ಪಿಎಂಇಂಡಿಯಾ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಹತ್ವದ ಯೋಜನೆಗಳಾದ – ಮಣ್ಣಿನ ಆರೋಗ್ಯ ಕಾರ್ಡ್ ; ಮತ್ತು ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು.
16 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆಯ ಮೊದಲ ಹಂತದ ಕಾರ್ಯಕ್ರಮ ಪೂರ್ಣಗೊಂಡಿದೆ, ಮತ್ತು ಉಳಿತ ರಾಜ್ಯಗಳಲ್ಲಿ ಕೆಲವೇ ವಾರಗಳಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಪ್ರಧಾನಮಂತ್ರಿಯವರಿಗೆ ತಿಳಿಸಲಾಯಿತು.
ಪ್ರಗತಿ ಪರಿಶೀಲಿಸಿದ ಪ್ರಧಾನಿ,ಮಾದರಿ ಗ್ರಿಡ್ ಒಳಗೆ ಮತ್ತು ವಿವಿಧ ಮಣ್ಣಿನ ಪರೀಕ್ಷಾ ಪ್ರಯೋಗಾಲಯಗಳಾದ್ಯಂತ ಸೂಕ್ತ ತಪಾಸಣೆಗಳನ್ನು ಕೈಗೊಳ್ಳಬೇಕೆಂದು ಹೇಳಿದರು. ಇದು ವರದಿಗಳಲ್ಲಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದೂ ಅವರು ಹೇಳಿದರು.
ಮಣ್ಣಿನ ಆರೋಗ್ಯ ಕಾರ್ಡ್ ಗಳನ್ನು ಪ್ರಾದೇಶಿಕ ಭಾಷೆ ಮತ್ತು ಆ ಪ್ರದೇಶದ ಉಪ ಭಾಷೆಯಲ್ಲಿ ಮುದ್ರಿಸಬೇಕು ಎಂದೂ ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, ಇದರಿಂದ ರೈತರಿಗೆ ಅದನ್ನು ಸುಲಭವಾಗಿ ಓದಿ ಅರ್ಥ ಮಾಡಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು.
ಇತ್ತೀಚಿನ ತಂತ್ರಜ್ಞಾನವನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಿರುವುದನ್ನು ಉತ್ತೇಜಿಸಿದ ಪ್ರಧಾನಮಂತ್ರಿಯವರು, ಮಣ್ಣಿನ ಪರೀಕ್ಷೆಯು ಅಂತಿಮವಾಗಿ ಕೈಯಲ್ಲಿ ಹಿಡಿಯಬಹುದಾದ ಸಾಧನಗಳ ಮೂಲಕವೂ ಸಾಧ್ಯವಾಗಲಿದೆ ಎಂದರು. ಈ ಪ್ರಯೋಗದಲ್ಲಿ ನವೋದ್ಯಮಗಳನ್ನು ಮತ್ತು ಉದ್ದಿಮೆದಾರರನ್ನು ತೊಡಗಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಚಿಂತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆ ಕುರಿತಂತೆ ಪ್ರಧಾನಮಂತ್ರಿಯವರಿಗೆ 2016ರ ಮುಂಗಾರು ಹಂಗಾಮಿನಲ್ಲಿ ಮತ್ತು 2016-17ರ ಹಿಂಗಾರು ಹಂಗಾಮಿನಲ್ಲಿ ಈವರೆಗೆ 7700 ಕೋಟಿ ರೂಪಾಯಿಗೂ ಹೆಚ್ಚು ಕ್ಲೇಮ್ ಗಳನ್ನು ಪಾವತಿ ಮಾಡಲಾಗಿದೆ, ಇದರಿಂದ 90 ಲಕ್ಷಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆದಿದ್ದಾರೆ ಎಂದು ಪ್ರಧಾನಿಯವರಿಗೆ ವಿವರಿಸಲಾಯಿತು.
ಬೆಳೆ ವಿಮೆ ಕ್ಲೇಮ್ ಗಳ ನಿರ್ಧರಣೆಗಾಗಿ ತ್ವರಿತವಾಗಿ ದತ್ತಾಂಶ ಸಂಗ್ರಹಿಸಲು ಸ್ಮಾರ್ಟ್ ಫೋನ್ ಗಳು, ದೂರ ಸಂವೇದಿ, ಉಪಗ್ರಹ ದತ್ತಾಂಶ ಮತ್ತು ಡ್ರೋನ್ ನಂಥ ಅತ್ಯಾಥುನಿಕ ಸಾಧನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದೂ ಪ್ರಧಾನಿಯವರಿಗೆ ಅಧಿಕಾರಿಗಳು ತಿಳಿಸಿದರು.
ಕೃಷಿ ಸಚಿವಾಲಯದ, ನೀತಿ ಆಯೋಗ ಮತ್ತು ಪ್ರಧಾನಮಂತ್ರಿ ಕಾರ್ಯಾಲಯದ ಹಿರಿಯ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದರು.
***
AKT/SH
Reviewed the progress of 2 important agriculture sector related schemes- soil health cards & PM Fasal Bima Yojana. https://t.co/kyeNWQgaDc
— Narendra Modi (@narendramodi) August 21, 2017
On soil health card, discussed further bettering of processes & adopting more technology so that the farmers receive maximum benefit.
— Narendra Modi (@narendramodi) August 21, 2017
On PM Fasal Bima Yojana, we discussed aspects relating to claims paid, beneficiaries during Kharif season of 2016 & Rabi season of 2016-17.
— Narendra Modi (@narendramodi) August 21, 2017
Role of technology including smartphones, remote sensing, satellite data for speedy data collection vis-a-vis crop insurance claims is key.
— Narendra Modi (@narendramodi) August 21, 2017