ್ತರ ಪ್ರದೇಶ ಸರಕಾರದ ಸಚಿವರಾದ ಡಾ. ಮಹೇಂದ್ರ ಸಿಂಗ್ ಜೀ, ರಾಜೇಂದ್ರ ಪ್ರತಾಪ್ ಸಿಂಗ್ ಮೋತಿ ಜೀ, ಶ್ರೀ ಸಿದ್ಧಾರ್ಥ ನಾಥ್ ಸಿಂಗ್ ಜೀ, ನಂದಗೋಪಾಲ್ ಗುಪ್ತಾ ನಂದಿ ಜೀ, ಶ್ರೀಮತಿ ಸ್ವಾತಿ ಸಿಂಗ್ ಜೀ, ಶ್ರೀಮತಿ ಗುಲಾಬೋ ದೇವೀ ಜೀ ಮತ್ತು ಶೀಮತಿ ನೀಲಿಮಾ ಕಟಿಯಾರ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯಾಗಿರುವ ರೀಟಾ ಬಹುಗುಣಾ ಜೀ, ಶ್ರೀಮತಿ ಹೇಮಾ ಮಾಲಿನಿ ಜೀ,, ಶ್ರೀಮತಿ ಕೇಸರಿ ದೇವಿ ಪಟೇಲ್ ಜೀ, ಡಾ. ಸಂಘಮಿತ್ರ ಮೌರ್ಯಾ ಜೀ, ಶ್ರೀಮತಿ ಗೀತಾ ಶಾಖ್ಯಾ ಜೀ, ಶ್ರೀಮತಿ ಕಾಂತಾ ಕರದಮ್ ಜೀ, ಶ್ರೀಮತಿ ಸೀಮಾ ದ್ವಿವೇದಿ ಜೀ, ಮತ್ತು ಡಾ. ರಮೇಶ ಚಂದ ಬಿಂಡ್ ಜೀ, ಪ್ರಯಾಗರಾಜ್ ಮೇಯರ್ ಶ್ರೀಮತಿ ಅಭಿಲಾಷಾ ಗುಪ್ತಾ ಜೀ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ. ವಿ.ಕೆ.ಸಿಂಗ್ ಜೀ, ಎಲ್ಲಾ ಶಾಸಕರೇ ಮತ್ತು ಇತರ ಜನ ಪ್ರತಿನಿಧಿಗಳೇ, ಉತ್ತರ ಪ್ರದೇಶದ ಶಕ್ತಿಯ ಸಂಕೇತವಾಗಿರುವ ನನ್ನ ಮಾತೆಯರೇ ಮತ್ತು ಸಹೋದರಿಯರೇ! ನಿಮಗೆಲ್ಲ ನನ್ನ ನಮಸ್ಕಾರಗಳು !
ಗಂಗಾ ಮಾತೆ, ಯಮುನಾ ಮತ್ತು ಸರಸ್ವತಿಯ ಪವಿತ್ರ ದಂಡೆಯ ಮೇಲಿರುವ ಪ್ರಯಾಗರಾಜ್ ಭೂಮಿಗೆ ನಾನು ಶಿರಬಾಗಿ ನಮಿಸುತ್ತೇನೆ. ಧರ್ಮ, ಜ್ಞಾನ ಮತ್ತು ನ್ಯಾಯದ ತ್ರಿವೇಣಿ ಹರಿಯುವ ಭೂಮಿ ಇದು. ದೇವಾಲಯಗಳ ದೇವಾಲಯವಾದ ಪ್ರಯಾಗರಾಜ್ ಸದಾ ಸಾಟಿ ಇಲ್ಲದ ಶುದ್ಧತೆ, ಪಾವಿತ್ರ್ಯ ಮತ್ತು ಶಕ್ತಿಯನ್ನು ಸೂಸುತ್ತಿರುತ್ತದೆ. ನಾನು ಈ ಪುಣ್ಯ ಭೂಮಿಗೆ ಕಳೆದ ವರ್ಷದ ಫೆಬ್ರವರಿಯಲ್ಲಿ ಕುಂಭದ ಸಮಯದಲ್ಲಿ ಬಂದಿದ್ದೆ ಮತ್ತು ಇಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದೆ ಮತ್ತು ಅಲೌಕಿಕವಾದ ಆನಂದವನ್ನು ಅನುಭವಿಸಿದ್ದೆ. ತೀರ್ಥರಾಜ್ ಪ್ರಯಾಗದ ಈ ಪವಿತ್ರ ಭೂಮಿಗೆ ನಾನು ಕೈಜೋಡಿಸಿ ಶಿರಬಾಗಿ ನಮಿಸುತ್ತೇನೆ. ಇಂದಿನ ದಿನ ಹಿಂದಿಯ ಪ್ರಖ್ಯಾತ ಲೇಖಕ ಮಹಾವೀರ್ ಪ್ರಸಾದ್ ದ್ವಿವೇದಿ ಜೀ ಅವರ ಪುಣ್ಯತಿಥಿ. ಅವರು ಬಹಳ ದೀರ್ಘ ಅವಧಿಯವರೆಗೆ “ಸರಸ್ವತಿ” ಯ ಸಂಪಾದಕರಾಗಿದ್ದರು. ಅವರಿಗೆ ನಾನು ನನ್ನ ಗೌರವವನ್ನು ಸಲ್ಲಿಸುತ್ತೇನೆ.
