ಪಿಎಂಇಂಡಿಯಾ


ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಿರುವ ಸಹೋದರ, ಸಹೋದರಿಯರೇ,
ಎಲ್ಲರೂ ಹೇಗಿದ್ದೀರಿ?
ಈ ಮೈದಾನ ಚಿಕ್ಕದಾಗಿರುವಂತೆ ನನಗೆ ತೋರುತ್ತಿದೆ. ಹೊರಗಡೆಯೂ ಕೂಡಾ ಎಲ್ಲಿಯೂ ಸ್ಥಳವಿಲ್ಲ. ಇಲ್ಲಿಗೆ ಕೊನೆಯ ಬಾರಿಗೆ ಪ್ರಧಾನಮಂತ್ರಿಯವರು ಎಂದು ಭೇಟಿ ನೀಡಿದ್ದರು ಎಂಬ ನೆನಪು ತಮಗಿದೆಯೇ? ಇಲ್ಲ.. ಇಲ್ಲ… ಯಾರಾದರೂ ಪ್ರಧಾನಮಂತ್ರಿ ಬಂದಿರಬಹುದು? ಹೋಗಲಿ ಬಿಡಿ, ತೊಂದರೆ ಇಲ್ಲ.. ಇದೆಲ್ಲ ನನ್ನ ಹಣೆಯಲ್ಲಿ ಬರೆದಿದೆ.
ಪ್ರಪ್ರಥಮ ಬಾರಿಗೆ ನಾನು ಅಮ್ರೇಲಿ ಜಿಲ್ಲೆಯ ಸಹಕಾರಿ ಸಂಘಗಳಿಗೆ ಅಭಿನಂದನೆಗಳನ್ನು ಸಲ್ಲಿಸಬಯಸುತ್ತೇನೆ. ಈಗ ಈ kSಕ್ಷೇತ್ರಕ್ಕೆ ಹೊಸ ಪೀಳಿಗೆ ಕಾಲಿಡುತ್ತಿದೆ. ಒಂದು ಕಾಲವಿತ್ತು, ಸಹಕಾರಿ ಕ್ಷೇತ್ರದಲ್ಲಿ ರತುಭಾಯಿ ಮತ್ತಿತರ ಮಹಾನುಭಾವರು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಹಕಾರಿ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರ ಇವೆರಡು ಈ ಮಹಾನುಭಾವರ ನಿಯಂತ್ರಣದಲ್ಲಿತ್ತು. ಆದರೆ ಕಳೆದ ಕೆಲವು ಸಮಯಗಳಿಂದ ಒಂದು ಹೊಸ ತಂಡ ಅಮ್ರೇಲಿ ಜಿಲ್ಲೆಯನ್ನು ಅಭಿವೃದ್ಧಿಯ ಉನ್ನತ ಶಿಖರಕ್ಕೆ ಕೊಂಡೊಯ್ಯುವ ಕಾರ್ಯದಲ್ಲಿ ತೊಡಗಿದೆ. ಅಮ್ರೇಲಿಯ ಎಪಿಎಂಸಿಗೆ ನಾನು ಈ ಮೊದಲು ಕೂಡಾ ಭೇಟಿ ನೀಡಿದ್ದೆ. ಆದರೆ ಇಂದು ನಮ್ಮ ಪೀಪಿ ಯವರು ಚಮತ್ಕಾರವನ್ನೇ ಮಾಡಿದ್ದಾರೆ. ಅವರು ಹಾಕಿಕೊಟ್ಟಿರುವ ಮಾದರಿ ನಿಜವಾಗಿಯೂ ಪ್ರಶಂಸಾರ್ಹ. ಪೀಪಿ ಮತ್ತವರ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.
ದಿಲೀಪ್ ಭಾಯಿ ಅವರು ಕಾರ್ಯಪ್ರವೃತ್ತರು. ಕಾಯಕವೇ ಅವರ ಜೀವನ. ಪ್ರತಿ ಕ್ಷಣ ಅವರು ಏನಾದರೂ ಕಾರ್ಯ ನಿರ್ವಹಿಸುತ್ತಲೇ ಇರುತ್ತಾರೆ. ಏನಾದರೊಂದು ಹೊಸತನ್ನು ಮಾಡಬೇಕು, ಹೇಗೆ ಮಾಡಬೇಕು ಎಂಬುದರ ಬಗ್ಗೆ ಆಲೋಚಿಸುತ್ತಲೇ ಇರುತ್ತಾರೆ. ಹಿಂದಿನ ಸರ್ಕಾರಗಳು ಸೌರಾಷ್ಟ್ರದಲ್ಲಿ ಡೈರಿ ಉದ್ಯೋಗ ಯಾವತ್ತೂ ಅಭಿವೃದ್ದಿ ಹೊಂದಲೇ ಬಾರದೆಂಬ ಬಗ್ಗೆ ನಿಶ್ಚಯಿಸಿದ್ದುದು ನನಗೆ ನೆನಪಿದೆ. ಯಾವತ್ತೂ ಮುಂದೆ ಬರಲೇ ಬಾರದು. ಎಂತಹ ದುರ್ದಶೆ. ನಾವು ನೀತಿಯಲ್ಲಿ ಪರಿವರ್ತನೆಯನ್ನು ತಂದೆವು. ಮೊಟ್ಟಮೊದಲಿಗೆ ಈ ಪರಿಸ್ಥಿತಿಯನ್ನು ಬದಲಿಸಬೇಕೆಂಬ ದೃಢಸಂಕಲ್ಪವನ್ನು ದಿಲೀಪ್ ಭಾಯಿ ಅವರು ಮಾಡಿದರು. ಆ ಕಾರ್ಯವನ್ನು ಅವರು ಇಂದು ಮಾಡಿ ತೋರಿಸಿದ್ದಾರೆ, ಇದು ನನಗೆ ಅತೀವ ಸಂತಸವನ್ನುಂಟು ಮಾಡಿದೆ. ಸಂಪೂರ್ಣ ಅಮ್ರೇಲಿ ಪ್ರಾಂತ್ಯಕ್ಕೆ ಇದರ ಲಾಭ ದೊರಕುತ್ತಿದೆ. ಸಂಪೂರ್ಣ ಅಮ್ರೇಲಿ ಪ್ರಾಂತ್ಯದ ಪಶುಪಾಲಕರು, ರೈತರು, ಹಾಲು ಉತ್ಪಾದಕರುಗಳ ಜತೆ ಜತೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಜನರಿಗೆ ಹಾಲು ವ್ಯಾಪಾರಕ್ಕೆ ಉತ್ತಮ ಮಾರುಕಟ್ಟೆ ದೊರತಿದೆ. ಇಷ್ಟೇ ಅಲ್ಲ, ಹಾಲು ಮಾರಾಟಗಾರರಿಗೆ ಹೆಚ್ಚು ಮತ್ತು ಸರಿಯಾದ ಮೌಲ್ಯ ಕೂಡಾ ಲಭಿಸುತ್ತಿದೆ. ಇಷ್ಟೆಲ್ಲ ಯಶಸ್ಸಿನ ನಂತರ ಕಾರ್ಯ ಸ್ಥಗಿತಗೊಳ್ಳಲಿಲ್ಲ ಬದಲಿಗೆ ಎಪಿಎಂಸಿಯು ಆಧುನಿಕ ತಂತ್ರಜ್ಞಾನದ ಉಪಯೋಗಿಸಿಕೊಂಡು ಮಣ್ಣು ಪರೀಕ್ಷಾ ಪ್ರಯೋಗಾಲಯವನ್ನು ಕೂಡಾ ನಿರ್ಮಿಸಿದೆ, ಮಾರುಕಟ್ಟೆಗೆ ಬರುವ ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸಲು ಪ್ರಯೋಗಾಲಯವನ್ನು ನಿರ್ಮಿಸಿದೆ, ಹಾಗು ಭಾರತ ಸರ್ಕಾರ ಜಾರಿಗೆ ತಂದಿರುವ “ಈ-ನಾಮ್” ಯೋಜನೆಯಡಿ, ಯಾವುದೇ ರೈತ ತನ್ನ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರಕುವ ದೇಶದ ಯಾವುದೇ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಮಾರುವುದಕ್ಕಾಗಿ ಭಾರತ ಸರ್ಕಾರವು ಒಂದು ಡಿಜಿಟಲ್ ಪ್ಲಾಟ್ ಫಾರ್ಮ್ ನಿರ್ಮಿಸಿದೆ. ಈ ಡಿಜಿಟಲ್ ಪ್ಲಾಟ್ ಫಾರ್ಮ್ ಗೆ ಉತ್ಪನ್ನಗಳ ಗುಣಮಟ್ಟವನ್ನು ಗುರುತಿಸಲು ಒಂದು ಪ್ರಯೋಗಾಲಯ ಅನಿವಾರ್ಯವಾಗಿದೆ. ಹಾಗೂ ಈ ಕಾರ್ಯವನ್ನು ಪೀಪಿ ಯವರು ಮಾಡಿ ತೋರಿಸಿದ್ದಾರೆ. ಗುಜರಾತ್ ನ ಉಳಿದ ಎಪಿಎಂಸಿಗಳಿಗೆ ಅಮ್ರೇಲಿ ಎಪಿಎಂಸಿ ಒಂದು ಹೊಸ ಹಾದಿ ತೋರಿಸಿ ಕೊಟ್ಟಿದೆ, ಒಂದು ಹೊಸ ಮಾರ್ಗವನ್ನು ಹಾಕಿಕೊಟ್ಟಿದೆ ಎಂದು ನಾನು ಭಾವಿಸುತ್ತೇನೆ. ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಗುಜರಾತ್ ನ ಎಪಿಎಂಸಿ ಕ್ಷೇತ್ರದಲ್ಲಿ ಅಮ್ರೇಲಿ ಪ್ರಪ್ರಥಮದಾದದ್ದು. ಇಂದು ಆರು ದಶಕಗಳ ನಂತರ ಮತ್ತೊಮ್ಮೆ, ಅಮ್ರೇಲಿ ಆಧುನಿಕ ತಂತ್ರಜ್ಞಾನದ ಕ್ಷೇತ್ರದಲ್ಲಿ ಒಂದು ಹೊಸ ಮಾರ್ಗವನ್ನು ತೋರಿಸಿಕೊಡುವಲ್ಲಿ ಕೂಡಾ ಮುಂಚೂಣಿಯಲ್ಲಿದೆ. ಇದಕ್ಕಾಗಿ ಅವರು ಅಭಿನಂದನೆಗೆ ಪಾತ್ರರು.
ಇಂದು ಎರಡು ವಿಷಯಗಳ ಬಗ್ಗೆ ನಾನು ತಮ್ಮ ಗಮನವನ್ನು ಸೆಳೆಯಬಯಸುತ್ತೇನೆ.
ಮೊದಲಿಗೆ, ಇಂದು ಇಲ್ಲಿ ಸ್ವೀಟ್ ರೆವೆಲ್ಯೂಶನ್, ಮಧು ಕ್ರಾಂತಿಯ ಶುಭಾರಂಭವಾಗಿದೆ ಹಾಗೂ ಎರಡನೆಯದಾಗಿ ಗುಜರಾತ್ ನ 1600 ಕಿಲೋಮೀಟರ್ ಸಮುದ್ರ ತೀರವು ನೀಲಿ ಕ್ರಾಂತಿಗೆ ದಾರಿ ತೋರಬಲ್ಲದು. ನಮ್ಮ ಮೀನುಗಾರ ಸಹೋದರ ಸಹೋದರಿಯರು, ನಮ್ಮ ಸಮುದ್ರದ ಸಂಪತ್ತನ್ನು ಒಂದು ನವ ಕ್ರಾಂತಿಯ ಮಾದರಿಯನ್ನಾಗಿಟ್ಟುಕೊಂಡು ಮುನ್ನಡೆಯಬಹುದಾಗಿದೆ. ಗುಜರಾತ್ ನ ಗ್ರಾಮೀಣ ಮತ್ತು ಕರಾವಳಿಗೆ ಒಂದು ಹೊಸ ಆಯಾಮವನ್ನು ನೀಡುವುದಕ್ಕೆ ಈ ಯೋಜನೆಗಳು ನಾಂದಿ ಹಾಡಲಿವೆ. ಹೇಗೆ ಬಿಳಿ ಕ್ರಾಂತಿಯಾಯಿತೋ, ಹಸಿರು ಕ್ರಾಂತಿಯಾಯಿತೋ ಅದೇ ರೀತಿ ಸಿಹಿ ಕ್ರಾಂತಿ ಅಂದರೆ ಮಧು ಕ್ರಾಂತಿಯಲ್ಲಿಯೂ ಕೂಡಾ ಹೆಚ್ಚಿನ ವೇಗದಲ್ಲಿ ಅಭಿವೃದ್ಧಿಯಾಗಬೇಕೆಂಬುದು ಭಾರತ ಸರ್ಕಾರದ ಯೋಜನೆಯಾಗಿದೆ. ಈಗ್ಗೆ ಒಂದೆರಡು ವರ್ಷಗಳ ಹಿಂದೆ ನಾನು ದಿಲೀಪ್ ಭಾಯಿ ಮತ್ತಿತರರ ಜತೆ ಮಾತನಾಡುತ್ತಿದ್ದಾಗ, ನಾವು ಹಾಲು ತರುವುದಕ್ಕಾಗಿ ಹಾಲು ಉತ್ಪಾದಕ ರೈತರ ಬಳಿ ಹೋಗಿ ಹಾಲು ಖರೀದಿ ಮಾಡಿ ತರುತ್ತೇವೆ. ಹಾಗೆಯೇ ಜೇನು ನೊಣಗಳನ್ನು ಕೂಡಾ ಸಂಗ್ರಹಿಸಿ ತರಬಹುದು. ಯಾರಾದರೂ ತನ್ನ ಬಳಿ 50 ಜೇನು ನೊಣಗಳನ್ನು ಸಂಗ್ರಹಿಸಿದರೆ, ಅವರು ವರ್ಷದಲ್ಲಿ ಕನಿಷ್ಟ ಎರಡು ಲಕ್ಷ ರೂಪಾಯಿಗಳಷ್ಟು ಜೇನನ್ನು ಮಾರಬಹುದಾಗಿದೆ, ಜೇನುತುಪ್ಪವನ್ನು ಮಾರಬಹುದಾಗಿದೆ. ಇದು ಹೆಚ್ಚುವರಿ ಆದಾಯವಾಗಿದೆ. ಜೇನುನೊಣಗಳ ಕಾರಣದಿಂದಾಗಿ ಜಮೀನಿನಲ್ಲಿ ಇಳುವರಿ ಕೂಡಾ ಹೆಚ್ಚಾಗಲಿದೆ, ಯಾಕೆಂದರೆ, ಇದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಜೇನುನೊಣಗಳು ಮಾಡುತ್ತವೆ.
