ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ತೈಲ ಮತ್ತು ಅನಿಲ ವಲಯದಲ್ಲಿ ಭಾರತ ಮತ್ತು ಬೆಲಾರಸ್ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. 2017ರ ಸೆಪ್ಟೆಂಬರ್ 12ರಂದು ಬೆಲಾರಸ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು.
ಈ ತಿಳಿವಳಿಕೆ ಒಪ್ಪಂದವು ಭಾರತ ಮತ್ತು ಬೆಲಾರಸ್ ನಡುವೆ ದ್ವಿಪಕ್ಷೀಯ ಬಾಂಧವ್ಯವನ್ನು ಉತ್ತೇಜಿಸಲಿದೆ ಮತ್ತು ತೈಲ ಮತ್ತು ಅನಿಲ ವಲಯದಲ್ಲಿ ಎರಡೂ ಕಡೆಯ ಆರ್ಥಿಕ ಮತ್ತು ವಾಣಿಜ್ಯ ಸಹಕಾರವರ್ಧನೆಗೆ ನೆರವಾಗಲಿದೆ. ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಎರಡೂ ಕಡೆಯವರು ಮೇಲ್ಮುಖ ಮತ್ತು ಕೆಳಮುಖ ಚಟುವಟಿಕೆಗಳಲ್ಲಿನ ಸಹಕಾರ ಸ್ಥಾಪಿಸುವ, ಸಾಮರ್ಥ್ಯ ನಿರ್ಮಾಣ, ತಂತ್ರಜ್ಞಾನ ವರ್ಗಾವಣೆ, ತೈಲ ಸಂಗ್ರಹಣೆ ಹೆಚ್ಚಳ ಮತ್ತು ಪ್ರಬುದ್ಧ ಕ್ಷೇತ್ರಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ.
ಈ ತಿಳಿವಳಿಕೆ ಒಪ್ಪಂದವು ಅಂಕಿತ ಹಾಕಿದ ದಿನದಿಂದ ಮೂರು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ.
******