ಪಿಎಂಇಂಡಿಯಾ
ಅತಿ ಹೆಚ್ಚು ಸಂಖ್ಯೆಯಲ್ಲಿ ಸೇರಿರುವ ಸುರೇಂದ್ರನಗರದ ನನ್ನ ನೆಚ್ಚಿನ ಸಹೋದರ ಸಹೋದರಿಯರೆ,
ವಿಮಾನ ನಿಲ್ದಾಣ ಬರಬಹುದು ಎಂಬ ಕಲ್ಪನೆ ಈ ಚೋಟೀಲಾದಲ್ಲಿ ಯಾರಿಗಾದರು ಇತ್ತೇನು? ಸುರೇಂದ್ರ ಜಿಲ್ಲೆಯ ಜನ ಎಂದಾದರು ಈ ಬಗ್ಗೆ ಯೋಚಿಸಿದ್ದರೆ? ವಿಮಾನ ನಿಲ್ದಾಣ ಬಂದಲ್ಲಿ ಯಾರಿಗೆ ಸಂತೋಷ ಆಗೊಲ್ಲ ಹೇಳಿ. ವಿಮಾನ ನಿಲ್ದಾಣ ಬಂದು, ವಿಮಾನಗಳು ಹಾರಾಟ ಆರಂಭಿಸಿ, ಎಲ್ಲ ವ್ಯವಸ್ಥೆಗಳು ಸುವ್ಯವಸ್ಥಿತವಾಗಿ ಆದಾಗ ಅದನ್ನು ಅಭಿವೃದ್ಧಿ? ? ಅಥವಾ ಪ್ರಗತಿಯೆಂದು ಕರೆಯಬಹುದಲ್ವೆ. ಇಂಥ ಒಂದು ಪ್ರಗತಿ ನಿಮಗೆ ಇಷ್ಟವಾಗಬಹುದೆಂಬ ನಂಬಿಕೆ ನನ್ನದು. ಪ್ರಗತಿ ಆಗಬೇಕು. ಪ್ರಗತಿ ಅಗತ್ಯವಿದೆ. ಪ್ರಗತಿಯೆ ಗುಜರಾತಿನ ಭವಿಷ್ಯವನ್ನು ಬದಲಾಯಿಸುತ್ತದೆ. ಈ ಪ್ರಗತಿ ನಿಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಬದಲಾಯಿಸುತ್ತದೆಯೆ?. ಶಹಬಾಸ್.
ನೀವು ಯಾರಾದರೂ ಮನೆಯಿಲ್ಲದ ಬಡವನನ್ನು ಮನೆ ಬೇಕಾ..ಎಂದು ಕೇಳಿ,. ಯಾರು ಬೇಡವೆನ್ನುತ್ತಾರೆ. ಎಲ್ಲರಿಗೂ ಮನೆ ಬೇಕೆ ಬೇಕು. ಅವರಿಗೆ ಮನೆ ಕೊಡುವುದೊ, ಬಡವರಿಗೆ ಅಂಥ ಒಂದು ವ್ಯವಸ್ಥೆಯನ್ನು ಮಾಡಿಕೊಡುವುದೊ. ಅಭಿವೃದ್ಥಿಯಿಲ್ಲದೆ ಯಾವ ಪ್ರಗತಿಯೂ ಸಾಧ್ಯವಿಲ್ಲ. ಪ್ರಗತಿಯೆನ್ನುವುದು ಈ ಹಿಂದೆಯೂ ಆಗಿದ್ದುಂಟು. ಯಾವುದೋ ಒಂದು ಹಳ್ಳಿಯಲ್ಲಿ, ಯಾವುದೋ ಒಂದು ಮೊಹಲ್ಲಾದಲ್ಲಿ ಯಾರೋ ಒಂದು ಹ್ಯಾಂಡ್ ಪಂಪು ಹಾಕಿಸಿದರೆಂದರೆ ಅದನ್ನೆ ಎರಡು-ಮೂರು ಚುನಾವಣೆ ಆದಾಗಲೂ ನಾನು ಹ್ಯಾಂಡ್ ಪಂಪು ಹಾಕಿಸಿದ್ದೆ ಅಂತಾ ಡಂಗುರ ಹೊಡೆದುಕೊಳ್ಳುತ್ತಿದ್ದರು. ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿ ನಾನು ಈ ಕ್ಷೇತ್ರವನ್ನು ಅಭಿವೃದ್ಥಿ ಪಡಿಸಿರುತ್ತೇನೆ ಅಂತಾ ನೀರಿಗಾಗಿ ಹ್ಯಾಂಡ್ ಪಂಪನ್ನು ಹಾಕಿಸಿದ್ದೇ ಒಂದು ದೊಡ್ಡ ಪ್ರಗತಿಯ ಕಾರ್ಯ ಎಂಬಂತೆ ವೈಭವೀಕರಿಸುತ್ತಿದ್ದರು. ಹ್ಯಾಂಡ್ ಪಂಪ್ ಹಾಕಿಸುವುದೇ ಪ್ರಗತಿಯ ಸಂಕೇತವಾಗಿತ್ತು.