ಇಂದು ನನಗೆ ಈ ಯೋಜನೆಗೆ ಶಿಲಾನ್ಯಾಸ ಮಾಡುವ ಅವಕಾಶ ಲಭಿಸಿದೆ. ಎರಡನೆಯದಾಗಿ, ದೇಶದ ಯಾವುದೇ ಭಾಗದಲ್ಲಿ ಯಾವುದೇ ಶುಭಕಾರ್ಯಗಳಲ್ಲಿ ಸಿಹಿ ನೀಡುತ್ತಾರೆ, ಕೇವಲ ಗುಜರಾತ್ ನಲ್ಲಿ ಮಾತ್ರ ಶುಭಕಾರ್ಯದಲ್ಲಿ ಐಸ್ ಕ್ರೀಂ ನೀಡುತ್ತಾರೆ. ಅಮ್ರೇಲಿ ಡೈರಿ ಇಂದು ಐಸ್ ಕ್ರೀಂ ಘಟಕವನ್ನು ಕೂಡಾ ನಿರ್ಮಾಣ ಮಾಡುತ್ತಿದೆ. ಈ ಎರಡು ಹೊಸ ಯೋಜನೆಗಳಿಗೆ ನನ್ನ ಹಾರ್ದಿಕ ಶುಭಾಶಯಗಳು. ಈ ಎರಡೂ ಯೋಜನೆಗಳ ಕಾರ್ಯವನ್ನು ಮುಂದುವರೆಸುವುದಕ್ಕಾಗಿ ಭಾರತ ಸರ್ಕಾರದಿಂದ ಸುಮಾರು ನಾಲ್ಕು ಕೋಟಿ ರೂಪಾಯಿಗಳ ನೆರವು ದೊರಕಲಿದೆ.
ರೈತರು ಮಧುಕ್ರಾಂತಿ, ಜೇನುತುಪ್ಪ ಉತ್ಪಾದನೆ, ಜೇನು ನೊಣಗಳ ಪಾಲನೆಯನ್ನು ತಮ್ಮ ತಮ್ಮ ಹೊಲ ಗದ್ದೆಗಳಲ್ಲಿ ಯಾವುದೇ ಹೆಚ್ಚಿನ ಪರಿಶ್ರಮವಿಲ್ಲದೆ ಸ್ವಾಭಾವಿಕವಾಗಿ ಮಾಡಬಹುದಾಗಿದೆ. ನಾವು ಈ ವ್ಯವಸ್ಥೆಯನ್ನು ರೂಢಿಸಿಕೊಂಡು, ವ್ಯಾಪಾರ ಮಾಡಿದ್ದೇ ಆದಲ್ಲಿ ಅತಿ ಹೆಚ್ಚಿನ Adaayaaಆದಾಯವನ್ನು ಗಳಿಸಿಕೊಳ್ಳಬಹುದಾಗಿದೆ. ಜೇನಿನ ವ್ಯಾಪಾರ ಆಗಲಿಲ್ಲವೆಂದು ತಿಳಿದುಕೊಳ್ಳಿ, ಮನೆಯಲ್ಲಿ ಮಕ್ಕಳಿಗೆ ತಿನ್ನಿಸಿ, ಜೇನುತುಪ್ಪ ಮಕ್ಕಳ ಆರೋಗ್ಯಕ್ಕೆ ಅತ್ಯುತ್ತಮ. ಸಂಪೂರ್ಣ ಗುಜರಾತ್ ನಲ್ಲಿ ಯಾವ ಯಾವ ಪ್ರದೇಶಗಳಲ್ಲಿ ಡೈರಿಯ ನೆಟ್ ವರ್ಕ್ ಗಳಿವೆಯೋ ಅಲ್ಲೆಲ್ಲ ಈ ಮಧುಕ್ರಾಂತಿಯನ್ನು ಸೇರಿಸಿ ಒಂದು ಹೊಸ ಕ್ರಾಂತಿಯತ್ತ ಮುನ್ನಡೆಯಬಹುದಾಗಿದೆ.
