ಪಿಎಂಇಂಡಿಯಾ
ಮಧ್ಯಮ ಆದಾಯ ವರ್ಗಕ್ಕೆ ಹೊಸ ಸಿ.ಎಲ್.ಎಸ್.ಎಸ್. ಪರಿಚಯಿಸಲು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಈ ಕೆಳಗಿನ ಪ್ರಸ್ತಾಪಗಳಿಗೆ ಪೂರ್ವಾನ್ವಯ ಅನುಮೋದನೆ ನೀಡಿದೆ
(i) ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಭಿಯಾನದ ಸಾಲ ಸಂಪರ್ಕಿತ ಸಬ್ಸಿಡಿ ಯೋಜನೆ (ಸಿ.ಎಲ್.ಎಸ್.ಎಸ್.) ಅವಧಿಯನ್ನು 15ರಿಂದ 20 ವರ್ಷಗಳಿಗೆ ವಿಸ್ತರಿಸಲು (ಇದಕ್ಕೆ ಇಡಬ್ಲ್ಯುಎಸ್/ಎಲ್.ಐ.ಜಿ.ಯ ಸಿಎಲ್.ಎಸ್.ಎಸ್. ಎಂದು ಮರು ನಾಮಕರಣ ಮಾಡಲಾಗಿದೆ). ಇದನ್ನು ಕಡಿಮೆ ಆದಾಯ ವರ್ಗ/ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಸಿ.ಎಲ್.ಎಸ್.ಎಸ್. ಎಂದು ಕರೆಯಲಾಗುವುದು;
(ii) ಎಂ.ಐ.ಜಿ. ವರ್ಗವನ್ನು ಗುರಿಯಾಗಿಟ್ಟುಕೊಂಡು ಎಂ.ಐ.ಜಿ.ಗಳಿಗೆ ಹೊಸ ಸಾಲ ಸಂಪರ್ಕಿತ ಸಬ್ಸಿಡಿ ಯೋಜನೆಯ ಪರಿಚಯ;
(iii) ಕೇಂದ್ರೀಯ ನೋಡಲ್ ಸಂಸ್ಥೆಗಳೊಂದಿಗೆ (ಸಿ.ಎನ್.ಎ.ಗಳು) ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿದಪ್ರಾಥಮಿಕ ಸಾಲ ನೀಡುವ ಸಂಸ್ಥೆಗಳಿಗೆ (ಪಿ.ಎಲ್.ಐ.ಗಳು) ಪಿ.ಎಂ.ಎ.ವೈ. (ನಗರ) ಸಿ.ಎಲ್.ಎಸ್.ಎಸ್. (ಈಗ ಇಡಬ್ಲ್ಯುಎಸ್/ಎಲ್.ಐ.ಜಿಗಳ ಸಿ.ಎಲ್.ಎಸ್.ಎಸ್.), ಅಡಿಯಲ್ಲಿ ಎಂ.ಐ.ಜಿ.ಗಳಿಗೆ ಸಿ.ಎಲ್.ಎಸ್.ಎಸ್. ಅವಕಾಶವನ್ನು ವಿಸ್ತರಿಸುವುದನ್ನು ಕಡ್ಡಾಯ ಮಾಡಲು ಅಗತ್ಯವಾದ ಅವಶ್ಯ ಬದಲಾವಣೆಗಳನ್ನು ಅವುಗಳ ತಿಳಿವಳಿಕೆ ಒಪ್ಪಂದದಲ್ಲಿ ಮಾಡಲು ಅವಕಾಶ ನೀಡುತ್ತದೆ.;
(iii) ಯೋಜನೆಯಡಿ ಮಂಜೂರು ಮಾಡಲಾಗುವ ಸಾಲಗಳಿಗೆ ಪಿ.ಎಲ್.ಐ.ಗಳಿಗೆ ಪಾವತಿಸಬೇಕಾದ ಪ್ರಕ್ರಿಯೆಯ ಶುಲ್ಕ ತರ್ಕಬದ್ಧವಾಗಿಸಲು /ಪರಿಚಯಿಸಲು;
(iv) ಉದ್ದೇಶಿತ ಎಂ.ಐ.ಜಿ. ಸಿ.ಎಲ್.ಎಸ್.ಎಸ್.ಗಾಗಿ ಬಿ.ಇ. ಹಂತದಲ್ಲಿ2017-18ನೇ ಸಾಲಿನ ಆಯವ್ಯಯದಲ್ಲಿ ಆರಂಭಿಕವಾಗಿ 1000 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲು;ಮತ್ತು
(v) ಉಸ್ತುವಾರಿ ಸಚಿವರ ಅನುಮೋದನೆಯೊಂದಿಗೆ ಎಂ.ಐ.ಜಿ.ಯ ಸಿ.ಎಲ್.ಎಸ್.ಎಸ್. ಗಾಗಿ ಕಾರ್ಯಾತ್ಮಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು.
