ಪಿಎಂಇಂಡಿಯಾ
ಆ ಸಮಯದಲ್ಲಿ ಡಾ.ಸ್ವಾಮಿನಾಥನ್ ಅವರು ಬಹುಶಃ ಚೆನ್ನೈಯಿಂದ ಇರಬೇಕು, ಸಾರ್ವಜನಿಕರಿಗಾಗಿ ಒಂದು ಪ್ರಕಟಣೆಯನ್ನು ಹೊರಡಿಸಿದರು. ಅದರಲ್ಲಿ ನಾನು ಆರಂಭಿಸಿರುವ ಈ ಯೋಜನೆ ಎಷ್ಟು ಮಹತ್ವಪುರ್ಣವಾದುದು, ಇದರಿಂದ ಮುಂದೆ ಯಾವ ರೀತಿಯ ಪ್ರಯೋಜನಗಳಾಗುತ್ತವೆ ಎಂದು ವಿವರವಾಗಿ ಹೇಳಿದ್ದರು. ನನ್ನ ಸರ್ಕಾರದಲ್ಲಿನ ನನ್ನ ಸಹೋದ್ಯೋಗಿಗಳಿಗೆ ಈ ಯೋಜನೆ ಏನೆಂದು ಅರ್ಥವಾಗಿರಲಿಲ್ಲ. ನಾನು ಇದನ್ನು ಯಾವ ರೀತಿ ಮಾಡಬೇಕು ಎಂದು ವಿವರಿಸಲು ಬಹಳ ಶ್ರಮ ಪಡುತ್ತಿದ್ದೆ. ಆದರೆ ಡಾ.ಸ್ವಾಮಿನಾಥನ್ ಅವರ ಪ್ರಕಟಣೆ ಪತ್ರಿಕೆಯಲ್ಲಿ ಬರುತ್ತಿದ್ದಂತೆಯೇ ಇಡೀ ಅಧಿಕಾರಿಶಾಹಿಗಳ ಮನಸ್ಥಿತಿ ಒಮ್ಮೆಲೇ ಬದಲಾಯಿತು. ಅವರೆಲ್ಲರಿಗೂ ಇದಂತೂ ಬಹಳ ಮಹತ್ವವಾದ ಕೆಲಸ, ಇದನ್ನು ಮಾಡಬೇಕು ಎಂದು ಅನ್ನಿಸತೊಡಗಿತು. ಡಾ.ಸ್ವಾಮಿನಾಥನ್ ಅವರ ತಪ್ಪಸ್ಸು ಏನಿದೆ, ಸಾಧನೆ ಏನಿದೆ, ಅದರ ಮೌಲ್ಯವೆಷ್ಟು ಎಂಬುದು ನನಗೆ ಸ್ವತಃ ಅನುಭವವಾಗಿದೆ.
ಈಗಂತೂ ಈ ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಭಾರತದ ಕೃಷಿಗೆ ಸಂಬಂಧಪಟ್ಟಂತೆ ಪ್ರಯೋಗಾಲಯದ ಕೃಷಿ, ಇಳುವರಿ ಮುಂತಾದವುಗಳಲ್ಲಿ ಡಾ.ಸ್ವಾಮಿನಾಥನ್ ಅವರ ಸಂಶೋಧನೆಗಳನ್ನು ನೋಡಿದರೆ ಈ ಕೃಷಿ ವಿಜ್ಞಾನಿಯ ಒಳಗೆ ಒಬ್ಬ ರೈತನಿದ್ದಾನೆ ಎಂದು ಕೆಲವು ಸಲ ನನಗೆ ಅನ್ನಿಸಿದೆ. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಅವರ ಈ ಸಂಶೋಧನೆಗಳು ಸಮಂಜಸವಾಗಿವೆ. ಕೆಲವು ವಿಷಯಗಳು ಜಮೀನಿಗೆ ಹತ್ತಿರವಾದರೂ ರೈತ ಮತ್ತು ವಿಜ್ಞಾನಿಯ ಅಂತರ ಪೂರ್ತಿ ಕಡಿಮೆಯಾಗುವುದಿಲ್ಲ. ಆದರೆ ಡಾ.ಸ್ವಾಮಿನಾಥನ್ ಅವರು ಪ್ರಸ್ತುತಪಡಿಸುತ್ತಿದ್ದ ಯಾವುದೇ ವಿಷಯ ರೈತನ ನೆಲಕ್ಕೆ ಸಂಬಂಧಪಟ್ಟಿರುತ್ತಿತ್ತು. ಇದರ ಪರಿಣಾಮವಾಗಿ ಅದು ಬಹಳ ಸಮಂಜಸವಾಗಿ ಕಂಡಿತು ಮತ್ತು ಬಹುತೇಕ ಅದರ ಉಪಯೋಗವೂ ಆಯಿತು. ಇಂದಿನ ಯುವಜನತೆಗೆ ಡಾ.ಸ್ವಾಮಿನಾಥನ್ ಹೇಗೆ ಪ್ರೇರಣೆ ನೀಡಬಹುದು.
ನಮ್ಮ ದೇಶದ ಒಂದು ಸಮಸ್ಯೆಯೆಂದರೆ ರಾಜಕಾರಣಿಗಳನ್ನು ಎಲ್ಲರೂ ಬಲ್ಲರು. ಆದರೆ ವಿಜ್ಞಾನಿಗಳ ಪರಿಚಯ ಕೆಲವೇ ಜನರಿಗಿರುತ್ತದೆ. ಪ್ರತಿಯೊಂದು ಬೀದಿಯಲ್ಲೂ ರಾಜಕಾರಣಿಗಳ ಹೆಸರುಗಳು ಗೊತ್ತಿರುತ್ತವೆ, ಆದರೆ ಇಷ್ಟೊಂದು ದೊಡ್ಡ ಕೊಡುಗೆ ನೀಡುವ ಜನರ ಪರಿಚಯ ನಮ್ಮಲ್ಲಿ ಇರುವುದಿಲ್ಲ. ಇದು ವ್ಯವಸ್ಥೆಯ ದೋಷವೊ ಅಥವಾ ಸ್ವಭಾವದ ದೋಷವೊ ಅಥವಾ ಬೇರಾವುದೋ ದೋಷ ಇರಬಹುದು. ಆದರೆ ತುಂಬಾ ವರ್ಷಗಳಿಂದ ಇಂತಹ ಕೊರತೆಯನ್ನು ಗಮನಿಸಿದ್ದೇನೆ. ಈ ದೋಷಗಳಿಂದಲೇ ಬಹುಶಃ ಯುವಜನರಿಗೂ ಒಬ್ಬ ಆಟಗಾರನಿಂದ ಪ್ರೇರಣೆ ಸಿಗಬಹುದು, ಒಬ್ಬ ಹಿರಿಯ ಕಲಾವಿದನಿಂದ ಸಿಗಬಹುದು, ಒಬ್ಬ ರಾಜಕಾರಣಿಯಿಂದ ಸಿಗಬಹುದು ಅಥವಾ ದೊಡ್ಡ ಉದ್ಯಮಿಯಿಂದ ಸಿಗಬಹುದು. ಆದರೆ ಬಹುತೇಕ ಯುವಜನರಿಗೆ ವಿಜ್ಞಾನಿಗಳತ್ತ ಗಮನ ಹೋಗುವುದಿಲ್ಲ. ಒಬ್ಬ ವಿಜ್ಞಾನಿ ತನ್ನ ತಾರುಣ್ಯದಲ್ಲಿದ್ದಾಗ ಭಾರತ ಹಸಿವಿನಿಂದ ಸಾಯುತ್ತದೆ, ಭಾರತ ನಾಶವಾಗುತ್ತದೆ, ಭಾರತ ನಿರಾಶೆಯ ಕಾರ್ಮೋಡದತ್ತ ಸಾಗುತ್ತಿದೆ ಎಂಬುದನ್ನು ಕಂಡುಕೊಂಡು ಇಲ್ಲಿ ಈ ಸ್ಥಿತಿಯನ್ನು ಬದಲಿಸಬಹುದು ಎಂದು ವೈಜ್ಞಾನಿಕ ಸಂಕಲ್ಪ ಮಾಡಿದ್ದರು. ಹಸಿರು ಕ್ರಾಂತಿಯ ಮೂಲಕ ನಾವು ಬದಲಾಗುತ್ತೇವೆ ಎಂದು ಡಾ.ಸ್ವಾಮಿನಾಥನ್ ಅವರು ಸಂಕಲ್ಪ ಮಾಡಿ ಅದನ್ನು ಸಾಧಿಸಿ ತೋರಿಸಿದ್ದಾರೆ.
