Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಒಡಿಶಾದ ಬೆಹರಾಂಪುರ್ ನಲ್ಲಿ ನೂತನ ಭಾರತೀಯ ವಿಜ್ಞಾನ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆ ಮತ್ತು ಕಾರ್ಯಾನುಷ್ಠಾನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಈ ಕೆಳಕಂಡ ವಿಷಯಗಳಿಗೆ ತನ್ನ ಅನುಮೋದನೆ ನೀಡಿದೆ:

i.ಸೊಸೈಟಿಗಳ ನೋಂದಣಿ ಕಾಯಿದೆ, 1860ರ ಅಡಿಯಲ್ಲಿ ಬೆಹರಾಂಪುರ್ ನಲ್ಲಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್ಇಆರ್) ಸ್ಥಾಪನೆಗೆ ಪೂರ್ವಾನ್ವಯ ಸಮ್ಮತಿ;

ii. 2016-17ನೇ ಶೈಕ್ಷಣಿಕ ವರ್ಷದಿಂದಲೇ ಬೆಹರಾಂಪುರದಲ್ಲಿ ಟ್ರಾನ್ಸಿಟ್ / ತಾತ್ಕಾಲಿಕ ಕ್ಯಾಂಪಸ್ ನಲ್ಲಿ ಐಐಎಸ್ಇಆರ್ ಸ್ಥಾಪನೆ ಮತ್ತು ಕಾರ್ಯಾರಂಭ ಮಾಡಲಿದ್ದು, ಇದು ಮೊದಲ ಮೂರು ವರ್ಷಗಳ ಅವಧಿಗೆ (2016-19) 152.79 ಕೋಟಿ ರೂಪಾಯಿಗಳ ವೆಚ್ಚವನ್ನು ಒಳಗೊಂಡಿದೆ, ಮತ್ತು ಆಗಸ್ಟ್ 2016ರಿಂದ 2016-17ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಪೂರ್ವಾನ್ವಯ ಅನುಮೋದನೆ ನೀಡುತ್ತದೆ;

iii. ಒಡಿಶಾ ರಾಜ್ಯ ಸರ್ಕಾರದಿಂದ ಉಚಿತವಾಗಿ ಜಮೀನಿನ ಸ್ವೀಕಾರ;

iv. ಸಂಸ್ಥೆಯಲ್ಲಿ ರೂ.80,000 (ಫಿಕ್ಸ್ಡ್) ವೇತನ ಶ್ರೇಣಿಯೊಂದಿಗೆ ನಿರ್ದೇಶಕರ ಹುದ್ದೆಯ ಸೃಷ್ಟಿ;ಮತ್ತು

v. ರಾಷ್ಟ್ರೀಯ ತಂತ್ರಜ್ಞಾನ, ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಎನ್.ಐ.ಟಿ.ಎಸ್.ಇ.ಆರ್.) ಕಾಯಿದೆ 2007 (29/2007)ರ ಎರಡನೇ ಪರಿಶಿಷ್ಟದಲ್ಲಿ ಐಐಎಸ್ಇಆರ್, ತಿರುಪತಿ ಮತ್ತು ಐಐಎಸ್ಇಆರ್, ಬೆಹರಾಂಪುರ್ ಸೇರ್ಪಡೆಗೆ ಇಂತಹ ಮಾರ್ಪಾಡುಗಳೊಂದಿಗೆ / ಮಾಹಿತಿ ಪರಿಷ್ಕರಣೆ ಮತ್ತು ಸಾಂದರ್ಭಿಕ ಪ್ರಕೃತಿಯ ಬದಲಾವಣೆಗಳನ್ನು ಶಾಸಕಾಂಗ ಇಲಾಖೆ ಪರಿಗಣಿಸಿದಂತೆ ರಾಷ್ಟ್ರೀಯ ತಂತ್ರಜ್ಞಾನ, ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ (ಎರಡನೇ ತಿದ್ದುಪಡಿ) ಮಸೂದೆ 2016 (ಅನುಬಂಧ-Ill), ಎಂಬ ಹೆಸರಿನ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸುವುದು.

