Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಮಾಲಿ ನಡುವೆ ಪ್ರಮಾಣೀಕರಣ ಮತ್ತು ಅನುಸರಣೆ ನಿರ್ಧರಣೆಗಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ಭಾರತೀಯ ಮಾನಕ ಸಂಸ್ಥೆ (ಬಿ.ಐ.ಎಸ್.) ಮತ್ತು ಮಾಲಿ ಗಣರಾಜ್ಯದ ಡೈರಕ್ಷನ್ ನ್ಯಾಷನೇಲ್ ಡಿ ಇಂಡಸ್ಟ್ರೀಸ್ (ಎಂಎಲ್ಐಎನ್.ಡಿ.ಐ)ನಡುವಿನ ಪ್ರಮಾಣೀಕರ ಮತ್ತು ಅನುಸರಣೆ ನಿರ್ಧರಣೆಯ ತಿಳಿವಳಿಕೆ ಒಪ್ಪಂದಕ್ಕೆ ಪೂರ್ವಾನ್ವಯ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು, ಭಾರತ ಮತ್ತು ಮಾಲಿಗಳು ಪ್ರಮಾಣೀಕರಣ ಮತ್ತು ಅನುಸರಣೆ ನಿರ್ಧರಣೆ ಚಟುವಟಿಕೆ ಬಲಪಡಿಸುವ ಸಮಾನ ಗುರಿಯತ್ತ ಒಗ್ಗೂಡಿ ಶ್ರಮಿಸಲು ತಜ್ಞತೆ ಮತ್ತು ಪರಸ್ಪರ ವಾಣಿಜ್ಯದ ವಿನಿಮಯಕ್ಕೆ ಅವಕಾಶ ನೀಡಿ ಆಪ್ತವಾದ ಸಹಕಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ.

AKT/VBA/SH