ಆದರೆ ಇಂದಿನ ನಮ್ಮ ಯುವಜನತೆಗೆ ಈ ವಿಷಯಗಳೆಲ್ಲ ಗೊತ್ತಿಲ್ಲ. ಇವರ ಮನಸ್ಸಿನಲ್ಲೂ ಇಂತಹ ವಿಚಾರಗಳಿದ್ದರೆ ಪೋಷಕಾಂಶ ಕೊರತೆ ಎಂಬ ಸವಾಲು ಅವರ ಮುಂದಿದೆ. ಎಣ್ಣೆಕಾಳುಗಳು, ಬೇಳೆಕಾಳುಗಳು ಮತ್ತಿತರ ಧಾನ್ಯಗಳಲ್ಲಿ ಇಳುವರಿ ಕಡಿಮೆ. ಇಳುವರಿ ಹೆಚ್ಚಿಸುವ ಹಾಗೂ ಅವುಗಳಲ್ಲಿ ಇರುವ ಪ್ರೋಟೀನ್ ಗುಣಮಟ್ಟವನ್ನು ಹೆಚ್ಚಿಸುವ ಅಗತ್ಯಗಳಿವೆ. ಸ್ಟಾರ್ಟಪ್ ಪ್ರಪಂಚದ ಮೂಲಕ ಇಂದಿನ ಯುವಜನರು ಈ ಸವಾಲುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಿದ್ದೇ ಆದರೆ ಪೋಷಕಾಂಶ ಕೊರತೆಯ ಸ್ಥಿತಿಯನ್ನು ಬದಲಿಸಬಹುದು. ನಮ್ಮ ದೇಶದ ಕೃಷಿ ಕ್ರಾಂತಿಯಲ್ಲಿ ಈ ರೀತಿಯ ಬದಲಾವಣೆಗಳನ್ನು ತರಬಹುದು. ಮಹಾತ್ಮಾ ಗಾಂಧೀಜಿ ಸಹ ಹಸಿದವನಿಗೆ ಅನ್ನವೇ ದೇವರು ಎಂದು ಹೇಳುತ್ತಿದ್ದರು. ಇದೇ ಮಾತನ್ನು ವೈಜ್ಞಾನಿಕ ರೀತಿಯಲ್ಲಿ ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಯುವಜನರು ಯೋಚಿಸಿರಬಹುದು.
ಡಾ.ಸ್ವಾಮಿನಾಥನ್ ಅವರು ಬಹುಶಃ ಎಲ್ಲ ಪ್ರಧಾನಮಂತ್ರಿಗಳ ಜೊತೆ ಕೆಲಸ ಮಾಡಿದ್ದಾರೆ. ಮೊದಲ ಪ್ರಧಾನ ಮಂತ್ರಿಯಿಂದ ಹಿಡಿದು ನನ್ನ ತನಕ ಹಲವು ಪ್ರಧಾನ ಮಂತ್ರಿಗಳನ್ನು ನಿಮ್ಮ ಜೀವನದಲ್ಲಿ ನೋಡಿದ್ದೀರಿ. ಯಾವುದೇ ಪ್ರಧಾನ ಮಂತ್ರಿಯ ಫೋಟೋ ನಿಲ್ಲಿಸಿದರೂ ನೀವು ಎರಡು ಅಡಿ ಎತ್ತರದ ಸ್ಥಾನದಲ್ಲಿರುತ್ತೀರಿ. ನಿಮ್ಮಲ್ಲಿರುವ ಸರಳತೆಯನ್ನು ಇನ್ನಾರಲ್ಲೂ ಕಾಣುವುದು ಅಷ್ಟು ಸುಲಭವಲ್ಲ. ಈ ಎಲ್ಲ ವಿಷಯಗಳನ್ನೂ ನಾನು ಕೇವಲ ಈಗ ಬಿಡುಗಡೆಯಾದ ಪುಸ್ತಕದ ಆಧಾರದ ಮೇಲೆ ಹೇಳುತ್ತಿಲ್ಲ. ನನ್ನ ಸ್ವಂತ ಅನುಭವದಿಂದ ಹೇಳುತ್ತಿದ್ದೇನೆ. ನಾನು ಗುಜರಾತಿನಲ್ಲಿದ್ದಾಗ ಬಂದು ಭೇಟಿಯಾಗುತ್ತಿದ್ದರು. ಅವರ ಸರಳತೆ ನೋಡಿದರೆ ಇವರು ಇಷ್ಟು ದೊಡ್ಡ ವ್ಯಕ್ತಿ ಎಂಬುದೇ ಗೊತ್ತಾಗುತ್ತಿರಲಿಲ್ಲ. ಸಾರ್ವಜನಿಕ ಜೀವನದಲ್ಲಿ ಯಶಸ್ಸನ್ನು ಅರಗಿಸಿಕೊಳ್ಳುವುದು ಹೇಗೆ ಎಂದು ಇವರಿಂದ ಕಲಿಯಬೇಕು.
