Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯ ಮುಂದುವರಿಕೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯನ್ನು 31.03.2031 ರವರೆಗೆ ಅಂದರೆ ಮುಂದಿನ 5 ವರ್ಷಗಳ ಅವಧಿಗೆ ಮುಂದುವರಿಸಲು ಅನುಮೋದನೆ ನೀಡಿದೆ. ಈ ಯೋಜನೆಯು ಮಹಿಳೆಯರು, ಪರಿಶಿಷ್ಟ ಜಾತಿಗಳು (ಎಸ್ ಸಿ) ಮತ್ತು ಪರಿಶಿಷ್ಟ ಪಂಗಡಗಳು (ಎಸ್ ಟಿ) ನಡುವೆ ಉದ್ಯಮಶೀಲತೆ ಉತ್ತೇಜಿಸುವ ಗುರಿ ಹೊಂದಿದೆ ಮತ್ತು ಐದು ವರ್ಷಗಳ ಅವಧಿಯಲ್ಲಿ ಹೆಚ್ಚುವರಿಯಾಗಿ 2.5 ಲಕ್ಷ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವ ಗುರಿ ಹೊಂದಲಾಗಿದೆ. ಏಪ್ರಿಲ್ 2016 ರಲ್ಲಿ ಆರಂಭವಾದಾಗಿನಿಂದ ಈ ಯೋಜನೆಯು 2.75 ಲಕ್ಷಕ್ಕೂ ಅಧಿಕ ಮಹಿಳೆಯರು/ಎಸ್ ಸಿ/ಎಸ್ ಟಿ ಉದ್ಯಮಿಗಳಿಗೆ ಸಾಲವನ್ನು ಒದಗಿಸಿದೆ.

ಯೋಜನೆಯ ಪ್ರಮುಖ ಮುಖ್ಯಾಂಶಗಳು:

  • ಅರ್ಹ ಸಾಲಗಾರರು: ಹೊಸ/ಹಸಿರು ವಲಯದ ಉದ್ಯಮಗಳನ್ನು ಸ್ಥಾಪಿಸಲು ಮಹಿಳೆಯರು, ಎಸ್‌ಸಿ ಮತ್ತು ಎಸ್‌ಟಿ ಉದ್ಯಮಿಗಳು.
  • ನೆರವಿನ ಪ್ರಮಾಣ: ಸಾಲವು ಸಂಯೋಜಿತ (ದುಡಿಯುವ ಬಂಡವಾಳ ಮತ್ತು ಅವಧಿ ಸಾಲ) ಅಥವಾ 10.00 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮತ್ತು 1.00 ಕೋಟಿ ರೂ.ವರೆಗೆ (ಯೋಜನೆಯ ವೆಚ್ಚದ ಶೇ.85ರವರೆಗೆ) ಅವಧಿ ಸಾಲದ ರೂಪದಲ್ಲಿರಬಹುದು.
  • ಅರ್ಹ ವಲಯಗಳು: ಉತ್ಪಾದನೆ, ಸೇವೆಗಳು, ವ್ಯಾಪಾರ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು.
  • ಕ್ರೆಡಿಟ್ ಗ್ಯಾರಂಟಿ ವ್ಯಾಪ್ತಿ: ಸಾಲದ ಮೊತ್ತದ ಶೇ.85 ರಷ್ಟು
  • ಗ್ಯಾರಂಟಿ ಶುಲ್ಕ: ಶೇ.0.50ರಷ್ಟು ಪ್ರಮಾಣಿತ ಗ್ಯಾರಂಟಿ ಶುಲ್ಕ

ಪರಿಣಾಮ:

  • ಮಹಿಳೆಯರು, ಎಸ್‌ಸಿ ಮತ್ತು ಎಸ್‌ಟಿ ಉದ್ಯಮಿಗಳಿಗೆ ಸಾಲದ ಲಭ್ಯತೆಯು ಹಿಂದುಳಿದ ಸಮುದಾಯಗಳಲ್ಲಿ ಉದ್ಯಮ ಸೃಷ್ಟಿಗೆ ಅನುವು ಮಾಡಿಕೊಡುತ್ತದೆ ಮತ್ತು ಉದ್ಯಮಶೀಲತೆಯನ್ನು ಬಲವರ್ಧನೆಗೊಳಿಸುತ್ತದೆ, ಇದರಿಂದಾಗಿ ಸಮಗ್ರ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುತ್ತದೆ.

 

*****