ಇಂದು ಇಲ್ಲೊಂದು ಸರ್ಕಾರವಿದೆ, ಇಷ್ಟು ದೊಡ್ಡ ಪೈಪ್ ಲೈನ್ ಹಾಕಿಸಿ ತಾಯಿ ನರ್ಮದೆಯನ್ನು ಹಳ್ಳಿ-ಹಳ್ಳಿಗೂ, ಮನೆ-ಮನೆಗೂ ಮುಟ್ಟಿಸುವ ಕಾರ್ಯಮಾಡಿದೆ. ಇಡೀ ಗುಜರಾತಿನಲ್ಲಿ ನರ್ಮದಾ ಯೋಜನೆಯ ಕಾರಣದಿಂದಾಗಿ ಯಾರಿಗಾದರು ಲಾಭವಾಗಿದ್ದರೆ ಅದ್ಯಾರಿರಬಹುದು ? ಆ ಜಿಲ್ಲೆಯ ಹೆಸರೇನು ? ಹೆಸರೇನಂದಿರಿ ? ಹ್ಹಾಂ… ಆ ಜಿಲ್ಲೆಯೆ ಸುರೇಂದ್ರ ನಗರ. ಈ ಭೂಮಿಯನ್ನು ನಂದನವನವನ್ನಾಗಿ ಮಾಡಲಿಕ್ಕಾಗಿ ನರ್ಮದೆ ನಿಮ್ಮ ಮನೆಯ ಬಾಗಿಲಿಗೆ ಬಂದಿದ್ದಾಳೆ. ಇದು ಕೇವಲ ಗ್ರಾಮೀಣ ಜನರಿಗೆ ಮತ್ತು ಕೃಷಿಕರಿಗೆ ಮಾತ್ರವಲ್ಲ ಮುಂದೊಂದು ದಿನ ಔದ್ಯೋಗಿಕರಣದ ಪ್ರಗತಿಗೆ ಈ ನರ್ಮದೆ ಕಾರಣಳಾಗುತ್ತಾಳೆ. ನೌಕರಿಯ ಹಲವು ಹತ್ತು ಮಾರ್ಗಗಳು ತಮಗೆ ತಾವೇ ತೆರೆದು ಕೊಳ್ಳುತ್ತದೆ. ಇದರಿಂದ ಸುರೇಂದ್ರ ನಗರ ಜಿಲ್ಲೆಯಲ್ಲಿ ನಮ್ಮ ಯುವಕರಿಗೆ ಕೆಲಸ ದೊರೆಯುವಂತಾಗುತ್ತದೆ. ಶಿಕ್ಷಣದ ಬಹು ದೊಡ್ಡ ಕೇಂದ್ರ ಇಲ್ಲಿ ತೆರೆದು ಕೊಳ್ಳುತ್ತದೆ. ನೀರಿದ್ದ ಕಡೆ ತನ್ನಷ್ಟಕ್ಕೆ ತಾನೇ ವ್ಯವಸ್ಥೆಯ ಅಭಿವೃದ್ಥಿ ಹೊಂದುತ್ತದೆ. ಇದರಿಂದ ಸರ್ಕಾರವು ಸಹ ಮುಂಜಾಗ್ರತ ಕ್ರಮವಾಗಿ ಪ್ರಗತಿಪರ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತದೆ. ಈಗ ಇಲ್ಲಿ ವಿಮಾನ ನಿಲ್ದಾಣವು ಸಹ ಬರುತ್ತಿದೆ ಎಂದಾಗ ಅದರ ಪರಿಣಾಮ ಇಲ್ಲಿಯೂ ಆಗುವುದರಲ್ಲಿ ಯಾವ ಸಂಶಯವು ಬೇಡಾ.
ಸುರೇಂದ್ರ ನಗರ ಮತ್ತು ರಾಜಕೋಟ್ ನಗರಗಳ ನಡುವೆ ವಿಮಾನ ನಿಲ್ದಾಣದ ಕಾರ್ಯ ಪೂರ್ಣವಾದಾಗ ಎರಡೂ ನಗರಗಳ ನಡುವೆ ಒಂದು ರೀತಿಯಲ್ಲಿ ಆರೋಗ್ಯಕರವಾದ ಸ್ಪರ್ದೆ ಏರ್ಪಡುತ್ತದೆ. ಅಭಿವೃದ್ಥಿಯೂ ಸಹ ಇಲ್ಲಿ ಏಕ ಕಾಲಕ್ಕೆ ಪ್ರಗತಿ ಪಥದಲ್ಲಿ ಸಾಗಲಿದೆ. ಇದನ್ನು ಆರೋಗ್ಯಕರ ಬೆಳವಣಿಗೆಯೆಂದೇ ಕರೆಯಬಹುದು. ಈ ಎರಡು ನಗರಗಳ ನಡುವೆ ಭಾರತ ಸರ್ಕಾರ ನೂರಾರು ಕೋಟಿ ರೂಪಾಯಿಗಳನ್ನು ವೆಚ್ಚಮಾಡಿ ವಿಮಾನ ನಿಲ್ದಾಣ ಸ್ಥಾಪಿಸಲು ಮುಂದಾಗಿದೆ. ಕೆಲವರಿಗೆ ಇದು ಸಹ ಅಪಥ್ಯವಾಗಬಹುದು. ಅಂತಹವರಿಗೆ ಬಸ್ಸಿನಲ್ಲಿ ಬನ್ನಿ..ನಿಮಗೇಕೆ ವಿಮಾನ ಎಂದು ಹೇಳಿ. ಆಗ ಬೇಗ ತಲುಪಬೇಕು ಅಂತಾ ಅನ್ನುವರು. ಅಂದರೆ ಇದು ಕೆಲವರಿಗೆ ಮಾತ್ರವೇ ಅನ್ವಯಿಸುತ್ತೆ,. ಜನಸಾಮಾನ್ಯ ರಿಗೆ ಅನ್ವಯಿಸುವುದಿಲ್ಲ .
