Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜನತೆ ಕ್ರಮಬದ್ದವಾಗಿ ಮತ್ತು ತಾಳ್ಮೆಯಿಂದ ನೋಟುಗಳನ್ನು ಪರಿವರ್ತಿಸಿಕೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ;


ಐನೂರು ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಕಾನೂನುಬದ್ಧ ಚಲಾವಣೆಯನ್ನು ರದ್ದುಪಡಿಸಿದ ತರುವಾಯ ಜನತೆ ಬ್ಯಾಂಕ್ ಗಳಲ್ಲಿ ಕ್ರಮಬದ್ಧ ಹಾಗೂ ತಾಳ್ಮೆಯಿಂದ ತಮ್ಮ ನೋಟು ಪರಿವರ್ತನೆ ಮಾಡಿಕೊಳ್ಳುತ್ತಿರುವುದಕ್ಕೆಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ದೊಡ್ಡ ಒಳಿತಿಗಾಗಿ ಈ ಸೀಮಿತ ತೊಂದರೆಯನ್ನು ಭರಿಸಲು ನಾಗರಿಕರು ತೋರುತ್ತಿರುವ ಸಂಯಮ ಮತ್ತು ಉತ್ಸಾಹ ನೋಡಿ ಹೃದಯ ತುಂಬಿ ಬಂದಿದೆ ಎಂದು ಹೇಳಿದ್ದಾರೆ. ಅಭಿವೃದ್ಧಿಯ ಫಲವನ್ನು ಪ್ರತಿಯೊಬ್ಬ ನಾಗರಿಕರಿಗೂ ತಲುಪಿಸಲು ಮತ್ತು ಭ್ರಷ್ಟಾಚಾರಮುಕ್ತ ಭಾರತದ ನಿರ್ಮಾಣಕ್ಕೆ ಸರ್ಕಾರದ ಪ್ರಯತ್ನ ಅಚಲವಾಗಿದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.

“ಜನರು ಬ್ಯಾಂಕ್ ಗಳಿಗೆ ಧನ್ಯವಾದ ಹೇಳಿ ಮತ್ತು ತಮ್ಮ ನೋಟುಗಳನ್ನು ತಾಳ್ಮೆಯಿಂದ ಮತ್ತು ಕ್ರಮಬದ್ದವಾಗಿ ಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದಾರೆಂದು ಕೇಳಿ ಸಂತೋಷವಾಗಿದೆ.

ಹಿರಿಯ ನಾಗರಿಕರಿಗೆ ತಮ್ಮ ಖಾತೆಯಿಂದ ಹಣ ಹಿಂಪಡೆಯಲು ಮತ್ತು ತಮ್ಮ ನೋಟು ಪರಿವರ್ತನೆ ಮಾಡಿಕೊಳ್ಳಲು ಜನರು ಸ್ವಯಂಪ್ರೇರಿತರಾಗಿ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿದು ಹೃದಯ ತುಂಬಿಬಂತು.

ಮುಂದಿನ ದೊಡ್ಡ ಒಳಿತಿಗಾಗಿ ಇಂಥ ಅಲ್ಪ ತೊಂದರೆ ಭರಿಸಲು ಜನರು ತೋರುತ್ತಿರುವ ಆತ್ಮೀಯ, ಉತ್ಸಾಹಪೂರ್ಣ ಮತ್ತು ತಾಳ್ಮೆ ಹೃದಯಸ್ಪರ್ಶಿ.

ನಾನು ನಿಮಗೆ ಭರವಸೆ ನೀಡುತ್ತೇನೆ. ಭಾರತವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಮತ್ತು ಅಭಿವೃದ್ಧಿಯ ಫಲವನ್ನು ಪ್ರತಿಯೊಬ್ಬ ನಾಗರಿಕರಿಗೆ ತಲುಪಿಸಲು ಸರ್ಕಾರದ ಪ್ರಯತ್ನ ಅಚಲವಾಗಿದೆ “, ಎಂದುಪ್ರಧಾನಿ ಹೇಳಿದ್ದಾರೆ

***

AKT/NT – 153497