ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಪ್ರವೇಶ ಪರೀಕ್ಷೆ ನಡೆಸಲು ಭಾರತೀಯ ಸೊಸೈಟಿಗಳ ನೋಂದಣಿ ಕಾಯಿದೆ 1860ರ ಅಡಿಯಲ್ಲಿ ಸೊಸೈಟಿಯಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ಮತ್ತು ಸ್ವಾಯತ್ತ ಹಾಗೂ ಸ್ವಯಂ ಸುಸ್ಥಿರವಾದ ಪ್ರಧಾನ ಪರೀಕ್ಷಾ ಸಂಸ್ಥೆಯಾಗಿ ರೂಪಿಸಲು ತನ್ನ ಅನುಮೋದನೆ ನೀಡಿದೆ.
ವೈಶಿಷ್ಟ್ಯಗಳು:
ಸಂವಿಧಾನ:
ಹಣಕಾಸು:
ಎನ್.ಟಿ.ಎ.ಗೆ ಮೊದಲ ವರ್ಷದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲು ಒಂದು ಬಾರಿಯ ಅನುದಾನವಾಗಿ 25 ಕೋಟಿ ರೂಪಾಯಿಗಳನ್ನು ಭಾರತ ಸರ್ಕಾರ ನೀಡುತ್ತದೆ. ತರುವಾಯ, ಅದು ಆರ್ಥಿಕವಾಗಿ ಸ್ವಾವಲಂಬಿಯಾಗಲಿದೆ.
ಪರಿಣಾಮ:
ವಿವಿಧ ಪ್ರವೇಶ ಪರೀಕ್ಷೆಗಳಿಗೆ 40 ಲಕ್ಷ ವಿದ್ಯಾರ್ಥಿಗಳಿಗೆ ಎನ್.ಟಿ.ಎ. ಸ್ಥಾಪನೆಯಿಂದ ಅನುಕೂಲವಾಗಲಿದೆ. ಇಂಥ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯಿಂದ ಸಿಬಿಎಸ್.ಇ., ಎ.ಐ.ಸಿ.ಟಿ.ಇ.ಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಇದು ಮುಕ್ತಿ ನೀಡಲಿದೆ, ಮತ್ತು ವಿದ್ಯಾರ್ಥಿಗಳ ಬುದ್ಧಿವಂತಿಕೆ ಮತ್ತು ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯ ಅಳೆಯುವ ಮೂಲಕ ಹೆಚ್ಚಿನ ವಿಶ್ವಾಸಾರ್ಹತೆ, ಗುಣಮಟ್ಟದ ಕ್ಲಿಷ್ಟಕರ ಮಟ್ಟದ ಯೋಗ್ಯತಾ ನಿರ್ಣಯ ತರುತ್ತದೆ.
ಹಿನ್ನೆಲೆ:
ಮುಂದುವರಿದ ದೇಶಗಳ ರೀತಿಯಲ್ಲಿ ಭಾರತದಲ್ಲಿ ವಿಶೇಷವಾದ ಕಾಯದ ಅಗತ್ಯವನ್ನು ಮನಗಂಡು, ಹಣಕಾಸು ಸಚಿವರು 2017-18ನೇ ಸಾಲಿನ ತಮ್ಮ ಆಯವ್ಯಯ ಭಾಷಣದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲ ಪ್ರವೇಶ ಪರೀಕ್ಷೆಗಳನ್ನೂ ನಡೆಸಲು ಸ್ವಾಯತ್ತ ಮತ್ತು ಸ್ವಯಂ ಸುಸ್ಥಿರವಾದ ಪ್ರಧಾನ ಪರೀಕ್ಷಾ ಸಂಘಟನೆಯಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ಸ್ಥಾಪಿಸುವ ಪ್ರಕಟಿಸಿದ್ದರು.
********