ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹೂಡಿಕೆಯ ಪ್ರೊತ್ಸಾಹ ಮತ್ತು ಸಂರಕ್ಷಣೆಗೆ
ಸಂಬಂಧಿಸಿದಂತೆ 2009ರ ನವೆಂಬರ್ 10ರಂದು ಅಂಕಿತ ಹಾಕಲಾದಭಾರತ ಮತ್ತು ಕೊಲಂಬಿಯಾ ನಡುವೆ ಹಾಲಿ ಇರುವ ಒಪ್ಪಂದದ ಜಂಟಿ ವಿವರಣಾತ್ಮಕ ಘೋಷಣೆಗೆ (ಜೆಐಡಿ) ತನ್ನ ಅನುಮೋದನೆ ನೀಡಿದೆ.
ಹೂಡಿಕೆದಾರರ ವ್ಯಾಖ್ಯಾನ, ಹೂಡಿಕೆಯ ವ್ಯಾಖ್ಯಾನ, ನ್ಯಾಯಸಮ್ಮತ ಮತ್ತು ಸಮಾನತೆಯ ಆದರಣೆ (ಎಫ್ಇಟಿ), ರಾಷ್ಟ್ರೀಯ ಆದರಣೆ (ಎನ್ಟಿ) ಮತ್ತು ಆಪ್ತ ರಾಷ್ಟ್ರ ಸ್ಥಾನಮಾನ (ಎಮ್.ಎಫ್.ಎನ್) ಆದರಣೆ, ಹೂಡಿಕೆದಾರ ರಾಷ್ಟ್ರದ ವಿವಾದ ಇತ್ಯರ್ಥ ಅವಕಾಶ ಮತ್ತು ಪ್ರಯೋಜನಗಳ ನಿರಾಕರಣೆಸೇರಿದಂತೆ ಹಲವು ವ್ಯಾಖ್ಯಾನದ ಟಿಪ್ಪಣಿಗಳನ್ನು ಜಂಟಿಯಾಗಿ ಅಳವಡಿಸಿಕೊಳ್ಳುವ ಮೂಲಕ ಹಾಲಿ ಇರುವ ಒಪ್ಪಂದ ವಿವರಣೆಗಳಿಗೆ ಜೆಐಡಿ ಸ್ಪಷ್ಟತೆಯನ್ನು ತರಲಿದೆ,
ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಟಿ) ಹೆಚ್ಚಳ, ಅಂಥ ಹೇಳಿಕೆಗಳ ನೀಡಿಕೆ, ಜಂಟಿ ವಿವರಣಾತ್ಮಕ ಘೋಷಣೆ/ಹೇಳಿಕೆಗಳು ಪಂಚಾಯ್ತಿ ನ್ಯಾಯಮಂಡಳಿಗಳ ಮುಂದೆ ಬಲವಾದ ಮನವೊಲಿಸುವ ಮೌಲ್ಯವನ್ನು ಹೊಂದುವುದರೊಂದಿಗೆ, ಹೂಡಿಕೆಯ ಒಪ್ಪಂದಗಳ ವ್ಯವಸ್ಥೆಯನ್ನು ಬಲಪಡಿಸಲು ಮಹತ್ವದ ಪೂರಕ ಪಾತ್ರ ನಿರ್ವಹಿಸುತ್ತವೆ. ಪಾಲುದಾರರ ಇಂಥ ಸಕ್ರಿಯ ನಿಲುವು ಪಂಚಾಯ್ತಿ ನ್ಯಾಯಮಂಡಳಿಗಳಿಗೆ ಹೆಚ್ಚು ಊಹಿಸಬಹುದಾದ ಮತ್ತು ಸುಸಂಬದ್ಧವಾದ ಒಪ್ಪಂದದ ಅರಿಯಲು ಸಹಕಾರಿಯಾಗಿದೆ.
*****