ಪಿಎಂಇಂಡಿಯಾ
ನಾವೀನ್ಯತೆ ಮತ್ತು ಉದ್ಯಮಶೀಲತೆಯ ಕ್ಷೇತ್ರಗಳಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾದ ಚಿಂತನೆಯ ಮಾರ್ಗ ಮತ್ತು ವಿಶಿಷ್ಟವಾದ ಸೃಜನಶೀಲ ದೃಷ್ಟಿಕೋನವನ್ನು ಹೊಂದಿರುತ್ತಾನೆ ಮತ್ತು ಈ ವೈವಿಧ್ಯತೆಯೇ ಹೊಸ ಸಾಧ್ಯತೆಗಳಿಗೆ ಕಾರಣವಾಗುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ. ಪ್ರತಿಯೊಂದು ನೀರಿನ ಮೂಲವು ವಿಭಿನ್ನ ರುಚಿಸ್ವಾದಯನ್ನು ಹೊಂದಿರುವಂತೆ, ಪ್ರತಿಯೊಂದು ಪ್ರತಿಭೆಯೂ ತನ್ನದೇ ಆದ ವಿಶಿಷ್ಟ ಗುರುತು ಮತ್ತು ಕೊಡುಗೆಯನ್ನು ಹೊಂದಿದೆ. ವೈವಿಧ್ಯಮಯ ವಿಚಾರಗಳು ಮತ್ತು ಸಾಮರ್ಥ್ಯಗಳ ಒಮ್ಮುಖದ ಮೂಲಕ ನಾವೀನ್ಯತೆ ಮತ್ತು ಪ್ರಗತಿ ಸಾಧ್ಯವಾಗುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಪ್ರಧಾನಮಂತ್ರಿಯವರು ಈ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ –
“पिण्डे पिण्डे मतिर्भिन्ना कुण्डे कुण्डे नवं पयः।
जातौ जातौ नवाचाराः नवा वाणी मुखे मुखे॥”
ನಾವೀನ್ಯತೆ ಮತ್ತು ಉದ್ಯಮ ಕ್ಷೇತ್ರದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾದ ಚಿಂತನೆಯ ಮಾರ್ಗ ಮತ್ತು ವಿಶಿಷ್ಟವಾದ ಸೃಜನಶೀಲ ದೃಷ್ಟಿಕೋನವನ್ನು ಹೊಂದಿರುತ್ತಾನೆ ಮತ್ತು ಈ ವೈವಿಧ್ಯತೆಯು ಹೊಸ ಸಾಧ್ಯತೆಗಳಿಗೆ ಕಾರಣವಾಗುತ್ತದೆ ಎಂದು ಸುಭಾಷಿತಂ ವ್ಯಾಖ್ಯಾನ ತಿಳಿಸುತ್ತದೆ. ನೀರಿನ ರುಚಿಸ್ವಾದ ಒಂದು ಮೂಲದಿಂದ ಇನ್ನೊಂದಕ್ಕೆ ಭಿನ್ನವಾಗಿರುವಂತೆ, ಪ್ರತಿಯೊಂದು ಪ್ರತಿಭೆಯೂ ತನ್ನದೇ ಆದ ವಿಶಿಷ್ಟ ಗುರುತು ಮತ್ತು ಕೊಡುಗೆಯನ್ನು ಹೊಂದಿರುತ್ತದೆ. ಈ ವಿಭಿನ್ನ ವಿಚಾರಗಳು ಮತ್ತು ಸಾಮರ್ಥ್ಯಗಳ ಸಂಯೋಜನೆಯ ಮೂಲಕವೇ ನಾವೀನ್ಯತೆ ಮತ್ತು ಪ್ರಗತಿ ಸಾಧ್ಯವಾಗುತ್ತದೆ ಎಂದು ಸುಭಾಷಿತಂ ಸಂದೇಶ ತಿಳಿಸುತ್ತದೆ.
ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ರೀತಿ ಬರೆದಿದ್ದಾರೆ;
“पिण्डे पिण्डे मतिर्भिन्ना कुण्डे कुण्डे नवं पयः।
जातौ जातौ नवाचाराः नवा वाणी मुखे मुखे॥”
*****
पिण्डे पिण्डे मतिर्भिन्ना कुण्डे कुण्डे नवं पयः।
— Narendra Modi (@narendramodi) June 15, 2026
जातौ जातौ नवाचाराः नवा वाणी मुखे मुखे॥ pic.twitter.com/KZHjUsEMzb