ಒಬ್ಬ ವ್ಯಕ್ತಿಯಾಗಿ ಇವರ ಮುಖದ ಮೇಲಿನ ಪ್ರಸನ್ನತೆಯನ್ನು ನೋಡಿದಾಗ ಇಲ್ಲಿ ವಿಜ್ಞಾನಿಗಳು (ನನ್ನನ್ನು ಕ್ಷಮಿಸಬೇಕು) ಕುಳಿತಿದ್ದೀರಿ. ಹೆಚ್ಚಿನವರ ಮುಖದ ಮೇಲಿನ ದುಗುಡ ನೋಡಿದರೆ 21ನೆಯ ಶತಮಾನದಲ್ಲೂ 18ನೆಯ ಶತಮಾನದಲ್ಲಿರುವಂತೆ ಜೀವಿಸುತ್ತಾ ಇಡೀ ಪ್ರಪಂಚದ ಭಾರ ತಮ್ಮ ಮೇಲಿದೆ ಎನ್ನುವಂತೆ, ಏನೋ ಕಳೆದುಕೊಂಡಂತೆ ಇರುತ್ತಾರೆ. ಇವರು ಮಾತೇ ಆಡುವುದಿಲ್ಲವೇಕೆ ಎಂದು ಅವರ ಕುಟುಂಬದವರೂ ಚಿಂತೆಗೀಡಾಗಿರುತ್ತಾರೆ. ಆದರೆ ಡಾ.ಸ್ವಾಮಿನಾಥನ್ ಅವರ ಜೀವನದಲ್ಲಿ ಇದು ವಿರುದ್ಧವಾಗಿದೆ. ಅವರು ಸದಾ ಪ್ರಸನ್ನಚಿತ್ತರಾಗಿರುತ್ತಾರೆ. ಜೀವನದಲ್ಲಿ ಕೆಲವು ಸಂಗತಿಗಳನ್ನು ನರನಾಡಿಗಳಲ್ಲಿ ಅಂತರ್ಗತಗೊಳಿಸಿಕೊಂಡು ಅವರ ಮನಸ್ಸು ವಿಶಾಲವಾಗಿದೆ. ಇದು ಯಾವುದೋ ದೇವರ ಕೃಪೆ ಇರಬಹುದು, ತಂದೆತಾಯಿಗಳಿಂದ ಬಂದ ಸಂಸ್ಕಾರಗಳಾಗಿರಬಹುದು. ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರವನ್ನು ನೋಡಿದರೆ ಸವಾಲುಗಳು ಇಂದಿಗೂ ಹಾಗೆಯೇ ಇವೆ. ಹಸಿರು ಕ್ರಾಂತಿಯ ನಂತರ ಈಗ ಎರಡನೆಯ ಹಸಿರು ಕ್ರಾಂತಿಯ ಚರ್ಚೆಗಳು ನಡೆಯುತ್ತಿವೆ. ಭಾರತದಂತಹ ದೇಶದ ಮುಂದೆ ಗುರಿಗಳಿವೆ. ನಿತ್ಯ ಹಸಿರು ಕ್ರಾಂತಿಯೇ ನಮ್ಮ ಗುರಿಯಾಗಿದೆ.
ಭಾರತದ ಸಾಮರ್ಥ್ಯದ ಬಗ್ಗೆ ಹೇಳುವುದಕ್ಕೆ ಮೊದಲು ಒಂದು ಬಾರಿ ಸರಿಯಾಗಿ ಅಂದಾಜು ಮಾಡಬೇಕು. ಭಾರತದ ಪೂರ್ವ ಭಾಗವನ್ನು ನೋಡಿದರೆ ಆರ್ಥಿಕವಾಗಿ ಬಹಳ ಅಸಮತೋಲನ ಕಾಣಿಸುತ್ತದೆ. ಪಶ್ಚಿಮ ಭಾರತದ ಆರ್ಥಿಕ ಸ್ಥಿತಿಗೂ ಪೂರ್ವ ಭಾರತದ ಆರ್ಥಿಕ ಸ್ಥಿತಿಗೂ ಹೋಲಿಸಿದಾಗ ಬೇರಾವುದೇ ದೇಶದಲ್ಲಿ ದೀರ್ಘಕಾಲದವರೆಗೆ ಈ ರೀತಿ ನಡೆಯುವುದಿಲ್ಲ. ಒಂದಲ್ಲಾ ಒಂದು ದಿನ ಅಲುಗಾಟ ಶುರುವಾಗುತ್ತದೆ. ಎರಡೂ ಕಾಲುಗಳು ಮತ್ತು ಕೈಗಳಲ್ಲಿ ಸಮಾನವಾದ ಬಲ ಇರಬೇಕು. ಪಶ್ಚಿಮ ಭಾರತದಲ್ಲಿ ಗೋದಿ ಧಾನ್ಯದ ಮೂಲಕ ಮೊದಲನೆಯ ಹಸಿರು ಕ್ರಾಂತಿಯನ್ನು ಮುನ್ನಡೆಸಲಾಯಿತು. ಈಗ ಭತ್ತದ ಮೂಲಕ ನಿತ್ಯ ಹಸಿರು ಕ್ರಾಂತಿಯನ್ನು ಮುನ್ನಡೆಸುವ ಶಕ್ತಿ ಪೂರ್ವ ಭಾರತಕ್ಕಿದೆ. ಇಲ್ಲಿ ನೀರಿದೆ, ಜಮೀನಿದೆ, ಶ್ರಮದಿಂದ ದುಡಿಯುವ ಜನರಿದ್ದಾರೆ. ವೈಜ್ಞಾನಿಕ ಮತ್ತು ತಂತ್ರಜ್ಞಾನದ ಸಂಶೋಧನೆಗಳನ್ನು ಇಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ.
ಸರ್ಕಾರವು ಇದಕ್ಕೆ ಸಹಾಯ ಮಾಡುತ್ತಿದೆ, ಡಾ.ಸ್ವಾಮಿನಾಥನ್ ಅವರಿಂದ ಸಾಕಷ್ಟು ಸಲಹೆಗಳನ್ನು ಪಡೆಯುತ್ತಿರುತ್ತೇವೆ. ಕೆಲವು ದಿನಗಳ ಹಿಂದೆ ಭೇಟಿಯಾದಾಗ ಈ ವಿಷಯವಾಗಿ ಅವರೊಂದಿಗೆ ಚರ್ಚಿಸಿದೆ. ಮತ್ತು ಈ ವಿಷಯವಾಗಿ ಸ್ವಲ್ಪ ಮಾರ್ಗದರ್ಶನ ನೀಡಿ ಎಂದು ಕೇಳಿದೆ. ಅವರು ಬಂದು ಕೆಲವು ದಿನಗಳವರೆಗೆ ಬೆಳಗ್ಗೆಯಿಂದ ಸಂಜೆಯವರೆಗೆ ನಮ್ಮ ತಂಡದ ಜೊತೆಯಲ್ಲಿದ್ದು ಸಾಕಷ್ಟು ಶಿಕ್ಷಣ ನೀಡಿದ್ದಾರೆ. ಇದು ಕಾರ್ಯಸಾಧುವಾಗಿದ್ದು, ಇದಕ್ಕಾಗಿ ನಾವು ಈ ಕ್ಷೇತ್ರದಲ್ಲಿ ಯಾವ ರೀತಿಯ ಕೆಲಸ ಮಾಡಬೇಕು ಎಂದೆಲ್ಲ ಹೇಳಿಕೊಟ್ಟಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿದೆ, ಆದರೆ ಜಮೀನು ಹೆಚ್ಚಾಗುವುದಿಲ್ಲ, ಕಡಿಮೆಯಾಗುತ್ತದೆ. ಆಗ ಮಣ್ಣಿನ ನಿರ್ವಹಣೆಯ ಅವಶ್ಯಕತೆ ಇರುತ್ತದೆ ಎಂಬ ಅವರ ಮಾತಿನಲ್ಲಿ ಸತ್ಯವಿದೆ. ನಮ್ಮ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು ಹೇಗೆ? ನಮ್ಮ ದೇಶದಲ್ಲಿ ಶೇ.85ರಷ್ಟು ಸಣ್ಣ ರೈತರಿದ್ದಾರೆ. ಇಂತಹ ಸ್ಥಿತಿಯಲ್ಲಿ ನಮ್ಮ ರೈತ ಕಡಿಮೆ ಜಮೀನಿನಲ್ಲಿ ಹೆಚ್ಚು ಫಸಲು ಬೆಳೆಯಬೇಕು. ಈ ಬೆಳೆಗಳು ಕೇವಲ ರೈತನ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ಅದರ ಮಾರುಕಟ್ಟೆ ಮೌಲ್ಯ ಹೇಗಿರಬೇಕೆಂದರೆ ಅದರಿಂದ ಆತ ತನ್ನ ದಿನನಿತ್ಯದ ಖರ್ಚನ್ನು ಸಂಪಾದಿಸಬೇಕು. ಈ ದಿಕ್ಕಿನಲ್ಲಿ ಯಾವ ರೀತಿಯ ಬಲ ನೀಡಬೇಕು? ಇದೇ ರೀತಿ ನೀರಿನ ಸಂಕಷ್ಟದ ಕುರಿತು ಹೇಳುವುದಾದರೆ ಇಡೀ ಪ್ರಪಂಚದಲ್ಲಿ ಈ ವಿಷಯವಾಗಿ ಚರ್ಚೆಯಾಗುತ್ತಿದೆ.