ಅಂದು ರಾಜ ಮಹಾರಾಜರಿಗೆ ಮಾತ್ರವೆ ಮೀಸಲಾಗಿದ್ದ ವಿಮಾನ ಸೇವೆ ಇಂದು ಸಾಮಾನ್ಯರಿಗೂ ದೊರಕುವಂತಾಗಿದೆ. ಇದರಿಂದ ನಾನು ದೇಶದ ವೈಮಾನಿಕ ಕ್ಷೇತ್ರದಲ್ಲಿ ಅಭಿವೃದ್ಥಿಯನ್ನು ಕಾಣಬಯಸುವವನು ಎಂದು ಹೇಳಿದ್ದೆ.. ಚಪ್ಪಲಿಯ ಕಾಲಿನಲ್ಲಿ ನಡೆದಾಡುವವನು ಸಹ ವಿಮಾನವನ್ನೇರಬೇಕು ಎಂದು ಬಯಸುತ್ತೇನೆ. ಇಡೀ ವಿಶ್ವದಲ್ಲಿ ವೈಮಾನಿಕ ಕ್ಷೇತ್ರ ಆಗಾಧವಾಗಿ ಬೆಳದಿದೆ. ಆದರೆ ಸ್ವತಂತ್ರ ಭಾರತದಲ್ಲಿ ಇದುವರೆವಿಗೂ ವೈಮಾನಿಕ ನೀತಿಯನ್ನೇ ರೂಪಿಸಲಾಗಿಲ್ಲ. ನಾವು ಬಂದ ನಂತಹ ಇದಕ್ಕೊಂದು ನೀತಿ-ನಿಯಮ ರೂಪಿಸಿದ್ದೇವೆ. ಇದು ಕೇವಲ ದೊಡ್ಡ ದೊಡ್ಡ ನಗರಗಳಾದ ಮುಂಬೈ, ಚೆನೈ, ಆಹಮದಾಬಾದ್ ಗಳಿಗೆ ಮಾತ್ರವೆ ಸೀಮಿತವಾಗಿಲ್ಲ. ಸಣ್ಣ-ಸಣ್ಣ ನಗರಗಳಿಗೂ ವಿಮಾನ ಸೇವಾ ಸೌಲಭ್ಯ ದೊರಕುವಂತೆ ಮಾಡಲು ಶ್ರಮಿಸುತ್ತಿದ್ದೇವೆ. ಯಾವುದೇ ಸಂಪರ್ಕವಿರದ ದೂರ ದೂರ ಪ್ರದೇಶಗಳಿಗೆ ಒಂದು ಘಂಟೆಯವರೆಗಿನ ಸಮಯ ತೆಗೆದು ಕೊಳ್ಳುವ ಊರುಗಳಿಗೆ ಎರಡುವರೆ ಸಾವಿರ ರೂಪಾಯಿಗಳ ಟಿಕೇಟ್ ನಿಗಧಿ ಪಡಿಸಿ ವೈಮಾನಿಕ ಕ್ಷೇತ್ರಕ್ಕೆ ಹೆಚ್ಚು ಶಕ್ತಿಯನ್ನು ತುಂಬಿದ್ದೇವೆ. ಇದುವರೆವಿಗೂ 8 ಮಾರ್ಗಗಳು ಆರಂಭಗೊಂಡಿದೆ. ಗುಜರಾತಿನ ಕಂಡಲಾಗೂ ಸಹ ಈ ಸೌಲಭ್ಯ ದೊರೆತಿದೆ. ಮಿಠಾಪುರಕ್ಕೆ ಸದ್ಯದಲ್ಲೆ ಈ ಸೌಲಭ್ಯ ದೊರಕಲಿದೆ. ಭಾರತದ ಪ್ರತಿಯೊಂದು ರಾಜ್ಯಗಳಲ್ಲೂ ವಿಮಾನ ಹಾರಿ ಇಳಿಯಬಹುದಾದ ರನ್-ವೇ ಗಳು ನಿರ್ಮಾಣವಾಗುತ್ತಿದೆ. ಶೀಘ್ರದಲ್ಲಿಯೇ ಪ್ರತಿಯೊಂದು ರಾಜ್ಯದಲ್ಲೂ ಹತ್ತು, ಹದಿನೈದು, ಇಪತ್ತರವರೆಗೆ ವಿಮಾನನಿಲ್ದಾಣಗಳು ಕಾರ್ಯಾರಂಭ ಮಾಡಲಿವೆ. ಇತ್ತೀಚಿನ ತಾಜಾ ಸುದ್ದಿಯ ಪ್ರಕಾರ . ದೇಶದಲ್ಲಿ ವಿಮಾನದಲ್ಲಿ ಹಾರಾಡುವ ಯಾತ್ರಿಗಳ ಸಂಖ್ಯೆಯಲ್ಲಿ ಶೇಕಡ 14 ರಷ್ಟು ವೃದ್ಥಿಯಾಗಿದೆಎಂಬುದನ್ನು ತಿಳಿದು ನಿಮಗೆ ಸಂತೋಷವಾಗಿರಬಹುದು. ಅದಕ್ಕಾನುಗುಣವಾಗಿಯೆ ರಾಜಕೋಟ್ ನಲ್ಲಿ ಇಂಥದೊಂದು ಗ್ರೀನ್ ಫೀಲ್ಡ್ ಯೋಜನೆ ಜಾರಿಗೆ ಬರುತ್ತಿದೆ.