ಹಿನ್ನೆಲೆ:

ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್ಇಆರ್) ಅನ್ನು ರಾಷ್ಟ್ರೀಯ ತಂತ್ರಜ್ಞಾನ, ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ (ಎನ್.ಐ.ಟಿ.ಎಸ್.ಇ.ಆರ್.) ಕಾಯಿದೆ 2012ರ ಅನ್ವಯ ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂದು ಘೋಷಿಸಲಾಗಿದೆ. ಈ ಸಂಸ್ಥೆಗಳು ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಅವಕಾಶ ಒದಗಿಸುತ್ತದೆ ಮತ್ತು ಸ್ನಾತಕ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಗುಣಮಟ್ಟದ ವಿಜ್ಞಾನ ಶಿಕ್ಷಣವನ್ನೂ ಒದಗಿಸುತ್ತದೆ. ಈ ಮುನ್ನ ಕೋಲ್ಕತ್ತಾ, ಪುಣೆ, ಮೊಹಾಲಿ, ಭೋಪಾಲ್ ಮತ್ತು ತಿರುವನಂತಪುರಗಳಲ್ಲಿ ಐದು ಐಐಎಸ್ಇಆರ್ ಗಲಿದ್ದವು. ಈ ಸರ್ಕಾರ ಅಧಿಕಾರಕ್ಕೆ ಬಂದ ತರುವಾಯ 2015ರಲ್ಲಿ ತಿರುಪತಿಯಲ್ಲಿ ಐಐಎಸ್ಇಆರ್ ಆರಂಭಿಸಿತ್ತು.

ಗುಣಮಟ್ಟದ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯ ಅಗತ್ಯವನ್ನು ಪೂರೈಸಲು, ವಿವಿಧ ರಾಜ್ಯಗಳಲ್ಲಿ/ ಭೌಗೋಳಿಕ ತಾಣಗಳಲ್ಲಿ ಐ.ಐ.ಎಸ್.ಇ.ಆರ್.ಗಳನ್ನು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವರು ತಮ್ಮ ಬಜೆಟ್ (2015) ಭಾಷಣದಲ್ಲಿ ಒಡಿಶಾ ರಾಜ್ಯದಲ್ಲಿ ಐಐಎಸ್ಇಆರ್ ಸ್ಥಾಪಿಸುವುದಾಗಿ ಪ್ರಕಟಿಸಿದ್ದರು.

ಆ ಪ್ರಕಾರವಾಗಿ ಕೇಂದ್ರ ಸಚಿವ ಸಂಪುಟ ಇಂದು, ಬೆಹರಾಮ್ ಪುರದ ಸರ್ಕಾರಿ ಐಟಿಐ ಕಟ್ಟಡದಲ್ ಶೈಕ್ಷಣಿಕ ಮತ್ತು ಕಾರ್ಯಾಗಾರದ ಕಟ್ಟಡದ ತಾತ್ಕಾಲಿಕ ಮತ್ತು ಟ್ರಾನ್ಸಿಟ್ ಸಮುಚ್ಚಯದಲ್ಲಿ ಐಐಎಸ್.ಇ.ಆರ್. ಸ್ಥಾಪಿಸಲು ಅನುಮೋದನೆ ನೀಡಿದೆ. ಈ ವರ್ಷ 60 ವಿದ್ಯಾರ್ಥಿಗಳಿಗೆ ಬಿ.ಎಸ್-ಎಂ.ಎಸ್. ಕೋರ್ಸ್ ಗಳಿಗೆ ಪ್ರವೇಶಾವಕಾಶ ಒದಗಿಸಿದೆ, ಇದು ನಿಧಾನವಾಗಿ ಹೆಚ್ಚಳವಾಗಲಿದೆ ಮತ್ತು ಎಂ.ಎಸ್. ಪದವಿ, ಎಂ.ಎಸ್. –ಪಿಚ್.ಡಿ, ಮತ್ತು ಪೋಸ್ಟ್- ಡಾಕ್ಟೋರಲ್ ಫೆಲೋಷಿಪ್ ಸೇರಿ ಸಂಚಯಿತ ವಿದ್ಯಾರ್ಥಿಗಳ ಸಂಖ್ಯೆ ಮೂರು ವರ್ಷದಲ್ಲಿ 665 ಆಗಲಿದೆ. ತಾತ್ಕಾಲಿಕ ಸಮುಚ್ಚಯದ ಯೋಜನಾ ವೆಚ್ಚ 152.79 ಕೋಟಿ ರೂಪಾಯಿ ಆಗಲಿದೆ. ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಪಿ.ಎಸ್.ಯು ಆದ ಇಡಿ.ಸಿ.ಐ.ಎಲ್.ಗೆ ಶಾಶ್ವತವಾದ ಕ್ಯಾಂಪಸ್ ನಿರ್ಮಾಣಕ್ಕಾಗಿ ಸವಿವರವಾದ ಯೋಜನಾ ವರದಿ ಸಲ್ಲಿಸಲು ಸೂಚಿಸಲಾಗಿದೆ. ಆ ಬಳಿಕ ಕ್ಯಾಂಪಸ್ ನಿರ್ಮಾಣ ಕಾರ್ಯ ಆರಂಭವಾಗಲಿದೆ.

****

AKT/VBA/SH