ನಾವು ನೀರಿನ ಮರುಬಳಕೆ ಮಾಡಬೇಕು, ನೀರಿನ ಸಂರಕ್ಷಣೆ ಮಾಡಬೇಕು. ಇದನ್ನೆಲ್ಲ ಮಾಡಿದ ಬಳಿಕವೂ ನೀರಿನ ಸಮಸ್ಯೆ ನಮ್ಮ ಮುಂದೆ ದೊಡ್ಡ ಸವಾಲಾಗಿ ನಿಂತಿದೆ. ನೀರಿನ ಸಂಕಷ್ಟ ಬಂದಾಗ ನೋಡಿಕೊಳ್ಳೋಣ ಎಂದು ಸುಮ್ಮನಾಗುವುದು ಸರಿಯಲ್ಲ. ನಾವು ಮುಂದಿನ 20 ವರ್ಷ 50 ವರ್ಷಗಳ ಕುರಿತು ಯೋಚಿಸಿ ಈಗಿನಿಂದಲೇ ಒಂದೊಂದಾಗಿ ಶುರು ಮಾಡಿದರೆ ನಿಧಾನವಾಗಿ ಜನರ ಮನಸ್ಸಿನಲ್ಲಿ ನಾಟುತ್ತದೆ. ಏಕೆಂದರೆ ವಿದ್ಯಾವಂತರಿಗೆ ಸಹ ವಾಯುಮಾಲಿನ್ಯ ಒಂದು ಗಂಭೀರ ಸಮಸ್ಯೆ ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ತಡವಾಗಿರುತ್ತದೆ. ನೀರಿನ ಸಂಕಷ್ಟವನ್ನು ಸಹ ಸಾಮಾನ್ಯ ವ್ಯಕ್ತಿಗೆ ಅದೊಂದು ಸಂಕಷ್ಟ ಎಂದು ಅರ್ಥ ಮಾಡಿಸುವುದು ಬಹಳ ಕಷ್ಟ. ಆದ್ದರಿಂದ ನೀರು ಸಂರಕ್ಷಣೆಯ ಜೊತೆಜೊತೆಗೆ ನಾವು ನೀರಿನ ಉಪಯೋಗವನ್ನು ಯಾವ ರೀತಿ ಮಾಡಬೇಕು, ವೈಜ್ಞಾನಿಕ ವಿಧಾನದಲ್ಲಿ ಹನಿ ನೀರಿನಲ್ಲೂ ಗರಿಷ್ಟ ಬೆಳೆ ಎಂಬ ತತ್ವದ ಆಧಾರದ ಮೇಲೆ ಕೆಲಸ ಮಾಡುವ ಪ್ರಯತ್ನ ಈಗ ನಡೆಯುತ್ತಿದೆ. ಹೆಚ್ಚು ನೀರಿದ್ದರೂ ಎಚ್ಚರಿಕೆಯಿಂದ ಮಿತವ್ಯಯದ ಕೃಷಿ ಮಾಡಿದರೆ ನದಿಗಳ ಜೋಡಣೆ ಮೂಲಕ ನೀರು ಇಲ್ಲದ ಕಡೆಯೂ ತಲುಪಿಸಲು ಸಾಧ್ಯವಾಗುತ್ತದೆ.
ಅದೇ ರೀತಿ ಮಣ್ಣು ನಿರ್ವಹಣೆಯನ್ನು ಸಹ ಇದರ ಒಂದು ಭಾಗವೆಂದು ಪರಿಗಣಿಸುತ್ತೇನೆ. ಏಕೆಂದರೆ ನಾವು ಅತಿಯಾಗಿ ರಾಸಾಯನಿಕಗಳನ್ನು ಬಳಸುತ್ತೇವೆ, ರಸಗೊಬ್ಬರಗಳನ್ನು ಬಳಸುತ್ತೇವೆ. ಇವು ನಮ್ಮ ಜಮೀನನ್ನು ಹಾಳು ಮಾಡುತ್ತವೆ. ನದಿ ತೀರದಲ್ಲಿರುವ ಜಮೀನುಗಳಲ್ಲಿನ ಜನರು ಜಲ ಮಾಲಿನ್ಯವು ಕಾರ್ಖಾನೆಗಳಿಂದ ಆಗುತ್ತದೆ ಎಂದು ತಿಳಿದುಕೊಂಡಿದ್ದಾರೆ. ಆದರೆ ನದಿಯಿಂದ ಮೂರ್ನಾಲ್ಕು ಕಿ.ಮೀ. ದೂರದಲ್ಲಿರುವ ಜಮೀನುಗಳಲ್ಲಿ ಬಳಸುವ ಭಯಂಕರ ರಾಸಾಯನಿಕಗಳು ಮಳೆ ನೀರಿನ ಜೊತೆ ನದಿ ಸೇರುತ್ತದೆ. ಹಾಗಾಗಿ ನಮ್ಮ ನದಿಗಳನ್ನು ಸಂರಕ್ಷಿಸುವುದು, ನದಿಗಳ ನೀರನ್ನು ಹೆಚ್ಚಾಗಿ ಉಪಯೋಗಿಸುವುದು ಮುಖ್ಯವಾಗಿದೆ. ಪ್ರಧಾನ ಮತ್ರಿ ಕೃಷಿ ನೀರಾವರಿ ಯೋಜನೆಯು ಒಂದು ದೊಡ್ಡ ಮಹತ್ವಾಕಾಂಕ್ಷಿ ಯೋಜನೆಯಾಗಿ ಕೆಲಸ ಆರಂಭಿಸಿದೆ. ನಾವು ಕೆಲವೊಮ್ಮೆ ಮಾತುಕತೆಯಾಡುವಾಗ ಕೆಲವು ವಿಷಯಗಳು ಬರುತ್ತವೆ. ಅದನ್ನು ನಾವು ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಜನ ಜೀವನದಲ್ಲಿ ದಶಕಗಳಿಂದ ಆಡುವ ಮಾತುಕತೆಯ ವಿಷಯಗಳಲ್ಲಿ ಬಹಳ ಶಕ್ತಿ ಇರುತ್ತದೆ. ಅವರ ಮಾತುಕತೆಯಲ್ಲಿ ಬರುವ ವಿಷಯಗಳನ್ನು ಪ್ರಯೋಗಾಲಯಗಳಲ್ಲಿ ಸಾಬೀತುಗೊಳಿಸಲು ಪ್ರಯತ್ನಿಸಬೇಕು.
