Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಸೆಕ್ಯೂರಿಟೀಸ್ ಮತ್ತು ವಿನಿಮಯ ಮಂಡಳಿ ಹಾಗೂ ಐರೋಪ್ಯ ಸೆಕ್ಯೂರಿಟೀಸ್ ಮತ್ತು ಮಾರುಕಟ್ಟೆ ಪ್ರಾಧಿಕಾರದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಸೆಕ್ಯೂರಿಟೀಸ್ ಮತ್ತು ವಿನಿಮಯ ಮಂಡಳಿ (ಸೆಬಿ) ಹಾಗೂ ಐರೋಪ್ಯ ಸೆಕ್ಯೂರಿಟೀಸ್ ಮತ್ತು ಮಾರುಕಟ್ಟೆ ಪ್ರಾಧಿಕಾರ(ಎಸ್ಮಾ)ದ ನಡುವೆ ಪರಸ್ಪರ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು ಎಸ್ಮಾದ ಪೂರ್ವ ಷರತ್ತಿನಂತೆ ಭಾರತದಲ್ಲಿನ ಸ್ಥಾಪಿತವಾದ ಕೇಂದ್ರೀಯ ಕೌಂಟರ್ ಪಾರ್ಟಿಗಳನ್ನು (ಸಿಸಿಪಿಗಳು) ಗುರುತಿಸಲು ಸಹಕಾರ ಒಪ್ಪಂದವನ್ನು ರೂಪಿಸುತ್ತದೆ ಮತ್ತು ಭಾರತೀಯ ಸೆಕ್ಯೂರಿಟೀಸ್ ಮತ್ತು ವಿನಿಮಯ ಮಂಡಳಿಯ ಮೇಲುಸ್ತುವಾರಿಗೆ ಒಳಪಟ್ಟು, ಐರೋಪ್ಯ ಒಕ್ಕೂಟದಲ್ಲಿ ಸ್ಥಾಪಿತವಾದ ಶೇರು ಪೇಟೆಗಳು ಅಥವಾ ಕ್ಲಿಯರಿಂಗ್ ಸದಸ್ಯರಿಗೆ ಕ್ಲಿಯರಿಂಗ್ ಸೇವೆಗಳನ್ನು ಒದಗಿಸಲು ಅವಕಾಶ ನೀಡುತ್ತದೆ ಮತ್ತು ಮಾನ್ಯತೆಯ ಷರತ್ತುಗಳೊಂದಿಗೆ ಸಿಸಿಪಿಗಳನ್ನು ವ್ಯಾಪ್ತೀಕರಿಸಿ ನಡೆಯುತ್ತಿರುವ ಅನುಸರಣೆಯ ನಿಗಾಕ್ಕೆ ಸೂಕ್ತ ಸಾಧನವನ್ನು ಎಸ್ಮಾಗೆ ಒದಗಿಸುತ್ತದೆ.

AKT/VBA/SH