£ïÓbhaaಭಾರತದ ಕರಾವಳಿ ತೀರ ಅತ್ಯಂತ ವಿಶಾಲವಾಗಿದೆ, ಆದರೆ ಗುಜರಾತ್ ನ ಕರಾವಳಿ ತೀರ ನೀಲಿ ಕ್ರಾಂತಿಗೆ ಒಂದು ದೊಡ್ಡ ಕೊಡುಗೆಯನ್ನು ನೀಡಬಲ್ಲದು. ನಾವು ಜಲಮಾರ್ಗದೆಡೆಗೆ ಮುನ್ನುಗ್ಗುತ್ತಿದ್ದೇವೆ. ಘೋಘಾ ದಹೇಜ್ ಫೇರಿ ಸೇವೆಯೆಡೆಗೆ ಮುನ್ನಡೆಯುತ್ತಿದ್ದೇವೆ. ನಾವು ಬಂದರು ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದ್ದೇವೆ. ನಾವು ಸಮುದ್ರಮಾರ್ಗದಿಂದ ಆಂಧ್ರಪ್ರದೇಶದ ಮೂಲಕ ವಿಶಾಖಪಟ್ಟಣಮ್ ಗೆ ಸರಕುಗಳನ್ನು ರವಾನೆ ಮಾಡಬೇಕೆಂದಿದ್ದರೆ, ನಾವು ನಮ್ಮ ಮೋರ್ಬಿಯ ಸಮುದ್ರ ಮಾರ್ಗದಿಂದ ಕೊಲ್ಕತ್ತಾದವರೆಗೆ ಕಡಿಮೆ ವೆಚ್ಚದಲ್ಲಿ ಸಾಗಿಸಬಹುದಾಗಿದೆ. ಅಂದರೆ, ಒಂದು ರೀತಿಯಲ್ಲಿ ನೀಲಿ ಕ್ರಾಂತಿಯ ಮೂಲಕ ಸಮುದ್ರ ಮಾರ್ಗಕ್ಕೆ ಬಲ ನೀಡುವ ದಿಶೆಯಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಇದರಿಂದಾಗಿ ಗುಜರಾತ್ ನ ಕರಾವಳಿಯಲ್ಲಿ ವಾಸಿಸುವ ಜನರ ಜೀವನ ಮಟ್ಟದಲ್ಲಿ ಒಂದು ದೊಡ್ಡ ಪರಿವರ್ತನೆಯನ್ನು ಕಾಣಬಹುದಾಗಿದೆ. ಗುಜರಾತ್ ನ ಕರಾವಳಿಯಲ್ಲಿ ನೆಲೆಸಿರುವ ಯುವಜನತೆyannಗೆ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸಲು ಪ್ರೋತ್ಸಾಹಿಸುವುದು, ಅವರಿಗೆ ತರಬೇತಿ ನೀಡುವುದು, ಅವರಿಗೆ ಮಾರ್ಗದರ್ಶನ ನೀಡುವುದು, ಈ ಮೂಲಕ ಸಮುದ್ರ ತೀರದ ಯುವಜನತೆ, ಭಾರತ ಮಾತೆಯ ಸೇವೆ ಸಲ್ಲಿಸಲು ನೌಕಾಪಡೆಗೆ ಸೇರ್ಪಡೆಯಾಗುವಂತೆ ಪ್ರೋತ್ಸಾಹಿಸುವ ಯೋಜನೆಗಳಿಗೆ ಭಾರತ ಸರ್ಕಾರ ಒತ್ತು ನೀಡುತ್ತಿದೆ.
ಯುವರಾಜ ಮೆಹತಾ ಅವರ ನಂತರ ಇಲ್ಲಿ ಯಾವುದೇ ಹೊಸ ಕಾಲೇಜುಗಳ ಪ್ರಾರಂಭವಾಗಲಿಲ್ಲವೆಂದೂ, ಯುವರಾಜ ಮೆಹತಾ ಅವರ ನಂತರ ನಾವು ಬಂದ ಮೇಲೆಯೇ ಇಲ್ಲಿನ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆಯೆಂದು ರೂಪಾಲ ಅವರು ಹೇಳುತ್ತಿದ್ದರು. ಬ್ರಾಡ್ ಗೇಜ್ ರೈಲು, ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಅಮ್ರೇಲಿ ಜನತೆ ಭರವಸೆಯನ್ನು ಕಳೆದುಕೊಂಡಿದ್ದರು. ದಿಲ್ಲಿಯಲ್ಲಿ ಕಾರ್ಯ ನಿರ್ವಹಿಸಲು ನೀವು ನನಗೆ ಅವಕಾಶ ನೀಡಿದಿರಿ, ಇಂದು ನಿಮ್ಮ ಎರಡೂ ಬೇಡಿಕೆಗಳು ಅತ್ಯಂತ ವೇಗದಲ್ಲಿ ಮುನ್ನಡೆಯುತ್ತಿವೆ.
ಸಹೋದರ, ಸಹೋದರಿಯರೇ, 2022 ನಮ್ಮ ಸ್ವಾತಂತ್ರ್ಯದ 75ನೇ ವರ್ಷವಾಗಲಿದೆ. ಅಮ್ರೇಲಿ ಜಿಲ್ಲೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿತ್ತು. 2022, ಸ್ವಾತಂತ್ರ್ಯದ 75 ವರ್ಷಾಚರಣೆಯನ್ನು ಹೇಗೆ ಆಚರಿಸಬೇಕು, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗಾಗಿ ನಾವು ಎಂತಹ ಭಾರತವನ್ನು ನೀಡಬೇಕು, ಅವರ ಕನಸಿನ ಭಾರತವನ್ನು ಅವರಿಗೆ ಹೇಗೆ ಹಿಂದಿರುಗಿಸಬೇಕು ಎಂಬ ಬಗ್ಗೆ ಆಲೋಚಿಸಲು ಇದು ಸೂಕ್ತ ಸಮಯವೆಂದು ನನಗೆ ಅನಿಸುತ್ತಿದೆ. ಅಮ್ರೇಲಿ ಜಿಲ್ಲೆ, ಅಮ್ರೇಲಿ ನಗರ ಪಾಲಿಕೆಗಳು, ಅಮ್ರೇಲಿ ಜಿಲ್ಲೆಯ ತಾಲೂಕು ಪಂಚಾಯತ್ ಗಳು, ಜಿಲ್ಲಾ ಪಂಚಾಯತ್ ಗಳು, ಗ್ರಾಮ ಪಂಚಾಯತ್ ಗಳು, ಸರ್ಕಾರಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಸಾಮಾಜಿಕ ಸಂಸ್ಥೆಗಳು ಒಂದಾಗಿ ಮುಂದಿನ ಐದು ವರ್ಷಗಳಲ್ಲಿ 2022ಕ್ಕೆ ದೇಶಕ್ಕೆ ನಾವು ಇಂತಹ ಕಾರ್ಯವನ್ನು ಮಾಡಿಯೇ ತೀರುತ್ತೇವೆ ಎಂಬ ಸಂಕಲ್ಪವನ್ನು ಮಾಡಬೇಕಿದೆ. ಐದು ವರ್ಷಗಳಲ್ಲಿ ದಿನನಿತ್ಯ ನಡೆಯಬೇಕಾದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಸಂಕಲ್ಪ ಮಾಡಬೇಕಿದೆ. ¸ÀAಸಂಕಲ್ಪದಿಂದ ಸಿದ್ಧಿಯೆಡೆಗಿನ ಯಾತ್ರೆಯನ್ನು ಪರಿಪೂರ್ಣ ಮಾಡಬೇಕಿದೆ. 2022ರ ವೇಳೆಗೆ ನಮ್ಮ ರೈತರ ಆದಾಯ ದ್ವಿಗುಣಗೊಳ್ಳಬೇಕೆಂಬುದು ನಮ್ಮ ಕನಸಾಗಿದೆ.
