Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಲ ಸಂಪನ್ಮೂಲ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಮೊರಕ್ಕೋ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಲ ಸಂಪನ್ಮೂಲ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಮೊರಕ್ಕೋ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು ಜಲ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ತಮ್ಮ ತಜ್ಞತೆ ಮತ್ತು ತಮ್ಮ ತಮ್ಮ ಕಾನೂನುಗಳ ಚೌಕಟ್ಟಿನೊಳಗೆ ಸಹಕಾರ ಹೆಚ್ಚಿಸುವ ಇರಾದೆ ಹೊಂದಿದೆ. ಈ ತಿಳಿವಳಿಕೆ ಒಪ್ಪಂದದಡಿ ದ್ವಿಪಕ್ಷೀಯ ಸಹಕಾರ ಕ್ಷೇತ್ರಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:

1. ಹೈಡ್ರಾಲಿಕ್ ಮೂಲಸೌಕರ್ಯದ ಪರಿಕಲ್ಪನೆ, ಸಾಕ್ಷಾತ್ಕಾರ ಮತ್ತು ನಿರ್ವಹಣೆ, ಗಮನಾರ್ಹವಾಗಿ ದೊಡ್ಡ ಅಣೆಕಟ್ಟುಗಳು ಮತ್ತು ನೀರಿನ ವರ್ಗಾವಣೆಯ ಯೋಜನೆಗಳು;

2. ಸಮಗ್ರ ಜಲ ಸಂಪನ್ಮೂಲ ನಿರ್ವಹಣೆ, ಅಂದರೆ ಮೇಲ್ಮೈ ಮತ್ತು ಅಂತರ್ಜಲ ಸಂಪನ್ಮೂಲಗಳ ಸೂಕ್ತ ಬಳಕೆ, ಸಮರ್ಥವಾಗಿ ನೀರಿನ ಬಳಕೆಯ ಹೆಚ್ಚಳ, ಸ್ಥಿತಿಸ್ಥಾಪಕತ್ವ ಮತ್ತು ಹವಾಮಾನ ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳುವುದು, ಜಲಾಶ್ರಯಗಳ ಮರುಪೂರಣ, ಸಂಘಟನಾತ್ಮಕ, ಸಾಂಸ್ಥಿಕ ಮತ್ತು ನಿಯಂತ್ರಣದ ಅಂಶಗಳು;

3. ಪ್ರವಾಹ ಮತ್ತು ಬರ ನಿರ್ವಹಣೆ;

4. ಮರುಪೂರಣ ತ್ವರಿತಗೊಳಿಸುವುದೂ ಸೇರಿದಂತೆ ಅಂತರ್ಜಲ ಸಂಪನ್ಮೂಲದ ಸುಸ್ಥಿರ ಅಭಿವೃದ್ಧಿ ಮತ್ತು ನಿರ್ವಹಣೆ; ಮತ್ತು

5. ಮಳೆಕೊಯ್ಲು ಮತ್ತು ಮಳೆ ನೀರು ಪ್ರಮಾಣದ ಮೌಲ್ಯಮಾಪನ ಮತ್ತು ಸ್ಥಿತಿಸ್ಥಾಪಕತ್ವ ಮತ್ತು ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳುವುದು.

ಸಹಕಾರವು ಈ ಕೆಳಗಿನವುಗಳನ್ನೂ ಒಳಗೊಂಡಿರುತ್ತದೆ

1. ಅಭಿಯಾನ ತಜ್ಞರ ವಿನಿಮಯ ಮತ್ತು ಭೇಟಿ;

2. ಜಲ ಸಂಪನ್ಮೂಲ ಕ್ಷೇತ್ರದಲ್ಲಿ ಸಂಶೋಧನೆಯ ಫಲಿತಾಂಶ, ಕಾರ್ಯಕ್ರಮಗಳು, ಪ್ರಕಟಣೆಗಳು ಮತ್ತು ತಜ್ಞತೆಯ ಮಾಹಿತಿ ವಿನಿಮಯ;
· ಭಾರತ ಮತ್ತು ಮೊರಕ್ಕೋದಲ್ಲಿ ಮೇಲೆ ಉಲ್ಲೇಖಿಸಲಾದ ಕ್ಷೇತ್ರಗಳ ಯೋಜನೆಗಳ ಅಭಿವೃದ್ಧಿ:ಎರಡೂರಾಷ್ಟ್ರಗಳಲ್ಲಿಸಾಮಾಜಿಕ–ಆರ್ಥಿಕಕಾರ್ಯನಿರ್ವಾಹಕರೊಂದಿಗೆಪಾಲುದಾರಿಕೆವ್ಯವಸ್ಥೆಯಅಭಿವೃದ್ಧಿ;

1. ಜಲ ಸಂಬಂಧಿತ ಕಾರ್ಯಕ್ರಮಗಳು ಮತ್ತು ಯೋಜನೆಗಳಿಗೆ ತಜ್ಞರ ಪರಸ್ಪರ ಭಾಗವಹಿಸುವಿಕೆ ಖಚಿತಪಡಿಸಿಕೊಳ್ಳುವುದು;

