ಪಿಎಂಇಂಡಿಯಾ
ಏಷ್ಯನ್ ಕ್ರೀಡಾಕೂಟದಲ್ಲಿ ಸಮ್ಮಿಶ್ರ ಸಮರ ಕಲೆಯಲ್ಲಿ ಕಂಚಿನ ಪದಕ ಗೆದ್ದ ಕು.ಸುಚಿಕಾ ತರಿಯಾಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ, ಇದು ಭಾರತಕ್ಕೆ ಐತಿಹಾಸಿಕ ಸಾಧನೆ ಎಂದು ಅವರು ಬಣ್ಣಿಸಿದ್ದಾರೆ.
ಈ ಕ್ಷೇತ್ರದಲ್ಲಿ ಭಾರತದ ಮೊದಲ ಏಷ್ಯನ್ ಕ್ರೀಡಾಕೂಟದ ಪದಕವನ್ನು ಅವರು ಪಡೆದುಕೊಂಡಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಅವರ ಸಾಧನೆಯು ವಿಶೇಷವಾಗಿ ಮಹತ್ವದ್ದಾಗಿದೆ, ಅವರ ಸಮರ್ಪಣೆ ಮತ್ತು ಉತ್ಸಾಹವನ್ನು ಉಲ್ಲೇಖಿಸುತ್ತದೆ ಮತ್ತು ಮುಂದೆ ಇನ್ನೂ ಅನೇಕ ಯಶಸ್ಸಿಗೆ ಶುಭ ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯ ಎಕ್ಸ್ ತಾಣದಲ್ಲಿನ ಪೋಸ್ಟ್ ನಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದೆ:
“ಭಾರತಕ್ಕೆ ಐತಿಹಾಸಿಕ ಸಾಧನೆ!
ಸಮ್ಮಿಶ್ರ ಸಮರ ಕಲೆಗಳಲ್ಲಿ ಕಂಚಿನ ಪದಕ ಗೆದ್ದ ಮತ್ತು ಈ ಕ್ಷೇತ್ರದಲ್ಲಿ ಭಾರತಕ್ಕೆ ಮೊದಲ ಏಷ್ಯನ್ ಕ್ರೀಡಾಕೂಟದ ಪದಕವನ್ನು ನೀಡಿದ ಕು. ಸುಚಿಕಾ ತರಿಯಾಲ್ ಅವರಿಗೆ ಅಭಿನಂದನೆಗಳು. ಅವರ ಸಾಧನೆಯು ವಿಶೇಷವಾಗಿ ಮಹತ್ವದ್ದಾಗಿದೆ, ಅವರ ಸಮರ್ಪಣೆ ಮತ್ತು ಕ್ರೀಡಾ ಉತ್ಸಾಹವನ್ನು ಈ ಪದಕ ಉಲ್ಲೇಖಿಸುತ್ತದೆ.
ಮುಂದೆ ಇನ್ನೂ ಅನೇಕ ಯಶಸ್ಸುಗಳು ಸಿಗಲಿ ಎಂದು ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi”
*****
A historic achievement for India!
— PMO India (@PMOIndia) September 22, 2026
Congratulations to Suchika Tariyal on winning a Bronze in Mixed Martial Arts and securing India’s first-ever Asian Games medal in this field. Her achievement is especially significant, highlighting her dedication and zeal.
Best wishes for many…