ಮಾತೆಯರೇ ಮತ್ತು ಸಹೋದರರೇ,
ಗಂಗಾ–ಯಮುನಾ–ಸರಸ್ವತಿಗಳ ಸಂಗಮ ಭೂಮಿ ಪ್ರಯಾಗರಾಜ್. ಇದು ಸಾವಿರಾರು ವರ್ಷಗಳಿಂದ ನಮ್ಮ ಮಾತಾ ಶಕ್ತಿಯ ಸಂಕೇತ. ಇಂದು ಈ ಯಾತ್ರಾ ನಗರಿ ಮಹಿಳೆಯರು ಮತ್ತು ಶಕ್ತಿಯ ಅದ್ಭುತ ಸುಂದರ ಸಂಗಮಕ್ಕೆ ಸಾಕ್ಷಿಯಾಗಿದೆ. ನೀವೆಲ್ಲರೂ ಇಲ್ಲಿಗೆ ಬಂದು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವುದು ಮತ್ತು ಆಶೀರ್ವಾದಗಳನ್ನು ನೀಡುತ್ತಿರುವುದು ನಮ್ಮ ಅದೃಷ್ಟವನ್ನು ತೋರಿಸುತ್ತಿದೆ. ಮಾತೆಯರೇ ಮತ್ತು ಸಹೋದರಿಯರೇ, ನಾನು ಸ್ವಸಹಾಯ ಗುಂಪುಗಳ ಜೊತೆಗೆ ಸಂಬಂಧ ಹೊಂದಿರುವ ಸಹೋದರಿಯರು, ಬ್ಯಾಂಕಿಂಗ್ ಸಖಿಗಳು ಮತ್ತು ಕನ್ಯಾ ಸುಮಂಗಲ ಯೋಜನಾದ ಫಲಾನುಭವಿಗಳ ಜೊತೆ ಇಲ್ಲಿಗೆ ಬರುವುದಕ್ಕೆ ಮೊದಲು ಸಂವಾದ ನಡೆಸಿದೆ. ಎಂತಹ ಭಾವನಾತ್ಮಕ ಕ್ಷಣಗಳು ಮತ್ತು ಭರವಸೆಯುಕ್ತ, ವಿಶ್ವಾಸದ ನುಡಿಗಳು! ತಾಯಂದಿರೇ ಮತ್ತು ಸಹೋದರಿಯರೇ, ಇಲ್ಲೊಂದು ಹೇಳಿಕೆ ಇದೆ-“प्रत्यक्षे किम् प्रमाणम्”
ಪ್ರತ್ಯಕ್ಷವಾಗಿರುವುದಕ್ಕೆ ಯಾವುದೇ ಸಾಕ್ಷಿ ಬೇಕಿಲ್ಲ. ಉತ್ತರ ಪ್ರದೇಶದ ಅಭಿವೃದ್ಧಿಗೆ ಮಾಡಿರುವ ಪ್ರಯತ್ನಗಳನ್ನು, ಮಹಿಳಾ ಸಶಕ್ತೀಕರಣಕ್ಕೆ ಮಾಡಿರುವ ಪ್ರಯತ್ನಗಳನ್ನು ಇಡೀ ದೇಶವೇ ನೋಡುತ್ತಿದೆ. ಈಗಷ್ಟೇ ನನಗೆ ಮುಖ್ಯಮಂತ್ರಿ ಕನ್ಯಾ ಸುಮಂಗಲ ಯೋಜನಾ ಅಡಿಯಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಒಂದು ಲಕ್ಷಕ್ಕೂ ಅಧಿಕ ಫಲಾನುಭವಿ ಹೆಣ್ಣು ಮಕ್ಕಳ ಖಾತೆಗಳಿಗೆ ವರ್ಗಾಯಿಸುವ ಅವಕಾಶ ದೊರಕಿತು. ಈ ಯೋಜನೆ ಹಳ್ಳಿಗಳ ಮತ್ತು ಬಡ ಹೆಣ್ಣುಮಕ್ಕಳಿಗೆ ಬೆಂಬಲ ಒದಗಿಸುವ ಬಹಳ ದೊಡ್ಡ ಮಾಧ್ಯಮವಾಗುತ್ತಿದೆ. ಉತ್ತರ ಪ್ರದೇಶ ಆರಂಭ ಮಾಡಿದ “ಬ್ಯಾಂಕ್ ಸಖಿ” ಆಂದೋಲನ ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸುತ್ತಿರುವುದು ಮಾತ್ರವಲ್ಲ ಅವರ ಬದುಕಿನಲ್ಲಿ ಬದಲಾವಣೆಗಳನ್ನು ತರುತ್ತಿದೆ. ನೇರ ನಗದು ವರ್ಗಾವಣೆ (ಡಿ.ಬಿ.ಟಿ.) ಮೂಲಕ ಅವರ ಖಾತೆಗಳಿಗೆ ಜಮೆಯಾಗುತ್ತಿರುವ ವಿವಿಧ ಸರಕಾರಿ ಯೋಜನೆಗಳ ಹಣವನ್ನು ಪಡೆಯಲು ಅವರು ಬ್ಯಾಂಕುಗಳಿಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಅವರು ಹಳ್ಳಿಗಳಲ್ಲಿ ಇರುವ ತಮ್ಮ ಮನೆಗಳಲ್ಲಿ “ಬ್ಯಾಂಕ್ ಸಖಿ” ಸಹಾಯದಿಂದ ತಮ್ಮ ಹಣವನ್ನು ಪಡೆದುಕೊಳ್ಳಬಹುದು. ಅಂದರೆ “ಬ್ಯಾಂಕ್ ಸಖಿ” ಬ್ಯಾಂಕನ್ನು ಹಳ್ಳಿಗಳಿಗೆ ತಂದಿದೆ. ಇದು ಸಣ್ಣ ಕೆಲಸ ಎಂದು ಭಾವಿಸುವವರಿಗೆ ನಾನು ಇದು ಎಷ್ಟು ಮುಖ್ಯ ಮತ್ತು “ಬ್ಯಾಂಕ್ ಸಖಿ”ಯರ ಪಾತ್ರ ಎಷ್ಟು ಮಹತ್ವದ್ದು ಎಂದು ಹೇಳಲು ಇಚ್ಛಿಸುತ್ತೇನೆ. ಉತ್ತರ ಪ್ರದೇಶ ಸರಕಾರ ಸುಮಾರು 75 ಸಾವಿರ ಕೋಟಿ ವರ್ಗಾವಣೆಗಳ ಈ ಹೊಣೆಗಾರಿಕೆಯನ್ನು ಈ “ಬ್ಯಾಂಕ್ ಸಖಿ” ಗಳಿಗೆ ವಹಿಸಿದೆ. ಗ್ರಾಮಗಳಲ್ಲಿ ವಾಸಿಸುವ ನನ್ನ ಸಹೋದರಿಯರು ಮತ್ತು ಹೆಣ್ಣು ಮಕ್ಕಳು 75,000 ಕೋ.ರೂ.ಗಳ ವ್ಯವಹಾರ ನಡೆಸುತ್ತಾರೆ. ವರ್ಗಾವಣೆ ಹೆಚ್ಚಾದಷ್ಟು ಆದಾಯವೂ ಹೆಚ್ಚು!. ಈ “ಬ್ಯಾಂಕ್ ಸಖಿ”ಯರಲ್ಲಿ ಹೆಚ್ಚಿನವರು ಕೆಲವು ವರ್ಷಗಳ ಹಿಂದೆ ತಮ್ಮದೇ ಬ್ಯಾಂಕ್ ಖಾತೆಯನ್ನು ಕೂಡಾ ಹೊಂದಿಲ್ಲದೇ ಇದ್ದಂತಹವರು. ಆದರೆ ಇಂದು ಈ ಮಹಿಳೆಯರ ಕೈಯಲ್ಲಿ ಡಿಜಿಟಲ್ ಬ್ಯಾಂಕಿಂಗಿನ ಶಕ್ತಿ ಇದೆ. ಆದುದರಿಂದ ದೇಶವು ಉತ್ತರ ಪ್ರದೇಶದಲ್ಲಿ ಹೇಗೆ ಕೆಲಸಗಳನ್ನು ಮಾಡಲಾಗುತ್ತದೆ ಎಂಬುದನ್ನು ಗಮನವಿಟ್ಟು ವೀಕ್ಷಿಸುತ್ತಿದೆ. ಮತ್ತು ಆದುದರಿಂದ ನಾನು ಹೇಳುತ್ತೇನೆ: “प्रत्यक्षे किम् प्रमाणम्”
ಮಾತೆಯರೇ ಮತ್ತು ಸಹೋದರಿಯರೇ,