2. ಹೈಡ್ರಾಲಿಕ್ ಬೇಸಿನ್ ಗಳಲ್ಲಿ ಸಮಗ್ರ ನೀರಿನ ಸಂಪನ್ಮೂಲ ನಿರ್ವಹಣೆಯ ತತ್ವಗಳ ಅನುಷ್ಠಾನದ ಬಗ್ಗೆ ಪರಿಣತಿಯನ್ನು ಹಂಚಿಕೊಳ್ಳುವ ಉದ್ದೇಶದಿಂದ ಎರಡು ದೇಶಗಳ ಹೈಡ್ರಾಲಿಕ್ ಬೇಸಿನ್ ಏಜೆನ್ಸಿಗಳ ನಡುವೆ ಸಹಕಾರ ಉತ್ತೇಜಿಸುವುದು.

ಈ ತಿಳಿವಳಿಕೆ ಒಪ್ಪಂದವು ಎಂ.ಓ.ಯು. ಪೂರೈಕೆಗಾಗಿ ಕೈಗೊಳ್ಳುವ ಚಟುವಟಿಕೆಗಳ ಮೇಲೆ ನಿಗಾ ಇಡಲು ಎರಡೂ ಕಡೆಗಳಿಂದ ಸಮಾನ ಸಂಖ್ಯೆಯ ಸದಸ್ಯರನ್ನು ಒಳಗೊಂಡ ಜಂಟಿ ಕಾರ್ಯ ಗುಂಪು (ಜೆಡಬ್ಲ್ಯುಜಿ) ಸ್ಥಾಪನೆಗೆ ಅವಕಾಶ ನೀಡುತ್ತದೆ. ಈ ಕಾರ್ಯಗುಂಪು ಭಾರತ ಮತ್ತು ಮೊರಕ್ಕೋದಲ್ಲಿ ಪರ್ಯಾಯವಾಗಿ ವಾರ್ಷಿಕ ಸಭೆಗಳನ್ನು ನಡೆಸಲಿದೆ, ಕಾರ್ಯ ಗುಂಪು ದೂರವಾಣಿ ಅಥವಾ ವಿಡಿಯೋ ಸಂವಾದದ ಮೂಲಕ ಯಾವುದೇ ಸಮಯದಲ್ಲಿ ಮಾತುಕತೆ ನಡೆಸಬಹುದು.

ವೈಜ್ಞಾನಿಕ, ತಾಂತ್ರಿಕ ಮತ್ತು ತಾಂತ್ರಿಕ ಕ್ಷೇತ್ರಗಳ ಕೇಂದ್ರಿತವಾದ ಈ ಸಹಕಾರವು ಎರಡೂ ರಾಷ್ಟ್ರಗಳಲ್ಲಿನ ಜಲ ಸಂಪನ್ಮೂಲ ಸಂಬಂಧಿತ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ಅಭಿವೃದ್ಧಿ/ಸ್ಥಾಪನೆಗೆ ಉತ್ತೇಜನ ನೀಡುತ್ತದೆ. ಇತ್ತೀಚಿನ ತಂತ್ರಗಳು ಮತ್ತು ತಂತ್ರಜ್ಞಾನ ಕುರಿತ ಅನುಭವ ಮತ್ತು ತಜ್ಞರ ವಿನಿಮಯದಿಂದ ಎರಡೂ ದೇಶಗಳ ಕೌಶಲ ಸುಧಾರಣೆಯಾಗಲಿದೆ ಮತ್ತು ಕಲಿಕೆಗೆ ಅವಕಾಶ ಸಿಗಲಿದೆ.

ಹಿನ್ನೆಲೆ:

ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಚಿವಾಲಯವು ಇತರ ರಾಷ್ಟ್ರಗಳೊಂದಿಗೆ ನೀತಿ ಮತ್ತು ತಾಂತ್ರಿಕ ತಜ್ಞತೆಯ ವಿನಿಮಯ, ತರಬೇತಿ ಕೋರ್ಸ್, ಕಾರ್ಯಾಗಾರ, ವೈಜ್ಞಾನಿಕ ಮತ್ತು ತಾಂತ್ರಿಕ ವಿಚಾರಸಂಕಿರಣ ಆಯೋಜನೆ, ತಜ್ಞರ ವಿನಿಮಯ ಮತ್ತು ಅಧ್ಯಯನ ಪ್ರವಾಸ ಆಯೋಜನೆ ಮೂಲಕ ಜಲ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆ ಕುರಿತಂತೆ ದ್ವಿಪಕ್ಷೀಯ ಸಹಕಾರವನ್ನು ರೂಪಿಸುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಭಾರತ – ಆಫ್ರಿಕ ಸಹಕಾರವನ್ನು ಗಮನದಲ್ಲಿಟ್ಟುಕೊಂಡು, ಮೊರಕ್ಕೋದೊಂದಿಗೆ ಜಲ ಸಂಪನ್ಮೂಲದಲ್ಲಿನ ತಜ್ಞತೆ ಮತ್ತು ಅನುಭವದ ವಿನಿಮಯಕ್ಕಾಗಿ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು.

****