ಅಧ್ಯಕ್ಷರಾದ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ 2026ರ ನವೆಂಬರ್ 17 ರಂದು ನಡೆಯಲಿರುವ 23ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ನಾನು ಇಂದು ಮನಿಲಾಗೆ ಪ್ರಯಾಣ ಬೆಳೆಸುತ್ತಿದ್ದೇನೆ.
ಆಸಿಯಾನ್ (ASEAN) ರಾಷ್ಟ್ರಗಳೊಂದಿಗಿನ ನಮ್ಮ ಸಂಬಂಧವು ಭಾರತದ ‘ಪೂರ್ವ ಕ್ರಿಯಾನೀತಿ ‘ (Act East) ನೀತಿಯ ಕೇಂದ್ರಬಿಂದುವಾಗಿದೆ ಮತ್ತು ನಮ್ಮ ‘ಮಹಾಸಾಗರ್’ (MAHASAGAR) ದೂರದೃಷ್ಟಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಶತಮಾನಗಳ ನಾಗರಿಕ ವಿನಿಮಯದ ಬೇರುಗಳನ್ನು ಹೊಂದಿರುವ ನಮ್ಮ ಬಾಂಧವ್ಯವು, ಇಂದು ವ್ಯಾಪಾರ, ಸಂಪರ್ಕ, ಸಾಗರ ಭದ್ರತೆ, ತಂತ್ರಜ್ಞಾನ ಮತ್ತು ಜನರ ನಡುವಿನ ಸಂಬಂಧಗಳನ್ನು ಒಳಗೊಂಡ ಒಂದು ಕ್ರಿಯಾಶೀಲ ಪಾಲುದಾರಿಕೆಯಾಗಿ ಬೆಳೆದಿದೆ.
ಆಸಿಯಾನ್-ಭಾರತ ಶೃಂಗಸಭೆಯಲ್ಲಿ ನಮ್ಮ ‘ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ’ಯ ಪ್ರಗತಿಯನ್ನು ಮತ್ತಷ್ಟು ವಿಸ್ತರಿಸಲು ಹಾಗೂ ಅಭಿವೃದ್ಧಿ, ಸಂಪರ್ಕ ಮತ್ತು ಸಮೃದ್ಧಿಗಾಗಿ ನಾವು ಹೊಂದಿರುವ ಆಕಾಂಕ್ಷೆಗಳಿಗೆ ಹೆಚ್ಚಿನ ವೇಗ ನೀಡಲು, ಇತರ ನಾಯಕರೊಂದಿಗೆ ಒಗ್ಗೂಡಿ ಕಾರ್ಯನಿರ್ವಹಿಸಲು ನಾನು ಎದುರು ನೋಡುತ್ತಿದ್ದೇನೆ.
ಪೂರ್ವ ಏಷ್ಯಾ ಶೃಂಗಸಭೆಯು ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳ ಕುರಿತು ಚರ್ಚಿಸಲು ಒಂದು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಾಯಕರೊಂದಿಗೆ ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಹಕಾರ ಬಲವರ್ಧನೆ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ.
ನಾನು ಫಿಲಿಪೈನ್ಸ್ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲು ಸಹ ಎದುರು ನೋಡುತ್ತಿದ್ದೇನೆ. ಅವರ ಕೊಡುಗೆಯು ನಮ್ಮ ಎರಡೂ ದೇಶಗಳ ನಡುವಿನ ಸ್ನೇಹದ ಬಂಧವನ್ನು ಮತ್ತಷ್ಟು ಬಲವರ್ಧನೆಗೊಳಿಸುದೆ.
ಈ ಭೇಟಿಯು ಆಸಿಯಾನ್ನೊಂದಿಗೆ ಭಾರತ ಹೊಂದಿರುವ ಪಾಲುದಾರಿಕೆಗೆ ಹೊಸ ಚೈತನ್ಯವನ್ನು ನೀಡುತ್ತದೆ ಮತ್ತು ಶಾಂತಿಯುತ, ಸಮೃದ್ಧ ಹಾಗೂ ಸುಸ್ಥಿರ ಇಂಡೋ-ಪೆಸಿಫಿಕ್ ವಲಯ ನಿರ್ಮಿಸುವ ನಮ್ಮ ಸಾಮೂಹಿಕ ಬದ್ಧತೆಯನ್ನು ಮತ್ತಷ್ಟು ಬಲವರ್ಧನೆಗೊಳುಸುತ್ತದೆಂಬ ವಿಶ್ವಾಸ ನನಗಿದೆ.
*****
Will be in Manila, Philippines later today and tomorrow to attend the following programmes: 23rd ASEAN-India Summit. 21st East Asia Summit India attaches immense importance to close friendship with ASEAN nations. I’m also looking forward to interacting with the Indian community based in the Philippines. https://t.co/xmAZDNtrFw
— Narendra Modi (@narendramodi) November 16, 2026