ಮಕ್ಕಳ ಮತ್ತು ಗರ್ಭಿಣಿಯರ ಹಾಗು ಹಾಲೂಡಿಸುವ ಮಹಿಳೆಯರ ಪಡಿತರವನ್ನು ಮನೆಗೆ ತಲುಪಿಸುವ ಜವಾಬ್ದಾರಿಯನ್ನೂ ಉತ್ತರ ಪ್ರದೇಶ ಸರಕಾರ ಮಹಿಳೆಯರಿಗೆ ಒಪ್ಪಿಸಿದೆ. ಈ ಪೋಷಕಾಂಶಯುಕ್ತ ಆಹಾರವನ್ನು ಈಗ ಮಹಿಳಾ ಸ್ವ ಸಹಾಯ ಗುಂಪುಗಳು ತಯಾರಿಸುತ್ತಿವೆ. ಇದು ಕೂಡಾ ವಾರ್ಷಿಕ ಸಾವಿರಾರು ಕೋಟಿ ವ್ಯವಹಾರವನ್ನು ಒಳಗೊಂಡಿರುವ ಬೃಹತ್ ಕೆಲಸವಾಗಿದೆ. ಮಹಿಳಾ ಸ್ವ ಸಹಾಯ ಗುಂಪುಗಳು ಇದರಿಂದ ಆದಾಯವನ್ನು ಗಳಿಸುತ್ತಿವೆ ಮತ್ತು ಹಳ್ಳಿಗಳ ರೈತರು ಕೂಡಾ 202 ಪೂರಕ ಪೋಷಕಾಂಶ ತಯಾರಿಕಾ ಘಟಕಗಳಿಂದ ಭಾರೀ ಪ್ರಯೋಜನ ಪಡೆಯಲಿದ್ದಾರೆ. ಇದಕ್ಕೆ ಇಂದು ಶಿಲಾನ್ಯಾಸ ಮಾಡಲಾಗಿದೆ. ಮಹಿಳೆಯರು ಗ್ರಾಮ, ಹಳ್ಳಿಗಳಿಂದಲೇ ಬೆಳೆಗಳನ್ನು, ಆಹಾರ ಧಾನ್ಯಗಳನ್ನು ಖರೀದಿಸಿ ಅವರ ಕಾರ್ಖಾನೆಗಳಲ್ಲಿ ಪೋಷಕಾಂಶಯುಕ್ತ ಆಹಾರವನ್ನು ತಯಾರಿಸುತ್ತಾರೆ. ಈ ಸಶಕ್ತೀಕರಣ ಪ್ರಯತ್ನಗಳು ಉತ್ತರ ಪ್ರದೇಶದಲ್ಲಿಯ ಮಹಿಳೆಯರ ಜೀವನವನ್ನು ಬದಲಾಯಿಸಲು ಆರಂಭ ಮಾಡಿವೆ. ಸರಕಾರ ವಿವಿಧ ವಲಯಗಳ ಸ್ವ ಸಹಾಯ ಗುಂಪುಗಳಿಗೆ ನೀಡುವ ಹಣಕಾಸು ನೆರವಿನ ಕಂತಿನ ಹಣವಾದ 1,000 ಕೋ.ರೂ.ಗಳನ್ನು ವರ್ಗಾಯಿಸುವ ಅವಕಾಶ ನನಗಿಂದು ಲಭಿಸಿತು. ಈಗ ಉತ್ತರ ಪ್ರದೇಶದ ಅಭಿವೃದ್ಧಿಯೆಂಬ ತೊರೆಯ ಹರಿವನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಾಗದು. ಉತ್ತರ ಪ್ರದೇಶದ ಮಹಿಳೆಯರು, ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಈ ಮೊದಲಿನ ಸರಕಾರಗಳ ಶಕೆ ಮತ್ತೆ ಮರಳಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಎರಡು ಇಂಜಿನ್ ಗಳ ಸರಕಾರದಿಂದ ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಲಭಿಸುತ್ತಿರುವ ಅಭೂತಪೂರ್ವ ಭದ್ರತೆ ಮತ್ತು ಗೌರವ ಅವರ ಘನತೆಯನ್ನು ಹೆಚ್ಚಿಸಿದೆ.
ಸಹೋದರರೇ ಮತ್ತು ಸಹೋದರಿಯರೇ,
ಮಾತೆಯರ, ಸಹೋದರಿಯರ ಮತ್ತು ಹೆಣ್ಣು ಮಕ್ಕಳ ಜೀವನ ತಲೆಮಾರುಗಳನ್ನು ಪ್ರಭಾವಿಸುತ್ತದೆ ಮತ್ತು ತಲೆಮಾರುಗಳನ್ನು ನಿರ್ಮಿಸುತ್ತದೆ. ಹೆಣ್ಣುಮಕ್ಕಳ ಸಾಮರ್ಥ್ಯ, ಆಕೆಯ ಶಿಕ್ಷಣ ಮತ್ತು ಆಕೆಯ ಕೌಶಲ್ಯ ಕುಟುಂಬದ ಮಾತ್ರವಲ್ಲ ಸಮಾಜದ ಮತ್ತು ರಾಷ್ಟ್ರದ ದಿಕ್ಕನ್ನು ನಿರ್ಧರಿಸುತ್ತದೆ. ಆದುದರಿಂದ ನಾವು 2014 ರಲ್ಲಿ ಭಾರತ ಮಾತೆಯ ಭಾರೀ ಕನಸುಗಳನ್ನು ಮತ್ತು ಆಶೋತ್ತರಗಳನ್ನು ಕಾರ್ಯರೂಪಕ್ಕೆ ತರಲು ಉಪಕ್ರಮಗಳನ್ನು ಆರಂಭ ಮಾಡಿದೆವು. ದೇಶದ ಹೆಣ್ಣುಮಕ್ಕಳ ನಂಬಿಕೆಗೆ ಹೊಸ ಶಕ್ತಿಯನ್ನು ನೀಡಲಾರಂಭಿಸಿದೆವು. ಆದುದರಿಂದ ನಾವು ಹೆಣ್ಣುಮಕ್ಕಳ ಹುಟ್ಟಿನಿಂದ ಆರಂಭಗೊಳ್ಳುವ ಜೀವನ ಚಕ್ರದ ಪ್ರತೀ ಹಂತದಲ್ಲಿಯೂ ಮಹಿಳೆಯರನ್ನು ಸಶಕ್ತೀಕರಣ ಮಾಡಲು ಯೋಜನೆಗಳನ್ನು ಆಂದೋಲನಗಳನ್ನು ರೂಪಿಸಿದೆವು.
ಸ್ನೇಹಿತರೇ,
ನಾವು ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನದ ಮೂಲಕ ಸಮಾಜದ ಅಂತರಾತ್ಮವನ್ನು ಜಾಗೃತಗೊಳಿಸಲು ಪ್ರಯತ್ನ ಮಾಡಿದೆವು. ಹೆಣ್ಣು ಮಕ್ಕಳನ್ನು ಗರ್ಭದಲ್ಲಿರುವಾಗಲೇ ಕೊಲ್ಲಬಾರದು ಮತ್ತು ಅವರು ಹುಟ್ಟಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಜಾರಿಗೆ ತಂದೆವು. ಇಂದು ಅದರ ಫಲಿತಾಂಶ ಏನೆಂದರೆ ದೇಶದ ಹಲವಾರು ರಾಜ್ಯಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ. ಹೆರಿಗೆ ರಜೆಯನ್ನು ಆರು ತಿಂಗಳ ಕಾಲ ವಿಸ್ತರಿಸಲಾಗಿದೆ. ಇದರಿಂದ ತಾಯಂದಿರು ತಮ್ಮ ಮಕ್ಕಳ ಜನನದ ತಕ್ಷಣ ಆರಂಭಿಕ ಆರೈಕೆಯ ಬಗ್ಗೆ ಚಿಂತೆ ಮಾಡದೆ ಕೆಲಸ ಮುಂದುವರೆಸಬಹುದು.