ಉದ್ದೇಶಗಳು
a. ಹಾಲಿ ಇರುವ ಪ್ರಧಾನಮಂತ್ರಿಗಳ ಆವಾಸ್ ಯೋಜನೆ (ನಗರ) – ಸರ್ವರಿಗೂ ವಸತಿ ಅಭಿಯಾನ ಅಡಿಯಲ್ಲಿ ಇಡಬ್ಲ್ಯುಎಸ್ ಮತ್ತು ಎಲ್.ಐ.ಜಿ. ವಿಭಾಗಗಳ ಹಂಚಿಕೆ ಹೆಚ್ಚಿಸಲು;
b. ಮಧ್ಯಮ ಆದಾಯದ ಗುಂಪು (ಎಂ.ಐ.ಜಿ.)ಗಳಿಗೆ ತಲುಪಲು;
c. ಪ್ರಾಥಮಿಕ ಸಾಲ ನೀಡಿಕೆ ಸಂಸ್ಥೆ (ಪಿಎಲ್.ಐ.ಗಳು)ಗಳಿಗೆ ಪ್ರಕ್ರಿಯೆ ಸರಳಗೊಳಿಸಲು;
d. ನಗರ ಅಭಿವೃದ್ಧಿ ಮತ್ತು ವಸತಿ ವಲಯಗಳಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಗಾಗಿ ಪಿ.ಎಲ್.ಐ.ಗಳಿಗೆ ಪ್ರೋತ್ಸಾಹಕ ಒದಗಿಸಲು;
e. ಬಜೆಟ್ ಅವಕಾಶಗಳೊಂದಿಗೆ ಅಗತ್ಯ ನಿಧಿಯನ್ನು ಒದಗಿಸಿ ಹಣಕಾಸು ಲಭ್ಯವಾಗುವಂತೆ ಮಾಡಲು; ಮತ್ತು
f. ಕಾರ್ಯಕ್ರಮದ ಜಾರಿ/ಪ್ರಕ್ರಿಯೆಯನ್ನು ಸ್ಪಷ್ಟವಾಗಿ ವಿವರಿಸಲು
2022ರ ವೇಳೆಗೆ ಎಲ್ಲರಿಗೂ ವಸತಿ ಒದಗಿಸುವ ಯೋಜನೆಯಲ್ಲಿ ಸಮಾಜದ ಇ.ಡಬ್ಲ್ಯು.ಎಸ್., ಎಲ್.ಐ.ಜಿ ಮತ್ತು ಎಂ.ಐ.ಜಿ. ವಿಭಾಗದವರ ಹೆಚ್ಚಿನ ಪಾಲ್ಗೊಳ್ಳುವಿಕೆಯ ಖಾತ್ರಿಗಾಗಿ, ಮತ್ತು ಆ ಮೂಲಕ ಸಮಗ್ರತೆ ಮತ್ತು ಸಮಾನತೆ ಖಾತ್ರಿ ಪಡಿಸಲು.
ಪಿ.ಎಲ್.ಐ.ಗಳು ತಮ್ಮ ಸಕ್ರಿಯ ಪ್ರಕ್ರಿಯೆಯ ಮೂಲಕ ಅರ್ಹತೆಯ ಮಾನದಂಡ ತೃಪ್ತಿದಾಯಕ ಎಂದು ಹೇಳಿದ ತರುವಾಯ ಫಲಾನುಭವಿಗಳಿಗೆ ಬಡ್ಡಿ ಸಬ್ಸಿಡಿಯನ್ನು ಅವರ ಗೃಹ ಸಾಲದ ಖಾತೆಗಳಿಗೆ ಜಮಾ ಮಾಡಲಾಗುವುದು.
ಎಂ.ಐ.ಜಿ.ಗೂ ಉದ್ದೇಶಿತ ಬಡ್ಡಿ ಸಬ್ಸಿಡಿ ಯೋಜನೆಯು ಈ ವರ್ಗದವರ ವಸತಿ ಅಗತ್ಯಗಳನ್ನು ಪೂರೈಸುವ ನಾವಿನ್ಯ ದೃಷ್ಟಿಕೋನವಾಗಿದೆ.
AKT/VBA/SH-