ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಜಿ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಶ್ರೀ ಶೈಲೇಶ್ ಕುಮಾರ್ ಸಿಂಗ್ ಅವರು ಬರೆದಿರುವ ಲೇಖನವನ್ನು ಹಂಚಿಕೊಂಡಿದ್ದಾರೆ.
ಗ್ರಾಮೀಣ ಮಹಿಳೆಯರು ಸ್ವಸಹಾಯ ಗುಂಪುಗಳಿಂದ ಯಶಸ್ವಿ ಉದ್ಯಮಿಗಳಾಗುವಂತಾಗಲು, ಸುಸ್ಥಿರ ಆದಾಯ ಮತ್ತು ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವಂತಾಗುವಲ್ಲಿ ಲಕ್ಷಾಧಿಪತಿ ದೀದಿ ಉಪಕ್ರಮವು ಹೇಗೆ ಪೂರಕವಾಗಿದೆ ಎಂಬುದನ್ನು ಈ ಲೇಖನ ವಿವರಿಸಿದೆ. ಕೌಶಲ್ಯ, ಹಣಕಾಸು, ಮಾರುಕಟ್ಟೆಗಳು ಮತ್ತು ಸಮುದಾಯ ಸಂಸ್ಥೆಗಳಿಗೆ ಪ್ರವೇಶಾವಕಾಶದಿಂದಾಗಿ ಮಹಿಳೆಯರು ಉದ್ಯಮ ಸ್ಥಾಪಿಸಲು, ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ತಮ್ಮದೇ ಆದ ಭವಿಷ್ಯವನ್ನು ರೂಪಿಸಿಕೊಳ್ಳಲು ಹೇಗೆ ಸಾಧ್ಯವಾಗುತ್ತಿದೆ ಎಂಬುದನ್ನು ಲೇಖನ ವಿಸ್ತೃತವಾಗಿ ತಿಳಿಸಿದೆ.
ಪ್ರಧಾನಮಂತ್ರಿಯವರ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
“ಸ್ವಸಹಾಯ ಗುಂಪುಗಳಿಂದ ಯಶಸ್ವಿ ಉದ್ಯಮಿಗಳವರೆಗೆ, ಗ್ರಾಮೀಣ ಮಹಿಳೆಯರು ಸಬಲೀಕರಣದ ಹೊಸ ಗಾಥೆ ಬರೆಯುತ್ತಿದ್ದಾರೆ!
ಮಾಜಿ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಶ್ರೀ ಶೈಲೇಶ್ ಕುಮಾರ್ ಸಿಂಗ್ ಅವರು, ಗ್ರಾಮೀಣ ಮಹಿಳೆಯರು ಸುಸ್ಥಿರ ಆದಾಯ ಮತ್ತು ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯ ಹೊಂದುವತ್ತ ಸಾಗಲು ‘ಲಕ್ಷಾಧಿಪತಿ ದೀದಿ’ ಉಪಕ್ರಮವು ಹೇಗೆ ನೆರವಾಗಿದೆ ಎಂಬ ಬಗ್ಗೆ ಬರೆದಿದ್ದಾರೆ.
ಮಹಿಳೆಯರು ಉದ್ಯಮಗಳನ್ನು ಕಟ್ಟಲು, ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕೌಶಲ್ಯ, ಹಣಕಾಸು ಲಭ್ಯತೆ ಹಾಗೂ ಮಾರುಕಟ್ಟೆಗಳಿಗೆ ಪ್ರವೇಶಾವಕಾಶ ಮತ್ತು ಸಮುದಾಯ ಸಂಸ್ಥೆಗಳು ಹೇಗೆ ಸಹಕಾರಿಯಾಗಿವೆ ಎಂಬುದನ್ನು ಅವರು ವಿವರಿಸಿದ್ದಾರೆ.
hindustantimes.com/opinion/rural-…”
*****
From self-help groups to successful entrepreneurs, rural women are shaping a new story of empowerment! Former Rural Development Secretary Shri Shailesh Kumar Singh writes about how the Lakhpati Didi initiative is helping rural women move towards sustainable incomes and greater economic independence. He highlights how skills, access to finance, markets and community institutions are enabling women to build enterprises, make economic decisions and shape their own futures. https://t.co/5i0uWH47yj
— PMO India (@PMOIndia) November 16, 2026