ಸ್ನೇಹಿತರೇ,
ಗರ್ಭಿಣಿಯರ ಆರೈಕೆ ಬಡ ಕುಟುಂಬಗಳಲ್ಲಿ ಬಹಳ ಚಿಂತೆಗೆ ಕಾರಣವಾಗುವ ಸಂಗತಿಯಾಗಿದೆ. ಇದಕ್ಕಾಗಿ ನಾವು ಗರ್ಭಿಣಿ ಮಹಿಳೆಯರಿಗೆ ಸೋಂಕು ನಿರೋಧಕವನ್ನು ನೀಡುವುದಕ್ಕೆ, ಹೆರಿಗೆಯನ್ನು ಆಸ್ಪತ್ರೆಗಳಲ್ಲಿ ನಡೆಸುವುದಕ್ಕೆ ಮತ್ತು ಗರ್ಭ ಧರಿಸಿದ ಅವಧಿಯಲ್ಲಿ ಪೋಷಕಾಂಶ ಒದಗಣೆಗೆ ವಿಶೇಷ ಗಮನವನ್ನು ನೀಡಿದೆವು. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನಾ ಅಡಿಯಲ್ಲಿ ಗರ್ಭಿಣಿ ಮಹಿಳೆಯರ ಬ್ಯಾಂಕ್ ಖಾತೆಗೆ 5,000 ರೂಪಾಯಿಗಳನ್ನು ಠೇವಣಿ ಮಾಡಲಾಗುತ್ತದೆ, ಇದರಿಂದ ಅವರಿಗೆ ಸೂಕ್ತ ಆಹಾರ ಪಡೆದುಕೊಳ್ಳಲು ಸಹಯವಾಗುತ್ತದೆ. ಇದುವರೆಗೆ 10,000 ಕೋ.ರೂ.ಗಳನ್ನು ಎರಡು ಕೋಟಿಗೂ ಅಧಿಕ ಸಹೋದರಿಯರಿಗೆ ನೀಡಲಾಗಿದೆ.
ಸ್ನೇಹಿತರೇ,
ವಿದ್ಯಾರ್ಥಿನಿಯರು ಸರಿಯಾಗಿ ಕಲಿಯಲಿ ಎಂಬುದಕ್ಕಾಗಿ ಮತ್ತು ಅವರು ಮಧ್ಯದಲ್ಲಿ ಶಾಲೆ ತೊರೆಯಬಾರದು ಎಂಬ ನಿಟ್ಟಿನಲ್ಲಿ ನಾವು ನಿರಂತರ ಕಾಳಜಿ ವಹಿಸುತ್ತಿದ್ದೇವೆ. ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣವಿರಲಿ, ಅಥವಾ ಬಡವರಲ್ಲಿ ಬಡವರಿಗೆ ಸ್ಯಾನಿಟರಿ ಪ್ಯಾಡ್ ಲಭ್ಯವಾಗುವಂತೆ ಮಾಡುವುದಿರಲಿ, ಇಂತಹ ಯಾವುದೇ ಪ್ರಯತ್ನಗಳನ್ನು ನಡೆಸುವುದರಲ್ಲಿ ನಮ್ಮ ಸರಕಾರ ಹಿಂದೆ ಬಿದ್ದಿಲ್ಲ. ಸುಕನ್ಯಾ ಸಮೃದ್ಧಿ ಯೋಜನಾ ಅಡಿಯಲ್ಲಿ 2.5 ಕೋಟಿ ಹೆಣ್ಣು ಮಕ್ಕಳ ಖಾತೆಗಳನ್ನು ತೆರೆಯಲಾಗಿದೆ. ಅವರು ಬೆಳೆದಂತೆ ಅವರ ಕನಸುಗಳನ್ನು ಈಡೇರಿಸುವಂತೆ ಮಾಡಲು ಅನುಕೂಲವಾಗುವಂತೆ ಈ ಹಣಕ್ಕೆ ಹೆಚ್ಚು ಬಡ್ಡಿಯನ್ನು ನಿಗದಿ ಮಾಡಲಾಗಿದೆ. ಶಾಲೆಯಿಂದ ಹಿಡಿದು ಕಾಲೇಜುಗಳವರೆಗೆ ಮತ್ತು ಅವರ ಮನೆವಾರ್ತೆಯವರೆಗೆ ಅವರಿಗೆ ಅನುಕೂಲತೆಗಳನ್ನು ಒದಗಿಸಿಕೊಡಲು ಮತ್ತು ಮಹಿಳೆಯರ ಆರೋಗ್ಯ ರಕ್ಷಣೆ ಮಾಡಲು ಅತಿ ಹೆಚ್ಚು ಆದ್ಯತೆಯನ್ನು ಗಮನವನ್ನು ಕೊಡಲಾಗಿದೆ. ಸ್ವಚ್ಛ ಭಾರತ ಅಭಿಯಾನದ ಮೂಲಕ ಬಡವರಲ್ಲಿ ಬಡ ಸಹೋದರಿಯರಿಗೆ ಕೋಟ್ಯಾಂತರ ಶೌಚಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ಅವರ ಘನತೆಯನ್ನು ಹೆಚ್ಚಿಸಲಾಗಿದೆ ಮತ್ತು ಅವರ ಜೀವನ ಈಗ ಹೆಚ್ಚು ಅವಕಾಶಗಳನ್ನು ಒಳಗೊಂಡಿದೆ. ಉಜ್ವಲ ಯೋಜನೆ ಅಡಿಯಲ್ಲಿ ಬಡವರಲ್ಲಿ ಬಡ ಸಹೋದರಿಯರಿಗೆ ಅನಿಲ ಸಂಪರ್ಕ ಸೌಲಭ್ಯಗಳನ್ನು ಒದಗಿಸಲಾಗಿದೆ ಮತ್ತು ಮನೆಗಳಿಗೆ ಕೊಳವೆ ಮೂಲಕ ನೀರಿನ ಸವಲತ್ತನ್ನು ಖಾತ್ರಿಪಡಿಸಲಾಗಿದೆ.
