ಪಿಎಂಇಂಡಿಯಾ
2015-16ನೇ ಆರ್ಥಿಕ ವರ್ಷಕ್ಕೆ (ಆರ್.ಪಿ.ಎಫ್./ಆರ್.ಪಿ.ಎಸ್.ಎಫ್. ಸಿಬ್ಬಂದಿ ಹೊರತು ಪಡಿಸಿ) ಎಲ್ಲ ಅರ್ಹ ಪತ್ರಾಂಕಿತೇತರ ನೌಕರರಿಗೆ 78 ದಿನಗಳ ವೇತನಕ್ಕೆ ಸಮನಾದ ಉತ್ಪಾದನೆ ಸಂಪರ್ಕಿತ ಬೋನಸ್ (ಪಿ.ಎಲ್.ಬಿ.) ಪಾವತಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ತನ್ನ ಅನುಮೋದನೆ ನೀಡಿದೆ. ಈ ಅನುಮೋದನೆಯಿಂದ ಅಂದಾಜು 2090.96 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಬೀಳಲಿದೆ.
ಪಿ.ಎಲ್.ಬಿ. ಪಾವತಿಯು ಕೈಗಾರಿಕಾ ಶಾಂತಿಯನ್ನು ಕಾಪಾಡುವುದರ ಜೊತೆಗೆ ರೈಲ್ವೆ ಇಲಾಖೆಯಲ್ಲಿರುವ ದೊಡ್ಡ ಸಂಖ್ಯೆಯ ನೌಕರರಿಗೆ ತಮ್ಮ ಸಾಮರ್ಥ್ಯ ಸುಧಾರಣೆ ಮಾಡಿಕೊಳ್ಳಲು ಮತ್ತು ಉತ್ಪಾದನೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಉತ್ತೇಜನ ನೀಡಲಿದೆ.
ದಸರಾ/ಪೂಜಾ ರಜೆಗೆ ಮುನ್ನ ಅರ್ಹ ರೈಲ್ವೆ ನೌಕರರಿಗೆ ಈ ಬೋನಸ್ ಪಾವತಿ ಮಾಡಲಾಗುತ್ತದೆ.
AKT/VBA/SH – 151187