ನನ್ನದೇ ಅನುಭವವನ್ನು ಹೇಳುತ್ತೇನೆ. ಗುಜರಾತಿನಲ್ಲಿ ಭಾಲ್ ಎಂಬ ಒಂದು ಪ್ರದೇಶವಿದೆ. ಸಮುದ್ರ ತೀರಕ್ಕೆ ಹತ್ತಿರದಲ್ಲಿದೆ. ಖಂಬಾನ ಕೊಲ್ಲಿ ಪ್ರದೇಶದ ಜನರು ಭಾಲ್ ನಲ್ಲಿ ಬೆಳೆಯುವ ಒಂದು ಗೋದಿ ತಳಿಯನ್ನು ಖರೀದಿಸುತ್ತಿದ್ದರು. ಈ ಭಾಲಿಯಾ ಹಳ್ಳಿಯ ಗೋದಿಗೆ ಭಾಲಿಯಾ ಗೋದಿ ಎಂಬ ಹೆಸರಿತ್ತು. ಶ್ರೀಮಂತ ಜನರು ಭಾಲಿಯಾ ಗೋದಿಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿ ಸಂರಕ್ಷಿಸಿ ಇಟ್ಟುಕೊಳ್ಳುತ್ತಿದ್ದರು ಎಂದು ನಾನು ಬಾಲ್ಯದಿಂದಲೂ ಕೇಳಿದ್ದೆ. ಆಗೆಲ್ಲ ಈ ಗೋದಿಗೆ ಇಷ್ಟೊಂದು ಬೆಲೆ ಕೊಟ್ಟು ಖರೀದಿಸಲು ಕಾರಣವೇನು ಎಂದು ಮನಸ್ಸಿನಲ್ಲಿ ಯೋಚಿಸುತ್ತಿದ್ದೆ. ನಾನು ಮುಖ್ಯಮಂತ್ರಿಯಾದ ನಂತರ ಅದರಲ್ಲಿ ಆಸಕ್ತಿ ವಹಿಸಿದೆ. ಬೇರೆ ಗೋದಿ ತಳಿಗಳು ಹೆಚ್ಚು ಕಾರ್ಬನ್ ಬಿಟ್ಟರೆ, ಈ ಗೋದಿಯಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿತ್ತು. ಈ ತಳಿ ಕೆಲವೇ ಹಳ್ಳಿಗಳಲ್ಲಿ ಇದೆ. ನಾನು ಸ್ವಿಟ್ಜರ್ ಲೆಂಡ್ ಗೆ ಹೋಗಿದ್ದಾಗ ನೆಸ್ಟ್ ಲೆ ಮುಂತಾದ ಕಂಪನಿಯವರನ್ನು ಭೇಟಿಯಾಗಿದ್ದೆ. ಆಗ ಪೋಷಕಾಂಶಗಳ ಸಮಸ್ಯೆ ಪರಿಹರಿಸಲು ಇದನ್ನು ಯಾವ ರೀತಿ ಉಪಯೋಗ ಮಾಡಬಹುದು ಎಂದು ಕೇಳಿದೆ. ನಮ್ಮ ಒಂದು ವಿಶ್ವವಿದ್ಯಾಲಯಕ್ಕೆ ಇದರ ಕೆಲಸವನ್ನು ವಹಿಸಿದ್ದೇನೆ.
ಇದರ ವಂಶವಾಹಿಯ ವಿಷಯದಲ್ಲಿ ಸಾಕಷ್ಟು ಸಂಶೋಧನೆಗಳಾಗುತ್ತಿವೆ. ಇದೇ ರೀತಿ ಬಾಸ್ಮತಿ ಎಂಬ ಅಕ್ಕಿಯ ಬಗ್ಗೆ ನಮಗೆ ಗೊತ್ತು. ಅದರ ತಾಕತ್ತು ಏನೆಂದು ನೋಡಿದ್ದೇವೆ. ಇದೇ ರೀತಿ ಗುಜರಾತಿನ ಅಮ್ಮೇಲಿ ಜಿಲ್ಲೆಯಲ್ಲಿ ಒಂದು ಪ್ರದೇಶವಿದೆ. ಸಮುದ್ರ ತೀರದ ಶ್ರೀಮಂತರು ಬಾಜ್ರಾ ಧಾನ್ಯ ಬೇಕೆಂದರೆ ಈ ಪ್ರದೇಶದಿಂದಲೇ ಖರೀದಿಸಲು ಬಯಸುತ್ತಾರೆ. ನನ್ನನ್ನು ಗುಜರಾತಿನ ಮುಖ್ಯಮಂತ್ರಿಯಾಗಿ ಮಾಡಿದಾಗ ನಾನು ಅಲ್ಲಿನ ಶಾಸಕರನ್ನು ಈ ಬಾಜ್ರಾ ತಳಿಯ ಬಗ್ಗೆ ಕೇಳಿದ್ದೆ. ಅವರು ಒಂದು ಚೀಲದ ತುಂಬ ಬಾಜ್ರಾ ಧಾನ್ಯವನ್ನು ಉಡುಗೊರೆಯಾಗಿ ತಂದಿದ್ದರು. ಅದುವರೆಗೆ ಈ ಪ್ರದೇಶದ ಬಾಜ್ರಾದ ವಿಶೇಷತೆ ಏನೆಂದು ಗೊತ್ತಿರಲಿಲ್ಲ. ಭಾರತದ ಯಾವುದೇ ಮೂಲೆಯಲ್ಲಿ ಇಂತಹ ಒಂದಲ್ಲಾ ಒಂದು ತಳಿಯ ಬಗ್ಗೆ ಜನರು ಮಾತಾಡುತ್ತಿರಬಹುದು. ಅದನ್ನು ನಾವು ಗುರುತಿಸಬೇಕು ಮತ್ತು ಅದರ ವಂಶವಾಹಿ ಮೌಲ್ಯಗಳೇನೆಂದು ಪತ್ತೆ ಹಚ್ಚಬೇಕೆಂದು ಕೆಲವು ವಿಜ್ಞಾನಿಗಳಿಗೆ ಹೇಳಿದ್ದೆ. ಯಾವುದೇ ಜನಪ್ರಿಯ ತಳಿಯಲ್ಲಿ ಯಾವುದಾದರೂ ವಿಶೇಷ ಗುಣಗಳಿರಬಹುದು ಅಥವಾ ಅಧಿಕ ಇಳುವರಿ ನೀಡುವಂತಹದ್ದಾಗಿರಬಹುದು ಅಥವಾ ನಮ್ಮ ಶರೀರಕ್ಕೆ ಅಥವಾ ಮಾನವ ಜನಾಂಗಕ್ಕೆ ಬಹಳ ಉಪಯೋಗಿಯಾಗುವ ಗುಣವಿರಬಹುದು. ಈ ಸಾಂಪ್ರದಾಯಿಕ ತಳಿಯ ಗುಣಗಳನ್ನು ಎಷ್ಟು ಬೇಗ ಸಂಶೋಧನೆ ಮಾಡಿದರೆ ಅಷ್ಟು ಒಳ್ಳೆಯದು. ಪ್ರತಿ ಜಿಲ್ಲೆಯೂ ತನ್ನದೇ ಆದ ವಿಶೇಷ ಕೃಷಿಗೆ ಹೆಸರಾಗಿರುತ್ತದೆ.
