Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮ್ಯಾಡ್ರಿಡ್ ನಲ್ಲಿ ಅಧ್ಯಕ್ಷ ಮಾರಿಯಾನೋ ರಜಾಯ್ ರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ. ಭಾರತ ಮತ್ತು ಸ್ಪೇನ್ ನಡುವೆ ಏಳು ಒಪ್ಪಂದಗಳ ವಿನಿಮಯ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು, ಮ್ಯಾಡ್ರಿಡ್ ನಲ್ಲಿ ಸ್ಪೇನ್ ಸರ್ಕಾರದ ಅಧ್ಯಕ್ಷ ಮಾರಿಯಾನೋ ರಜಾಯ್ ಅವರೊಂದಿಗೆ ಮಾತುಕತೆ ನಡೆಸಿದರು.

ತಮ್ಮ ಪ್ರಸ್ತಾವನೆಯಲ್ಲಿ ಪ್ರಧಾನಿ,ಇಂದಿನ ತಮ್ಮ ಮಾತುಕತೆ ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ದೀರ್ಘಕಾಲ ಮುಂದುವರಿಸಲಿದೆ ಎಂದರು. ಅಂತರ ಸಂಪರ್ಕಿತ ಮತ್ತು ಪರಸ್ಪರ ಅವಲಂಬಿತ ವಿಶ್ವದಲ್ಲಿ ಸ್ಪೇನ್ ಮತ್ತು ಭಾರತ ಪರಸ್ಪರರ ಲಾಭಕ್ಕಾಗಿ ಮತ್ತು ವಿಶ್ವದ ಹಿತಕ್ಕಾಗಿ ಒಗ್ಗೂಡಿ ದುಡಿಯಬಹುದು ಎಂದರು. ಅಧ್ಯಕ್ಷ ರಜಾಯ್ ಅವರು ದೂರದರ್ಶಿತ್ವದ ನಾಯಕ ಎಂದೂ ಬಣ್ಣಿಸಿದರು.

ಭಾರತ ಮತ್ತು ಸ್ಪೇನ್ ಎರಡೂ ಭಯೋತ್ಪಾದನೆಯ ಉಪದ್ರವವನ್ನು ಎದುರಿಸಿವೆ, ಮತ್ತು ಎರಡೂ ಅದರ ವಿರುದ್ಧದ ಹೋರಾಟಕ್ಕೆ ಗಮನ ಹರಿಸಿವೆ ಎಂದರು.

ಭಾರತ ಮತ್ತು ಸ್ಪೇನ್ ಎರಡೂ ತೀವ್ರ ಆರ್ಥಿಕ ಸುಧಾರಣೆಯಲ್ಲಿ ನಿರತವಾಗಿವೆ ಎಂದು ಪ್ರಧಾನಿ ಹೇಳಿದರು. ಮೂಲಸೌಕರ್ಯ, ರೈಲ್ವೆ ಮತ್ತು ಸ್ಮಾರ್ಟ್ ಸಿಟಿಗಳಲ್ಲಿನ ಸಹಕಾರಕ್ಕೆ ವಿಪುಲ ಅವಕಾಶವಿದೆ ಎಂದೂ ಪ್ರಧಾನಿ ಹೇಳಿದರು.

ನವ ಭಾರತ ಮುನ್ನೋಟವನ್ನು ಭಾರತ ಮತ್ತು ಸ್ಪೇನ್ ನಡುವಿನ ಸ್ನೇಹದಿಂದ ಹೊಸ ಆವೇಗದ ಮೂಲಕ ಹೆಚ್ಚಿಸಬಹುದು ಎಂದು ಪ್ರಧಾನಿ ಹೇಳಿದರು.

ಎರಡೂ ರಾಷ್ಟ್ರಗಳ ನಡುವೆ ಇಂಧನ, ಭದ್ರತೆ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರ ಸೇರಿದಂತೆ ಏಳು ಒಪ್ಪಂದಗಳ ವಿನಿಮಯ ನಡೆಯಿತು.

ಬಳಿ ಪ್ರಧಾನಮಂತ್ರಿಯವರು ಸ್ಪಾನಿಷ್ ಸಿಇಓಗಳನ್ನು ಭೇಟಿ ಮಾಡಿದರು. ಭಾರತದಲ್ಲಿ ಹೆಚ್ಚಿನ ಹೂಡಿಕೆಗೆ ಅದರಲ್ಲೂ, ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ಆಹಾರ ಸಂಸ್ಕರಣೆ, ವಾಹನ, ರಾಸಾಯನಿಕ ಮತ್ತು ಜವಳಿ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ ಎಂದು ಹೇಳಿದರು. ಸ್ಮಾರ್ಟ್ ಸಿಟಿ ಉಪಕ್ರಮದಲ್ಲಿ ಸಹ ಪಾಲ್ಗೊಳ್ಳುವಂತೆ ಅವರು ಸ್ಪೇನ್ ಗೆ ಸ್ವಾಗತ ನೀಡಿದರು. ಜಿಎಸ್ಟಿ ಸೇರಿದಂತೆ ಭಾರತದಲ್ಲ ಕೈಗೊಳ್ಳಲಾಗಿರುವ ಆರ್ಥಿಕ ಸುಧಾರಣೆಗಳ ಬಗ್ಗೆ ವಿಶಾಲ ಅವಲೋಕನ ಮಾಡಿದರು. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಮತ್ತು ನವೋದ್ಯಮಗಳು ಹೂಡಿಕೆಗೆ ಜಾಗತಿಕ ಚುಂಬಕವಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿಯವರು ಘನತೆವೆತ್ತ ದೊರೆ ಫೆಲಿಪ್ VI ರನ್ನೂ ಭೇಟಿ ಮಾಡಿದರು.

***

AKT/SH