Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಜಯವಾಡ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀ ವಿಮಾನ ನಿಲ್ದಾಣವೆಂದು ಘೋಷಿಸಲು ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2014ರ ಆಂಧ್ರಪ್ರದೇಶ ಪುನಾರಚನೆ ಕಾಯಿದೆಯ ನಿಯಮಗಳ ಅನುಸಾರವಾಗಿ ವಿಜಯವಾಡ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಲು ತನ್ನ ಅನುಮೋದನೆ ನೀಡಿದೆ.

ಈ ಪ್ರಸ್ತಾಪವು ರಾಜ್ಯದ ರಾಜಧಾನಿಗೆ ಸುಧಾರಿತ ಸಂಪರ್ಕವನ್ನು ಒದಗಿಸುತ್ತದೆ. ವಾಯು ಯಾನ ಪ್ರಯಾಣಿಕರಿಗೆ ಸ್ಪರ್ಧಾತ್ಮಕ ದರದಲ್ಲಿ ವಿಸ್ತೃತ ಆಯ್ಕೆಯ ಸೇವೆಯನ್ನೂ ಒದಗಿಸುತ್ತದೆ ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುತ್ತದೆ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಮತ್ತು ಸರಕು ಸಾಗಣೆಯ ಮೂಲಕ ಆಂಧ್ರಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೂ ಚೈತನ್ಯ ನೀಡುತ್ತದೆ.

ಹಿನ್ನೆಲೆ:

ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸುವುದು ಸಂಚಾರದ ಸಾಮರ್ಥ್ಯ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕಾಗಿ ವಿಮಾನಯಾನ ಸಂಸ್ಥೆಗಳು ಮುಂದಿಡುವ ಬೇಡಿಕೆಯನ್ನು ಅವಲಂಬಿಸಿರುತ್ತದೆ. ತರುವಾಯ ರಾತ್ರಿಯಲ್ಲಿ ವಿಮಾನಗಳ ಕಾರ್ಯಾಚರಣೆಗೆ ಇನ್ ಸ್ಟ್ರುಮೆಂಟ್ ಲ್ಯಾಂಡಿಂಗ್ ವ್ಯವಸ್ಥೆ, ಗ್ರೌಂಡ್ ಲೈಟಿಂಗ್ ಸೌಲಭ್ಯ, ಮಧ್ಯಮ ಸಾಮರ್ಥ್ಯದ ಲಾಂಗ್ ರೇಂಜ್ ವಿಮಾನಗಲು ಅಥವಾ ಅದಕ್ಕೆ ಸಮನಾದ ವಿಮಾನಗಳ ಅಗತ್ಯಕ್ಕನುಗುಣವಾದ ರನ್ ವೇ ಉದ್ದ, ಕಸ್ಟಂಮ್ಸ್, ವಲಸೆ, ಆರೋಗ್ಯ ಲಭ್ಯತೆ ಮತ್ತು ಅಮಿಮಲ್ ಅಂಡ್ ಪ್ಲಾಂಟ್ ಕ್ವಾರಂಟೈನ್ ಸೇವೆಗಳು ಕೂಡ ಅಂತಾರಾಷ್ಟ್ರೀಯ ಕಾರ್ಯಾಚರಣೆಗೆ ಅಗತ್ಯವಾಗಿದೆ.

ವಿಜಯವಾಡಾ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸುವುದನ್ನು ಆಂಧ್ರಪ್ರದೇಶ ಪುನರ್ ಸಂಘಟನೆ ಕಾಯಿದೆ 2014ರ ನಿಯಮಗಳ ಅನುಸಾರವಾಗಿ ಮತ್ತು ಪ್ರಯಾಣಿಕರ ಸಂಚಾರದ ವೃದ್ಧಿ, ವಾಯುಯಾನ ಸಂಸ್ಥೆಗಳ ಬೇಡಿಕೆ ಮತ್ತು ಆಂಧ್ರಪ್ರದೇಶ ಸರ್ಕಾರದ ಕೋರಿಗೆಯಂತೆ ಕೈಗೆತ್ತಿಕೊಳ್ಳಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಅಂತಾರಾಷ್ಟ್ರೀಯ ಕಾರ್ಯಾಚರಣೆಗೆ ಅಗತ್ಯವಾದ ಮೂಲಸೌಕರ್ಯಕ್ಕಾಗಿ ಮೇಲ್ದರ್ಜೆಗೇರಿಸುವ ಕಾರ್ಯ ಕೈಗೊಂಡಿದೆ.

****

AKT/VBA/SH