ಆದ್ದರಿಂದ ನಾವು ಆ ಜಿಲ್ಲೆಯ ಗಡಿಯನ್ನು ಪ್ರವೇಶಿಸುವಾಗ ಆ ವಿಶೇಷತೆಯಿಂದ ಗುರುತಿಸಬೇಕು. ಉದಾಹರಣೆಗೆ ಒಂದು ಜಿಲ್ಲೆ ಅಕ್ಕಿಗೆ ಹೆಸರಾಗಿದ್ದರೆ ಇದು ಅಕ್ಕಿಯ ಜಿಲ್ಲೆ ಎಂದು ಜಿಲ್ಲೆಯ ಪ್ರವೇಶದ್ವಾರಗಳಲ್ಲಿ ಹಾಕಬೇಕು. ಇಸಬ್ ಗೋಲ್ ಕೃಷಿಗೆ ಹೆಸರಾದ ಜಿಲ್ಲೆಯನ್ನು ಅದೇ ಹೆಸರಿನಿಂದ ಗುರುತಿಸುವಂತೆ, ಇದೇ ರೀತಿ ಜೀರಿಗೆಗೆ ಹೆಸರಾದ ಜಿಲ್ಲೆಯಲ್ಲಿ ಆ ಹೆಸರಿನಿಂದಲೇ ಗುರುತಿಸುವಂತೆ ಮಾಡಬೇಕು. ನಮ್ಮ ಪ್ರದೇಶದ ಗುರುತನ್ನು ಅಲ್ಲಿಯ ವಿಶೇಷ ಕೃಷಿಯ ಮೂಲಕ ಗುರುತಿಸುವಂತೆ ಮಾಡುವುದು ಹೇಗೆ ಎಂಬುದು ನಮಗೆ ಅಭ್ಯಾಸವಾಗಿಲ್ಲ. ಹಾಗಾಗಿ ಆಗಲೇ ಹೇಳಿದಂತೆ ಮಾಡಿದರೆ ಅರಿವು ಮೂಡುತ್ತದೆ. ಹಿಮಾಚಲ ಪ್ರದೇಶದಲ್ಲಿ ಶ್ರೀ ಧೂಮಲ್ ಅವರ ಸರ್ಕಾರವಿದ್ದಾಗ ನಾನು ಅಲ್ಲಿಗೆ ಹೋಗಿದ್ದೆ. ಸೋಲನ್ ನಲ್ಲಿ ಅಣಬೆ ಕೃಷಿಯ ಕೆಲಸ ತುಂಬಾ ಚೆನ್ನಾಗಿ ಆಗುತ್ತಿದೆ. ಅದಕ್ಕೆ ಹೆಸರು ನೀಡಿ ಬ್ರಾಂಡಿಂಗ್ ಮಾಡಬಾರದೇಕೆ ಎಂದು ಹೇಳಿದ್ದೆ.
ಈಗ ಸೋಲನ್ ಗೆ ನೀವು ಹೋದರೆ ಮಶ್ರೂಮ್ ಸಿಟಿಗೆ ಸ್ವಾಗತ ಎಂಬ ಬೋರ್ಡ್ ನಿಮ್ಮನ್ನು ಸ್ವಾಗತಿಸುತ್ತದೆ. ಈಗ ನಿಧಾನವಾಗಿ ಬೇರೆಯವರು ಸಹ ಇದೇ ರೀತಿ ಶುರು ಮಾಡಿದ್ದಾರೆ. ಸೇಬು ಹೆಚ್ಚಾಗಿ ಬೆಳೆಯುವಲ್ಲಿ ಇದೇ ಬೋರ್ಡ್ ಹಾಕಲಾಗಿದೆ. ಕಿವಿ ಹಣ್ಣು ಹೆಚ್ಚಾಗಿ ಬೆಳೆಯುವ ಊರಿನಲ್ಲೂ ಇಂತಹ ಬೋರ್ಡ್ ಇದೆ. ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಈ ರೀತಿ ಕೃಷಿ ವಿಶೇಷಗಳೊಂದಿಗೆ ಊರಿನ ಹೆಸರನ್ನು ಜೋಡಿಸಿದಾಗ ಇದರಿಂದ ಆ ಜಿಲ್ಲೆ ಮತ್ತು ಅಲ್ಲಿನ ವಿಶೇಷ ಬೆಳೆಗೆ ಗುರುತು ಸಿಕ್ಕಂತಾಗುತ್ತದೆ. ಇದರಿಂದ ಅಲ್ಲಿನ ರೈತರಿಗೂ ಒಂದು ಗುರುತು ಸಿಗುತ್ತದೆ. ಕೃಷಿ ಮಾರುಕಟ್ಟೆಯಲ್ಲಿ ತೊಡಗಿರುವ ಜನರ ಗಮನವೂ ಆ ಕಡೆ ಹೋಗುತ್ತದೆ. ಈ 16 ಜಿಲ್ಲೆಗಳು ಭತ್ತದ ಬೆಳೆಗೆ ಹೆಸರಾಗಿವೆ.
ಇಲ್ಲಿಂದ ಅಕ್ಕಿ ಖರೀದಿಸಬಹುದು, ಈ 20 ಜಿಲ್ಲೆಗಳು ಎಣ್ಣೆ ಕಾಳುಗಳು ಬೆಳೆಯುವುದಕ್ಕೆ ಹೆಸರುವಾಸಿಯಾಗಿವೆ, ಇಲ್ಲಿ ವ್ಯಾಪಾರ ಮಾಡಬಹುದು ಎಂದು ಅವರಿಗೆ ಗೊತ್ತಾಗುತ್ತದೆ. ಆಗ ಕೈಗಾರಿಕಾ ವಲಯದಂತೆಯೇ ಅಲ್ಲಿ ಒಂದು ಕೃಷಿ ವಲಯವೇ ನಿರ್ಮಾಣವಾಗಬಹುದು. ಇಂತಹ ಕೃಷಿ ವಲಯಗಳನ್ನು ನಾವು ಅಭಿವೃದ್ಧಿಪಡಿಸುವ ಅಗತ್ಯವಿದೆ. ಅದಕ್ಕೆ ಕಾರಣ ಉತ್ಪನ್ನಗಳು. ಈ ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ ಮಾಡಬಹುದು. ಸಂಸ್ಕರಣೆ ಮಾಡುವುದರಿಂದ ಬೆಳೆಯ ಮೌಲ್ಯವರ್ಧನೆಯಾಗುತ್ತದೆ. ನಾವು ಈ ರೀತಿಯ ಸರಪಳಿಯನ್ನು ನಿರ್ಮಿಸಿದರೆ ಒಳಿತು. ಇದೇ ರೀತಿ ಹಣ್ಣಿನ ಬೆಳೆಯಾದರೆ ಅದರ ಸಂಗ್ರಹಣಾ ವ್ಯವಸ್ಥೆ ಬೇರೆ ರೀತಿಯಾಗುತ್ತದೆ. ಧಾನ್ಯಗಳಾದರೆ ಬೇರೆ ರೀತಿಯಲ್ಲಿ ಸಂಗ್ರಹಿಸಬೇಕಾಗುತ್ತದೆ. ಹಣ್ಣುಗಳಿಗೆ ಬೇರೆ ರೀತಿಯ ಸಾರಿಗೆ ವ್ಯವಸ್ಥೆ ಬೇಕಾಗುತ್ತದೆ. ಧಾನ್ಯಗಳಿಗಾದರೆ ಪ್ಯಾಕೇಜಿಂಗ್ ಸಾರಿಗೆ ಬೇಕಾಗುತ್ತದೆ. ಹೀಗೆ ಒಂದು ಇಡೀ ವ್ಯವಸ್ಥೆ ವಿಶೇಷವಾಗಿ ರೂಪುಗೊಳ್ಳುತ್ತದೆ.
ನಮ್ಮ ಈ ದೊಡ್ಡ ದೇಶದಲ್ಲಿ ಇಂತಹ ವಿಶೇಷ ಕೃಷಿ ವಲಯಗಳನ್ನು ಗುರುತಿಸುವ ಕೆಲಸಗಳು ಆದಷ್ಟು ಬೇಗನೆ ಆಗಬೇಕು. ಏಕೆಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಸಂದರ್ಭದಲ್ಲಿ ಅಂದರೆ 2022ರಲ್ಲಿ ರೈತರ ಆದಾಯ ಎರಡು ಪಟ್ಟು ಹೆಚ್ಚಾಗಿರಬೇಕು ಎಂಬುದು ನಮ್ಮ ಕನಸಾಗಿದೆ. ರೈತರ ಆದಾಯ ದುಪ್ಪಟ್ಟಾಗಲು ಸಾಧ್ಯವಿದೆ. ಕೆಲವು ದಿನಗಳ ಹಿಂದೆ ಡಾ.ಸ್ವಾಮಿನಾಥನ್ ಅವರನ್ನು ಭೇಟಿಯಾದಾಗ ಕೆಲವು ಕೃಷಿ ಅರ್ಥಶಾಸ್ತ್ರಜ್ಞರನ್ನು ಕರೆದು ಚರ್ಚೆ ಮಾಡಿ ಎಂದು ಅವರಿಗೆ ಹೇಳಿದ್ದೆ. ನಂತರ ಅವರು ನನಗೆ ಕೆಲವು ವಿಷಯಗಳನ್ನು ಬರೆದು ಇದರತ್ತ ಗಮನ ಕೊಡಿ ಎಂದು ತಿಳಿಸಿದ್ದರು. ನಾವು ಒಂದು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಕೆಲಸ ಮಾಡಬೇಕು. ಕೃಷಿಯಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳುವುದು ಹೇಗೆ, ಇಳುವರಿಯನ್ನು ಹೆಚ್ಚಿಸುವುದು ಹೇಗೆ, ಬೆಳೆಯ ಮೌಲ್ಯವರ್ಧನೆ ಮಾಡುವುದು ಹೇಗೆ ಎಂದು ಈ ವಿಷಯಗಳತ್ತ ಅವರು ಗಮನ ಸೆಳೆದಿದ್ದಾರೆ. ಈಗ ನೋಡುವುದಾದರೆ ಬೇವು ಲೇಪಿತ ಯೋರಿಯಾ ಒಂದು ಬಹಳ ದೊಡ್ಡ ವಿಜ್ಞಾನವೇನಲ್ಲ. ಇದನ್ನು ಜಾರಿಗೆ ತರುವುದಕ್ಕೆ ಮಹತ್ವ ನೀಡಿರಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಬೇವು ಲೇಪಿಸಿದ ಯೂರಿಯಾ ಕಡ್ಡಾಯಗೊಳಿಸಿದೆವು.
ಈಗ ಇದರ ಪರಿಣಾಮಗಳು ನಮ್ಮೆದುರಿಗಿವೆ. ಯೂರಿಯಾ ಕಳ್ಳತನವಾಗುವುದು ತಪ್ಪಿದೆ, ಭ್ರಷ್ಟಾಚಾರ ಕೊನೆಗೊಂಡಿದೆ. ಜೊತೆಗೆ ಯೂರಿಯಾದ ಖರ್ಚು ಸಹ ಕಡಿಮೆಯಾಗುತ್ತಿದೆ. ಬೇವು ಲೇಪಿತ ಯೂರಿಯಾ ಬಳಕೆಯಿಂದಾಗಿ ಅಕ್ಕಿ ಮತ್ತು ಗೋದಿಯಲ್ಲಿ ಇಳುವರಿ ಹೆಚ್ಚಾಗಿದೆ. ಬೇವು ಲೇಪಿಸುವುದರಿಂದ, ಕಡಿಮೆ ಯೂರಿಯಾ ಬಳಸಿಯೂ ಇಳುವರಿ ಹೆಚ್ಚಿದೆ. ನಾವು ಇಂತಹ ವಿಷಯಗಳನ್ನು ಸರಳವಾಗಿ ಮನದಟ್ಟು ಮಾಡಿಸುತ್ತಾ ಪ್ರಚಾರ ಮಾಡಿದಷ್ಟೂ ಲಾಭವಾಗುತ್ತದೆ. ಡಾ.ಸ್ವಾಮಿನಾಥನ್ ಅವರ ಸಕ್ರಿಯತೆ, ಅವರ ಪ್ರಯತ್ನಗಳಿಂದಾಗಿ ಭಾರತವನ್ನು ನಿತ್ಯ ಹಸಿರು ಕ್ರಾಂತಿಯ ಕಡೆಗೆ ಅಂದರೆ ಸುಸ್ಥಿರ ಕೃಷಿ ಪದ್ಧತಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಭಾರತ ಸರ್ಕಾರವು ಕೆಲಸ ಮಾಡುತ್ತಿದೆ. ನಮ್ಮ ವೈಜ್ಞಾನಿಕ ಪ್ರಯೋಗಗಳ ಸಮಸ್ಯೆಯೆಂದರೆ ಪ್ರಯೋಗಾಲಯದಿಂದ ಅವು ರೈತರನ್ನು ಸರಿಯಾಗಿ ತಲುಪುತ್ತಿಲ್ಲ. ಪ್ರಯೋಗಾಲಯದಿಂದ ಜಮೀನು ಎಂಬುದು ಗುರಿಯಾಗಬೇಕು.
