ಪಿಎಂಇಂಡಿಯಾ
ಕೇಂದ್ರ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಬರೆದ ಲೇಖನವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.
ಜಲ ಸುರಕ್ಷತೆಯು ಹಂಚಿಕೆಯ ಜವಾಬ್ದಾರಿಯಾಗಿದ್ದು, ಇದಕ್ಕೆ ಬಲವಾದ ವ್ಯವಸ್ಥೆಗಳು, ವೈಜ್ಞಾನಿಕ ಪರಿಹಾರಗಳು ಮತ್ತು ಜನ ಭಾಗೀದಾರಿ ಅಗತ್ಯವಿದೆ ಎಂದು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಗಮನಿಸಿದರು. ಜಲ ಜೀವನ್ ಮಿಷನ್, ನಮಾಮಿ ಗಂಗೆ, ಜಲ ಸಂರಕ್ಷಣೆ ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರಗಳ ಮೂಲಕ ಹವಾಮಾನ-ನಿರೋಧಕ ನೀರಿನ ನಿರ್ವಹಣೆಯನ್ನು ನಿರ್ಮಿಸುವ ಭಾರತದ ಪ್ರಯತ್ನಗಳ ಕುರಿತು ಕೇಂದ್ರ ಸಚಿವರು ಬರೆಯುತ್ತಾರೆ ಎಂದು ಅವರು ಹೇಳಿದರು. ರಾಜ್ಯಗಳು ಮತ್ತು ಸಮುದಾಯಗಳಾದ್ಯಂತ ನಿರಂತರ ಪ್ರಯತ್ನಗಳ ಜೊತೆಗೆ ಜನರ ಭಾಗವಹಿಸುವಿಕೆ ಭವಿಷ್ಯದ ಪೀಳಿಗೆಗೆ ಸುಸ್ಥಿರ ರೀತಿಯಲ್ಲಿ ನೀರನ್ನು ಸುರಕ್ಷಿತವಾಗಿರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಒಳನೋಟವುಳ್ಳ ದೃಷ್ಟಿಕೋನವನ್ನು ಒದಗಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಪ್ರಧಾನಮಂತ್ರಿಯವರ ಕಾರ್ಯಾಲಯ ಎಕ್ಸ್ ಪೋಸ್ಟ್ ನಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದೆ:
“ಜಲ ಸುರಕ್ಷತೆಯು ಎಲ್ಲರ ಪರಸ್ಪರ ಸಮಾನ ಹಂಚಿಕೆಯ ಜವಾಬ್ದಾರಿಯಾಗಿದ್ದು, ಇದಕ್ಕೆ ಬಲವಾದ ವ್ಯವಸ್ಥೆಗಳು, ವೈಜ್ಞಾನಿಕ ಪರಿಹಾರಗಳು ಮತ್ತು ಜನ ಭಾಗೀದಾರಿ ಅಗತ್ಯವಾಗಿಬೇಕು.
ಜಲ ಜೀವನ್ ಮಿಷನ್, ನಮಾಮಿ ಗಂಗೆ, ಜಲ ಸಂರಕ್ಷಣೆ ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರಗಳ ಮೂಲಕ ಹವಾಮಾನ-ನಿರೋಧಕ ನೀರಿನ ನಿರ್ವಹಣೆಯನ್ನು ನಿರ್ಮಿಸಲು ಭಾರತದ ಪ್ರಯತ್ನಗಳ ಕುರಿತು ಕೇಂದ್ರ ಸಚಿವರಾದ ಶ್ರೀ @CRPaatil ಬರೆದಿದ್ದಾರೆ.
ರಾಜ್ಯಗಳು ಮತ್ತು ಸಮುದಾಯಗಳಾದ್ಯಂತ ನಿರಂತರ ಪ್ರಯತ್ನಗಳ ಜೊತೆಗೆ ಜನರ ಭಾಗವಹಿಸುವಿಕೆಯು ಭವಿಷ್ಯದ ಪೀಳಿಗೆಗೆ ಸುಸ್ಥಿರ ರೀತಿಯಲ್ಲಿ ನೀರನ್ನು ಸುರಕ್ಷಿತವಾಗಿರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಒಳನೋಟವುಳ್ಳ ದೃಷ್ಟಿಕೋನವನ್ನು ಈ ಲೇಖನ ಹೊಂದಿದೆ.”
*****
Water security is a shared responsibility that calls for stronger systems, scientific solutions and Jan Bhagidari. Union Minister Shri @CRPaatil writes on India’s efforts to build climate-resilient water management through the Jal Jeevan Mission, Namami Gange, water conservation… https://t.co/28BGdScIpL
— PMO India (@PMOIndia) September 22, 2026