ನಾನು ಗುಜರಾತಿನ ಈ ಕ್ಷೇತ್ರದ ನಾಗರಿಕರನ್ನು ಅಭಿನಂದಿಸುತ್ತಿದ್ದೇನೆ. ಇಷ್ಟು ದೊಡ್ಡ ಯೋಜನೆಗೆ ರೈತರಿಂದ ಕೇವಲ ಶೇಕಡಾ 4 ರಷ್ಟು ಜಮೀನನ್ನು ಮಾತ್ರವೆ ಪಡೆಯುತ್ತಿದ್ದೇವೆ. ಉಳಿದ ಶೇಕಡ 96 ರಷ್ಟು ಬಂಜರು ಭೂಮಿಯಾಗಿ ಉಳಿದಿತ್ತು. ಈ ಭೂಮಿಯನ್ನು ಬಳಸಿ ವಿಮಾನ ನಿಲ್ಧಾಣ ಮಾಡಲು ತೀರ್ಮಾನಿಸಲಾಗಿದೆ. ಸುರೇಂದ್ರನಗರದ ಭೂಮಿ ಕೃಷಿ ಯೋಗ್ಯ ಭೂಮಿ. ಹೀಗಾಗಿ ಬಂಜರು ಭೂಮಿಯನ್ನು ಇದಕ್ಕಾಗಿ ಬಳಸಲಾಗಿದೆ. ಈಗತಾನೆ ವಿಜಯ ಬಾಯಿ ಹೇಳುತಿದ್ದರು ರಾಜ್ ಕೋಟ್ ವಿಮಾನನಿಲ್ದಾಣದ ಎಲ್ಲೆ ಹೆಚ್ಚಾಗಿದೆ.ಬಸ್ ನಿಲ್ದಾಣದಿಂದಲೂ ಅದರ ಎಲ್ಲೆ ಕಾಣುತ್ತದೆ.ಹೀಗಾಗಿ ರಾಜ್ ಕೋಟ್ ಹಾಗೂ ಈ ಸಂಪೂರ್ಣ ಕ್ಷೇತ್ರ ವಿಕಾಸಗೊಳ್ಳುತ್ತಿರುವಾಗ ಭವಿಷ್ಯವನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ,ಭವಿಷ್ಯದಲ್ಲಿ ಮುಂದೊಂದು ದಿನ ಇಲ್ಲಿಂದಲೇ ಅಂತರಾಷ್ಟ್ರೀಯವಿಮಾನಸೇವೆ ಲಭ್ಯವಾಗಬಹುದು. ವಿಶ್ವದ ಯಾವುದೇ ಮೂಲೆಗೆ ಹೋಗಬೇಕಾದರೂ ರಾಜ್ ಕೋಟ್ ಚೋಟೀಲಾ ನಡುವಿನ ಈ ವಿಮಾನ ನಿಲ್ದಾಣ ಖಂಡಿತಾ ಕೆಲಸಕ್ಕೆ ಬರುವುದರಲ್ಲಿ ಸಂದೇಹವಿಲ್ಲ. ಅಂತಹ ಒಂದು ಮಹತ್ವಪೂರ್ಣ ಯೋಜನೆಯ ಕೆಲಸ ಇಂದು ಇಲ್ಲಿ ಪ್ರಾರಂಭವಾಗಿದೆ.
ಇಂದು ಸುರೇಂದ್ರನಗರ ಮತ್ತು ವಢವಾಣ ಇದಕ್ಕೆ ಸಂಬಂಧಿಸಿದಂತೆ ಎರಡು ಮಹತ್ವದ ಕಾರ್ಯಕ್ರಮಗಳನ್ನು ನಾವು ಪ್ರಾರಂಭಿಸುತ್ತಿದ್ದೇವೆ. ಇಂದು ಇಲ್ಲಿನ ಸೂರ್- ಸಾಗರ ಮುದೊಂದು ದಿನ ಸುಖ ಸಾಗರವಾಗಲಿದೆ. ನೀರು ದೊರಕಿದ್ದರಿಂದ ಪಶು ಸಂಗೋಪನೆಯ ಕಾರ್ಯದಲ್ಲಿ ಪ್ರಗತಿ ಕಾಣುವಂತಾಗಿದೆ. ಹಾಲು ಉತ್ಪಾದನೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಹಾಲು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ನಮ್ಮ ಸೂರ್ ಸಾಗರ ಡೈರಿ ಸ್ಥಗಿತಗೊಳ್ಳುವ ಮಟ್ಟಕ್ಕೆ ಬಂದಿತ್ತು. ಅಂದಿನ ಸರ್ಕಾರ ಡೈರಿ ಕಾರ್ಯ ಸ್ಧಗಿತಗೊಳಿಸುವ ಕಾನೂನನ್ನು ಜಾರಿ ಮಾಡಿತ್ತು. ಅಶ್ಚರ್ಯವೆಂದರೆ ಯಾಕೆ ಎನ್ನುವ ಕಾರಣ ಇದು ವರೆವಿಗೂ ತಿಳಿದಿಲ್ಲ. ನಾನು ಮುಖ್ಯಮಂತ್ರಿಯಾದ ನಂತರ ಪಶು ಪಾಲನೆ ಮಾಡುವವರು ಹಾಲು ಉತ್ಪಾದಿಸುವವರು ಮುಂದೆ ಬಂದಲ್ಲಿ ಅಂತಹವರಿಗೆ ಡೈರಿ ಪ್ರಾರಂಭಿಸಲು ಸರ್ಕಾರ ಎಲ್ಲ ನೆರವು ನೀಡುವುದೆಂದು ಭರವಸೆಯನ್ನು ನೀಡಿದ್ದೆ. ಪಶು ಸಂಗೋಪನೆಗೆ ಇದಕ್ಕಿಂತ ಮಿಗಿಲಾದ ಬೇರೇಯಾವ ಸೇವೆಯನ್ನು ತಾನೆ ಮಾಡಲು ಸಾಧ್ಯ. ಹಾಲಿಗೆ ಸರಿಯಾದ ಬೆಲೆ ನಿಗಧಿ ಪಡಿಸುವುದು ಮತ್ತು ಅದು ಹಾಲು ಉತ್ಪಾದಕರಿಗೆ ದೊರೆಯುವಂತೆ ಮಾಡುವುದು ಮತ್ತು ಹಾಲು ಉತ್ಪಾದನೆಯನ್ನು ಆಧುನೀಕರಣಗೊಳಿಸುವುದು, ಅದಕ್ಕಾಗಿ ಒಂದು ಸ್ಥಾವರವನ್ನು ಇಂದು ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆಕಿದೆ. ಈ ಸೂರ್ ಸಾಗರ್ ಹಾಲು ಉತ್ಪಾದನೆಯಲ್ಲಿ ಮುಂದೊಂದು ದಿನ ಸುರೇಂದ್ರನಗರದ ಸುಖ ಸಾಗರವಾಗಿ ಪರಿಣಮಿಸಲಿದೆ ಎಂಬ ವಿಶ್ವಾಸ ನನಗಿದೆ. ಇದಕ್ಕಾಗಿ ಎಲ್ಲರನ್ನು ಅಭಿನಂದಿಸುತ್ತೇನೆ.