ವಿಜ್ಞಾನಿಗಳು ಪ್ರಯೋಗಗಳನ್ನು ಮಾಡುತ್ತಾ ಜೀವನವನ್ನು ಕಳೆಯುತ್ತಾರೆ ಹೊರತು, ತಾವು ಕಂಡುಹಿಡಿದದ್ದನ್ನು ದೇಶಕ್ಕೆ ಕೊಡಲು ಅಂದರೆ ರೈತನ ಜಮೀನಿನವರೆಗೆ ತಲುಪಿಸುವ ಪ್ರಯತ್ನ ಮಾಡುತ್ತಿಲ್ಲ. ಇದನ್ನು ರೈತರಿಗೆ ಯಾವ ರೀತಿ ತಲುಪಿಸಬೇಕು ಎನ್ನುವುದು ಮುಖ್ಯ. ಸಂಶೋಧನೆಗಳ ಫಲ ರೈತರಿಗೆ ತಲುಪದಿದ್ದರೆ ರೈತರಿಗೆ ಅದು ಗೊತ್ತಾಗದೆ ತಮ್ಮ ಪಾಡಿಗೆ ಏನೋ ಬೆಳೆಯುತ್ತಿರುತ್ತಾರೆ. ಏಕೆಂದರೆ ಒಬ್ಬ ಯಾವ ರೀತಿ ಹಣ ಮಾಡಬಹುದು ಎಂದು ಯೋಚಿಸಿದಂತೆ ರೈತರಿಗೆ ಯೋಚಿಸಲು ಆಗುವುದಿಲ್ಲ. ಅವರು ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಈಗ ಪ್ರಧಾನಮಂತ್ರಿ ಫಸಲು ವಿಮೆ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಈ ವಿಮಾ ಯೋಜನೆ ಜಾರಿಗೆ ಬರುವುದಕ್ಕೆ ಮೊದಲು ಇದ್ದಂತಹ ಪ್ರಧಾನಮಂತ್ರಿ ವಿಮೆ ಯೋಜನೆಯನ್ನು ರೈತರು ಹೆಚ್ಚಾಗಿ ಮಾಡಿಸುತ್ತಿರಲಿಲ್ಲ. ಅದೇ ಈಗ ಜಾರಿಗೆ ಬಂದಿರುವ ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯನ್ನು ಏಳು ಪಟ್ಟು ಹೆಚ್ಚು ರೈತರು ಮಾಡಿಸಿದ್ದಾರೆ. ಅದು ಇತ್ತೀಚೆಗಷ್ಟೇ ಆರಂಭವಾಗಿದ್ದು ಹೆಚ್ಚಾಗಿ ಪ್ರಚಾರವೂ ಇರಲಿಲ್ಲ. ಆದರೂ ರೈತರಿಗೆ ಈ ಹೊಸ ಯೋಜನೆ ಇಷ್ಟವಾಗಿದೆ. ರೈತರಲ್ಲೂ ಆಕ್ಷೇಪಣೆಗಳಿರುತ್ತವೆ.
ಆದರೆ ಒಂದೇ ವರ್ಷದಲ್ಲಿ ಏಳು ಪಟ್ಟು ಹೆಚ್ಚಾಗಿದೆಯೆಂದರೆ ಇದು ರೈತರಿಗೆ ಭದ್ರತೆಯ ಭರವಸೆ ನೀಡಿದೆ ಎಂದರ್ಥ. ಒಂದು ಸಲ ಇದರಿಂದ ನನಗೆ ಭದ್ರತೆ ಇದೆ ಎಂದು ಅರಿವಾದರೆ ರೈತರ ರಿಸ್ಕ್ ತೆಗೆದುಕೊಳ್ಳುವ ಸಾಮಥರ್ಯ್ ಹೆಚ್ಚುತ್ತದೆ. ಈ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ ಹೆಚ್ಚಿದರೆ ವಿಜ್ಞಾನಿಗಳು ಹೇಳುವ ಪ್ರಯೋಗಗಳನ್ನು ಮಾಡಲು ರೈತರು ತಯಾರಾಗುತ್ತಾರೆ. ಆಗ ಸರಪಳಿ ಶುರುವಾಗುತ್ತದೆ. ಪ್ರಧಾನಮಂತ್ರಿ ಫಸಲು ವಿಮೆ ಯೋಜನೆಯಲ್ಲಿ ಒಂದು ದೊಡ್ಡ ಶಕ್ತಿ ಇದ್ದು ಅದು ಪ್ರಯೋಗಾಲಯದಿಂದ ಜಮೀನಿಗೆ ತಲುಪಿಸುವ ವ್ಯವಸ್ಥೆಯನ್ನು ಮುಂದಕ್ಕೆ ಕೊಂಡೊಯ್ಯುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ.
ನಾನು ಮತ್ತೊಮ್ಮೆ ಡಾ.ಸ್ವಾಮಿನಾಥನ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಅವರು ದೇಶಕ್ಕೆ ಹೆಚ್ಚು ಸೇವೆಯನ್ನು ಸಲ್ಲಿಸುತ್ತಿದ್ದಾರೆ, ದೇಶದ ರೈತರ ಸೇವೆಯನ್ನು ಹೆಚ್ಚಾಗಿ ಮಾಡಿದ್ದಾರೆ. ದೇಶದ ಬಡವರ ಹೊಟ್ಟೆ ತುಂಬಿಸಲು ಒಬ್ಬ ತಪಸ್ವಿಯಂತೆ ಕೆಲಸ ಮಾಡಿದ್ದಾರೆ.
ಬಹಳ ಬಹಳ ಅಭಿನಂದನೆಗಳು ಧನ್ಯವಾದಗಳು.
Happening now- the Prime Minister is releasing two books on the green revolution. https://t.co/vbG9VFN31Q
— PMO India (@PMOIndia) May 19, 2017
I have known and closely interacted with Dr. M S Swaminathan since my days as the Chief Minister of Gujarat: PM @narendramodi
— PMO India (@PMOIndia) May 19, 2017
There is a farmer alive in Dr. M S Swaminathan...he is not only a 'Krishi Vaigyanik' but also a 'Kisan Vaigyanik' : PM @narendramodi
— PMO India (@PMOIndia) May 19, 2017
As a young scientist, Dr. M S Swaminathan pledged that India will not starve, it is possible to bring a change for the better: PM
— PMO India (@PMOIndia) May 19, 2017
Dr. M S Swaminathan has interacted with all Prime Ministers & so many other eminent people but he is extremely humble: PM @narendramodi
— PMO India (@PMOIndia) May 19, 2017
Time has come to look at soil management, improving productivity in the agriculture sector: PM @narendramodi
— PMO India (@PMOIndia) May 19, 2017
We are focussing on water conservation but the challenges still remain. We can do so much more to increase awareness of this issue: PM
— PMO India (@PMOIndia) May 19, 2017
When Dhumal Ji was HP CM, there was extensive work done on mushroom cultivation in the state: PM @narendramodi
— PMO India (@PMOIndia) May 19, 2017