ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಅಸ್ಸಾಂನಲ್ಲಿಂದು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಭಾರತದ ಅತಿ ಉದ್ದದ – 9.15 ಕಿ.ಮೀ ಉದ್ದದ ಧೋಲಾ – ಸಾಡಿಯಾ ಸೇತುವೆಯನ್ನು ಉದ್ಘಾಟಿಸಿದರು.
ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮೂರು ವರ್ಷ ತುಂಬಿದ ಸಂದರ್ಭದಲ್ಲಿ ಇದು ಅವರ ಪ್ರಥಮ ಕಾರ್ಯಕ್ರಮವಾಗಿದೆ.
ಈ ಸೇತುವೆಯು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವಿನ ಪ್ರಯಾಣದ ಸಮಯ ಹಾಗೂ ದೂರವನ್ನು ಕಡಿಮೆ ಮಾಡಲಿದೆ ಮತ್ತು ಸಂಪರ್ಕವನ್ನು ಹೆಚ್ಚಿಸಲಿದೆ.
ಉದ್ಘಾಟನೆಯ ಅಂಗವಾಗಿ ಫಲಕ ಅನಾವರಣ ಮಾಡಿದ ಪ್ರಧಾನಮಂತ್ರಿಯವರು, ಸೇತುವೆಯ ಮೇಲೆ ಕೆಲವು ನಿಮಿಷಗಳ ಕಾಲ ನಡೆದು, ಸಂಚರಿಸಿದರು.
ಬಳಿಕ ಧೋಲಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಸೇತುವೆಯ ಉದ್ಘಾಟನೆ ಈ ಪ್ರದೇಶದ ಜನರ ದೀರ್ಘ ಕಾಲದ ಕಾಯುವಿಕೆಗೆ ಕೊನೆ ಹಾಡಿದೆ ಎಂದರು.
ಅಭಿವೃದ್ಧಿಗೆ ಮೂಲಸೌಕರ್ಯ ಅತ್ಯಂತ ಮಹತ್ವದ್ದಾಗಿದೆ, ಮತ್ತು ಕೇಂದ್ರ ಸರ್ಕಾರ ಜನರ ಕನಸುಗಳನ್ನು ಮತ್ತು ಆಶಯಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತಿದೆ ಎಂದರು. ಈ ಸೇತುವೆಯು ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳ ನಡುವಿನ ಸಂಪರ್ಕವನ್ನು ಹೆಚ್ಚಿಸಲಿದೆ ಮತ್ತು ಆರ್ಥಿಕ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ಬಾಗಿಲು ತೆರೆಯಲಿದೆ ಎಂದರು.
ದೇಶದ ಪೂರ್ವ ಮತ್ತು ಈಶಾನ್ಯ ಭಾಗಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಅತ್ಯಂತ ಹೆಚ್ಚಿನ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿವೆ. ಈ ನಿಟ್ಟಿನಲ್ಲಿ ಈ ಸೇತುವೆಯು ಕೇಂದ್ರ ಸರ್ಕಾರದ ದೃಷ್ಟಿಕೋನದ ನಿಟ್ಟಿನಲ್ಲಿ ಒಂದು ಅಂಶ ಮಾತ್ರ ಎಂದು ಹೇಳಿದರು.
ಈ ಸೇತುವೆಯು ಶ್ರೀಸಾಮಾನ್ಯರ ಬದುಕಿನಲ್ಲಿ ಧನಾತ್ಮಕವಾದ ಬದಲಾವಣೆ ತರುತ್ತದೆ ಎಂದ ಪ್ರಧಾನಿ, ಕೇಂದ್ರ ಸರ್ಕಾರ ಜಲ ಸಾರಿಗೆ ಅಭಿವೃದ್ದಿಗೂ ಒತ್ತು ನೀಡಿದೆ ಎಂದರು.
ಈಶಾನ್ಯ ಮತ್ತು ದೇಶದ ಇತರ ಭಾಗಗಳಿಗೆ ಸಂಪರ್ಕ ಹೆಚ್ಚಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಮತ್ತು ಈ ನಿಟ್ಟಿನಲ್ಲಿ ಕೆಲಸ ಭರದಿಂದ ಸಾಗಿದೆ ಎಂದು ಪ್ರಧಾನಿ ಹೇಳಿದರು. ಈಶಾನ್ಯ ವಲಯದ ಉತ್ತಮ ಸಂಪರ್ಕ, ಈ ಭಾಗಗವನ್ನು ಆಗ್ನೇಯ ಏಷ್ಯಾದ ಆರ್ಥಿಕತೆಯೊಂದಿಗೆ ಬೆಸೆಯಲಿದೆ ಎಂದರು.
ಈಶಾನ್ಯ ಭಾಗದಲ್ಲಿರುವ ಪ್ರವಾಸೋದ್ಯಮದ ವಿಫುಲ ಅವಕಾಶಗಳ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಧೋಲಾ – ಸಾಡಿಯಾ ಸೇತುವೆಗೆ ಶ್ರೇಷ್ಠ ಸಂಗೀತಗಾರ, ಗೀತ ರಚನೆಕಾರ ಮತ್ತು ಕವಿ ಭೂಪೇನ್ ಹಜಾರಿಕಾ ಅವರ ಹೆಸರಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದರು.
*****
AKT/NT
Futuristic infrastructure that will power India's growth....PM at the Dhola-Sadiya Bridge during his Assam visit. pic.twitter.com/w8T14p4dNc
— PMO India (@PMOIndia) May 26, 2017