ಸ್ನೇಹಿತರೇ,
ಆಯುಷ್ಮಾನ್ ಭಾರತ್ ಯೋಜನೆಯಿಂದ ಬಹಳ ಪ್ರಯೋಜನ ಪಡೆದವರೆಂದರೆ ನಮ್ಮ ಸಹೋದರಿಯರು.ಆಸ್ಪತ್ರೆಗಳಲ್ಲಿ ಹೆರಿಗೆ ಅಥವಾ ಇತರ ಚಿಕಿತ್ಸೆ ಇರಲಿ, ಹಣಕಾಸಿನ ಕೊರತೆಯಿಂದ ನಮ್ಮ ಸಹೋದರಿಯರ ಜೀವ ಅಪಾಯವನ್ನು ಎದುರಿಸುತ್ತಿತ್ತು. 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ಸೌಲಭ್ಯದಿಂದಾಗಿ ಅವರ ಚಿಂತೆಗಳು ನಿವಾರಣೆಯಾದವು. ಮಾತೆಯರು ಮತ್ತು ಸಹೋದರಿಯರಿಗೆ ಭಾರತೀಯ ಸಮಾಜದಲ್ಲಿ ಅತಿಮುಖ್ಯ ಸ್ಥಾನಮಾನವನ್ನು ನೀಡಲಾಗಿದೆ. ಆದರೆ ಇಂದು ಒಂದು ವಿಷಯದ ಬಗ್ಗೆ ಇಡೀ ದೇಶದ ಗಮನವನ್ನು ಸೆಳೆಯಲು ಇಚ್ಛಿಸುತ್ತೇನೆ. ದಶಕಗಳಿಂದ ಮತ್ತು ಶತಮಾನಗಳಿಂದ ಇಂತಹ ಒಂದು ವ್ಯವಸ್ಥೆ ಜಾರಿಯಲ್ಲಿತ್ತು, ಅದೆಂದರೆ ಪ್ರತೀ ಮನೆ ಮತ್ತು ಆಸ್ತಿಯ ಮೇಲೆ ಪುರುಷರಿಗಷ್ಟೇ ಹಕ್ಕು ಸಾಧಿತವಾಗಿರುತ್ತಿತ್ತು. ಅದು ಮನೆ ಇರಲಿ, ಕೃಷಿ ಭೂಮಿ ಇರಲಿ, ಕೆಲಸ ಅಥವಾ ಅಂಗಡಿ ಇರಲಿ ಪುರುಷರಷ್ಟೇ ಹಕ್ಕುದಾರರಾಗಿ ಇರುತ್ತಿದ್ದರು. ಇಂದು ನಮ್ಮ ಸರಕಾರದ ಯೋಜನೆಗಳು ಈ ಅಸಮಾನತೆಯನ್ನು ತೊಡೆದು ಹಾಕುತ್ತಿವೆ. ಪ್ರಧಾನ ಮಂತ್ರಿ ಆವಾಸ್ ಯೋಜನಾ ಇದಕ್ಕೆ ಬಹಳ ದೊಡ್ಡ ಉದಾಹರಣೆ. ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಹಸ್ತಾಂತರಿಸಲಾಗುತ್ತಿರುವ ಮನೆಗಳು ಆದ್ಯತೆಯ ಆಧಾರದಲ್ಲಿ ಮಹಿಳೆಯರ ಹೆಸರಿನಲ್ಲಿರುತ್ತವೆ. ನಾನು ಉತ್ತರ ಪ್ರದೇಶದ ಬಗ್ಗೆಯೇ ಮಾತನಾಡುವುದಾದರೆ ಪಿ.ಎಂ. ಆವಾಸ್ ಯೋಜನಾ ಅಡಿಯಲ್ಲಿ 30 ಲಕ್ಷಕ್ಕೂ ಅಧಿಕ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳಲ್ಲಿ ಸುಮಾರು 25 ಲಕ್ಷ ಮನೆಗಳು ಮಹಿಳೆಯರ ಹೆಸರಿನಲ್ಲಿ ನೊಂದಾಯಿಸಲ್ಪಟ್ಟಿವೆ. 25 ಲಕ್ಷ ಮಹಿಳೆಯರು ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಅವರ ಮನೆಯನ್ನು ಪಡೆದುಕೊಂಡಿದ್ದಾರೆ, ಕಲ್ಪಿಸಿಕೊಳ್ಳಬಲ್ಲಿರಾ ನೀವು. ತಲೆಮಾರುಗಳಿಂದ ಮಹಿಳೆಯರ ಹೆಸರಿನಲ್ಲಿ ಯಾವುದೇ ಆಸ್ತಿ ಹೊಂದಿಲ್ಲದ ಮನೆತನಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರ ಹೆಸರಿನಲ್ಲಿ ಮನೆಗಳನ್ನು ನೊಂದಾಯಿಸಲಾಗಿದೆ. ಇದು ನೈಜವಾದ ಮಹಿಳಾ ಸಶಕ್ತೀಕರಣ ಮತ್ತು ಅಭಿವೃದ್ಧಿ.
ತಾಯಂದಿರೇ ಮತ್ತು ಸಹೋದರಿಯರೇ,
ಇಂದು ನಾನು ನಿಮಗೆ ಇನ್ನೊಂದು ಯೋಜನೆಯ ಬಗ್ಗೆ ಮಾಹಿತಿ ನೀಡಲು ಇಚ್ಛಿಸುತ್ತೇನೆ. ಇದು ಕೇಂದ್ರ ಸರಕಾರದ ಸ್ವಾಮಿತ್ವ ಯೋಜನೆ. ಈ ಸ್ವಾಮಿತ್ವ ಯೋಜನೆ ಅಡಿಯಲ್ಲಿ ದೇಶಾದ್ಯಂತ ಹಳ್ಳಿಗಳಲ್ಲಿರುವ ಮನೆಗಳನ್ನು ಮತ್ತು ಭೂಮಿಯನ್ನು ಡ್ರೋನ್ ಗಳನ್ನು ಬಳಸಿ ಮ್ಯಾಪ್ ಮಾಡಲಾಗುತ್ತದೆ ಮತ್ತು “ಘರೌನಿ”ಗಳನ್ನು ಅಥವಾ ಆಸ್ತಿ ಪತ್ರಗಳನ್ನು, ದಾಖಲೆಗಳನ್ನು ಮಾಲಕರಿಗೆ ನೀಡಲಾಗುತ್ತದೆ. “ಘರೌನಿ”ಗಳನ್ನು ನೀಡುವಾಗ ಮಹಿಳೆಯರಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಮುಂದಿನ ಕೆಲವು ವರ್ಷಗಳಲ್ಲಿ ಯೋಗೀ ಜೀ ಸರಕಾರ ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಇರುವ ಪ್ರತೀ ಮನೆಗಳ ನಕ್ಷೆಯನ್ನು ತಯಾರಿಯನ್ನು ಪೂರ್ಣಗೊಳಿಸಿ “ಘರೌನಿ”ಗಳನ್ನು ಹಸ್ತಾಂತರಿಸಲಿದೆ. ಆಗ ಮನೆಯ ಪತ್ರಗಳು, ದಾಖಲೆಗಳು, ಮಹಿಳೆಯರ ಹೆಸರಿನಲ್ಲಿ, ತಾಯಂದಿರ ಹೆಸರಿನಲ್ಲಿ ಇರುತ್ತವೆ.