ಸಹೋದರ, ಸಹೋದರಿಯರೇ, ಯೋಜನಾಬದ್ಧ ರೀತಿಯಲ್ಲಿ ನಾವು ಮುಂದುವರಿದಿದ್ದೇ ಆದರೇ, ನಿಶ್ಚಿತ ರೀತಿಯಲ್ಲಿ ಮುನ್ನಡೆದರೆ, ಭಾರತ ಸರಕಾರ, ಸಮಾಜ ಮತ್ತು ರೈತರು ಒಂದುಗೂಡಿ ಮುನ್ನಡೆದರೆ ಈ ಸಿದ್ಧಿಯನ್ನು ಸಾಧಿಸಬಹುದಾಗಿದೆ. ಇದಕ್ಕಾಗಿ ಪುರಾತನ ಪದ್ಧತಿಗಳನ್ನು ಬದಿಗೊತ್ತಿ ಆಧುನಿಕತೆ ಕಡೆ ಮುನ್ನಡೆಯಬೇಕಿದೆ. ಹೊಸ ವಿಷಯಗಳನ್ನು ಅಳವಡಿಸಿಕೊಳ್ಳಬೇಕಿದೆ. ಇಂದು ನರ್ಮದಾ ಯೋಜನೆ ಪೂರ್ಣಗೊಂಡಿದೆ. ಗುಜರಾತ್ ರಾಜ್ಯಕ್ಕೆ ಇದು ಒಂದು ಗೌರವಪೂರ್ಣ ದಿನ. ಅತ್ಯಂತ ಮಹತ್ವಪೂರ್ಣ ದಿನ, ನರ್ಮದೆಯ ನೀರನ್ನು ಹನಿ ನೀರಾವರಿಗೆ ಉಪಯೋಗಿಸಿಕೊಳ್ಳುವ ಅಭ್ಯಾಸ ಮಾಡಿಕೊಂಡಲ್ಲಿ, ನಮ್ಮ ಕೃಷಿಯನ್ನು ಹನಿ ನೀರಾವರಿಗೆ ಹೊಂದಿಸಿಕೊಂಡಲ್ಲಿ, ಕೇವಲ ನಮಗಾಗಿ ಅಲ್ಲ, ಮುಂಬರುವ ಪೀಳಿಗೆಯವರಿಗೆ ನೂರು ವರ್ಷಗಳ ಕಾಲ ಒಳಿತನ್ನುಂಟು ಮಾಡಬಹುದು. ಆದುದರಿಂದ ನಾವು ನರ್ಮದೆಯ ನೀರನ್ನು ಈ ಕಾರ್ಯಗಳಿಗೆ ವಿನಿಯೋಗಿಸುವ ನಿಟ್ಟಿನಲ್ಲಿ ನಿರ್ಣಯ ಮಾಡಿದ್ದೇವೆ. ಗುಜರಾತ್ ಒಂದು ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ದೇಶದಲ್ಲಿ ಹನಿ ನೀರಾವರಿಯ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯದ ಶೇಕಡಾ 25 ರಷ್ಟನ್ನು ಕೇವಲ ಗುಜರಾತ್ ರಾಜ್ಯ ಮಾಡಿ ತೋರಿಸಿದೆ. ಇದಕ್ಕಾಗಿ ಗುಜರಾತ್ ನ ರೈತರು ಅಭಿನಂದನಾರ್ಹರು. ಆದರೆ ಕೆಲಸ ಕೇವಲ ಅಲ್ಲಿಗೆ ನಿಲ್ಲುವುದಿಲ್ಲ. ಇನ್ನೂ ಹೆಚ್ಚು ಹೆಚ್ಚು ಕಾರ್ಯ ಮಾಡುವ ಅವಕಾಶಗಳಿದ್ದು ಅದನ್ನು ಪೂರ್ಣಮಾಡುವ ನಿಟ್ಟಿನಲ್ಲಿ ನಾವು ಕಾರ್ಯಶೀಲರಾಗಬೇಕಿದೆ. ಕೃಷಿಯೊಂದಿಗೆ ಮತ್ತೆರಡು ವಿಷಯಗಳು… ಅನೇಕ ರೈತರು ಸೌರ ಪಂಪ್ ಗಳ ಮೊರೆ ಹೋಗಿದ್ದಾರೆ. ವಿದ್ಯುತ್ ಬಿಲ್ ಒಂದು ರೂಪಾಯಿ ಕೂಡಾ ಬರುವುದಿಲ್ಲ. ತಮ್ಮ ಸ್ವಂತ ಭೂಮಿಯಲ್ಲಿ ಸೋಲಾರ ಪ್ಯಾನಲ್ ಗಳನ್ನು ಅಳವಡಿಸುವುದು, ಅದರ ಮೂಲಕ ಪಂಪ್ ಚಾಲನೆ ಮಾಡುವುದು, ಅದರ ಮೂಲಕವೇ ನೀರನ್ನು ತೆಗೆಯುವುದು ಇದರಿಂದಾಗಿ ರೈತನ ವಿದ್ಯುತ್ ಬಿಲ್ ಉಳಿತಾಯವಾಗುತ್ತದೆ ಹಾಗೂ ರೈತನ ಸಾವಿರಾರು ರೂಪಾಯಿ ವೆಚ್ಚ ಕೂಡಾ ಕಡಿಮೆಯಾಗುತ್ತದೆ. ಅನೇಕ ರೈತರು ಸೌರಶಕ್ತಿಯಿಂದ ನಡೆಯಬಲ್ಲ ಪಂಪ್ ನ ಮೊರೆ ಹೋಗಿದ್ದಾರೆ. ಹನಿ ನೀರಾವರಿ ಇರಲಿ, ಸೌರ ಪಂಪ್ ಇರಲಿ, ಸೌರ ಶಕ್ತಿಯಿಂದ ನಡೆಯುವ ವಿದ್ಯುತ್ ವ್ಯವಸ್ಥೆ ಇರಲಿ, ವೆಚ್ಚ ಕಡಿಮೆಯಾಗುವುದೋ ಇಲ್ಲವೋ, ನೀವೇ ಹೇಳಿ. ಆದಾಯ ವೃದ್ಧಿಸುವುದೋ, ಇಲ್ಲವೋ? ನಮ್ಮ ಭೂಮಿಯ ಸದುಪಯೋಗವಾಗಬೇಕು. ಈ ನಿಟ್ಟಿನಲ್ಲಿ ನನ್ನೆಲ್ಲ ರೈತ ಬಾಂಧವರು ಮುಂದೆ ಬರಬೇಕು ಎಂಬುದು ನನ್ನ ಮನವಿ. ಸಹಕಾರಿ ಆಂದೋಲನದಲ್ಲಿ ತೊಡಗಿರುವ ನನ್ನೆಲ್ಲಾ ಸ್ನೇಹಿತರು ಈ ಕ್ಷೇತ್ರದಲ್ಲೂ ಕೂಡಾ ಮುಂದೆ ಬರಬೇಕಾಗಿದೆ. ಎಲ್ಲ ರೈತರೂ ಒಂದುಗೂಡಿ, ತಮ್ಮ ಭೂಮಿಯ ಸಮೀಪ ಸೌರ ಪ್ಯಾನಲ್ ಗಳನ್ನು ಅಳವಡಿಸಿ, ಒಂದುಗೂಡಿ ವಿದ್ಯುತ್ ಉತ್ಪಾದನೆ ಮಾಡಿದರೆ, ರೈತರ ಕೃಷಿಗೆ ಅಗತ್ಯವಾದ ನೀರು ಮತ್ತು ವಿದ್ಯುತ್ ನ ವೆಚ್ಚವನ್ನು ಉಳಿಸಬಹುದಾಗಿದೆ. ರೈತನ ಜೀವನದಲ್ಲಿ ಎಂತಹ ಬದಲಾವಣೆ ಬರಬಹುದೆಂಬುದನ್ನು ತಾವು ಊಹಿಸಿ, ಮತ್ತೊಂದು ಮಾತು, ನಾವು ವಿದ್ಯುತ್ ತಂತಿ ಅಳವಡಿಸುವುದಕ್ಕಾಗಿ, ನಮ್ಮ ಎರಡು-ಮೂರು ಮೀಟರ್ ಭೂಮಿಯನ್ನು ಹಾಳು ಮಾಡುತ್ತಿದ್ದೇವೆ. ಆ ಸ್ಥಳದಲ್ಲಿ ನಾವು ಗಿಡ ಬೆಳೆಸಿದರೆ, ಮರವನ್ನು ಬೆಳೆಸಿದರೆ ಹಾಗೂ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಉಪಯೋಗವಾಗುವ ಮರಗಳನ್ನು ಬೆಳೆಸಿದರೆ ಉಪಯೋಗವಾಗುತ್ತದೆ. ಭಾರತ ಸರ್ಕಾರ ಈ ಬಗ್ಗೆ ಒಂದು ಕಾನೂನನ್ನು ತರುವ ಬಗ್ಗೆ ಪರಿಶೀಲಿಸುತ್ತಿದೆ. ಯಾವುದೇ ರೈತ ತನ್ನ ಜಮೀನಿನ ಬದಿಯಲ್ಲಿ ಈ ರೀತಿಯ ಮರಗಳನ್ನು ಬೆಳೆಸಿದರೆ ಅದು ದೊಡ್ಡದಾದ ನಂತರ ಆ ಮರಗಳನ್ನು ಮಾರುವ ಅಧಿಕಾರ ಆ ರೈತನಿಗೆ ದೊರಕಬೇಕು. ಸರ್ಕಾರದ ಅರಣ್ಯ ಇಲಾಖೆ ಅವನಿಗೆ ಯಾವುದೇ ರೀತಿಯ ತೊಂದರೆಯನ್ನು ಉಂಟು ಮಾಡಬಾರದು. ಇದರಿಂದ ರೈತನ ಆರ್ಥಿಕ ಶಕ್ತಿ ವೃದ್ಧಿಯಾಗುತ್ತದೆ, ಈ ರೀತಿಯ ಕಾನೂನು ತರುವ ಬಗ್ಗೆ ಸರ್ಕಾರ ಯೋಜನೆ ರೂಪಿಸುತ್ತಿದೆ. ¨ïâbಭೂಮಿ ಕೂಡಾ ಅನಾವಶ್ಯಕವಾಗಿ ಹಾಳಾಗುತ್ತಿದೆ, ಕಟ್ಟಡ ಸಾಮಗ್ರಿಗಾಗಿ ಉಪಯೋಗಿಸುವ ಮರವನ್ನು ನಾವು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶದ ರೈತ ಬಯಸಿದರೆ, ಕಟ್ಟಡ ಸಾಮಗ್ರಿ ಮರದ ವ್ಯವಸಾಯ ಮಾಡಿ, ವಿದೇಶಗಳ ಮರ ಮುಟ್ಟುಗಳ ಆಮದನ್ನು ನಿಲ್ಲಿಸಬಹುದು, ಇದರಿಂದ ರೈತನ ಆದಾಯದಲ್ಲಿ ವೃದ್ಧಿಯಾಗುವುದೋ ಇಲ್ಲವೋ? ಇದರ ಜತೆ ಜತೆಗೆ ಪಶುಪಾಲನೆ.
ಪ್ರಪಂಚದ ಪ್ರತಿ ಪಶುವಿನ ಹಾಲು ಉತ್ಪಾದನೆಗೆ ಹೋಲಿಸಿದರೆ, ನಮ್ಮ ದೇಶದ ಹಾಲು ಉತ್ಪಾದನೆ ಬಹಳ ಕಡಿಮೆ. ಅವುಗಳ ಲಾಲನೆಪಾಲನೆ ಜತೆ ಜತೆಗೆ ಅವುಗಳನ್ನು ರೋಗಗಳಿಂದ ಮುಕ್ತವಾಗಿಸುವ ವ್ಯವಸ್ಥೆ ಕೂಡಾ ಆಗಬೇಕಿದೆ. ಯಾವ ರೀತಿಯಲ್ಲಿ ಅವುಗಳಿಗೆ ಮೇವು ತಿನ್ನಿಸಬೇಕು ಎಂಬ ಬಗ್ಗೆ ಯೋಚಿಸಬೇಕಿದೆ, ನಮ್ಮ ಹಿಂದಿನ ವ್ಯವಸ್ಥೆಯಂತೆ ಅದು ಏನು ತಿನ್ನುತ್ತದೆಯೋ ಅದನ್ನು ತಿನ್ನಲು ಬಿಡುವುದು, ಇದರಿಂದಾಗಿ ನಮ್ಮ ಪಶುಗಳ ಹಾಲು ನೀಡುವ ಶಕ್ತಿ ಕಡಿಮೆಯಾಗಿದೆ. ಇಂದು ನಮ್ಮ ರೈತ ಹೆಚ್ಚು ಹಾಲು ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಎರಡು ಪಶುಗಳಿರುವ ಕಡೆ ನಾಲ್ಕು ಪಶುಗಳನ್ನು ಸಾಕುತ್ತಾನೆ, ನಾಲ್ಕರ ಬದಲು ಎಂಟು, ಇದರಿಂದಾಗಿ ಖರ್ಚು ಹೆಚ್ಚಾಗುತ್ತದೆ. ಇದರ ಬದಲು ಇರುವ ಎರಡು ಪಶುಗಳು ಹೇಗೆ ಹೆಚ್ಚು ಹಾಲು ನೀಡಬಲ್ಲವು ಎಂಬುದರತ್ತ ಗಮನ ಹರಿಸಬೇಕಾಗಿದೆ. ಇದರಿಂದ ರೈತನ ಆದಾಯ ವೃದ್ಧಿಸುತ್ತದೆ. ಹಾಗೂ ರೈತನ ಮೇಲಿನ ಭಾರ ಕಡಿಮೆಯಾಗುತ್ತದೆ. ಪಶುಪಾಲನೆಯ ಹೊಣೆಯನ್ನು ಹೆಚ್ಚು ನಮ್ಮ ಸಹೋದರಿಯರೇ ನಿರ್ವಹಿಸುತ್ತಾರೆ, ಅವರಿಗೆ ಉತ್ತಮ ತರಬೇತಿ ನೀಡುವ ಬಗ್ಗೆ ನಾವು ಕಾರ್ಯ ರೂಪಿಸುತ್ತಿದ್ದೇವೆ.
