Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರಿಕ್ಸ್ ಸಹಕಾರದ ಎರಡು ದಶಕಗಳ ನೆನಪಿನ ಅಂಚೆ ಚೀಟಿಗಳ ಬಿಡುಗಡೆ


ಬ್ರಿಕ್ಸ್ ನ ಎರಡು ದಶಕಗಳ ಐತಿಹಾಸಿಕ ಪಯಣವನ್ನು ಗುರುತಿಸುವ ಉದ್ದೇಶದಿಂದ, ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ, 2026 ರ ಸೆಪ್ಟೆಂಬರ್ 12 ರಂದು ಎರಡು ನೆನಪಿನ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಯಿತು.

“ಬ್ರಿಕ್ಸ್: ಸಹಕಾರದ ಎರಡು ದಶಕಗಳು, 2006–2026” ಎಂಬ ಬರಹವನ್ನು ಹೊಂದಿರುವ ಈ ನೆನಪಿನ ಅಂಚೆ ಚೀಟಿಯು, ಸಂವಾದ ಮತ್ತು ಸಹಕಾರದ ಮೌಲ್ಯಯುತ ವೇದಿಕೆಯಾಗಿ ಬ್ರಿಕ್ಸ್ ಬೆಳೆದು ಬಂದ ಹಾದಿಯನ್ನು ಸಂಭ್ರಮಿಸುತ್ತದೆ.

ಈ ಎರಡು ಅಂಚೆ ಚೀಟಿಗಳು, “ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ” ಎಂಬ ವಿಷಯದ ಅಡಿಯಲ್ಲಿ ಭಾರತದ ಬ್ರಿಕ್ಸ್ ಅಧ್ಯಕ್ಷತೆ 2026 ರ ಆದ್ಯತೆಗಳನ್ನು ಸಹ ಸೆರೆಹಿಡಿಯುತ್ತವೆ.

ಮೊದಲ ಅಂಚೆ ಚೀಟಿಯು ಪರಸ್ಪರ ಗೌರವ, ತಿಳುವಳಿಕೆ ಮತ್ತು ಒಗ್ಗಟ್ಟಿನ ಭಾವನೆಯೊಂದಿಗೆ ಬ್ರಿಕ್ಸ್ ವೇದಿಕೆಯಾಗಿ ಹೊರಹೊಮ್ಮಿರುವುದನ್ನು ಸಾಕಾರಗೊಳಿಸಿದರೆ, ಎರಡನೇ ಅಂಚೆ ಚೀಟಿಯು ಭಾರತದ ಅಧ್ಯಕ್ಷತೆಯ ಹಿಂದಿರುವ ಪ್ರತೀಕ ಚಿಹ್ನೆ ಹಾಗೂ “ಮಾನವೀಯತೆಗೆ ಪ್ರಥಮ ಆದ್ಯತೆ” ಮತ್ತು “ಜನ-ಕೇಂದ್ರಿತ” ಆಶಯವನ್ನು ಪ್ರದರ್ಶಿಸುತ್ತದೆ.

*****