ಸ್ನೇಹಿತರೇ,
ಕುಟುಂಬದ ಆದಾಯ ಹೆಚ್ಚಳ ಮತ್ತು ಉದ್ಯೋಗ ಯೋಜನೆಗಳಲ್ಲಿ ಮಹಿಳೆಯರನ್ನು ಸಮಾನ ಸಹಭಾಗಿಗಳನ್ನಾಗಿ ಮಾಡಲಾಗಿದೆ. ಮುದ್ರಾ ಯೋಜನೆಯು ಗ್ರಾಮಗಳ, ಹಳ್ಳಿಗಳ ಬಡ ಕುಟುಂಬಗಳ ಹೊಸ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತಿದೆ. ಈ ಯೋಜನೆ ಅಡಿಯಲ್ಲಿ ಮಂಜೂರಾದ ಒಟ್ಟು ಸಾಲದಲ್ಲಿ 70 ಪ್ರತಿಶತದಷ್ಟನ್ನು ಮಹಿಳೆಯರಿಗೆ ನೀಡಲಾಗಿದೆ. ದೇಶಾದ್ಯಂತ ಮಹಿಳೆಯರು ದೀನ ದಯಾಳ್ ಅಂತ್ಯೋದಯ ಯೋಜನಾ ಮೂಲಕ ಸ್ವ ಸಹಾಯ ಗುಂಪುಗಳು ಮತ್ತು ಗ್ರಾಮೀಣ ಸಂಘಟನೆಗಳಲ್ಲಿ ಜೋಡಣೆಗೊಳ್ಳುತ್ತಿದ್ದಾರೆ. ಮಹಿಳಾ ಸ್ವಸಹಾಯ ಗುಂಪುಗಳ ಸಹೋದರಿಯರು ಆತ್ಮ ನಿರ್ಭರ ಭಾರತ ಆಂದೋಲನದ ವಕ್ತಾರರೆಂದು ನಾನು ಪರಿಗಣಿಸುತ್ತೇನೆ. ಈ ಸ್ವ ಸಹಾಯ ಗುಂಪುಗಳು ನಿಜವಾಗಿಯೂ ರಾಷ್ಟ್ರೀಯ ಸಹಾಯ ಗುಂಪುಗಳು. ಆದುದರಿಂದ, ರಾಷ್ಟ್ರೀಯ ಜೀವನೋಪಾಯ ಮಿಶನ್ ಅಡಿಯಲ್ಲಿ ನೀಡಲಾಗುವ ನೆರವನ್ನು 2014ರ ಮುಂಚಿನ ಐದು ವರ್ಷಗಳಿಗೆ ಹೋಲಿಸಿದರೆ ಕಳೆದ ಏಳು ವರ್ಷಗಳಲ್ಲಿ ಸುಮಾರು 13 ಪಟ್ಟು ಹೆಚ್ಚಿಸಲಾಗಿದೆ. ಮೊದಲು ಪ್ರತೀ ಸ್ವ ಸಹಾಯ ಗುಂಪುಗಳೂ ಯಾವುದೇ ಭದ್ರತೆ ಇಲ್ಲದೆ 10 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯುತ್ತಿದ್ದವು, ಈಗ ಈ ಮಿತಿಯನ್ನು 20 ಲಕ್ಷ ರೂಪಾಯಿಗಳಿಗೆ ದುಪ್ಪಟ್ಟು ಮಾಡಲಾಗಿದೆ.
ತಾಯಂದಿರೇ ಮತ್ತು ಸಹೋದರಿಯರೇ,
ಅದು ನಗರಗಳಿರಲಿ ಅಥವಾ ಹಳ್ಳಿಗಳಿರಲಿ, ನಮ್ಮ ಸರಕಾರ ಮಹಿಳೆಯರ ಪ್ರತೀ ಸಣ್ಣ ಮತ್ತು ದೊಡ್ಡ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ನಮ್ಮ ಸರಕಾರ ಕೊರೊನಾ ಅವಧಿಯಲ್ಲಿ ನಿಮ್ಮ ಒಲೆಯಲ್ಲಿ ಬೆಂಕಿ ಉರಿಯುತ್ತಿರಬೇಕು ಎಂದು ಉಚಿತ ಪಡಿತರವನ್ನು ಖಾತ್ರಿಪಡಿಸಿತು. ನಮ್ಮ ಸರಕಾರ ಮಹಿಳೆಯರರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ನಿಯಮಗಳನ್ನು ಸಡಿಲು ಮಾಡಿತು. ನಮ್ಮ ಸರಕಾರವು ಗಣಿಗಳಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಇದ್ದ ನಿರ್ಬಂಧಗಳನ್ನು ತೆರವು ಮಾಡಿತು. ನಮ್ಮ ಸರಕಾರ ದೇಶಾದ್ಯಂತ ಸೈನಿಕ ಶಾಲೆಗಳ ದ್ವಾರಗಳನ್ನು ಹೆಣ್ಣು ಮಕ್ಕಳಿಗಾಗಿ ತೆರೆದಿಟ್ಟಿತು. ನಮ್ಮ ಸರಕಾರ ಅತ್ಯಾಚಾರದಂಥ ಹೀನ ಕ್ರಿಮಿನಲ್ ಅಪರಾಧಗಳ ತ್ವರಿತ ವಿಚಾರಣೆಗಾಗಿ 700 ತ್ವರಿತ ಗತಿಯ ನ್ಯಾಯಾಲಯಗಳನ್ನು ದೇಶಾದ್ಯಂತ ಸ್ಥಾಪಿಸಿತು. ದೌರ್ಜನ್ಯಗಳಿಂದ ಮುಸ್ಲಿಂ ಸಹೋದರಿಯರನ್ನು ರಕ್ಷಿಸಲು ತ್ರಿವಳಿ ತಲಾಖ್ ವಿರುದ್ಧ ನಮ್ಮ ಸರಕಾರ ಕಾನೂನು ತಂದಿತು.
