Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸದಾ ಉದಾತ್ತ ಮತ್ತು ಸಕಾರಾತ್ಮಕ ಕಾರ್ಯಗಳನ್ನು ಮಾಡುವುದರ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಯಾವುದೇ ಮನುಷ್ಯನು ಒಂದೇ ಕ್ಷಣವೂ ಏನನ್ನೂ ಮಾಡದೆ (ಕರ್ಮ ಮಾಡದೆ) ಇರಲು ಸಾಧ್ಯವಿಲ್ಲ; ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸದಾ ಉದಾತ್ತ ಮತ್ತು ಸಕಾರಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಳೆಯಬೇಕು ಎಂದು ಅವರು  ಒತ್ತಿ ಹೇಳಲಾಗಿದೆ.

ಪ್ರಧಾನಮಂತ್ರಿ ಅವರು ತಮ್ಮ ‘X’ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

“न हि कश्चित्क्षणमपि जातु तिष्ठत्यकर्मकृत्।

कार्यते ह्यवशः कर्म सर्वः प्रकृतिजैर्गुणैः॥”

ಈ ಸೃಷ್ಟಿಯಲ್ಲಿರುವ ಯಾವೊಬ್ಬ ಮನುಷ್ಯನೂ ಒಂದೇ ಒಂದು ಕ್ಷಣವೂ ಏನನ್ನೂ ಮಾಡದೆ ಸುಮ್ಮನಿರಲು ಸಾಧ್ಯವಿಲ್ಲ. ಪ್ರಕೃತಿಯ ಸಹಜ ಗುಣಗಳು ಮತ್ತು ವ್ಯಕ್ತಿಯ ಸ್ವಭಾವವು ಪ್ರತಿಯೊಬ್ಬರನ್ನೂ ನಿರಂತರವಾಗಿ ಕಾರ್ಯಪ್ರವೃತ್ತರನ್ನಾಗಿಸುತ್ತವೆ; ಆದ್ದರಿಂದ, ನಾವು ನಮ್ಮ ಜೀವನವನ್ನು ಸದಾ ಉದಾತ್ತ ಮತ್ತು ಸಕಾರಾತ್ಮಕ ಕಾರ್ಯಗಳನ್ನು ಮಾಡುತ್ತಾ ಕಳೆಯಬೇಕು.

 

*****