Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವಸಂಸ್ಥೆಯ ಮಹಾಸಭೆಗೆ ಆಯ್ಕೆಯಾಗಿರುವ ಅಧ್ಯಕ್ಷರಿಂದ ಪ್ರಧಾನಮಂತ್ರಿಗಳ ಭೇಟಿ


ವಿಶ್ವಸಂಸ್ಥೆಯ ಮಹಾಸಭೆಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸ್ಲೋವಾಕ್ ಗಣರಾಜ್ಯದ ವಿದೇಶಾಂಗ ಮತ್ತು ಯುರೋಪಿಯನ್ ವ್ಯವಹಾರಗಳ ಸಚಿವ ಶ್ರೀ ಮಿರೊಸ್ಲಾವ್ ಲಜ್ಕಾಕ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ವಿಶ್ವಸಂಸ್ಥೆಯ ಮಹಾಸಭೆಯ 72ನೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಶ್ರೀ ಮಿರೋಸ್ಲಾವ್ ಲಜ್ಕಾಕ್ ಅವರನ್ನು ಪ್ರಧಾನಿ ಅಭಿನಂದಿಸಿದರು. ವಿಶ್ವಸಂಸ್ಥೆಯ ಮುಂಬರುವ 72ನೇ ಮಹಾಧಿವೇಶನಕ್ಕೆ ತಮ್ಮ ಆದ್ಯತೆಗಳನ್ನು ಚುನಾಯಿತ ಅಧ್ಯಕ್ಷರು ಹಂಚಿಕೊಂಡರು. ಅವರ ಹೊಸ ಜವಾಬ್ದಾರಿಯ ನಿರ್ವಹಣೆಗೆ ಭಾರತ ಪೂರ್ಣ ಮತ್ತು ರಚನಾತ್ಮಕ ಸಹಕಾರ ನೀಡುತ್ತದೆ ಎಂದು ಪ್ರಧಾನಿ ಭರವಸೆ ನೀಡಿದರು.

ಭಯೋತ್ಪಾದನೆ, ವಿಶ್ವಸಂಸ್ಥೆಯ ಸುಧಾರಣೆ, ಸುಸ್ಥಿರ ಅಭಿವೃದ್ಧಿಯ ಗುರಿಗಳು ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಪ್ರಮುಖ ಜಾಗತಿಕ ಸವಾಲುಗಳ ವಿರುದ್ಧ ವಿಶ್ವ ಸಂಸ್ಥೆಯು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಕುರಿತು ಇಬ್ಬರೂ ಚರ್ಚಿಸಿದರು.

***