ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಭಾರತ ಸರ್ಕಾರದ ಸಚಿವಾಲಯಗಳ ಎಲ್ಲ ಉನ್ನತ ಅಧಿಕಾರಿಗಳು- ಕಾರ್ಯದರ್ಶಿಗಳನ್ನು ಔಪಚಾರಿಕವಾಗಿ ಭೇಟಿ ಮಾಡಿದರು.
“ಈ ಹಿಂದಿನ ಶತಮಾನಗಳ ಆಡಳಿತಾತ್ಮಕ ವ್ಯವಸ್ಥೆ’’ಯಿಂದ ಮೇಲೇರುವಂತೆ ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, ಕಾರ್ಯದರ್ಶಿಗಳಿಗೆ ಮಾನವಕುಲದ ಆರನೇ ಒಂದು ಭಾಗದ ಜನರ ಜೀವನ ಪರಿವರ್ತನೆ ಮಾಡುವ ಅವಕಾಶವಿದೆ ಎಂದು ಹೇಳಿದರು. ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಿರುವ 2022ರ ಹೊತ್ತಿಗೆ ಸಾಧಿಸಿ ತೋರಿಸಲು ಸಮಗ್ರ ಗುರಿಗಳನ್ನು ಗುರುತಿಸುವಂತೆ ತಿಳಿಸಿದರು.
ದೇಶದ ಅಭಿವೃದ್ಧಿಗಾಗಿ ತಮ್ಮ ಸಚಿವಾಲಯದ ವ್ಯಾಪ್ತಿಯಾಚೆಗೂ ಶ್ರಮಿಸುವಂತೆ ಪ್ರಧಾನಿ ಪ್ರಚೋದನೆ ನೀಡಿದರು. ಹಣಪೂರಣ (ಜನ್ ಧನ್ ಯೋಜನೆ) ಮತ್ತು ಸಾರ್ವತ್ರಿಕ ರೋಗ ನಿರೋಧಕ ಲಸಿಕೆ ಕಾರ್ಯಕ್ರಮ (ಮಿಷನ್ ಇಂದ್ರಧನುಷ್) ಪ್ರಸ್ತಾಪಿಸಿದ ಪ್ರಧಾನಿ, ಸರ್ಕಾರದ ಸಂಪೂರ್ಣ ಆಡಳಿತ ವ್ಯವಸ್ಥೆ ಒಂದಾಗಿ, ಒಂದು ತಂಡವಾಗಿ ಶ್ರಮಿಸಿದ ಫಲವಾಗಿ ಕಳೆದ ಮೂರು ವರ್ಷಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು. ಸಂಸ್ಥೆಗಳನ್ನು ಫಲಶ್ರುತಿ ಆಧಾರಿತಗೊಳಿಸುವುದು ಅಗತ್ಯ ಎಂದರು.
ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಜನರಿಂದ ಇದಕ್ಕೆ ಅಭೂತಪೂರ್ವ ಬೆಂಬಲ ದೊರೆಯಿತು, ಆಡಳಿತ ಮಟ್ಟದಲ್ಲಿ ಅಂಥ ಚಲನಾತ್ಮಕ ಬದಲಾವಣೆ ಆಗಬೇಕು ಎಂದರು.
ಜುಲೈ 1ರಿಂದ ಜಿಎಸ್ಟಿ ಜಾರಿಯಾಗುತ್ತಿರುವುದು ದೇಶದ ಇತಿಹಾಸಕ್ಕೆ ಒಂದು ಮಹತ್ವದ ತಿರುವಾಗಿದೆ ಎಂದು ಪ್ರಧಾನಿ ಹೇಳಿದರು. ಈ ಪರಿವರ್ತನೆಗೆ ಸಕಾರಾತ್ಮಕವಾಗಿ, ಸುಗಮವಾಗಿ ವಹಿವಾಟು ನಡೆಯುವಂತೆ ಮಾಡಲು ಸಿದ್ಧರಾಗುವಂತೆ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಇಂದು ವಿಶ್ವ ಭಾರತವನ್ನು ವಿಭಿನ್ನವಾಗಿ ನೋಡುತ್ತಿದೆ, ಇಂಥ ವಿಶಿಷ್ಟ ಅವಕಾಶ ತಪ್ಪಿಸಿಕೊಳ್ಳಬಾರದು ಎಂದು ಚಿಂತಿಸುತ್ತಿದೆ ಎಂದರು. ನಾವು ಜಾಗತಿಕ ನಿರೀಕ್ಷೆಯನ್ನು ಮುಟ್ಟುವಂಥ ವ್ಯವಸ್ಥೆಯನ್ನು ನಿರ್ಮಿಸಬೇಕು ಎಂದು ಅವರು ಕಾರ್ಯದರ್ಶಿಗಳಿಗೆ ತಿಳಿಸಿದರು.
ಭಾರತದ 100 ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಯಂತ್ರೋಪಾದಿಯ ದೃಷ್ಟಿಕೋನದ ಅಭಿಯಾನಕ್ಕೆ ಅವರು ಕರೆ ನೀಡಿದರು. ಈ ಜಿಲ್ಲೆಗಳಿಗೆ ನಿರ್ಧಿಷ್ಟ ಅಲ್ಪಾವಧಿಯಲ್ಲಿಯ ಚೌಕಟ್ಟಿನಲ್ಲಿ ವಿವಿಧ ಮಾನದಂಡಗಳೊಂದಿಗೆ ನಿರ್ದಿಷ್ಠ ಗುರಿಗಳನ್ನು ರೂಪಿಸುವಂತೆ ತಿಳಿಸಿದರು.
ಕೇಂದ್ರ ಸಚಿವರುಗಳಾದ ಶ್ರೀ. ರಾಜನಾಥಸಿಂಗ್, ಶ್ರೀ. ಅರುಣ್ ಜೇಟ್ಲಿ, ಶ್ರೀಮತಿ. ಸುಷ್ಮಾ ಸ್ವರಾಜ್ ಮತ್ತು ಶ್ರೀ. ನಿತಿನ್ ಗಡ್ಕರಿ ಸಹ ಕಾರ್ಯದರ್ಶಿಗಳನ್ನುದ್ದೇಶಿಸಿ ಮಾತನಾಡಿದರು.
ಇದಕ್ಕೂ ಮುನ್ನ ಕಾರ್ಯದರ್ಶಿಗಳು ಆಡಳಿತದ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡಿದರು.
AKT/NT
Met Secretaries to the Government of India and had a comprehensive interaction with them on key policy areas. https://t.co/LPj5T8onvB pic.twitter.com/q6m9UTqjKd
— Narendra Modi (@narendramodi) June 5, 2017
One of this Government's constant endeavours is to transform administrative mechanisms & ensure systems are outcome oriented.
— Narendra Modi (@narendramodi) June 5, 2017
Secretaries and I also discussed methods to further strengthen the development apparatus in the 100 most backward districts of India.
— Narendra Modi (@narendramodi) June 5, 2017