ಸ್ನೇಹಿತರೇ,
ಎರಡು ಇಂಜಿನ್ ಗಳ ಸರಕಾರ ಯಾವುದೇ ತಾರತಮ್ಯ ಇಲ್ಲದೆ ಹೆಣ್ಣು ಮಕ್ಕಳ ಭವಿಷ್ಯದ ಸಶಕ್ತೀಕರಣಕ್ಕೆ ಅವಿಶ್ರಾಂತವಾಗಿ ಶ್ರಮಿಸುತ್ತಿದೆ. ಕೆಲವು ದಿನಗಳ ಹಿಂದೆ ಕೇಂದ್ರ ಸರಕಾರ ಇನ್ನೊಂದು ನಿರ್ಧಾರವನ್ನು ಕೈಗೊಂಡಿದೆ. ಮೊದಲು ಮದುವೆಯ ಕಾನೂನು ಬದ್ಧ ವಯಸ್ಸು ಗಂಡು ಮಕ್ಕಳಿಗೆ 21 ವರ್ಷವಿತ್ತು, ಆದರೆ ಹೆಣ್ಣು ಮಕ್ಕಳಿಗೆ ಇದು ಬರೇ 18 ವರ್ಷವಿತ್ತು. ಹೆಣ್ಣು ಮಕ್ಕಳು ಕೂಡಾ ತಮ್ಮ ಕಲಿಕೆಯನ್ನು ಮುಂದುವರೆಸಲು ಮತ್ತು ಸಮಾನ ಅವಕಾಶಗಳನ್ನು ಪಡೆಯಲು ಸಮಯ ಬೇಕು ಎಂದು ಇಚ್ಛಿಸುತ್ತಿದ್ದರು. ಆದುದರಿಂದ ಹೆಣ್ಣು ಮಕ್ಕಳಿಗೆ ಮದುವೆಯ ವಯಸ್ಸನ್ನು 21 ಕ್ಕೇರಿಸಲು ಪ್ರಯತ್ನಗಳನ್ನು ಮಾಡಲಾಯಿತು. ದೇಶವು ಈ ನಿರ್ಧಾರವನ್ನು ಹೆಣ್ಣು ಮಕ್ಕಳಿಗಾಗಿ ಕೈಗೊಳ್ಳುತ್ತಿದೆ,
ಸಹೋದರರೇ ಮತ್ತು ಸಹೋದರಿಯರೇ,
ಐದು ವರ್ಷಗಳ ಹಿಂದೆ ಉತ್ತರ ಪ್ರದೇಶದ ಬೀದಿಗಳಲ್ಲಿ ಮಾಫಿಯಾ ರಾಜ್ ಇತ್ತು!. ಉತ್ತರ ಪ್ರದೇಶ ಸರಕಾರದಲ್ಲಿ ಗೂಂಡಾಗಳು ಕಾರುಬಾರು ಮಾಡುತ್ತಿದ್ದರು!. ಇದರಿಂದ ಯಾರು ಹೆಚ್ಚು ತೊಂದರೆ ಅನುಭವಿಸುತ್ತಿದ್ದರು?.ಉತ್ತರ ಪ್ರದೇಶದ ನನ್ನ ಸಹೋದರಿಯರು ಮತ್ತು ಹೆಣ್ಣು ಮಕ್ಕಳು!. ಅವರಿಗೆ ಬೀದಿಗಳಲ್ಲಿ ನಡೆಯುವುದು ಕಷ್ಟವಾಗುತ್ತಿತ್ತು. ಅವರಿಗೆ ಶಾಲೆಗಳಿಗೆ, ಕಾಲೇಜುಗಳಿಗೆ ಹೋಗುವುದು ಕಷ್ಟದಾಯಕವಾಗಿತ್ತು. ನೀವು ಏನನ್ನೂ ಹೇಳುವಂತಿರಲಿಲ್ಲ. ಯಾಕೆಂದರೆ ನೀವು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೆ ಆಗ ಯಾರಾದರೊಬ್ಬರು ಆ ಕ್ರಿಮಿನಲ್ ಅಥವಾ ಅತ್ಯಾಚಾರಿಯನ್ನು ಬೆಂಬಲಿಸಿ ದೂರವಾಣಿ ಮಾಡಿರುತ್ತಿದ್ದರು. ಯೋಗೀ ಜೀ ಅವರು ಈ ಗೂಂಡಾಗಳಿಗೆ ಸರಿಯಾದ ಸ್ಥಾನವನ್ನು ತೋರಿಸಿದ್ದಾರೆ. ಇಂದು ಉತ್ತರ ಪ್ರದೇಶದಲ್ಲಿ ಭದ್ರತೆ ಮತ್ತು ಹಕ್ಕುಗಳಿವೆ. ಇಂದು ಉತ್ತರ ಪ್ರದೇಶದಲ್ಲಿ ಸಾಧ್ಯತೆಗಳು ಮತ್ತು ವ್ಯಾಪಾರಕ್ಕೆ ಅವಕಾಶಗಳಿವೆ. ನಮ್ಮ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ ಇರುವವರೆಗೆ ಈ ನವ ಉತ್ತರ ಭಾರತವನ್ನು ಮತ್ತೆ ಕತ್ತಲೆಗೆ ಹಿಂದೆ ತಳ್ಳುವುದು ಯಾರಿಗೂ ಸಾಧ್ಯವಾಗದು ಎಂಬ ವಿಷಯದಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಸಹೋದರರೇ ಮತ್ತು ಸಹೋದರಿಯರೇ, ನಮ್ಮ ಉತ್ತರ ಪ್ರದೇಶ ಮುನ್ನಡೆಯುತ್ತದೆ ಮತ್ತು ಹೊಸ ಎತ್ತರವನ್ನು ತಲುಪುತ್ತದೆ ಎಂಬುದಾಗಿ ಈ ಪವಿತ್ರ ಪ್ರಯಾಗರಾಜ್ ಭೂಮಿಯಿಂದ ನಾವೆಲ್ಲ ಪ್ರತಿಜ್ಞೆ ಕೈಗೊಳ್ಳೋಣ. ನಾನು ಮತ್ತೊಮ್ಮೆ ಗೌರವದಿಂದ ಶಿರಬಾಗಿ ನಮಿಸುತ್ತೇನೆ ಮತ್ತು ಉತ್ತರ ಪ್ರದೇಶದ ಪ್ರಗತಿಯಲ್ಲಿ ನಿಮ್ಮ ಸಹಭಾಗಿತ್ವ ಹಾಗು ಬೆಂಬಲ ಮತ್ತು ಆಶೀರ್ವಾದಕ್ಕಾಗಿ ನನ್ನ ಹೃದಯಾಂತರಾಳದಿಂದ ಕೃತಜ್ಝತೆ ಸಲ್ಲಿಸುತ್ತೇನೆ.
ನನ್ನೊಂದಿಗೆ ಹೇಳಿ ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಬಹಳ ಧನ್ಯವಾದಗಳು!
