Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಕಾರ್ಯತಂತ್ರಾತ್ಮಕ ತೈಲೋತ್ಪನ್ನ ದಾಸ್ತಾನು ನಿಯಮಿತ (ಐ.ಎಸ್.ಪಿ.ಆರ್.ಎಲ್.) ಮತ್ತು ಯುಎಇಯ ಅಬು ಧಾಬಿ ರಾಷ್ಟ್ರೀಯ ತೈಲ ಕಂಪನಿ (ಎಡಿಎನ್ಓಸಿ) ನಡುವೆ ನಿರ್ವಹಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತೀಯ ಕಾರ್ಯತಂತ್ರಾತ್ಮಕ ತೈಲೋತ್ಪನ್ನ ದಾಸ್ತಾನು ನಿಯಮಿತ (ಐಎಸ್ಪಿಆರ್.ಎಲ್.) ಮತ್ತು ಯುಎಇಯ ಅಬು ಧಾಬಿ ರಾಷ್ಟ್ರೀಯ ತೈಲ ಕಂಪನಿ (ಎಡಿಎನ್ಓಸಿ) ನಡುವೆ ತೈಲು ದಾಸ್ತಾನು ಮತ್ತು ನಿರ್ವಹಣೆ ಕುರಿತ ನಿರ್ಧಾರಕ ಒಪ್ಪಂದದ ಅಂಕಿತಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಈ ಒಪ್ಪಂದದ ಪ್ರಕಾರ ಎ.ಡಿ.ಎನ್.ಓ.ಸಿ. 0.81 ಎಂ.ಎಂ.ಟಿ. ಅಥವಾ 5,860,000 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಭರ್ತಿ ಮಾಡಲು ಕರ್ನಾಟಕದ ಮಂಗಳೂರಿನ ಐ.ಎಸ್.ಪಿ.ಆರ್.ಎಲ್.ನಲ್ಲಿ ದಾಸ್ತಾನು ಮಾಡುವ ಸೌಲಭ್ಯ ಬಳಸಿಕೊಳ್ಳಲಿದೆ.

ಹೀಗೆ ದಾಸ್ತಾನು ಮಾಡಲಾಗುವ ಕಚ್ಚಾ ತೈಲದ ಪೈಕಿ, ಕೆಲವು ಭಾಗವನ್ನು ಎಡಿಎನ್ಓಸಿಯ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ, ಇನ್ನು ಪ್ರಮುಖ ಭಾಗವನ್ನು ಕಾರ್ಯತಂತ್ರಾತ್ಮಕ ಉದ್ದೇಶಕ್ಕೇ ಬಳಸಲಾಗುತ್ತದೆ. ಒಪ್ಪಂದಕ್ಕೆ ಅಂಕಿತ ಹಾಕುವುದು ಭಾರತದ ಇಂಧನ ಸುರಕ್ಷತೆಯನ್ನು ತ್ವರಿತಗೊಳಿಸಲಿದೆ.
ಭಾರತ ಮತ್ತು ಯುಎಇ ಕಾರ್ಯತಂತ್ರಾತ್ಮಕ ಪಾಲುದಾರರಾಗಿದ್ದಾರೆ. ಎ.ಡಿ.ಎನ್.ಓ.ಸಿ. ಹೂಡಿಕೆಯು, ಹೂಡಿಕೆ ಕುರಿತ ಉನ್ನತ ಮಟ್ಟದ ಮಾತುಕತೆ ಪಡೆಯ (ಎಚ್.ಎಲ್.ಟಿ.ಎಫ್.ಐ.) ಅಡಿಯಲ್ಲಿ ಯು.ಎ.ಇ. ಮಾಡುತ್ತಿರುವ ಪ್ರಮುಖ ಹೂಡಿಕೆ ಆಗಿದೆ ಮತ್ತು ಭಾರತದ ಇಂಧನ ವಲಯದಲ್ಲಿ ಯು.ಎ.ಇ. ಮಾಡುತ್ತಿರುವ ಪ್ರಥಮ ಹೂಡಿಕೆಯೂ ಆಗಿದೆ.

*****

AKT/VBA/SH