Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ರಾಮನು ಸದಾಚಾರದ ಜೀವಂತ ಸಾಕಾರರೂಪ ಎಂದು ವರ್ಣಿಸುವ ಸಂಸ್ಕೃತ ಸುಭಾಷಿತ ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಗವಾನ್ ಶ್ರೀ ರಾಮನನ್ನು ಸದಾಚಾರ, ಸತ್ಯ ಮತ್ತು ಶೌರ್ಯದ ಸಾಕಾರಮೂರ್ತಿಯಾಗಿ ವರ್ಣಿಸಿರುವ ಸಂಸ್ಕೃತ ಸುಭಾಷಿತವೊಂದನ್ನು ಇಂದು  ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು ಎಕ್ಸ್‌ ನಲ್ಲಿ ಹೀಗೆ ಬರೆದಿದ್ದಾರೆ:

“रामो विग्रहवान्  धर्मस्साधुस्सत्यपराक्रमः।
राजा सर्वस्य लोकस्य देवानां मघवानिव॥”

ಶ್ರೀರಾಮನು ಸದ್ಗುಣಗಳ ಸಾಕಾರಮೂರ್ತಿ. ಅವನು ಸಜ್ಜನರಿಗೆ ಪರಮ ಆಶ್ರಯತಾಣ; ತನ್ನ ನಿರ್ಧಾರಗಳಲ್ಲಿ ಅಚಲನಾದವನು ಮತ್ತು ಸತ್ಯನಿಷ್ಠವಾದ ಪರಾಕ್ರಮದಲ್ಲಿ ದೃಢನಿಶ್ಚಯವುಳ್ಳವನು. ಇಡೀ ಬ್ರಹ್ಮಾಂಡಕ್ಕೆ ಅವನೇ ಏಕೈಕ ಅಧಿಪತಿ; ದೇವಲೋಕವನ್ನು ಇಂದ್ರನು ಹೇಗೆ ಆಳುತ್ತಾ ರಕ್ಷಿಸುತ್ತಾನೋ, ಅದೇ ರೀತಿಯಲ್ಲಿ ರಾಮನು ಸಮಸ್ತ ಲೋಕಗಳನ್ನು ಆಳುತ್ತಾನೆ ಮತ್ತು ರಕ್ಷಿಸುತ್ತಾನೆ.

 

*****