ನಮ್ಮ ದೇಶದ ರೈತ ಸುರಕ್ಷಿತವಾಗಿರಬೇಕು. ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ಪ್ರಧಾನಮಂತ್ರಿ ಕೃಷಿ ವಿಮಾ ಯೋಜನೆ ಜಾರಿಗೆ ಬಂದಿದೆ. ಪ್ರಕೃತಿ ಮುನಿದಾಗ, ಬೆಳೆ ಕೈಗೂಡದ ಸಂದರ್ಭದಲ್ಲಿಯೂ ರೈತನಿಗೆ ಆತನ ಹಣ ದೊರಕುವಂತಾಗಬೇಕು ಇದಕ್ಕಾಗಿ ಪ್ರಧಾನಮಂತ್ರಿ ಕೃಷಿ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಕೈಗೆ ಬಂದ ಬೆಳೆ ಜಮೀನಿನಲ್ಲೇ ಉಳಿದು ನಂತರ ಹದಿನೈದು ದಿನಗಳಲ್ಲಿ ಮಳೆ ಬಂದು ಹಾನಿಗೀಡಾದರೂ ರೈತ ಬೆಳೆದ ಉತ್ಪನ್ನದ ಬೆಲೆ ರೈತನಿಗೆ ದೊರಕುವಂತಾಗಬೇಕು. ಈ ರೀತಿಯ ಬೆಳೆ ವಿಮೆ ಭಾರತದಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಒಂದು ರೂಪಾಯಿ ವಿಮೆಗೆ ರೈತ ಕೇವಲ ಎರಡು ಪೈಸೆ ಮಾತ್ರ ನೀಡಬೇಕು. 98 ಪೈಸೆಯ ಜವಾಬ್ಧಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಭರಿಸುತ್ತವೆ. ರೈತ ಕೇವಲ ಎರಡು ಪೈಸೆಯ ಜವಾಬ್ಧಾರಿಯನ್ನು ಹೊರಬೇಕಷ್ಟೆ. ಒಂದು ರೂಪಾಯಿಗೆ ಎರಡು ಪೈಸೆ, ಇಷ್ಟು ದೊಡ್ಡ ಕಾರ್ಯ ದೆಹಲಿಯಲ್ಲಿ ತಾವು ಸ್ಥಾಪಿಸಿರುವ ರೈತಸ್ನೇಹಿ ಸರಕಾರದಿಂದ ಸಾಧ್ಯವಾಗಿದೆ. ಇದರ ಲಾಭವನ್ನು ಇಂದು ರೈತ ಪಡೆದುಕೊಳ್ಳುತ್ತಿದ್ದಾನೆ.
ರೈತ ಬೆಳೆ ವಿಮೆಯತ್ತ ಮುನ್ನಡೆಯುತ್ತಿದ್ದಾನೆ. ಯಾರಿಗೆ ತಪ್ಪು ಮಾಡುವ ಅಭ್ಯಾಸವಿದೆಯೋ ಅವರಿಗೆ ಸ್ವಲ್ಪ ಸಮಯ ತಗುಲುತ್ತದೆ. ತಪ್ಪು ಮಾಡಿದರೂ ಕೂಡಾ ತಮಗೆ ಲಾಭವಾಗುತ್ತಿದೆ ಎಂಬುದರ ಅರಿವು ಅವರಿಗೆ ಆಗುತ್ತದೆ ಎಂಬುದು ನನಗೆ ತಿಳಿದಿದೆ. ಈ ರೀತಿ ಮಾಡುವುದರಿಂದ ಒಳ್ಳೆಯ ರೀತಿಯಲ್ಲಿ ಬದುಕಬಹುದು. ತಪ್ಪು ಮಾಡಿದ ವ್ಯಕ್ತಿ ತೊಂದರೆ ಅನುಭವಿಸುತ್ತಾನೆ, ಒಳ್ಳೆಯದನ್ನು ಮಾಡಿದವನಿಗೆ ಹೆಚ್ಚು ಹೆಚ್ಚು ಲಾಭ ದೊರಕುತ್ತದೆ ಇದೇ ಪ್ರಧಾನಮಂತ್ರಿ ಕೃಷಿ ವಿಮಾ ಯೋಜನೆ.
ನಮ್ಮಲ್ಲಿ ಕೃಷಿ ವ್ಯವಸಾಯ ನಡೆಯುತ್ತಿದೆ ಆದರೂ ಕೋಟ್ಯಾಂತರ ರೂಪಾಯಿಗಳ ಹಣ್ಣು ತರಕಾರಿಗಳು ನಷ್ಟವಾಗುತ್ತಿವೆ. ನಾವು ಪ್ರಧಾನಮಂತ್ರಿ ರೈತ ಸಂಪನ್ಮೂಲ ಯೋಜನೆಯನ್ನು (ಪ್ರಧಾನಮಂತ್ರಿ ಕಿಸಾನ್ ಸಂಪದಾ ಯೋಜನೆ) ಪ್ರಾರಂಭ ಮಾಡಿದ್ದೇವೆ. ಈ ಯೋಜನೆಯಡಿ ಬೆಳೆದ ಬೆಳೆಯ ಮೌಲ್ಯ ನಿರ್ಧಾರ, ಅದರ ಮೌಲ್ಯ ವೃದ್ಧಿ ನಿರ್ಧಾರವಾಗುತ್ತದೆ. ಮಾವಿನಕಾಯಿಗೆ ಕಡಿಮೆ ಬೆಲೆ, ಮಾವಿನ ಹಣ್ಣಿಗೆ ಹೆಚ್ಚು ಬೆಲೆ ಇದು ಮೌಲ್ಯ ವೃದ್ಧಿ. ಮಾವಿನಕಾಯಿಯ ಉಪ್ಪಿನಕಾಯಿ ಮಾಡಿ ಮಾರಿದರೆ ಇನ್ನೂ ಹಣ ಲಭಿಸುತ್ತದೆ, ಹಾಗೂ ಉಪ್ಪಿನಕಾಯಿಯನ್ನು ಸರಿಯಾಗಿ ಪ್ಯಾಕ್ ಮಾಡಿ, ಜಾಹಿರಾತು ನೀಡಿ ಮಾರಿದರೆ ಹೆಚ್ಚು ಹಣ ದೊರಕುತ್ತದೆ ಅದರ ಮೌಲ್ಯ ಹೆಚ್ಚಾಗುತ್ತದೆ. ಹಸಿರು ಮೆಣಸಿನಕಾಯಿಗೆ ಕಡಿಮೆ ಬೆಲೆ, ಕೆಂಪು ಮೆಣಸಿನಕಾಯಿಗೆ ಹೆಚ್ಚು ಬೆಲೆ. ಇದನ್ನು ಪುಡಿ ಮಾಡಿ ಮಾರಿದರೆ ಇನ್ನೂ ಹೆಚ್ಚು ಬೆಲೆ. ಹೀಗೆ ಮೌಲ್ಯವೃದ್ದಿಯಾದರೆ ರೈತನಿಗೆ ಲಾಭ ದೊರಕುತ್ತದೆ. ಹಾಲು ಮಾರಾಟ ಮಾಡಿದರೆ ಕಡಿಮೆ ಬೆಲೆ ದೊರಕುತ್ತದೆ. ಖೋವಾ ಮಾಡಿ ಮಾರಿದರೆ ಹೆಚ್ಚು ಬೆಲೆ ದೊರಕುತ್ತದೆ. ಅದರಲ್ಲು ಪೇಡಾ ಮಾಡಿ ಮಾರಿದರೆ ಇನ್ನೂ ಹೆಚ್ಚು ಬೆಲೆ ದೊರಕುತ್ತದೆ. ರೈತನನ್ನು ಮೌಲ್ಯ ವೃದ್ಧಿಯ ಹಾದಿಯಲ್ಲಿ ಕರೆದೊಯ್ಯಲು ಸರ್ಕಾರ ಪ್ರಧಾನಮಂತ್ರಿ ರೈತ ಸಂಪನ್ಮೂಲ ಯೋಜನೆಯನ್ನು ಜಾರಿಗೆ ತಂದಿದೆ. ದೊಡ್ಡ ಮಟ್ಟದಲ್ಲಿ ಫುಡ್ ಪಾರ್ಕ್ ನಿರ್ಮಿಸುವ ಯೋಜನೆಯನ್ನು ರೂಪಿಸಿದೆ. ಈ ನವಂಬರ್ ನಲ್ಲಿ ವಿಶ್ವದ ಎಲ್ಲ ಕಂಪನಿಗಳಿಗೆ ಆಹ್ವಾನ ನೀಡಿ ಆಹಾರ ಸಂಸ್ಕರಣೆಯ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ. ರೈತ ಬೆಳೆದ ಉತ್ಪನ್ನಗಳ ಮೌಲ್ಯವೃದ್ಧಿಗಾಗಿ ವಿಶ್ವದ ಕಂಪನಿಗಳು ಅವನ ಕೈ ಹಿಡಿದು, ಅವನಿಗೆ ಆಸರೆ ನೀಡಿ ಮುಂದೆ ಕೊಂಡೊಯ್ಯಬೇಕಾಗಿದೆ. ದೇಶದ ರೈತ ಮುಂದೆ ಬರಬೇಕು, ಅವರಿಗೆ ಪ್ರೋತ್ಸಾಹ ನೀಡಲು ಪ್ರಧಾನಮಂತ್ರಿ ರೈತ ಸಂಪನ್ಮೂಲ ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿಯನ್ನು ನೀಡುವ ಬಗ್ಗೆ ಭಾರತ ಸರ್ಕಾರ ನಿರ್ಣಯ ತೆಗೆದುಕೊಂಡಿದೆ.
ಸಹೋದರ, ಸಹೋದರಿಯರೆ, ಗುಜರಾತ್ ನ ಹಳ್ಳಿಗಳು ಸಮೃದ್ಧವಾಗಬೇಕು, ಗುಜರಾತ್ ನ ರೈತನ ಅಭಿವೃದ್ದಿಯಾಗಬೇಕು, ದೇಶದ ರೈತನಿಗೆ ಈ ಯೋಜನೆಯ ಲಾಭ ದೊರಕಬೇಕು, ದೇಶದ ರೈತನ ಮುಂದುವರಿಯಬೇಕು, ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಕ್ರಾಂತಿಯ ವಾತಾವರಣವನ್ನು ಮೂಡಿಸುವ ನಿಟ್ಟಿನಲ್ಲಿ ಇಂದು ಭಾರತ ಸರ್ಕಾರ ಹೆಜ್ಜೆಯನ್ನಿಟ್ಟಿದೆ. ಹೀಗಾಗಿ, ಅಮ್ರೇಲಿ ಜಿಲ್ಲೆಯು ಸಹಕಾರಿ ರಂಗದಲ್ಲಿ ಶ್ವೇತ ಕ್ರಾಂತಿ, ಮಧುಕ್ರಾಂತಿ, ನೀಲಿ ಕ್ರಾಂತಿ, ಎಪಿಎಂಸಿ, ಡೈರಿ, ಇಂಜಿನಿಯರಿಂಗ್ ಮುಂತಾದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಭಾರತ ಸರ್ಕಾರ ಸದಾ ತಮ್ಮೊಂದಿಗೆ ಇರುತ್ತದೆ. ತಾವು ಮುಂದುವರಿದಂತೆಲ್ಲ ಭಾರತ ಸರ್ಕಾರ ತಮ್ಮೊಡನೆ ಇರುವುದನ್ನು ತಾವು ಕಾಣುವಿರಿ, ಇದು ಭಾರತ ಸರ್ಕಾರದ ನೀತಿಯಾಗಿದೆ. ಇದರ ಲಾಭವನ್ನು ದೇಶದ ಯಾವುದೇ ಜಿಲ್ಲೆ ಪಡೆಯಬಹುದು. ಯಾವುದೇ ಸಹಕಾರಿ ಕ್ಷೇತ್ರ ಇದರ ಲಾಭವನ್ನು ಪಡೆಯಬಹುದು. ಅಮ್ರೇಲಿ ಇದರ ಹೆಚ್ಚಿನ ಲಾಭವನ್ನು ಪಡೆಯಲಿ, ಗುಜರಾತ್ ನ ಜಿಲ್ಲೆಗಳು ಇದರ ಲಾಭ ಪಡೆಯಲಿ. ತಮಗೆಲ್ಲರಿಗೂ ತುಂಬು ಹೃದಯದ ಶುಭಾಶಯಗಳು.
ಧನ್ಯವಾದಗಳು ಸ್ನೇಹಿತರೆ.
The cooperative sector here is seeing changes. I am happy to see younger people coming to the fore and taking leadership: PM in Amreli
— PMO India (@PMOIndia) September 17, 2017
When I was serving as CM, I had the opportunity to facilitate the coming of dairies to Saurashtra: PM @narendramodi
— PMO India (@PMOIndia) September 17, 2017
The e-NAM Yojana is helping farmers and giving them access to better markets: PM @narendramodi
— PMO India (@PMOIndia) September 17, 2017
The Blue Revolution and Sweet Revolution have the potential to transform lives of people in Saurashtra: PM @narendramodi
— PMO India (@PMOIndia) September 17, 2017
I urge the farming community here to explore opportunities relating to timber: PM @narendramodi
— PMO India (@PMOIndia) September 17, 2017
Ours is a Government at the Centre that is sensitive to the needs and concerns of the farmers: PM @narendramodi
— PMO India (@PMOIndia) September 17, 2017