Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2026-27ನೇ ಸಾಲಿನ ಹಿಂಗಾರು ಋತುವಿನಲ್ಲಿ (01.10.2026 ರಿಂದ 31.03.2027 ರವರೆಗೆ) ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳ ಮೇಲಿನ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್) ದರಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ 2026-27ನೇ ಸಾಲಿನ ಹಿಂಗಾರು ಋತುವಿನಲ್ಲಿ (01.10.2026 ರಿಂದ 31.03.2027 ರವರೆಗೆ) ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳ ಮೇಲಿನ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್) ದರಗಳಿಗೆ ಅನುಮೋದನೆ ನೀಡಿದೆ. 2026-27ನೇ ಸಾಲಿನ ಹಿಂಗಾರು ಋತುವಿನಲ್ಲಿ ತಾತ್ಕಾಲಿಕ ಬಜೆಟ್ ಅವಶ್ಯಕತೆ ಸುಮಾರು 62,370.02 ಕೋಟಿ ರೂ.ಗಳಾಗಿರುತ್ತದೆ. ಇದು 2025-26ನೇ ಸಾಲಿನ ಹಿಂಗಾರು ಋತುವಿನ ಬಜೆಟ್ ಅಗತ್ಯಕ್ಕಿಂತ ಅಂದಾಜು 24,417.73 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. 2025-26 ರ ಹಿಂಗಾರು ಬಜೆಟ್ 37,952.29 ರೂಪಾಯಿ ಕೋಟಿ ಆಗಿತ್ತು.

ಪ್ರಯೋಜನಗಳು:

  • ರೈತರಿಗೆ ಸಬ್ಸಿಡಿ ದರದಲ್ಲಿ, ಕೈಗೆಟುಕುವ ಮತ್ತು ಸೂಕ್ತ ಬೆಲೆಗಳಲ್ಲಿ ರಸಗೊಬ್ಬರಗಳ ಲಭ್ಯತೆ  ಖಾತ್ರಿಪಡಿಸಿಕೊಳ್ಳಲಾಗುವುದು.
  • ಅಂತಾರಾಷ್ಟ್ರೀಯ ರಸಗೊಬ್ಬರಗಳು ಮತ್ತು ಒಳಹರಿವಿನ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪಿ & ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯ ಏಕರೂಪಗೊಳಿಸುವುದು.

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:

ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಈ ರಸಗೊಬ್ಬರಗಳ ಸುಗಮ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಡಿಎಪಿ ಮತ್ತು ಎನ್‌ಪಿಕೆಎಸ್ ಶ್ರೇಣಿಗಳನ್ನು ಒಳಗೊಂಡಂತೆ ಪಿ & ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 2026-27 ರ ಹಿಂಗಾರು ಹಂಗಾಮಿಗೆ ಅನುಮೋದಿತ ದರಗಳ ಆಧಾರದ ಮೇಲೆ (01.10.2026 ರಿಂದ 31.03.2027 ರವರೆಗೆ ಅನ್ವಯಿಸುತ್ತದೆ) ಒದಗಿಸಲಾಗುವುದು.

ಹಿನ್ನೆಲೆ:

ಸರ್ಕಾರವು ಡಿಎಪಿ ಸೇರಿದಂತೆ 28 ದರ್ಜೆಯ ಪಿ&ಕೆ ರಸಗೊಬ್ಬರಗಳನ್ನು ರಸಗೊಬ್ಬರ ತಯಾರಕರು/ ಆಮದುದಾರರ ಮೂಲಕ ಸಬ್ಸಿಡಿ ಬೆಲೆಯಲ್ಲಿ ರೈತರಿಗೆ ಲಭ್ಯವಾಗುವಂತೆ ಮಾಡುತ್ತಿದೆ. ಪಿ&ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 01.04.2010 ರಿಂದ ಜಾರಿಗೆ ಬರುವಂತೆ ಎನ್‌ಬಿಎಸ್ ಯೋಜನೆಯಿಂದ ನಿರ್ವಹಿಸಲಾಗುತ್ತಿದೆ. ತನ್ನ ರೈತ ಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ಕೇಂದ್ರ ಸರ್ಕಾರವು ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಪಿ&ಕೆ ರಸಗೊಬ್ಬರಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಬದ್ಧವಾಗಿದೆ.

ಯೂರಿಯಾ, ಡಿಎಪಿ, ಎಂಒಪಿ ಮತ್ತು ಸಲ್ಫರ್‌ನಂತಹ ರಸಗೊಬ್ಬರಗಳು ಮತ್ತು ಒಳಹರಿವಿನ ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಡಿಎಪಿ ಮತ್ತು ಎನ್‌ಪಿಕೆಎಸ್ ಶ್ರೇಣಿಗಳನ್ನು ಒಳಗೊಂಡಂತೆ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳ ಮೇಲೆ 01.10.2026 ರಿಂದ 31.03.2027 ರವರೆಗೆ ಅನ್ವಯವಾಗುವ ಎನ್‌ಬಿಎಸ್ ದರಗಳನ್ನು ಅನುಮೋದಿಸಲು ಸರ್ಕಾರ ನಿರ್ಧರಿಸಿದೆ. ರಸಗೊಬ್ಬರ ಕಂಪನಿಗಳಿಗೆ ಅನುಮೋದಿತ ಮತ್ತು ಅಧಿಸೂಚಿತ ದರಗಳ ಪ್ರಕಾರ ಸಬ್ಸಿಡಿ ನೀಡಲಾಗುವುದು ಇದರಿಂದ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರ ದೊರಕುತ್ತಿದೆ.

 

*****