ಧೋರಿಧಜಾ ಡ್ಯಾಂನಲ್ಲಿ ನರ್ಮದೆಯ ನೀರು ಬಂದಾಗ ಅದನ್ನು ಸ್ವಾಗತಿಸಲು ನಾನು ಅಲ್ಲಿಗೆ ಬಂದಿದ್ದೆ. ಈಗಲೂ ಅಲ್ಲಿನ ಘಟನೆ ನನಗೆ ನೆನಪಿದೆ. ಜನ ಸಂತೋಷ ಸಾಗರದಲ್ಲಿ ಮುಳುಗಿದ್ದರು. ನೀರಿಗಾಗಿ ಹಂಬಲಿಸುವವರ ಕಷ್ಟ ಬಾಯಾರಿದವನಿಗಷ್ಟೇ ಗೊತ್ತು. ಇದರ ಸಂಕಷ್ಟ ಕಚ್ಛ, ಸೌರಾಷ್ಟ್ರದ ಗುಜರಾತಿನ ಜನತೆಗೆ ಗೊತ್ತು ವಢವಾಣದಲ್ಲಿ ಮೊದಲು ಜನರಿಗೆ 15-20 ದಿನಗಳಿಗೊಮ್ಮೆ ನೀರು ದೊರೆಯುತ್ತಿತ್ತು. ಯಾರಾದರೂ ನೆಂಟರು ಬರುತ್ತಾರೆಂದರೆ, ಹಗಲು ಬನ್ನಿ, ಮದ್ಯಾನ್ಹದ ನಂತರ ಬನ್ನಿ. ರಾತ್ರಿ ಉಳಿಯಬೇಡಿ, ಬೆಳ್ಳಗ್ಗೆ ಸ್ನಾನಕ್ಕೆ ನೀರು ಕೊಡುವ ಸ್ಥಿತಿಯಲ್ಲಿ ಇಲ್ಲ ಅನ್ನುವ ಪರಿಸ್ಥಿತಿ ಈ ಪ್ರದೇಶದಲ್ಲಿತ್ತು.. ಈ ಪ್ರದೇಶ ಅಂಥ ದಿನಗಳೆಲ್ಲವನ್ನು ನೋಡಿದೆ. ಇಂದು ವಢವಾಣ ನಗರದ ಜನತೆಗೆ ಯಥೇಚ್ಛವಾಗಿ ಹಾಗೂ ಸುಲಭವಾಗಿ ನೀರು ದೊರಕುತ್ತಿದೆ. ಈ ಜಿಲ್ಲೆಯಲ್ಲಿ 300 ರಿಂದ 350 ಕಿ.ಮಿ. ಪೈಪು ಲೈನ್ ಹಾಕಲಾಗಿದೆ. ನೀರಿನ ಸಂಗ್ರಹಣೆಗೆ ಹೊಸದಾಗಿ ಸಂಗ್ರಹಗಾರಗಳನ್ನು ಕಟ್ಟಿಸಲಾಗಿದೆ. ನೀರಿನ ನಿರ್ವಹಣೆಗಾಗಿ ಹೊಸದಾಗಿ ಟ್ಯಾಂಕ್ ಕಟ್ಟಿಸಲಾಗಿದೆ. ಈ ಎಲ್ಲ ವ್ಯವಸ್ಥೆಗಳಿಂದಾಗಿ ನಮ್ಮ ಸಹೋದರಿಯರು ನೆಮ್ಮದಿಯ ಉಸಿರು ಬಿಡುವಂತಾಗಿದೆ. ಅವರ ಹಾರೈಕೆ ನಮಗೆ ಬಲ ತಂದಿದೆ. ಸಹೋದರಿಯರ ಕಷ್ಟಗಳಿಗೆ ಮುಕ್ತಿ ದೊರೆಕಿದೆ. ರಸ್ತೆಯ ನವೀಕರಣವಾಗಿದೆ. ಅಹಮದಾಬಾದ್ ನಿಂದ ರಾಜಕೋಟ್ ವರೆಗಿನ ರಸ್ತೆ ಅಗಲೀಕರಣಗೊಂಡಿದೆ. ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುಂಚಿನ ಈ ಹಿಂದಿನ ಸ್ಥಿತಿಯ ಬಗ್ಗೆ ದಯವಿಟ್ಟು ಒಮ್ಮೆ ಅವಲೋಕಿಸಿ. ಕಿರಿದಾದ ರಸ್ತೆ, ದುರ್ಘಟನೆಗಳಿಂದ ತುಂಬಿದ ರಸ್ತೆ, ಅಪಘಾತಗಳಲ್ಲಿ ಮಗನನ್ನು ಕಳೆದುಕೊಂಡ, ಗಂಡನನ್ನು ಕಳೆದುಕೊಂಡ ಮಹಿಳೆಯ ರೋದನ ಹೇಳ ತೀರದಾಗಿತ್ತು. ನೂರಾರು ಕುಟುಂಬಗಳು ರಸ್ತೆ ಅಪಘಾತಗಳಿಗೆ ಬಲಿಯಾಗಿವೆ. ಅಂಕುಡೊಂಕಿನ ಕಿರಿದಾದ ರಸ್ತೆಗಳು ಇದಕ್ಕೆ ಕಾರಣವಾಗಿದ್ದವು.ಈ ಹಿಂದೆ ಪ್ರಕಟವಾಗುತ್ತಿದ್ದ ಪತ್ರಿಕೆಗಳಿಂದ ಇದನ್ನು ತಿಳಿದು ಕೊಳ್ಳಬಹುದು. ಈ ಕಷ್ಟ ಕೋಟಲೆಗಳು ಇಂದಿನ ಪೀಳಿಗೆಗೆ ಅರ್ಥವಾಗುವುದಿಲ್ಲ. ನಾನು ಆಗ ರಾಜಕೀಯದಲ್ಲಿ ಇರಲ್ಲಿಲ್ಲ. ಲಿಂಬಡಿ-ಬಗೋದರಾ ದಿಂದ ಪೋನು ಬರುತ್ತಿದ್ದವು. ಈಗಿನಂತೆ ಮೊಬೈಲ್ ಇರುತ್ತಿರಲ್ಲಿಲ್ಲ. ಹಳೆಯ ಪೋನ್ ಇದ್ದದ್ದು. ಇಂಥ ದುರ್ಘಟನೆಗಳಾದಾಗ ಆಹಮದಬಾದಿನಿಂದ ನಮ್ಮ ಆಶೋಕ್ ಬಾಯ್ ಅವರನ್ನು ಕಳುಹಿಸುತ್ತಿದೆ. ವಾರದಲ್ಲಿ ಕನಿಷ್ಠವೆಂದರೂ 3-4 ಘಟನೆಗಳು ಘಟಿಸುತ್ತಿದ್ದವು. ರಾಜಕೋಟ್ ಕುಟುಂಬ ವರ್ಗದವರನ್ನು ಕೇಳಿ. ಸುರೇಂದ್ರ ನಗರದವರನ್ನು ಕೇಳಿ, ತಮ್ಮವರನ್ನು ಕಳೆದುಕೊಂಡ ನೂರಾರು ಸಂಸಾರದ ಕಥೆಗಳು ನೀವಿಲ್ಲಿ ಕೇಳಬಹುದು.
1995ರಲ್ಲಿ ಬಿ.ಜೆ.ಪಿ ಯ ಸರ್ಕಾರ ಅಧಿಕಾರ ಬಂದಿತು, ಶ್ರೀ ಕೇಶುಬಾಯಿ ಪಟೇಲ್ ರವರು ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ನಂತರ ಮಾಡಿದ ಮೊಟ್ಟ ಮೊದಲ ಕೆಲಸವೆಂದರೆ ನಿರ್ದೋಷಿಗಳು ಮರಣಹೊಂದುವುದುತಪ್ಪಲೆಂದು ರಸ್ತೆಗಳನ್ನು ದುರಸ್ತಿಗೊಳಿಸುವುದು. ಅಗಲಗೊಳಿಸುವುದುವುದು ಇವೇ ಆಗಿದ್ದವು. ಇದರಿಂದಾಗಿ ಅಪಘಾತಗಳ ಸಂಖ್ಯೆ ಇಳಿಮುಖವಾಯಿತು. ಇಂದು ಸಂಚಾರ ದುಪ್ಪಟ್ಟು ಆಗಿದೆ. ಭಾರತ ಸರ್ಕಾರ 6 ಪಥಗಳ ರಸ್ತೆ ನಿರ್ಮಾಣ ಕೈಗೊಂಡು ಸಂಚಾರ ನಿರ್ವಹಣೆಯನ್ನು ಸುಗಮಗೊಳಿಸಿದೆ.ವಿಕಾಸಕ್ಕೆ ರಸ್ತೆದಾರಿ ಅನಿವಾರ್ಯ.ಹಾಗೂ ವೇಗವೂ ಅಷ್ಟೇ ಮಹತ್ವ .ವೇಗಕ್ಕಾಗಿ ಅವಶ್ಯಕವಾದಾಗ ವಿಮಾನದ ವ್ಯವಸ್ಥೆಯನ್ನು ಮಾಡಬೇಕಾಗಬಹುದು, ಅಗಲೀಕರಣಗೊಳಿಸಬೇಕಾಗಬಹುದು.ಇವೆಲ್ವನ್ನೂ ಒಟ್ಟಿಗೇ ಮಾಡಬೇಕಾಗುತ್ತದೆ. ಯಾವುದೇ ಒಂದು ನಗರ-ಪಟ್ಟಣ ಅಭಿವೃದ್ಥಿಯಾಗ ಬೇಕಾದರೆ ರಸ್ತೆ ಮತ್ತು ವಾಹನ ಸಂಚಾರ ದಟ್ಟಣೆಯಲ್ಲಿ ಸುಧಾರಣೆಯಾಗ ಬೇಕಿದೆ. ಅದು ಆದಾಗಲೇ ಔದ್ಯೋಗಿಕರಣ ಅಭಿವೃದ್ಧಿಯಾಗುವುದು. ಕಚ್ಛ ವರೆಗೆ ಈಗ ಇದು ಸಾಧ್ಯವಾಗಿದೆ.