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
Addressing a programme in Prayagraj. #NariShaktiDeshKiShakti https://t.co/2njX6mz9zB
— Narendra Modi (@narendramodi) December 21, 2021
प्रयागराज हजारों सालों से हमारी मातृशक्ति की प्रतीक माँ गंगा-यमुना-सरस्वती के संगम की धरती रही है।
— PMO India (@PMOIndia) December 21, 2021
आज ये तीर्थ नगरी नारी-शक्ति के इतने अद्भुत संगम की भी साक्षी बन रही है: PM @narendramodi
यूपी में विकास के लिए, महिलाओं के सशक्तीकरण के लिए जो काम हुआ है, वो पूरा देश देख रहा है: PM @narendramodi
— PMO India (@PMOIndia) December 21, 2021
अभी यहाँ मुझे मुख्यमंत्री कन्या सुमंगला योजना की एक लाख से ज्यादा लाभार्थी बेटियों के खातों में करोड़ों रुपए ट्रान्सफर करने का सौभाग्य मिला।
— PMO India (@PMOIndia) December 21, 2021
ये योजना गाँव-गरीब के लिए, बेटियों के लिए भरोसे का बहुत बड़ा माध्यम बन रही है: PM @narendramodi
उत्तर प्रदेश की महिलाओं ने, माताओं-बहनों-बेटियों ने ठान लिया है- अब वो पहले की सरकारों वाला दौर, वापस नहीं आने देंगी।
— PMO India (@PMOIndia) December 21, 2021
डबल इंजन की सरकार ने यूपी की महिलाओं को जो सुरक्षा दी है, जो सम्मान दिया है, उनकी गरिमा बढ़ाई है, वो अभूतपूर्व है: PM @narendramodi
बेटियां कोख में ही ना मारी जाएं, वो जन्म लें, इसके लिए हमने 'बेटी बचाओ, बेटी पढ़ाओ' अभियान के माध्यम से समाज की चेतना को जगाने का प्रयास किया।
— PMO India (@PMOIndia) December 21, 2021
आज परिणाम ये है कि देश के अनेक राज्यों में बेटियों की संख्या में बहुत वृद्धि हुई है: PM @narendramodi
हमने गर्भवती महिलाओं के टीकाकरण, अस्पतालों में डिलिवरी और गर्भावस्था के दौरान पोषण पर विशेष ध्यान दिया।
— PMO India (@PMOIndia) December 21, 2021
प्रधानमंत्री मातृवंदना योजना के तहत गर्भावस्था के दौरान 5 हज़ार रुपए महिलाओं के बैंक खाते में जमा किए जाते हैं, ताकि वो उचित खान-पान का ध्यान रख सकें: PM @narendramodi
स्वच्छ भारत मिशन के तहत करोड़ों शौचालय बनने से,
— PMO India (@PMOIndia) December 21, 2021
उज्जवला योजना के तहत गरीब से गरीब बहनों को गैस कनेक्शन की सुविधा मिलने से,
घर में ही नल से जल आने से,
बहनों के जीवन में सुविधा भी आ रही है और उनकी गरिमा में भी वृद्धि हुई है: PM @narendramodi
दशकों तक ऐसी व्यवस्था रही कि घर और घर की संपत्ति को केवल पुरुषों का ही अधिकार समझा जाने लगा।
— PMO India (@PMOIndia) December 21, 2021
घर है तो किसके नाम? पुरुषों के नाम।
खेत है तो किसके नाम? पुरुषों के नाम।
नौकरी, दुकान पर किसका हक? पुरुषों का: PM @narendramodi
आज हमारी सरकार की योजनाएं, इस असमानता को भी दूर कर रही हैं।
— PMO India (@PMOIndia) December 21, 2021
प्रधानमंत्री आवास योजना इसका सबसे बड़ा उदाहरण है।
प्रधानमंत्री आवास योजना के तहत जो घर दिये जा रहे हैं, वो प्राथमिकता के आधार पर महिलाओं के ही नाम से बन रहे हैं: PM @narendramodi
रोजगार के लिए, परिवार की आमदनी बढ़ाने के लिए जो योजनाएँ देश चला रहा है, उसमें भी महिलाओं को बराबर का भागीदार बनाया जा रहा है।
— PMO India (@PMOIndia) December 21, 2021
मुद्रा योजना आज गांव-गांव में, गरीब परिवारों से भी नई-नई महिला उद्यमियों को प्रोत्साहित कर रही है: PM @narendramodi
दीनदयाल अंत्योदय योजना के जरिए भी देश भर में महिलाओं को सेल्फ हेल्प ग्रुप्स और ग्रामीण संगठनों से जोड़ा जा रहा है।
— PMO India (@PMOIndia) December 21, 2021
महिला स्वयं सहायता समूह की बहनों को तो मैं आत्मनिर्भर भारत अभियान की चैपिंयन मानता हूं।
ये स्वयं सहायता समूह, असल में राष्ट्र सहायता समूह हैं: PM @narendramodi
बिना किसी भेदभाव, बिना किसी पक्षपात, डबल इंजन की सरकार, बेटियों के भविष्य को सशक्त करने के लिए निरंतर काम कर रही है।
— PMO India (@PMOIndia) December 21, 2021
अभी कुछ दिन पहले ही केंद्र सरकार ने एक और फैसला किया है।
पहले बेटों के लिए शादी की उम्र कानूनन 21 साल थी, लेकिन बेटियों के लिए ये उम्र 18 साल ही थी: PM
बेटियाँ भी चाहती थीं कि उन्हें उनकी पढ़ाई लिखाई के लिए, आगे बढ़ने के लिए समय मिले, बराबर अवसर मिलें।
— PMO India (@PMOIndia) December 21, 2021
इसलिए, बेटियों के लिए शादी की उम्र को 21 साल करने का प्रयास किया जा रहा है।
देश ये फैसला बेटियों के लिए कर रहा है, लेकिन किसको इससे तकलीफ हो रही है, ये सब देख रहे हैं: PM
5 साल पहले यूपी की सड़कों पर माफियाराज था!
— PMO India (@PMOIndia) December 21, 2021
यूपी की सत्ता में गुंडों की हनक हुआ करती थी!
इसका सबसे बड़ा भुक्तभोगी कौन था?
मेरे यूपी की बहन बेटियाँ थीं।
उन्हें सड़क पर निकलना मुश्किल हुआ करता था। स्कूल, कॉलेज जाना मुश्किल होता था: PM @narendramodi
आप कुछ कह नहीं सकती थीं, बोल नहीं सकती थीं।
— PMO India (@PMOIndia) December 21, 2021
क्योंकि थाने गईं तो अपराधी, बलात्कारी की सिफ़ारिश में किसी का फोन आ जाता था।
योगी जी ने इन गुंडों को उनकी सही जगह पहुंचाया है: PM @narendramodi
आज यूपी में सुरक्षा भी है, अधिकार भी हैं।
— PMO India (@PMOIndia) December 21, 2021
आज यूपी में संभावनाएं भी हैं, व्यापार भी है।
मुझे पूरा विश्वास है, जब हमारी माताओं बहनों का आशीर्वाद है, इस नई यूपी को कोई वापस अंधेरे में नहीं धकेल सकता: PM @narendramodi
2014 में जब हमने मां भारती के बड़े सपनों को साकार करने का बीड़ा उठाया, तो सबसे पहले देश की बेटी के विश्वास को नई ऊर्जा देने का प्रयास शुरू किया।
— Narendra Modi (@narendramodi) December 21, 2021
‘बेटी बचाओ, बेटी पढ़ाओ’ अभियान से समाज की चेतना को जगाने का आज परिणाम ये है कि अनेक राज्यों में बेटियों की संख्या में वृद्धि हुई है। pic.twitter.com/GZPnFlCHHp
संपत्ति के अधिकार को लेकर जो असमानताएं थीं, उन्हें हमारी सरकार की योजनाएं कैसे दूर कर रही हैं, इसका सबसे बड़ा उदाहरण है- प्रधानमंत्री आवास योजना।
— Narendra Modi (@narendramodi) December 21, 2021
इस योजना के तहत ही पहली बार यूपी में 25 लाख महिलाओं के नाम उनका घर हुआ है। यही तो होता है सशक्तिकरण, यही तो होता है विकास! pic.twitter.com/ArVt5h9p3h
महिला स्वयं सहायता समूह की बहनों को मैं आत्मनिर्भर भारत अभियान की चैंपियन मानता हूं। इनके स्वयं सहायता समूह, असल में राष्ट्र सहायता समूह हैं। pic.twitter.com/VymMa7fEaB
— Narendra Modi (@narendramodi) December 21, 2021
डबल इंजन की सरकार बिना किसी भेदभाव और पक्षपात के बेटियों के भविष्य को सशक्त करने के लिए निरंतर काम कर रही है। इसीलिए बेटियों की शादी की उम्र को 18 साल से बढ़ाकर 21 साल करने का प्रयास किया जा रहा है। pic.twitter.com/SleBtfY8AV
— Narendra Modi (@narendramodi) December 21, 2021
आज यूपी में सुरक्षा भी है, अधिकार भी हैं।
— Narendra Modi (@narendramodi) December 21, 2021
आज यूपी में संभावनाएं भी हैं, व्यापार भी है। pic.twitter.com/E3gEfqSmFF