ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಐರೋಪ್ಯ ಒಕ್ಕೂಟಗಳ ನಡುವೆ ಜಲ ಸಂಪನ್ಮೂಲ ಕ್ಷೇತ್ರದಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು ಸಮಾನತೆ, ಪರಸ್ಪರ ಸಂಬದ್ಧತೆ ಮತ್ತು ಪರಸ್ಪರ ಲಾಭದ ಆಧಾರದ ಮೇಲೆ ನೀರು ನಿರ್ವಹಣಾ ಕ್ಷೇತ್ರದಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ತಾಂತ್ರಿಕ, ವೈಜ್ಞಾನಿಕ ಮತ್ತು ನಿರ್ವಹಣೆ ಸಾಮರ್ಥ್ಯಗಳನ್ನು ಬಲಪಡಿಸಲು ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ. ಇದು ನದಿ ಪಾತ್ರದಲ್ಲಿ ಸಮಗ್ರ ಜಲ ಮೂಲ ನಿರ್ವಹಣೆ ಯೋಜನೆ ಮತ್ತು ಅಧ್ಯಯನ ಪ್ರವಾಸದ ಮೂಲಕ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವಿಚಾರಗಳ ವಿನಿಮಯಕ್ಕೂ ಅವಕಾಶ ಒದಗಿಸುತ್ತದೆ.
ಈ ತಿಳಿವಳಿಕೆ ಒಪ್ಪಂದವು ಪ್ರಮುಖವಾದ ಪರಿಸರ ವಿಚಾರಗಳ ಗುರುತಿಸುವಿಕೆ ಮತ್ತು ಜಲ ನಿರ್ವಹಣೆ ಕ್ಷೇತ್ರದಲ್ಲಿ ಐರೋಪ್ಯ ಒಕ್ಕೂಟ ಮತ್ತು ಭಾರತ ನಡುವೆ ಹೆಚ್ಚಿನ ಅಭಿವೃದ್ಧಿ ಸಹಕಾರಕ್ಕೆ ಮತ್ತು ಪರಸ್ಪರ ಅನುಕೂಲವಾಗುವ ಅನುಭವ ಮತ್ತು ಸಹಕಾರವನ್ನು ವಿನಿಮಯ ಮಾಡಿಕೊಳ್ಳುವ ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಇದು ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ನೀರಿನ ಬೇಡಿಕೆ ಮತ್ತು ಹವಾಮಾನದ ಸವಾಲುಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಜಲ ಸಂಪನ್ಮೂಲವನ್ನು ಹೆಚ್ಚು ಸುಸ್ಥಿರವಾಗಿ ನಿರ್ವಹಿಸಲಿದೆ. ಈ ತಿಳಿವಳಿಕೆ ಒಪ್ಪಂದವನ್ನು ಪೂರ್ಣಗೊಳಿಸಲು ಕೈಗೊಳ್ಳುವ ಚಟುವಟಿಕೆಗಳ ಮೇಲೆ ನಿಗಾ ಇಡಲು ಒಂದು ಜಂಟಿ ಕಾರ್ಯ ಗುಂಪನ್ನು ರಚಿಸಲಾಗುತ್ತದೆ.
ಹಿನ್ನೆಲೆ
ನೀತಿ ಮತ್ತು ತಾಂತ್ರಿಕ ತಜ್ಞತೆಯ ವಿನಿಮಯ, ತರಬೇತಿ ಕೋರ್ಸ್, ಶಿಬಿರಗಳ ಆಯೋಜನೆ, ವೈಜ್ಞಾನಿಕ ಮತ್ತು ತಾಂತ್ರಿಕ ವಿಚಾರಸಂಕಿರಣ, ತಜ್ಞರ ವಿನಿಮಯ ಮತ್ತು ಅಧ್ಯಯನ ಪ್ರವಾಸದ ಮೂಲಕ ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಚಿವಾಲಯವು ಜಲ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಇತರ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಹಕಾರವನ್ನು ರೂಪಿಸುತ್ತಿದೆ. ಜಲ ಸಂಪನ್ಮೂಲದ ವಿತರಣೆ, ನೀರಿನ ದರ ನಿಗದಿ, ಜಲ ಸಂಪನ್ಮೂಲ ಮತ್ತು ಗುಣಮಟ್ಟ ಕಾಪಾಡಲು ಅಗತ್ಯವಾದ ಹೆಚ್ಚು ನೀರಿನ ಅಗತ್ಯ ಇಲ್ಲದ ಬೆಳೆಗಳನ್ನು ಬೆಳೆಸುವುದು ಇತ್ಯಾದಿ ಒಳಗೊಂಡ ಕೃಷಿ ಪದ್ಧತಿಯಲ್ಲಿ ಸೂಕ್ತ ಬದಲಾವಣೆಯಿಂದ ಐರೋಪ್ಯ ಒಕ್ಕೂಟ ಸಾಧಿಸಿರುವ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್ ನೊಂದಿಗೆ ಅವರ ತಜ್ಞತೆ ಮತ್ತು ಅನುಭವದ ಲಾಭ ಪಡೆಯಲು ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಐರೋಪ್ಯ ಒಕ್ಕೂಟದ ರಾಜ್ಯಗಳಲ್ಲಿ ಪರಿಸರ ಉದ್ದೇಶಕ್ಕೆಕೊಡುಗೆ ನೀಡಲು ಜಲ ಮೂಲಗಳನ್ನು ಸಮರ್ಥವಾಗಿ ಬಳಸುವ ಬಳಕೆದಾರರಿಗೆ ಪ್ರೋತ್ಸಾಹ ನೀಡುವ ನೀತಿಯನ್ನು ಅಳವಡಿಸಿಕೊಂಡು ನೀರಿನ ದರ ಪದ್ಧತಿ ಅಳವಡಿಸಿಕೊಳ್ಳಲಾಗಿದೆ.
AKT/VBA/SH