ಇಂದು ಪಂಚಾಲ್ ಪಂಥಕ್ ನಲ್ಲಿ ಒಟ್ಟಿಗೆ ಐದು ಯೋಜನೆಗಳನ್ನು ಉದ್ಘಾಟಿಸುವ ಮತ್ತು ಶಂಕು ಸ್ಥಾಪನೆ ಮಾಡುವ ಸೌಭಾಗ್ಯ ನನಗೆ ದೊರೆತಿದೆ. ಇನ್ನು ಸ್ವಲ್ಪ ದಿನಗಳಲ್ಲಿಯೆ ಗುಜರಾತ್ ಸರ್ಕಾರವು ಪಂಚಾಲ್ ಪಂಥಕ್ ಸ್ಥಳವನ್ನು ಧಾರ್ಮಿಕ ಸ್ಥಳವನ್ನಾಗಿ ಪರಿವರ್ತಿಸುವ ಕೆಲಸ ಮಾಡಲಿದೆ. ಇದರಿಂದಾಗಿ ತಾಯಿ ಚಾಮುಂಡಿ, ತ್ರಿನೇಶ್ವರ್ ತರಣೆತರ್, ಸುಂದರಿ ಭವಾನಿ, ಸೂರಜ್ ದೇವಲ್, ಬಾಂದಿಯಾವೆಲಿ, ಜರಿಯಾ ಮಹಾದೇವ್, ಗೆಬೀನಾಥ್, ಅವಾಲಿಯಾಠಾಕರ್, ಇವೆಲ್ಲ ನಮ್ಮ ಪಂಚಾಲ್ ಪಂಥಕನ ತೀರ್ಥಸ್ಥಳಗಳು. ಇವೆಲ್ಲವನ್ನು ಒಟ್ಟಾರೆ ಸೇರಿಸಿ ಮತ್ತು ಇದನ್ನು ಅಭಿವೃದ್ಥಿ ಪಡಿಸಿ ಯಾತ್ರಾಧಾಮವನ್ನಾಗಿಸುವುದು ಗುಜರಾತ್ ಸರ್ಕಾರದ ಈಗಿನ ಯೋಜನೆ. ತರಣೆತರ್ ಮೇಳದಲ್ಲಿ ವಿದೇಶಿಗರು ಭಾಗವಹಿಸಲಿ ಎನ್ನುವುದು ಕೆಲವರ ಆಶಯ. ಆದರೀಗ ಈ ಪ್ರದೇಶದಲ್ಲಿ ವಿಮಾನ ನಿಲ್ಧಾಣ ಬರುತ್ತಿರುವುದರಿಂದ ತರಣೆತರ್ ಮೇಳಕ್ಕೆ ಒಂದು ಅಂತರಾಷ್ಟ್ರೀಯ ಮೆರಗನ್ನು ಕೊಡಬಹುದಾಗಿದೆ. ಈ ರೀತಿಯ ಬೆಳವಣಿಗೆಯಿಂದ ಅರ್ಥವ್ಯವಸ್ಥೆಯನ್ನು ಅಭಿವೃದ್ಥಿ ಮಾಡಬಹುದಾಗಿದೆ. ಹಣಕಾಸಿನ ವ್ಯವಹಾರ ನಡೆಸುವ, ಪ್ರದೇಶದ ಅರ್ಥೀಕ ವ್ಯವಸ್ಥೆಯನ್ನು ಬಲಪಡಿಸಬಹುದಾದ ಯೋಜನೆಗಳನ್ನು ದೇಶದ ಇತರೆ ಸ್ಥಳಗಳಲ್ಲಿಯೂ ಭಾರತ ಸರ್ಕಾರ ರೂಪಿಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ಈ ಸಂದರ್ಭದಲ್ಲಿ ನಾನು ಗುಜರಾತ್ ಸರ್ಕಾರ ಕೈಗೊಂಡ ಕ್ರಮಗಳನ್ನು ಮೆಚ್ಚಿ ಅಭಿನಂದಿಸುತ್ತಿದ್ದೇನೆ. ಇವರು ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಅಪಾರ ಶ್ರಮವನ್ನು ವಹಿಸಿರುತ್ತಾರೆ. ಇಂದಿನ ಗುಜರಾತ್ ಅಭಿವೃದ್ಥಿಶೀಲ ಗುಜರಾತ್, ಸಮೃದ್ಥಶಾಲಿ ಗುಜರಾತ್, ಆಧುನಿಕ ಗುಜರಾತನ್ನಾಗಿ ಮಾಡುವುದಕ್ಕಾಗಿ ನಾವೆಲ್ಲರೂ ಟೊಂಕಕಟ್ಟಿ ಮುಂದುವರೆಯುತ್ತಿದ್ದೇವೆ.
ಸನ್ 2022, ಸ್ವಾತಂತ್ರ್ಯಬಂದು 75 ವರ್ಷಗಳನ್ನು ಪೂರೈಸುತ್ತದೆ. ಇನ್ನು 5 ವರ್ಷಗಳ ಸಮಯವಷ್ಟೆ ಬಾಕಿ ಇರುವುದು. ಈ 5 ವರ್ಷಗಳಲ್ಲಿ ನಾವು ಏನು ಮಾಡಬೇಕು ಎನ್ನುವುದನ್ನು ದೇಶದ ನಾಗರೀಕರು ನಿರ್ಧಾರಮಾಡಲಿ. ಅವರು ಮಾಡಲಿ, ಇವರು ಮಾಡಲಿ, ಸರ್ಕಾರ ಮಾಡಲಿ, ನಗರ ಪಾಲಿಕೆ ಮಾಡಲಿ ಎನ್ನುವುದನ್ನು ಬಿಟ್ಟು ಇನ್ನುಳಿದ 5 ವರ್ಷಗಳಲ್ಲಿ ನಾನಿದನ್ನು ಮಾಡುತ್ತೇನೆ ಎಂಬ ಸಂಕಲ್ಪವನ್ನು ಪ್ರತಿಯೊಬ್ಬ ಪ್ರಜೆಯೂ ಮಾಡಬೇಕು. ಸುರೇಂದ್ರನಗರ ಜಿಲ್ಲೆಯವರೊಂದಿಗೆ ನಾನು ವಿನಂತಿಸಿಕೊಳ್ಳುತ್ತೇನೆ ನಿಮ್ಮಲ್ಲಿ ಯಾವೊಂದು ತೋಟವು ಹನಿ ನೀರಾವರಿಯಿಂದ ಹೊರಗುಳಿದಿರಬಾರದು. ತಾಯಿ ನರ್ಮದೆ ಮನೆ ಬಾಗಿಲಿಗೆ ಬಂದಿರುತ್ತಾಳೆ. ನಮ್ಮನ್ನು ಹರಸಿರುತ್ತಾಳೆ. ಇದರ ಸದುಪಯೋಗವನ್ನು ನಾವು ಅವಶ್ಯವಾಗಿ ಪಡೆಯಬೇಕು. ಹೀಗೆ ಮಾಡಿದಲ್ಲಿ ನೀವೊಂದು ಹಸಿರು ಕ್ರಾಂತಿ ಕಾರಣರಾಗುತ್ತೀರಿ. ಗುಜರಾತಿಗೆ ನೀರಿನ ಪ್ರಶ್ನೆ ಜೀವನ್ ಮರಣದ ಪ್ರಶ್ನೆಯಾಗಿತ್ತು. ಈಗ ಯಥೇಚ್ಚವಾಗಿ ನೀರು ಬಂದಿದೆ. ಜೀವನ್ ಮರಣದ ಸಮಸ್ಯೆಯಿಂದ ಹೊರಬಂದು ಪ್ರೀತಿ ಉತ್ಸಾಹ ಚಿಲುಮೆಯಾಗಬೇಕು. ಇದಕ್ಕಾಗಿ ನೀರನ್ನು ಅಪವ್ಯಯ ಮಾಡದೆ ಅದಷ್ಟು ನೀರನ್ನು ಸದುಪಯೋಗ ಪಡಿಸಿಕೊಂಡು ಸಮೃದ್ಥ ಗುಜರಾತನ್ನು ಕಟ್ಟೋಣ. ಇದು ಗುಜರಾತಿನ ಸಮಗ್ರ ಜನತೆಯ ಜವಬ್ಧಾರಿ.
ಸನ್ 2022ರಲ್ಲಿ 75 ನೇಯ ವರ್ಷದ ಸ್ವಾತಂತ್ರ್ಯದ ವರ್ಷಾಚರಣೆಯನ್ನು ಆಚರಿಸುವಾಗ ರೈತರ ಆದಾಯ ಎರಡು ಪಟ್ಟು ಮಾಡುವಲ್ಲಿ ನಾವು ಸಹಕರಿಸುತ್ತೇವೆ ಹಾಗೂ ಹನಿ ನೀರಾವರಿ, ಮೈಕ್ರೋ ಇರಿಗೇಷನ್ ಮತ್ತು ವೈಜ್ಞಾನಿಕ ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತೇನೆಂಬ ಒಂದು ಪ್ರತಿಜ್ಞೆಯನ್ನು ತೆಗೆದು ಕೊಳ್ಳಬೇಕು.
ನಾನು ಮತ್ತೋಮ್ಮೆ ಇಲ್ಲಿ ನೆರೆದಿರುವ ಅಪಾರ ಜನಸ್ತೋಮವನ್ನು ಅಭಿನಂದಿಸುತ್ತೇನೆ. ನೀವು ಈ ಬಿಸಿಲನ್ನೂ ಲೆಕ್ಕಿಸದೆ ಭಾಷಣವನ್ನು ಕೇಳಲು ಗಂಟೆಗಟ್ಟಲೆ ಕಾದಿರುವಿರಿ, ಪ್ರೀತಿ ವಿಶ್ವಾಸವನ್ನು ತೋರಿರುವಿರಿ, ಆಶೀರ್ವದಿಸಿರುವಿರಿ. ನನ್ನ ಹೃದಯಪೂರ್ವಕವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಭಾರತ ಮಾತೆಗೆ ಜಯವಾಗಲಿ.
ತಮ್ಮೆರಡು ಕೈ ಬಿಗಿ ಮುಷ್ಠಿ ಬಿಗಿಹಿಡಿದು ಜೋರಾಗಿ ಕೂಗಿ ಹೇಳಿ..
ಭಾರತ್ ಮಾತಾ ಕೀ ಜಯ್
ಭಾರತ್ ಮಾತಾ ಕೀ ಜಯ್
ಭಾರತ್ ಮಾತಾ ಕೀ ಜಯ್
Who imagined in this district that an airport will come? Is this not development? Is this kind of development not needed...such development works will empower citizens: PM @narendramodi
— PMO India (@PMOIndia) October 7, 2017
The definition of development is changing. Earlier, a hand pump would be put and a leader would use that for multiple elections. Things have changed now. We are bringing waters of the Narmada here, for the benefit of citizens: PM @narendramodi
— PMO India (@PMOIndia) October 7, 2017
If there is one district that stands to gain maximum from waters of the Narmada it is Surendranagar: PM @narendramodi
— PMO India (@PMOIndia) October 7, 2017
Aviation cannot be about rich people. We have made aviation affordable and within reach of the lesser privileged: PM @narendramodi
— PMO India (@PMOIndia) October 7, 2017
Sursagar Dairy will be 'Sukh Sagar' for people of this region. How can we forget how previous Governments in Gujarat did not allow dairy sector to grow in Saurashtra. We had the opportunity to change that and promote dairies: PM @narendramodi
— PMO India (@PMOIndia) October 7, 2017
The roads here (in Surendranagar district) were accident prone. It was Keshubhai Patel who worked towards making better roads and making them safer: PM @narendramodi
— PMO India (@PMOIndia) October 7, 2017
Water has always been important for Gujarat. Now that water is widely being made available, let us use it responsibly and conserve every drop of water: PM @narendramodi
— PMO India (@PMOIndia) October 7, 2017